May 262014
 

‘ಭವ್ಯಾದ್ಭುತಂ ಭಾರತಮ್’ ಈ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ

  79 Responses to “ಪದ್ಯಸಪ್ತಾಹ ೧೧೦: ಪದ್ಯಪೂರಣ”

  1. ನಮಿಪೆಂ ಸಾಸಿರಸಾಲು ಪರ್ವತಗಳಂ ನೋಡುತ್ತಿರಲ್ ಚಿತ್ತದೊಳ್
    ಭ್ರಮೆಯಂ ಮೂಡಿಸುತಿರ್ಪುದೀ ಧರೆಯೊಳಾ ಕೈಲಾಸಮೇ ಕಂಡವೊಲ್|
    ಸಮಮೇನಿರ್ಪುದು ಕಾಣೆನೀ ಜಗದೊಳೀ ಸೌಂದರ್ಯಮತ್ಯುತ್ತಮಮ್
    ಅಮಮಾ! ಏನಿದಕೇನುಪೇಳೆನಿದುವೇ ಭವ್ಯಾದ್ಭುತಮ್ ಭಾರತಂ|

    • .ಪ್ರಿಯ ಚೀದಿ, ಇನ್ನೂ ಸ್ವಲ್ಪ ಹಳಗನ್ನಡದ ಹದವು ಬಲಿಯಬೇಕು. “ಸಮನೇನಿರ್ಪುದು……” ಎಂದಾದಲ್ಲಿ ಯುಕ್ತ. “ಸೌಂದರ್ಯಮತ್ಯುತ್ತಮಂ + ಅಮಮಾ….. ಎಂಬಿವು ಸಂಧಿಯಾದರೆ .”…ಅತ್ಯುತ್ತಮಮಮಮಾ…..” ಎಂದಾಗಿ ತನ್ಮೂಲಕ ಛಂದಸ್ಸು ಕೆಡುವುದು:-( ಹೀಗಾಗಿ ಇಲ್ಲಿ ಸವಸರಣೆ ಬೇಕಿದೆ.

      • ಸರ್.. ತಿದ್ದುಪಡಿಗೆ ಧನ್ಯವಾದಗಳು.. ಇದನ್ನು ಹೀಗೆ ಸವರಿಸ ಬಹುದೇ?

        ಅಮಮಾ! ಸಾಸಿರಸಾಲು ಪರ್ವತಗಳಂ ನೋಡುತ್ತಿರಲ್ ಚಿತ್ತದೊಳ್
        ಭ್ರಮೆಯಂ ಮೂಡಿಸುತಿರ್ಪುದೀ ಧರೆಯೊಳಾ ಕೈಲಾಸಮೇ ಕಂಡವೊಲ್|
        ಸಮವೇನಿರ್ಪುದು ಕಾಣೆನೀ ಜಗದೊಳೀ ಸೌಂದರ್ಯಮೇ ಗೆಲ್ವುದೈ
        ನಮಿಪೆಂ ನಿತ್ಯವು ಪೆರ್ಮೆಯಿಂದೆನುತೆ ಕೇಳ್ “ಭವ್ಯಾದ್ಭುತಮ್ ಭಾರತಂ”|

  2. ಶ್ಲೋಕ|| ’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’
    ಮೊಳಂಗಿದಾಗಿನಿಂದೀ ಘೋಷವು ನಿಂದಿಹುದೀ ವಚಂ|
    ತಡಮಾದೊಡಮಾಗೀಗಳ್ ಲುಪ್ತಂಗೊಳ್ಳದ ವಾಕ್ಕಿದೈ
    ಬಂದಿರಲ್ ಯುಗವಂತಂ ಭವ್ಯಾದ್ಭುತಂ ಭಾರತಂಭುವಂ||

    • ಪಾದಾಂತಯತಿಯೂ ಇಲ್ಲ, ಆದಿಪ್ರಾಸಾವೂ ಇಲ್ಲ ಅಂದರೆ ಹೇಗೆ? ಪದ್ಯಗತಿಯಲ್ಲಿ ಸೊಗಸು ತಲೆದೋರಲು ಒಂದಾದರೂ ಇರಬೇಕಷ್ಟೆ:-) ಜೊತೆಗೆ ಹಳಗನ್ನಡದ ಹದ ಮುಖ್ಯ.

