May 052014
 

falls1

  99 Responses to “ಪದ್ಯಸಪ್ತಾಹ ೧೦೭: ಚಿತ್ರಕ್ಕೆ ಪದ್ಯ”

 1. ಝುಳುಝುಳುಮೆನ್ನುತೆ ಪನಿಗಳ
  ತುಳುಕಿಸುತೆಬರಲು ನಿಸರ್ಗ ಸುಂದರಿ ಸೆಳೆವಳ್|
  ಪುಳಕಿತರಾದ ರಸಿಕರ-
  ನ್ನಿಳೆಯೊಳ್ ಸಗ್ಗಮನೆನಿರ್ಮಿಸುವವೊಲ್ ನೋಡಾ|

  • ಹಳಗನ್ನಡದ ಭಾಷಾದೃಷ್ಟಿಯಿಂದ ಈ ಕೆಲವು ಸವರಣೆಗಳನ್ನು ಮಾಡಿಕೊಂಡರೆ ಒಳಿತು:

   …..ತುಳುಂಕಿಸಿ ಬರಲ್ ನಿಸರ್ಗ….
   ಪುಲಕಿತರೆನಿಪ್ಪ ರಸಿಕರನ-
   ನಿಳೆಯೊಳ್…….

 2. ಕಾಂತನಂ ನೆನೆವುತುಂ ಸ್ವಪ್ನಮಯ ಲೋಕದೇ
  ಕಾಂತದೊಳಿರಲ್ ಪೊಣ್ಮಿದೊಲವ ಝರಿಯಿಂ
  ಶಾಂತಾಸ್ಯೆ ಮುಗ್ಧೆತಾಂ ಕಳೆಯೇರ್ದು ಪೊಳೆವವೊಲ್
  ಕಾಂತಾರ ಕನ್ಯೆಯಿಂದೆಸೆದಿರ್ಪಳೈ

  • ಕೆಲವೊಂದು ಸವರಣೆಗಳು:
   ಕಾಂತನಂ ನೆನೆವುತುಂ……..
   …………ಪೊಣ್ಮಿದೊಲವಝರಿಯಿಂ |
   ಶಾಂತಾಸ್ಯೆ ಮುಗ್ಧೆ ತಾಂ………………
   ……ಕನ್ಯೆಯಿಂದೆಸೆದಿರ್ಪಳಯ್ ||

   • ಪದ್ಯವನ್ನೇ ಸರಿಪಡಿಸಿ ಕೊಟ್ಟಿರುವುದಕ್ಕೆ ತಮಗೆ ಧನ್ಯವಾದಗಳು. 🙂

 3. ಚಿತ್ರಕ್ಕೆ ಪದ್ಯ – ವಂಶಸ್ಥ ಮತ್ತು ಇಂದ್ರವಂಶಾಗಳ ಉಪಜಾತಿ ||

  ಹರಿದ್ದ್ರುಮೌಘೈಃ ಕೃತಕಂಕಣಶ್ರಿಯಾ
  ಉದ್ಭಾಸಿತಾದಂಜಲಿಬಂಧತೋ ಮುದಾ |
  ವನಾಂಗನಾ ಸರ್ವಜನಾವನಾಯ ವೈ
  ವಿಶ್ರಾಣಯಂತೀವ ವಿಭಾತಿ ಚಾಮೃತಮ್ ||

  ವೃಕ್ಷಸಮೂಹಗಳೆಂಬ ಹಸಿರು ಬಳೆಗಳ ಕಾಂತಿಯಿಂದ ಹಸಿರಾಗಿಯೇ ತೋರುವ (ತನ್ನ) ಬೊಗಸೆಯಿಂದ ವನದೇವಿಯು, ಸರ್ವರನ್ನು ಪೊರೆಯಲು ಅಮೃತವನ್ನೆರೆಯುತ್ತಿರುವಳೋ ಎಂಬಂತೆ ತೋರುತ್ತಿದೆ.
  ಅಮೃತಂ ಎಂಬ ಪದಕ್ಕೆ ನೀರು, ಮೋಕ್ಷ ಇತ್ಯಾದಿ ಅರ್ಥಗಳೂ ಉಂಟು.

  • ಪದ್ಯ ಚೆನ್ನಾಗಿದೆ. ಇಂಥ ವೃತ್ತಕ್ಕೆ ಕರಂಬಜಾತಿ ಎಂದು ಹೆಸರು.
   “ಸರ್ವಜನಾವನೋತ್ಸುಕಾ” ಎಂದು ತಿದ್ದಿದರೆ ವೈ ಎಂಬ ಅನಾವಶ್ಯಕವಾದ ಪಾದಪೂರಕನಿಪಾತವು ಇಲ್ಲವಾಗುತ್ತದೆ.

 4. ಸಮುದ್ರವು ಇದ್ದಕಡೆಯೇ ಇರುವುದರಿಂದ (ಜಡತ್ವದಿಂದ) ಬಾನಿನ ನೀಲಿಬಣ್ಣವನ್ನು ಹೊಂದುತ್ತದೆ. ಚಲನಶೀಲ ನದಿಯಾದರೋ ತನ್ನ ಸುತ್ತ ಇರುವ ಹಸುರುಬಣ್ಣವನ್ನು ಎರವಲುಪಡೆಯದೆ, ತನ್ನದೇ ಧವಲವರ್ಣದಿಂದ ಮೊರೆಯುತ್ತಿದೆ.

  ಲಯಗ್ರಾಹಿ|| ಮೇಲಿರ್ಪ ಬಾನಿಂದೆ ತಾ ನೀಲಿಗೊಳ್ಳ
  ಲ್ಕಾಲಸ್ಯಮೇ ಕಾರಣಂ ಸಾಗರಕ್ಕಂ||
  ಮೇಲಲ್ತೆ ವ್ರಾಜಂ, ಜಡತ್ವಂ ನೃಶಂಸಂ
  ಕೈಲಾಗದಂ ತಾನದೆಂತಾತ್ಮನಿಷ್ಠಂ||

  ನೋಡಾ ನದೀ ಧಾವಿಸೈದಲ್ ತನುತ್ವಂ
  ಕಾಡೊಳ್ ಘನಂ ಪಚ್ಚೆ ತಾನಿರ್ದೊಡೆಂತೋ|
  ಈಡಾಗದಿರ್ದಾ ಪಸುರ್ಬಣ್ಣಕೆಂದುಂ
  ಪಾಡಿತ್ತು ಪೊಂದುತ್ತೆ ತಾಂ ಶುಕ್ಲವರ್ಣಂ||

  • ವಿರಳಪ್ರಚುರವೃತ್ತವನ್ನು ಬಳಸಿದುದಕ್ಕಾಗಿ ಅಭಿನಂದನೆಗಳು. ಆದರೆ ಪದ್ಯದ ಭಾಷೆಯ ಬಗೆಗೆ ಕೆಲವೊಂದು ತಿದ್ದುಗೆಗಳನ್ನು ಮುಖತಃ ಹೇಳಬೇಕಿದೆ. ಶನಿವಾರ ನೋಡೋಣ. ವ್ರಾಜ ಎಂದರೆ ಏನು?