  3. ನೆರೆಯಲ್ ಯಾವನರಾಜರೊರ್ಮೆ ಛಲದಿಂ ಪೋರುತ್ತುಮಿರ್ತಂತು ಮ
    ತ್ತರಿಗಳ್ ಮ್ಲೇಚ್ಛರೆ ದುಷ್ಟಶಾಸನಮುಮಂ ನೀಡುತ್ತುಮಿರ್ದಾಗಳುಂ
    ಮರೆಯಲ್ಕಾರದೆ ಶಾಂತರೂಪದೆ ವಲಂ ತಾಳ್ದಿರ್ತು ಮತ್ತಾಂಗ್ಲರಿಂ
    ಮುರಿಯಲ್ಕಾರದ ದಿವ್ಯಸಂಸ್ಕೃತಿಯೆ ತಾಂ ಭವ್ಯಾದ್ಭುತಂ ಭಾರತಂ||

    (ಭಾರತದ ಇತಿಹಾಸದ ಸಂಕ್ಷಿಪ್ತ ಅವಲೋಕನ-ಗ್ರೀಕರ ಧಾಳಿಯನ್ನು ಛಲದಿಂದ ಎದುರಿಸಿದ್ದು, ಮ್ಲೇಚ್ಛ ಮೊಘಲರಂತಹವರ ದುಷ್ಟ ಆಳ್ವಿಕೆಯನ್ನೂ ಶಾಂತರೂಪದಿಂದ ತಾಳಿಕೊಂಡಿರುವುದು, ಮತ್ತೆ ಆಂಗ್ಲರಿಂದಲೂ ಮುರಿಯಲಾರದ ದಿವ್ಯಸಂಸ್ಕೃತಿಯೇ ಈ ಭವ್ಯಾದ್ಭುತಭಾರತ )

    • ಚೆನ್ನಾದ ವಾಗರ್ಥಸೌಷ್ಠವವಿರುವ ಪದ್ಯ; ಅಭಿನಂದನೆಗಳು.

  4. ವಿಡಂಬನೆಯ ಹಾದಿಯಲ್ಲೊಂದು ಮತ್ತೇಭವಿಕ್ರೀಡಿತ:

    ಸೆಕುಲರ್ ಸೋಗಿನ ಪುಂಗವರ್ ಸಕಲವಿದ್ಯಾಶಿಲ್ಪಮಂ ಶಿಲ್ಪಿಸಲ್
    ವಿಕಲರ್ ಜಾತಿ-ಮತಂಗಳೋರಣೆಯ ನೇತರ್ ನೀತಿಯಂ ನಿಲ್ಲಿಸಲ್ |
    ಪ್ರಕಟಾತ್ಯಂತನಿಸರ್ಗತಂದ್ರರಿರೆ ಲೋಗರ್ ಜೀವಿಕಾಲೋಭಿಗಳ್
    ಮುಕುರೋನ್ಮೀಲಿತಸಂಪದಂ ಗಡೆಮಗಂ ಭವ್ಯಾದ್ಭುತಂ ಭಾರತಂ ||

  5. A poem of positive note that wonders at the seemingly contradicting virtues of Indian tradition:

    आत्मैकत्वमहत्त्वमङ्गलपि ब्राह्मं विवर्तं जगत्
    सम्भाव्यानुभवोन्नतिं वहदपि श्रुत्यादरं साधयत् ।
    कामार्थद्वितयोपरिष्टमपि तत्संसिद्धये सङ्गतं
    नूनं स्वान्तरसंस्थसंशयपदं भव्याद्भुतं भारतम् ॥

    • ತುಂಬ ಮನೋಹರವಾಗಿದೆ ಸರ್ ….
      ಸರ್ ಮೊದಲ ಪಾದದಲ್ಲಿನ ‘ಮಂಗಲಪಿ’ , ‘ಮಂಗಲಮಪಿ’ ಎಂದು ಇದ್ದಿರಬಹುದು ಟಂಕನಾವಸರದಲ್ಲಿ ಒಂದಕ್ಷರ ಬಿಟ್ಟು ಹೋಗಿರಬಹುದು ಎಂದುಕೊಳ್ಳುತ್ತೇನೆ. ಧೃಷ್ಟತನಕ್ಕಾಗಿ ಕ್ಷಮೆ ಕೋರುವೆ..