 5. ಮೂರು ಮುಕ್ತಕಗಳು:-

  ಪಸುರುಡುಗೆಯನುಟ್ಟಿರೆ ಕರ
  ಮೆಸೆಯುತ್ತಿರೆ ಪೃಥ್ವಿ ಮುಕುರಮಂ ಪಿಡಿದೀಗಳ್
  ದೆಸೆದೆಸೆಯಿಂ ತನ್ನಂಗದ
  ಪೊಸಸಿಂಗಾರಮನಿನಿತ್ತು ನೋಳ್ಪವೊಲಿರ್ಕುಂ||೧||

  ತನ್ನಿಂ ಪುಟ್ಟಿದ ತರುಗಳ
  ನಿನ್ನಾರ್ ಪೊರೆದಪರವರ್ಗೆ ಪಾಲುಣಿಸುವೆನೆಂ
  ದೆನ್ನುತುಮುರೋಜದಿಂದಂ
  ಮುನ್ನಂ ಸುರಿಸಿರ್ಪಳಿಂತು ಮೇದಿನಿ ಪಯಮಂ||೨||

  ಸೋಮಂ ಕರಂಗಿ ಸುರಿಯು
  ತ್ತೀ ಮಣ್ಣೊಳ್ ಸಾರ್ದು ತನ್ನ ತವರಿಗೆ ಪೋಗಲ್
  ಭೂಮಿಯ ಸೆರಗಿನ ನೆರಿಗೆಯೊ
  ಳಾ ಮುಕ್ಕಣ್ಣಂಗೆ ಕಾಣ್ಬೆನೆಂದವಿತಿರ್ಪಂ||೩||

  • ಪದ್ಯತ್ರಯಂ ತು ತೇ ಮಿತ್ರ ನೂನಂ ಹರತಿ ಮಾನಸಮ್ |
   ಪ್ರಾಯೋ ಗಣೇಶಸಂಜ್ಞಾನಾಂ ಕವಿತಾ ಭವತಿ ಹೀದೃಶೀ ||

   ಸೋಮಂ ಕರಂಗಿ…. ತುಂಬ ಇಷ್ಟವಾಯಿತು.

   • ಧನ್ಯವಾದಗಳು ಕೇಯೂರ್ ಅವರೇ 🙂 ಆದರೂ ಬೆಳ್ಳಗಿರುವುದೆಲ್ಲಾ ಹಾಲಲ್ಲ 🙂

    • ಅಹುದು !! ಬೆಳ್ಳಗಿರುವುದೆಲ್ಲಾ ಹಾಲಲ್ಲ … ಕರಗಿದ ಸೋಮನೂ ಇರಬಹುದು 😀 😀

   • ಗಣೇಶಸಂಜ್ಞಾನಾಂ – fine and valid.

  • ತುಂಬತುಂಬ ಸೊಗಸಾದ ಕಲ್ಪನಾಚಮತ್ಕಾರಬಂಧುರವಾದ ಪದ್ಯಗಳಿವು. ಭಾಷೆ-ಶೈಲಿ-ಅಲಂಕಾರ-ಔಚಿತ್ಯಗಳಂಥ ಎಲ್ಲ ಅಂಶಗಳಿಂದಲೂ ಅನವದ್ಯವಾದ ಪದ್ಯಗಳಿವು. ಹೀಗೆ ಸಂಸ್ಕೃತದಲ್ಲಿ ಬರೆಯಬಲ್ಲಾತ ನಮ್ಮ ಡಾ. ಆರ್ ಶಂಕರನಾದರೆ ಹೀಗೆ ಕನ್ನಡದಲ್ಲಿಬರೆಯಬಲ್ಲಾತ ನಮ್ಮೀ ಕೊಪ್ಪಲತೋಟನೇ ಆಗಿದ್ದಾನೆ. ಈ ಪರಿಯಲ್ಲಿ ನಾನೂ ಬರೆಯಬೇಕೆಂದು ನನಗೆ ಬಯಕೆಯಾಗುತ್ತದೆ. ಅಭಿನಂದನೆಗಳು. ತಮಾಂ ವರ್ಧಸ್ವ ಸತ್ಕವೇ!!

   • ನಿಮ್ಮೀ ಉತ್ಪ್ರೇಕ್ಷಾಲಂಕಾರಯುಕ್ತಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಸರ್ 🙂 😉

  • I concur with Keyur.
   ಸೋಮಂ ಕರಂಗಿ ಕದ್ದಾ
   ಸೀಮೆಯೊಳೆನಿತೇನು ಸಾರ್ವ ಮರೆಯಿಸಿ ಶಿವನಂ?
   ಸೀಮಾಂತವ ಸೇರದೆ ತಾಂ
   ರೋಮದೊಳುಳಿವಂ ಮಹೇಶಶಿರದೊಳ್ ಕೇಳೈ||

  • ಬಹಳ ಚೆನ್ನಾಗಿದೆ ಕೊಪ್ಪಲತೋಟ 🙂

 6. ಸಿರಿಮುಡಿಗಂ ಬೈತಲೆಯಾ-
  ಗಿರೆ ಮೇಲೇಳುವ ಮಣಿಗಳನಲಹುದೆ ನೊರೆಯಂ
  ಝರಿಯಿದು ಮಾಡಿತೆ ವನವಂ
  ಒರಿಯಾ ನೃತ್ಯದ ನಿನಾದ ತುಳುಕುವ ನೆಲೆಯಂ?

  ಒಡಿಸ್ಸಿ ನರ್ತಕಿಯರು ಬಿಳಿಯ ಬಣ್ಣದ ಆಭರಣಗಳನ್ನು ಧರಿಸುತ್ತಾರೆ. ಬಿಳಿನೊರೆಗಳಿಂದ
  ಕೂಡಿದ ಈ ಝರಿಯು ಕಾಡಿನಲ್ಲಿ ಹರಿದು ಚಿಕ್ಕದಾಗಿ ಧುಮುಕುವುದು ನರ್ತಕಿಯ ಬೈತಲೆ ಬೊಟ್ಟು ಹಣೆಯ ಮೇಲೆ ಇಳಿದಂತಿದೆ , ಹಾಗೆಯೇ ಝುರಿಯ ಕಲಕಲ ಶಬ್ದ ನರ್ತಕಿಯ ಗೆಜ್ಜೆಗಳ ಕಿಣಿಕಿಣಿನಾದವನ್ನು ಅನುಕರಿಸುತ್ತಿದೆ ಎಂಬ ಭಾವ.

  • ನಿಮ್ಮ ಕಲ್ಪನೆ ತುಂಬ ಅಭಿನವ ಹಾಗೂ ಅಭಿರಾಮ. ಇಂಥ ವಿನೂತನ-ಆಕರ್ಷಕಚಿತ್ರಗಳನ್ನು ನೀವಷ್ಟೇ ನೀಡಬಲ್ಲಿರಿ:-)
   ಆದರೆ ಛಂದಸ್ಸು-ಭಾಷೆಗಳ ನಿಟ್ಟಿನಿಂದ ಸ್ವಲ್ಪ ಸವರಣೆಗಳು:
   ……………………………….
   ಗಿರೆ ಮೇಲೇಳುತ್ತಲಿರ್ಪ ನೊರೆಗಳ ಮಣಿಗಳ್ |
   ………..ಗೆಯ್ದುದೆ ವನಮಂ
   ಒರಿಯಾನೃತ್ಯದ ಬೆಡಂಗು ತುಳ್ಕುವ ನೆಲೆಯಂ ||

   • ನಿಮ್ಮ ಈ ಅಭಿಮಾನಪೂರ್ವಕವಾದ ನುಡಿಗಳು ಹಾಗೂ ತಿದ್ದುಪಡಿಗಳಿಗೆ ಧನ್ಯವಾದಗಳು. ಕಲಿಯುವುದು ಸಾಕಷ್ಟಿದೆ. ನಿಮ್ಮ ಮಾರ್ಗದರ್ಶನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗುತ್ತಿಲ್ಲವೆನ್ನುವುದೇ ಚಿಂತೆ.

 7. ಬಂಡೆಯ ಬಲಗಸೆಯಿಂ ಮಾ-
  ರ್ತಂಡಂಗಂ ವಿಪಿನದೇವಿಯರ್ಘಮನೀವಳ್ |
  ಕಂಡರಿಸಲ್ ಪೆಣ್ಗಳ್ಗಂ
  ಪಾಂಡಿತ್ಯಂ ವೇಳ್ಕುಮೆಂದು ವೈದಿಕವಿಧಿಯಾ ||
  (ಬಲಗಸೆ =ಬೊಗಸೆ, ಕಂದರಿಸಲ್ = ಕೆತ್ತಿ ಕೊರೆದು ಶಾಸನ ಮಾಡಲು)

 8. ಇಳಿದಲ್ಲದೆ ಕೊರ್ವಿನ ಕುದಿ
  ಬೆಳಕಾಗದು ಬಾಳ್ಗೆ ಬರದು ಮೇಣ್ ತಿಳಿತನಮೆಂ-
  ದಿಳೆಗಂ ಸಾರ್ವವೊಲೀ ಝರಿ
  ಬಳಿಗಯ್ತಂದತ್ತು ಚಿತ್ರ-ಕಾವ್ಯದ ಕತದಿಂ ||

  ಉನ್ನತಿಕೆಯೊಳಿರ್ಪಾಗಳ್
  ಪನ್ನತಿಕೆಯ ಸತ್ತ್ವಶುಭ್ರತೆಯದೇಂ ನಲವೋ !
  ಇನ್ನಿಂತು ಜಾರಲೀರ್ಷ್ಯಾ-
  ಪನ್ನತೆಯ ಪಸಿರ್ ಬಸಿರ್ಗೆ ಪುಗಲೇಂ ನಿಲವೋ !!
  (ಹೂಟ್ಟೆಕಿಚ್ಚು ಹಸುರು ಬಣ್ಣದ್ದೆಂಬ ಪಾಶ್ಚಾತ್ಯಕವಿಸಮಯವನ್ನು ಆಧರಿಸಿ ಮಾಡಿದ ಕಲ್ಪನೆಯಿದು . ಪನ್ನತಿಕೆ = ಪ್ರಜ್ಞಾವಂತಿಕೆ, ಈರ್ಷ್ಯಾಪನ್ನತೆ =ಅಸೂಯಾಗ್ರಸ್ತರಾಗುವಿಕೆ)

  • ಆ ಮೊರೆತ, ಮತ್ತದು ಇಳಿದು ತಿಳಿಯಾಗುವುದು – ಇವೆರಡರಲ್ಲಿ ಇಂತಹ ಕಾಣ್ಕೆಯನ್ನು ಇರಿಸಿದ ಪರಿ ಅದ್ಭುತ, ಬೋಧಪ್ರದ.

   • ಧನ್ಯವಾದ ಪ್ರಸಾದು.

    ಹಾದಿರಂಪರಿಂದೆ ವಾದಮಂ ಭೇದಮಂ
    ಕೋದಿಕೊಳ್ಳದಿರಲು ಖೇದಮಕ್ಕುಂ |
    ಮೋದಕಾರಿಯಪ್ಪ ಮಾಧವೀಪುಷ್ಪಾಳಿ-
    ಗಾದುದೆಂತು ಬೀದಿವರಿವ ರಂಪಂ?? 🙂

    • ಅಕ್ಷರವಂತೂ ಅಲ್ಲ. ೧೯-೧೬-೧೯-೧೬ರ ಯಾವ ಮಾತ್ರಾ ಇದು? ಅಥವಾ ಅಂಶವೆ? ದಯವಿಟ್ಟು ತಿಳಿಸಿ.

     • ಆಟವೆಲದಿ ಅಲ್ಲವೇ?

     • ಓ ಹೌದು. It seemed familiar but I could not place it. I knew it would be something like this, but couldn’t decipher it despite thinking about it much. The absence of seesapadya caused confusion in me. Thanks for the clarification.

   • ಸಂ.ಮ.ಗತಿ|| ಇಂತುಮೊರೆದೊಡಂ ಖೇದಮಂತುಮೊರೆದೊಡಮದಾಗೆ ಖೇದಂ!
    ಬೊಂತೆಯನದೆಂತು ಪೊಸಯಲಾನು ಪೇಳಯ್ಯ ಖೇದರಿಕ್ತಂ? 😉

  • ಈರ್ಷೆಯ ಹೋಲಿಕೆ, ಗರ್ವವನ್ನಿಳಿಸುವ ಮತ್ತು ಅರ್ಘ್ಯದ ಮೂರು ಪದ್ಯಗಳೂ ಚೆನ್ನಾಗಿವೆ ಸರ್, ಅರ್ಘ್ಯದಪದ್ಯವನ್ನು ನಾನೂ ಮಾಡೋಣವೆಂದಿದ್ದೆ 🙂

 9. नयागराश्ब्दमयाम्बुपातात्
  एतद्धि सुन्दरतरं प्रविभाति दृश्यम् ।
  हरित्प्रभामण्डलमध्यवर्ति
  शन्तिप्रदं श्वेतजलप्रसूनम् ॥

  • क्षम्यतां छन्दोमिश्रणम् अत्र ! शयनादुत्थाय निद्राशेष एव लिखितवान् झटिति !! सङ्कुट्टनदोषानपि नापश्यं तदा ।

   नयागराशब्दमयाम्बुपातात्
   परं मनोहारि विभाति दृश्यम् ।
   हरित्प्रभामण्डलमध्यवर्ति
   शन्तिप्रदं श्वेतजलप्रसूनम् ॥

   • अयि रामप्रियमहॊदय ! क्षमायाचनेनालम् ।
    कृतपरिश्रमे भवति कर्तुमकर्तुमन्यथा कर्तुमपि साधीयसी शक्तिर्दरीदृश्यत एव । तथापि;

    सुप्तप्रबुद्धसत्त्वेsपि सामिप्रज्ञापारायणे ।
    वसन्ततिलकं कम्रं त्वयि भातीति विस्मितः 🙂

 10. ಜಲಕಣಗಳೊಡನೆ ವೆರೆತುಂ
  ಒಲಮನುಣುತೆ ದರ್ಶಿಸುತ್ತಿರಲ್ ತಾಂ ಸೊಬಗಂ,
  ನೆಲದ ಪಸಿರೆಲ್ಲ ಭರದಿಂ
  ಬಲಮಂ ತೋರಲೊಡಗೂಡಿಳಿದವೇಂ ಕಣದೊಳ್?
  ಜಲಪನಿಗಳ್+ಒಡನೆ=ಜಲಪನಿಗಳೊಡನೆ

  • ಜಲಕುಡಿ ಎಂಬುದು ಅರಿಸಮಾಸ. ಅಂದಹಾಗೆ ಅರಿಸಮಾಸದ ವಕ್ತಾರರಾದ ನಮ್ಮ ಸನ್ಮಿತ್ರ ಡಾ. ಶ್ರೀಕಾಂತ್ ಅವರು ಪದ್ಯಪಾನಕ್ಕೆ ಕೈ ಇಕ್ಕಿ ತಿಂಗಳುಗಳೇ ಆದುವಲ್ಲ!!

   • ಜಲಪನಿಯೆಂದು ಸವರಿದ್ದೇನೆ. ಸರಿಯೇ?
    ಡಾ.ಶ್ರೀಕಾಂತರು ಬೇಗನೆ ಪದ್ಯಪಾನಕ್ಕೆ ಹಿಂದಿರುಗಲೆಂದು ಆಶಿಸೋಣ.

    • ಜಲಪನಿಯೂ ಅರಿಸಮಾಸ:-( ಜಲ ಸಂಸ್ಕೃತ, ಪನಿ ಕನ್ನಡ:-)

     • ಜಲಕಣ ಸರಿಯೆಂದರಿತು ಅದನು ಬಳಸುತ್ತಿರುವೆ

 11. (ಉತ್ಪಲಮಾಲಾವೃತ್ತ, ಉಪಮಾಲಂಕಾರ,ರೂಪಕಾಲಂಕಾರ )

  ಶ್ಯಾಮೆಯನೊಪ್ಪುವೋಲ್ ಪಸಿರ ಸೀರೆಯನುಟ್ಟಿರೆ ಕಪ್ಪುಬಂಡೆಗಳ್,
  ಭಾಮೆಯ ಮಲ್ಲಿಕಾಕುಸುಮಮಾಲೆಯ ಪಾಂಗಿನ ನೀರಧಾರೆಯಿಂ,|
  ಕೋಮಲಭಾವದಿಂ ಭುವನಮಾನಿನಿ ತಾನಿರೆ ಶೋಭನಾಂಗಿಯೊಲ್,
  ಭೂಮಿಯ ನಾಕದೊಲ್ ಪ್ರಕೃತಿದೃಶ್ಯಮಿರಲ್,ಮನಮೋಹಕಂ ಸದಾ ||

  • ನಿಮ್ಮೀ ರಚನೆ ನಿಜಕ್ಕೂ ಚೆನ್ನಾಗಿದೆ. ಹಳಗನ್ನಡದ ಬಿಗಿ-ಬನಿಗಳ ನಿಟ್ಟಿನಿಂದ ಕೆಲವೊಂದು ತೀರ ಸಣ್ಣ-ಪುಟ್ಟ ತಿದ್ದುಪಡಿಗಳ ಆವಶ್ಯಕತೆಯಿದ್ದರೂ ಸದ್ಯಕ್ಕೆ ಗೌಣ. ಏಕೆಂದರೆ ಇಂಥವನ್ನೆಲ್ಲ ಪದ್ಯಪಾನಿಗಳಿಗೆ ಸಾಮೂಹಿಕವಿವೇಕಕ್ಕಾಗಿ ವಿಸ್ತರಿಸಿ ಮತ್ತೆಂದಾದರೂ ಹೇಳಬೇಕಿದೆ. ಆದರೆ ಮನಮೋಹಕ ಮಾತ್ರ ಅಸಾಧುರೂಪವೆಂದು ಹೇಳಲೇಬೇಕು. ಇದು ಮನೋಮೋಹಕ ಎಂದೇ ಆಗಬೇಕು. ಆದರೆ ಪ್ರಸ್ತುತ ಛಂದಸ್ಸಿಗೆ ಧಕ್ಕೆ ಬಾರದಂತೆ “ಬಗೆ ಮೋಹಿಕುಂ ಸದಾ” ಎಂದು ಸವರಿಸಬಹುದು.

   • ಸಹೋದರರಾದ ಶತಾವಧಾನಿಗಳ ಅನಿಸಿಕೆ,ಸವರಣೆಗಳಿಗೆ ತುಂಬ ಧನ್ಯವಾದಗಳು.ಕೊನೆಯ ಪಾದವನ್ನು, …..ಪ್ರಕೃತಿದೃಶ್ಯಮಿದಾಗಿರೆ ಮೋಹಕಂ ಸದಾ || ಎಂದು ಮೊದಲು ಬರೆದಿದ್ದೆ. ಮನಮೋಹಕಂ ಎಂದು ತಿದ್ದಿದ್ದರಿಂದ ನಿಮ್ಮ ಸವರಣೆಯಿಂದಾಗಿ ತಪ್ಪಿನ ಅರಿವಾಗಿ ಒಳಿತಾಗಿದೆ.ನಿಜ,ಮನೋರಂಜಕದಂತೆಯೇ,ಮನೋಮೋಹಕ.ನಿಮ್ಮಿಂದ ಇಂತಹ ಉಪಯುಕ್ತವಾದ ಮಾರ್ಗದರ್ಶನವನ್ನು ಪಡೆಯುತ್ತಿರುವ ಪದ್ಯಪಾನಿಗಳೆಲ್ಲ ಭಾಗ್ಯವಂತರೇ ಸರಿ.ಅಂದ ಹಾಗೆ, “ಮನಮೋಹಕಂ”ಎಂಬುದು”ಬಗೆಮೋಹಿಕುಂ”ಆಗಿರುವ ಬಗೆಯಂತೂ ತುಂಬ ಮೋಹಕವೆಂದು ಹೇಳಬೇಕಾಗಿಲ್ಲವಷ್ಟೆ ? 🙂

 12. ಜರಿದೂರ್ಧ್ವ ತತ್ವವ೦ ಯಿಳಿಮುಖದೊಳಾರ್ಭಟಿಸಿ
  ಧರೆಗೆ ಗಂಗೆಯನುಜೆ ಪ್ರವಹಿಸಲ್, ಸಾ
  ಗರ ಸತಿ ಪ್ರಹರಿಸಲ್ ಹರಿಸತಿಯ ಮೇಲ್, ವಸುಂ
  ಧರೆ ಕವಚಕಿಂದಿಲ್ಲ ಋಷಿ ಯೂರುಗಳ್ ।।

  • ತಾವು ಸಂಧಿನಿಯಮಗಳನ್ನು ಸ್ವಲ್ಪ ಚೆನ್ನಾಗಿ ಅರಿತಲ್ಲಿ ಒಳಿತು. ಸಾಧುರೂಪದ ಸಂಧ- ಸಮಾಸಗಳ ಪ್ರಕಾರ “ತತ್ತ್ವಮನಿಳಿಮೊಗದೊಳಾರ್ಭಟಿಸಿ ” ಎಂದಾಗುತ್ತದೆ. ಆಗ ಛಂದಸ್ಸು ಕೆಡುತ್ತದೆ.ಹೀಗಾಗಿ ನೀವು ಎರಡನ್ನೂ ಸರಿ(ವಿ)ಯಾಗಿ ನಿರ್ವಹಿಸುವ ’ಸರ್ಕಸ್’ ಮಾಡಬೇಕಿದೆ:-) ಎರಡನೆಯ ಸಾಲಿನಲ್ಲಿ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿರಿ.

   • ಧನ್ಯವಾದಗಳು ಸರ್ …
    ರೆಪೇರಿ ಪ್ರಯತ್ನ ಮಾಡಿರುವೆ …

    ಜರಿದೂರ್ಧ್ವ ತತ್ವವನಿಳಿಮೊಗದಿಗಹಗಹಿಸಿ ಬೆ
    ದರಿಸಲ್ ಭುವಿಯಂ, ಗಂಗಾಸೋದರಿ
    ಹರಿಸತಿಯ ಮೇಲ್ ಪ್ರಹರಿಸಲ್, ವಸುಂ
    ಧರೆ ಕವಚಕಿಂದಿಲ್ಲ ಋಷಿ ತೊಡೆಗಳು ।।

 13. ಮಡುವಾಣ್ಮಂ ತರುವೆಣ್ಗಳ
  ಪಿಡಿಯೊಲವಂ ಬಯಸಿ,ಮರುಳನಾದಂ ದಿಟದಿಂ
  ಬಿಡದೇ ಜಾನಿಸಲವರಂ
  ಅಡರಿತೆದೆಯೊಳಂಗೆ ಬಲ್ಸೊಬಗನಿಜ ಚಿತ್ರಂ

  • ಆಹಾ!! ಎಂಥ ಅಚ್ಚಹಳಗನ್ನಡದ ಹೊನಲು!!! ನನಗೆ ತುಂಬ ಹರ್ಷವಾಗಿದೆ…ಮೂರನೆಯ ಸಾಲಿನಲ್ಲಿ ಮಾತ್ರ ಸ್ವಲ್ಪ ಸವರಣೆ ಬೇಕಾಗಿದೆ:
   ಬಿಡದೆಯೆ ಜಾನಿಸಲವರ್ಗಳ-
   ನಡರಿತೆರ್ದೆಯೊಳಂಗೆ……………….

   • 🙂 ತಮ್ಮ ಸತತ ಮಾರ್ಗದರ್ಶನಕ್ಕೆ ಅನಂತ ಧನ್ಯವಾದ.

  • ಎಂಥಹ ಸುಮನೋಹರ ಕಂದಪದ್ಯ. ಬಹಳ ಇಷ್ಟವಾಯಿತು ಕಾಂಚನ. ನಿಮ್ಮ ಪದ್ಯಗಳಲ್ಲಿ ಪಳಗಿದ ಹಳೆಗನ್ನಡದ ಬಳಕೆಯನ್ನ ನಾನು ಗಮನಿಸಿಕೊಳ್ಳುತಿದ್ದೇನೆ ಇದು ಹೇಗೆ ಸಾಧ್ಯವಾಗಿದೆ? ನಮಗೂ ತಿಳಿಸಿಕೊಡಿ.

   • ಧನ್ಯವಾದ ಉಷಾ. ಇದೇ ಪ್ರಶ್ನೆಯನ್ನು ಮೊದಲು ನಾನೇ ನಿಮ್ಮ ಮುಂದಿಡುವವಳಿದ್ದೆ! 🙂

    • ಜಗಳ ಬಿಡಿ. ಇಬ್ಬರೂ ಸೇರಿ ನನಗೆ ತಿಳಿಸಿಕೊಡಿ.

  • bahaLa chennAhide

 14. ಹಸಿರಿನುಡುಗೆಯನುಟ್ಟು ಧಾರಿಣಿ
  ಹಸಿತಗೊಂಡವಳಿಂದುವೀಪರಿ
  ಬಸಿರಿನೊಸಗೆಗೆ ಮೊಗ್ಗಜಡೆಯನೆ ಹೆಣೆದು ಕೊಂಡಿಹಳೇಂ ।
  ಎಸೆದ ಛಾಯಾಚಿತ್ರದೊಳಗದೊ
  ಹಸನು’ಕಂಡಿಹುದದರ ಬಿಂಬವು
  ಹುಸಿಯದಲ್ಲವು ತಿರುಗುಮುರುಗಲಿ ಮುಗುಳು ನಗೆಯದುವುಂ ।।

  (ಧುಮುಕುತ್ತಿರುವ ಜಲಧಾರೆ, ಹಸಿರುಟ್ಟ ಭೂಮಿಯು (ಈ ವಸಂತಮಾಸದ ಮಲ್ಲಿಗೆಯ ಕಾಲದಲ್ಲಿ !!) “ಮೊಗ್ಗಿನ ಜಡೆ”ಯಲ್ಲಿ ನಲಿಯುತ್ತಿರುವಂತೆ ಕಂಡ ಕಲ್ಪನೆಯಲ್ಲಿ !)
  ಚಿಕ್ಕಂದಿನಲ್ಲಿ ಮೊಗ್ಗಿನ ಜಡೆಹಾಕಿಸಿಕೊಂಡು, ಕನ್ನಡಿಯ ಮುಂದೆನಿಂತು (ಹಿಂದೆ-ಮುಂದೆ) ತೆಗೆಸಿಕೊಂಡಿರುವ ಫೋಟೋದ ನೆನಪಾಗಿದೆ!!

  • ಅಸಮಸುಂದರಮಧುರಕಲ್ಪನೆ-
   ಯೊಸಗೆಯಿತ್ತಿದೆ ನಿಮ್ಮ ಕವಿತಾ-
   ರಸನೆಯಿಂ; ಕೊಳ್ಳಿಂ ಮದೀಯಸ್ತುತಿಯನದಕೆಂದೇ |

   • ಧನ್ಯವಾದಗಳು ಗಣೇಶ್ ಸರ್,
    ಮೊಗ್ಗಿನಜಡೆಯಲ್ಲೇ ನಲಿದ ಸಂಭ್ರಮ !!

 15. शिशिरहिमनिरोधैर्मुक्तिमाप्ता स्रवन्ती
  निपतति किल धारा श्वेतवर्णाऽत्र रम्या ।
  तरुगणपरिवृत्ता पर्णपूर्णैर्हरिद्भिः
  मरकतमणिमालामध्यगा मौक्तिकेव ॥

  • मौक्तिकमिव इति नपुंसि भवेत् न तु यॊषिति । यतः ’मुक्ता ’ इत्येव स्त्रियाम् ।
   किं तु व्याकरणसमञ्जनेन छन्दोभगङ्गः संजायते। अतः तत्र पूर्णपरिष्कार एव अपेक्षितः।

   • दोषदर्शनार्थं धन्यवादः । एवं परिष्क्रियते —

    मरकतमणिमालामध्यगेवास्ति मुक्ता ॥

    पुनरेकं पूरणम् —

    बालाः क्रीडासु मग्ना विमलनदजले ते तरन्तो रमन्ते
    यूनश्शृङ्गारचित्ता विपुलतरुवने सुन्दरीभी रमन्ते ।
    चिन्तामग्नाश्च वृद्धा जलकृतनिनदैश्शान्तिमन्तो रमन्ते
    केचित् केचित् कदाचित् प्रकृतिरुचिरताधन्यभावा रमन्ते ॥

    • ಪರಿಷ್ಕಾರಸ್ತು ಶೋಭತ ಏವ | ತಥಾ ಚ ನೂತನಪಿ ಪದ್ಯಂ ರಮಣೀಯಮ್| ಕಿಂ ತು ಸರ್ವತ್ರ ’ರಮನ್ತೇ’ಇತ್ಯೇಕಮೇವ ಕ್ರಿಯಾಪದಂ ಕ್ವಚಿದ್ಗುಣಾಯ ಕ್ವಚಿದ್ದೋಷಾಯಾಪಿ ಭವೇತ್ |

     • भवतो वचोभिः पुनर्धन्योऽस्मि । रमन्ते इत्येकमेव पदमुपयुक्तं मया अन्यान् ज्ञानिनः अनुकृत्य (यथा कुलशेखरस्य मुकुन्दमालायां “जयतु जयतु देवो देवकीनन्दनोऽयम्” इति श्लोके प्रतिपादे “जयतु जयतु” इत्यारभ्यते. यथा आदिशङ्कराचार्यः “बालस्तावत्क्रीडासक्तः” … इति श्लोके सक्तः इति पदं प्रतिपादान्ते उपयुङ्क्ते । परन्तु यद्येषः दोष इति परिगण्यते तर्हि एवं परिष्क्रियताम् —

      बालाः क्रीडासु मग्ना विमलनदजले ते तरन्तो रमन्ते
      यूनश्शृङ्गारचित्ता विपुलतरुवने सुन्दरीभिः क्रमन्ते ।
      चिन्तामग्नाश्च वृद्धा जलकृतनिनदैश्शान्तिमाप्तुं यतन्ते
      केचित् केचित् कदाचित् प्रकृतिरुचिरताधन्यभावा भजन्ते ॥

     • ಸಾಧು ಸಮೀಕೃತಮ್ ! ಜಯತ್ವಿತ್ಯಾದಿ ಪದಾನಿ ಪ್ರಾಯೇಣ ಪುನರುಕ್ತಿಸಹಾನಿ ಯತೋ ಹಿ ಲೋಕೇ ಚ ಜಯಕಾರಾಃ ಪುನರುಕ್ತಾ ಏವ 🙂
      ಆಚಾರ್ಯೈರ್ವಾ ಸದ್ಭಿರ್ವಾ ಪುನಃ ಕೃತಸಾಹಿತೀಲೋಪಾ ಯದ್ಯಪಿ ನ ಗಣ್ಯಂತೇ ತಥಾಪಿ ನ ತೇ ಕವಿಭಿರಾದ್ರಿಯನ್ತೇ 🙂

 16. न गङ्गापावित्र्यं हरिपदसरोजोद्भवभवं
  न वा गौरीजानिप्रवरशिर आधारजमपि ।
  न चैतज्जह्नोः सच्छ्रुतिपथगमोत्पन्नमथवा
  तदेतत्कल्याणिप्रकृतिकृतसङ्गार्जितफलम् ॥

  ಚಿತ್ರದಲ್ಲಿರುವ ನದಿ ಗಂಗೆಯೆಂಬ ಕಲ್ಪನೆಯಲ್ಲಿ ಈ ಪದ್ಯ. ಗಂಗೆಯ ಪಾವಿತ್ರ್ಯಕ್ಕೆ ವಿಷ್ಣುಪಾದದಿಂದ ಹುಟ್ಟಿದುದಾಗಲಿ, ಶಿವನ ಜಟಾಜೂಟದಲ್ಲಿ ನೆಲೆಸಿದುದಾಗಲಿ, ಜಹ್ನುವಿನ ಕಿವಿಯಾಗಲಿ ಕಾರಣವಲ್ಲ. ಬದಲಾಗಿ ಲೋಕಕಲ್ಯಾಣಕಾರಿಯಾದ ಪ್ರಕೃತಿಯ ಸಂಗವೇ ಕಾರಣ ಎಂದರ್ಥ.

  • ಪೆಜತ್ತಾಯರೆ ಬಹಳ ಚೆನ್ನಾಗಿದೆ

  • यद्यपि भवतः कल्पना स्पृहणीया; तथापि शिखरिणीवृत्तनिर्वाहायासे किल प्रायॆण भाषायॊषि्तुः सहजता, सरलता, सरसता, ललितता च क्वचिल्लुलितप्राया इति मे भाति।

   • धन्यवादाः । तेषु विषयेष्ववहितमना भविष्यामि ।

 17. ಪಚ್ಚೆಯ ನೆಲನ ಬೆಡಂಗಿಂ
  ಪಚ್ಚೆಯ ಶೈಲಾಳಿಯಿಂದೆ ತರುಸಂಕುಲದಿಂ
  ಪಚ್ಚೆಯನೇ ಪೊರ್ದು ಮೆರೆವ
  ಪಚ್ಚೆಯ ತಿರೆವೆಣ್ಗೆ ಪುಷ್ಟಿ ಸಿತನದಿಯಿಂದೇ

  • ಪಚ್ಚೆಯನೇ ಪಲವಾತಿಂ
   ಚಚ್ಚಿರೆ ನೀಂ ಕಂದಪದ್ಯಮಿದರೊಳ್ ಸೋಮಾ!!
   ಬೆಚ್ಚದೆ ಪೇಳ್ ಕವಿತಾಸ್ರುತಿ?
   ಪೆಚ್ಚಾಗಳೆ ಮರ್ತೆ ನಿನ್ನ ವಾಙ್ನವಯುವತೀ ?? 🙂
   (ಪಲವು + ಮಾತು = ಪಲವಾತು, ಕವಿತಾಸ್ರುತಿ = ಕವಿತೆಯ ಝರಿ, ವಾಕ್ + ನವ + ಯುವತೀ)

   • ಗಣೇಶ್ ಸರ್, ಇಷ್ಟೆಲ್ಲ ಹೇರಳವಾಗಿ ಹಸಿರುಮಯವಾಗಿರುವ ಇಳೆಗೆ ಜೀವನೀಡುವುದು ಸಣ್ಣದಾಗೆ ಹರಿಯುತ್ತಿರುವ ಬಿಳಿಯನದಿಯೆಂಬ ವ್ಯತಿರಿಕ್ತತೆಯನ್ನು ತೋರಿಸಲು ಹೀಗೆ ಮತ್ತೆ ಮತ್ತೆ ಪಚ್ಚೆಯ ಪ್ರಯೋಗ ಮಾಡಿ ಒಮ್ಮೆ ಮಾತ್ರ ಸಿತಪ್ರಯೋಗ ಮಾಡಿದೆ. ಸ್ವಲ್ಪ ಜಾಸ್ತಿಯಾಯ್ತು ಪುನರುಕ್ತಿ ಅನ್ನಿಸುತ್ತದೆ ಅದೂ ಕಂದಪದ್ಯದಲ್ಲಿ 64 ಮಾತ್ರೆಗಳಲ್ಲಿ 20 ಮಾತ್ರೆಯನ್ನ (~30%) ಪುನರುಕ್ತಿಯಾದದ್ದು ಅಷ್ಟು ಸರಿಯಿಲ್ಲವೆಂದು ತೋರುತ್ತದೆ 🙂

    ಪುನರುಕ್ತಿ ಶಾರಸಂತತಿ-
    ಯನೆತೋರ್ದಪುದೆಂದು ಬಗೆದು ಪದ್ಯಮನಿತ್ತೆಂ
    ಮನಮಿರ್ದುದು ಬಿಳ್ಪ ನದಿಯ
    ಘನಪಾತ್ರಮನೊರೆವೆನೆಂದು, ಸೋತೆಂ ಸೋತೆಂ 🙂

 18. ನೀ ಹರಿದು ಸೇರುವೆ ಸಮುದ್ರವನದೇತಕೆಂ-
  ದೂಹಿಸಲು ಬಲ್ಲೆ ನಾಂ ನದಿಯ ನೀರೆ|
  ದೇಹಕ್ಕೆ ಷಡ್ರಸದೆ ಕ್ಷಾರವೊಂದುಳಿದಿನ್ನು
  ರೋಹಿಣಗಳಿಂ (ವೃಕ್ಷ) ಪಡೆವೆಯೆಲ್ಲವನ್ನುಂ||

  • ಒಳ್ಳೆಯ ಕಲ್ಪನೆ! ಇದನ್ನು ಕಾವ್ಯಲಿಂಗಾಲಂಕಾರವೆನ್ನಬಹುದು.

 19. ಪಲ್ಲವ|| ಎನಿತು ಬೆರೆತೊಡೆ ಪಚ್ಚೆಯೊಳಗೇ-
  ನಿನಿತು ಪಸುರನು ಕೊಂಡಿತೇಂ ತಾಂ|
  ಜನನಗುಣವನು ಬಿಟ್ಟುದುಂಟೆ ತು
  ಹಿನದೆ ಜನಿಸಿದ ಝರಿಯದು||

  • ಈ ಕಲ್ಪನೆಯೂ ಚೆನ್ನಾಗಿದೆ. ಇದು ಅರ್ಥಾಂತರನ್ಯಾಸಾಲಂಕಾರಕ್ಕೆ ಸೇರೀತು.

  • ಪ್ರಸಾದು ನಿಮ್ಮ ಪದ್ಯಗಳ ವೈವಿಧ್ಯತೆ ಬಹಳ ಚೆನ್ನಾಗಿವೆ

  • ಪ್ರಸಾದ್ ಸರ್,
   ನಿಮ್ಮ ಪದ್ಯಗಳಲ್ಲಿನ ಕಲ್ಪನೆ ಮತ್ತು ಅವುಗಳ ಬಣ್ಣನೆ ಬಹಳ ಇಷ್ಟವಾಯಿತು.

 20. ಸಂ.ಮ.ಗತಿ|| ನಿನ್ನ ಮೈಮೇಲೆ ನಿಲದೆ ಮಣ್ಣೊಳಾಂ ಪೋಪೆನೇತಕೆಂದು
  ಖಿನ್ನನಾಗದೆಯೆ ಪೇಳಬಲ್ಲೆಯೇಂ ಕರಿಯ ಬಂಡೆ ನೀನು|
  ತನ್ನಯೊಡಲೊಳಗ ಸಸ್ಯಬೀಜಮಂ ಪಚ್ಚೆಯಾಗಿಪುದದೈ
  ಇನ್ನು ತೊಳೆದೊಡೇನೆನಿತೊ ನಿನ್ನನುಂ ಕಪ್ಪ ತೊಡೆದೆಯೇಂ ನೀಂ||

  • ಆಹಾ! ಇದಂತೂ ಮತ್ತೂ ಸೊಗಸಾದ ಕಲ್ಪನೆ!! “ತನ್ನ ಗರ್ಭದಿನೆ” ಎಂದಿರಬೇಕೆಂದು ತೋರುತ್ತದೆ. ಇರಲಿ, ಇಲ್ಲಿಯ ಅಲಂಕಾರ ಅಪ್ರಸ್ತುತಪ್ರಶಂಸೆ. ಹೀಗಾಗಿ ಇದೊಂದು ಚೆಲುವಾದ ಅನ್ಯೋಕ್ತಿಯೆನಿಸಿದೆ.

   • ಪ್ರಶಂಸೆಗಾಗಿಯೂ ಅಲಂಕಾರಗಳನ್ನು ಗುರುತಿಸಿಕೊಟ್ಟುದಕ್ಕಾಗಿಯೂ ಧನ್ಯವಾದಗಳು ಸರ್.
    ಗರ್ಭದಿನೆ ಎಂದರೆ ಗರ್ಭದೊಳು ಎಂದಲ್ಲವೆ? ನಾನು ಹೇಳಬೇಕಾಗಿರುವುದು ’ಗರ್ಭದಲ್ಲಿನ’ ಎಂದು. ಅದನ್ನು ಬರೆಯುವಾಗ ತೊಡಕಾದದ್ದು ನಿಜ. ’ತನ್ನಯೊಡಲೊಳಗ’ ಎಂದು ತಿದ್ದಿದ್ದೇನೆ.

 21. सुजलपात सहोदरतां कुरु
  मम मुखं भवताद् इव तावकम्।
  तव मुखाद् वचनं सुघनं प्रियं
  तदुभयं युगपत् कुरुषेऽद्भुतम्॥

  • पद्येषु विना किमपौचित्यं वृथा पादपूरणार्थं ’सु” प्रयॊगस्तु न सुप्रयोगाय:-)
   अतः सुजलस्थाने सलिलं युज्यते। एवमेव सुघनस्थानेsपि चिन्तनीयम् ।
   प्रथमपादान्ते गुरुर्भविता । अतः कुरु सशोदरतां जलपात हे ! इति परिष्कर्तुं शक्यम् ।

   • सूचनयोपकृतोऽस्मि, रागार्य।

    अत्र पादान्ते लघुर् गुरुवत् परिगण्यते तथोच्चार्येत चापि, तथापि गुरुः श्रेयसे इति विवक्षते वा?

    सुशब्दस्य “सुजलपात” इत्यत्रानौचित्यं स्पष्टतयानुभूयते, परञ्च, सुघनम् इत्यत्र “नितरां घनम्” इत्यस्मिन्नर्थे उचित एव वेति शङ्के।

    तदन्तरा, भवता अपरस्मिन् सन्दर्भे कृतस्याः टिप्पणेः पठनेन ज्ञायते यत् एकस्मिन्नेव अर्थे “मुख”शब्दप्रयोगೲ पद्ये नोचितः रसोद्भवाय इति। तम् अधुना परिष्करोमि।

    “तव मुखाद् वचनं सुघनं प्रियं” → “वदनतो वचनं सुघनं प्रियं”

    • ವಿಷಮಪಾದಾಂತೇ (ಓಜಪಾದಾಂತೇ) ಯಥಾಗುರುತ್ವಂ ವರ್ಣಾನಾಂ ಪ್ರಾಯೇಣ ಛಂದಸ್ಸು ನಿರ್ಬಾಧಿತೋ ನಿಯಮಃ| ಕಿಂ ಚ ಸಮಪಾದಾಂತೇ(ಯುಕ್ಪಾದಾಂತೇ) ಐಚ್ಛಿಕಂ ಗುರುತ್ವಮ್ |
     ಸುಘನಶಬ್ದೇ ಭವದಿಂಗಿತಂ ಸಾಧುತಯೈವ ಮನ್ಯೇ| ತಥಾಪಿ ಪೂರ್ವಸೂರಿಪ್ರಯೋಗವೈರಲ್ಯಂ ವಾ ನಿಷ್ಪಯೋಗತ್ವಂ ಚ ಪ್ರಕಾರಾಂತರಸಂಯೋಜನಸ್ವಾರಸ್ಯಾಧಿಕ್ಯಂ ಮಾಂ ತಥಾ ಪ್ರತಿಕ್ರಿಯಾರ್ಥಂ ವ್ಯನುದದಿತಿ ದಿಕ್ ||

 22. ನಿಂದಿಹುದೇಂ ನದಿಯುಂ ತಾಂ
  ಗೊಂದಾಗುತಲುಗಮ ಸಂಗಮಂಗಳ ನಡುವೊಳ್ ?
  ಸಂದೇಹಕೆ ಸುಳುಹಂ ಕಾಣ್
  ಬಂದೊದಗಿಹ ಹರಿವೊಳಿಂತು ಹರಸಾಹಸವಂ !!

  (ನದಿಯು, ಉಗಮ-ಸಂಗಮಗಳ ನಡುವೆ ನಿಂದಿದೆಯೋ? ಹರಿದಿದೆಯೋ? ಎಂಬ ಸಂದೇಹದಲ್ಲಿ ಮೂಡಿಬಂದ ಪದ್ಯ)

  • ಗೊಂದಾಗುತ ಎಂದರೆ ಏನು?…..ಉಳಿದಂತೆ ಪದ್ಯವು ಸೊಗಸಾಗಿದೆ.

   • ಧನ್ಯವಾದಗಳು ಗಣೇಶ್ ಸರ್,
    ತಾಂಗು(ತಾಂಗಿ) + ಒಂದು + ಆಗುತ = ತಾಂಗೊಂದಾಗುತ (ಆದಿಪ್ರಾಸಕ್ಕಾಗಿ ಹರಸಾಹಸ !!)
    ತಾನೊಂದಾಗುತ – ಎಂದರೆ ಸರಿಯಾಗುವುದೇ?
    ಮೊದಲು ಬರೆದದ್ದು :
    ನಿಂದಿಹುದೇಂ ನದಿಯದುವಾ
    ನಂದದೆ ಮಿಂದುಗಮ ……………

   • “ತಾಂಗೊಂದಾಗುತ ” ವ್ಯಾಕರಣಶುದ್ಧವಾಗದು. ಪದ್ಯವನ್ನು
    “ನಿಂದಿರ್ಪುದೇಂ ನದಿ ತಾನಿಂ-
    ತೊಂದಾಗುತುಮುಗಮಸಂಗಮ…….
    …………………….
    ………………………………………..”

    ಎಂದು ತಿದ್ದಬಹುದು.

    • ಹೊಂದಿರ್ಪುದೈ ಪದ ತಾನಿಂ
     ತೊಂದಾಗುತಲಾಪ್ತಶಬ್ದ-ಮೌನಂಗಳ ನಡುವೊಳ್ !!

 23. ಜಲಸತ್ವೈಶ್ವರ್ಯ ಭರಿತ,
  ಚೆಲುವ ತರುವನಿತೆಯರಾಸ್ಯದೊಳ್ ಸ್ಮಿತಮಾಗ
  ಲ್ಮಲರಿರ್ಪುದೈ ಸುಲಲಿತ ಧ
  ವಲಧಾರೆ ಪರಿಯುತೆ ಮಾಸದೆಯೆ ತಾಂ ಸತತಂ

  • ಪದ್ಯ-ಭಾಷೆಗಳು ಚೆನ್ನಾಗಿವೆ. ಒಂದೇ ಒಂದು ಟೈಪೊ: ಸತ್ತ್ವೈ…

  • ಕಂದದ ಛಂದೋಗತಿಯು ತಪ್ಪಿಲ್ಲದೆ ಸಾಗಿದ್ದರೂ ಪದಗತಿಯಲ್ಲಿ ಹೆಚ್ಚಿನ ಹಿತವಿರದ ಕಾರಣ ಇಡಿಯ ಪದ್ಯಗತಿಯು ವಾಚನಸೌಖ್ಯವನ್ನು ನೀಡುತ್ತಿಲ್ಲ. ಪದ್ಯಗತಿಯೆಂಬುದು ಛಂದಃಪದಗತಿ ಮತ್ತು ಭಾಷಾಪದಗತಿಗಳೆರಡರ ಸಾಮರಸ್ಯವೆಂಬುದು ಸದಾ ಸ್ಮರಣೀಯ.

   • ಸವರಣೆ?
    ಜಲಸತ್ವಸಿರಿಭರಿತ ಬಲು
    ಚೆಲುವ, ತರುವನಿತೆಯರಾಸ್ಯಲಾಸ್ಯಸ್ಮಿತಮಾಗುತೆ ತಾಂ
    ಮಲರಿರ್ಪುದೆರ್ದೆಗಳಮೀ
    ಲಲಿತಧವಲಧಾರೆಯುಂ ಮರೆಸಿ ನೋವುಗಳಂ

 24. ಏಳೆ||
  ಉಳುಮೆs-ಬಿತ್ತನೆ-ಕsಟಾವ್-ಕಳೆ-ನೀರಾವರಿಗsಳs
  ನಿಳೆಯಿsನಿsತರೊಳುs ಕೃಷಿಕsನs|

  ಮನೆಯsವsರೆಲ್ಲsರುsಮಿನಿತಿನಿತs ಹಂಚಿsಕೊಂ
  ಡೆನಿತೋ ತಾವ್ ಬೆಳೆವರ್ ಬೆಳೆಯೊಂದs|

  ಮರೆಯೊsಳಗಿರುತೀ ವಿಸ್ತಾರsದs ಬುವಿಯೊಳಗೆs
  ಪರಿಪsರಿs ಬೆಳೆಯs ತಾನೊsರ್ವಂ|

  ತಡಮಿಲ್ಲsದೆಲೆ ಗೈವsನೊಡೆಯs ಮುಕ್ಕಣ್ಣsನುs
  ನಿಡಿದಾಗಿs ನಮಿಸುsವೆsನವನಿಂಗೆs|

  ಅನಿತೊಂದುs ಬೆಳೆಬೆsಳೆsದಿನಿತನ್ನೂ ಕೊಳ್ಳsದs
  ವನದೇವsನಿಗೆ ಸಾಕೆs ಬರಿನsಮನ|

  ಪೋದಾಗಳ್ ನಾನೊಮ್ಮೆ ಬೂದಿಬಡಕನ ಬಳಿಗೆ
  ತೇದೇನು ಜನುಮಂಗಳಮೆಲ್ಲ|

  ಮೂರನೆಯ ಪದ್ಯದ ಆದ್ಯಕ್ಷರ ಲಘು (ಮ). ಅನುಪ್ರಾಸಗಣದ ಮೊದಲ ಅಕ್ಷರ ಗುರು (ತಾ). ಅಂಶದಲ್ಲಿ ಇದು ಸಾಧುವೆ?

  • ಪ್ರಸಾದು, ಸುಮ್ಮನೆ ಕರ್ಷಣವನ್ನು (s) ಸೂಚಿಸಿದ ಮಾತ್ರಕ್ಕೆ ಜಗಣಗಳನ್ನು ಅಂಶಚ್ಛಂದಸ್ಸಿನ ಪದ್ಯದಲ್ಲಿ ತರಲಾಗದು. ಒಳ್ಳೆಯ ಏಳೆಗಳನ್ನು ಹತ್ತಾರನ್ನು ಚೆನ್ನಾಗಿ ಗಮನಿಸಿಕೊಳ್ಳಿರಿ. ಅಲ್ಲದೆ ಸುಮ್ಮನೆ ಲಘುಬಹುಲವಾದ ಪದಗಳನ್ನು ಅಂಶಗಣಗಳಲ್ಲಿ (ಅವು ನಿಯಮಾನುಸಾರವೇ ಇದ್ದರೂ ) ತಂದರೆ ಪದ್ಯವು ತುಂಬ ಕರ್ಷಣಕ್ಕೆ ಒಳಗಾಗುವಂತಾಗಿ ಕೇಳಲು ಹಿತವಾಗದು; ಪದ್ಯಗತಿಯು ಉನ್ಮೀಲಿಸುವಂತೆ ಹಾಡಿದಾಗ ಅರ್ಥಬೋಧೆಯೂ ಆಗದು. ಇವನ್ನೆಲ್ಲ ನೇರವಾಗಿ ಮುಖತಃ ವಿವರಿಸಬಹುದಲ್ಲದೆ ಬರೆಹದಲ್ಲಿ ತಿಳಿಸಿದರೆ ಸುಬೋಧವಾಗವು.

 25. ಬಿಳಿಯ ಸೀರೆಯನುಟ್ಟ ನಾರಿಯು
  ಬಳಿಯ ಗೆಳತಿಯರೊಡನೆ ತಾ ಕಳ
  ವಳದೆ ನಿಂದಂತಿರಲು, ಕೇಳುದುದಾರ್ತನಾದವದೇಂ ?
  ಇಳೆಯಲಿಂತುಂ ಸ್ವಾರ್ಥಭಾವವ
  ತಳೆದು ಮನುಜನು ವನವ ತರಿದಿರೆ,
  ಬಳಲಿ ನಲುಗಿಹ ಹಸಿರು ತರುವಿನದಾತ್ಮ ರೂಪವಿದೇಂ ?

  (ಚಿತ್ರದಲ್ಲಿನ “ಜಲಧಾರೆ”ಯು – ಮನುಜ ಕಡಿದ ಹಸಿರು ಮರದ “ಆತ್ಮ” (ಬಿಳಿಯ ಸೀರೆಯುಟ್ಟ ಪ್ರೇತಾತ್ಮ !?)ದಂತೆಕಂಡ ಕಲ್ಪನೆಯಲ್ಲಿ)

 26. ಪಸಿರನ್ನುಟ್ಟಾ ಮಾತೆಯು
  ಪುಸಿವೆಳಕಂಬೆತ್ತುಕಳ್ತಳೆಯನಟ್ಟುತಲೀ|
  ಪೊಸರೂಪವ ತೋರಲ್ಕಾ
  ಗಸದಿಂದಿಳಿದಳ್ ಪ್ರವೇಶಿಸುತೆ ಕಾನನದೊಳ್|

 27. नास्ति केसरवर्णं यत् हरिद्धवलसंयुतम् |
  जात्यतीतमिदं चित्रं इत्यवोचत्स दिग्जितः ||

  दिग्जितः = दिग्विजय सिंहः
  ಈ ಪದ್ಯಕ್ಕೆ ಪ್ರಸಕ್ತ ಚುನಾವಣೆಯೇ ಕಾರಣ. ಇಂತಹ ಒಳ್ಳೆಯ ಚಿತ್ರಕ್ಕೆ ಇದೇನಾ ಹೊಳೆದದ್ದು? ಇಂತಹ peripheryಯಲ್ಲೇ ಓಡಾಡುವ ಪದ್ಯ ಬರೆದದ್ದಕ್ಕೆ ಕ್ಷಮೆ ಇರಲಿ 😛

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)