      • ಹೌದಪ್ಪಾ ಹೌದು !! ಅದು ಮುದ್ರಾರಾಕ್ಷಸನ ಪ್ರಮಾದ; ” ’ಅವಸರ’ಪಠಿತಾ ವಾಣೀ…….” ಸವರಣೆಗಾಗಿ ಧನ್ಯವಾದಗಳು.

  6. ಮತ್ತೊಂದು ಪ್ರಯತ್ನ ಶಾರ್ದೂಲವಿಕ್ರೀಡಿತದಲ್ಲಿ: ತಪ್ಪಿದ್ದಲ್ಲಿ ಸವರಿಸಿ 🙂

    ವೀರರ್ಗಳ್ ನೆಲೆಸಿರ್ದದೇಶಮೆನುತುಂ ಕೊಂಡಾಡಿರಲ್ ನಿತ್ಯವುಂ
    ಸಾರಿರ್ಪ್ರರ್ ಸವಿಸೊಲ್ಗಳಿಂ ಕವಿಗಳೀ ಸಂಭಾವಿತರ್ ಕೀರ್ತಿಯಂ
    ತೋರಲ್ತಮ್ಮ ವಿಚಾರಸಾಗರಮನುಂ ಸಾಹಿತ್ಯದಾ ಕ್ಷೇತ್ರದೀ
    ಚಾರಿತ್ರ್ಯಂಗಳ ಪೆರ್ಮೆಯಿಂ ನೆನೆವೆ ನಾಂ-ಭವ್ಯಾದ್ಭುತಮ್ ಭಾರತಂ|

    • ಮೊದಲ ಯತ್ನಕ್ಕಿಂತ ಇದು ಮತ್ತಷ್ಟು ಹದವಾಗಿದೆ. “…ಸಾಹಿತ್ಯದ ಕ್ಷೇತ್ರದೊಳ್” ಎಂದು ಸವರಿಸಿದರೆ ಮತ್ತೂ ಚೆನ್ನ.

  7. ಇದನ್ನು ಸ್ರಗ್ವಿಣಿಯಲ್ಲಿ ಮಾಡಬಹುದೇ?

    ವೀರನಂತಿರ್ಪನೀ ಮೋದಿತಾ ಧೈರ್ಯದಿಂ
    ಸಾರುತುಂ ದೇಶದಾ ಖ್ಯಾತಿಯಂ ಸೊಲ್ಗಳಿಂ
    ಸೇರಿಸುತ್ತೆಲ್ಲರೊಳ್ ನೇಹದಾ ಭಾವಮಂ
    ತೋರಿಸುತ್ತಿರ್ಪ ಭವ್ಯಾದ್ಭುತಮ್ ಭಾರತಂ

    Let me know if this is wrong

    • ಸ್ರಗ್ವಿಣೀವೃತ್ತದೊಳ್ ಸಂದ ನಿನ್ನುಕ್ತಿ ಮು-
      ದ್ಭಾಗ್ವಿಭೂಷಾಸ್ಪದಂ ಪದ್ಯಪಾನಾಂಗಕಂ |
      ಸ್ರಾಗ್ವಚೋಮಾನಿನೀಸೇವೆಯುಂ ಸರ್ವಹೃ-
      ತ್ಸ್ಪೃಗ್ವಿಶಿಷ್ಟಾರ್ಥಮ್; ಈ ಪ್ರಾಸಮಂ ಭಾವಿಸಯ್ 🙂

    • Chennagide..!!

  8. Two seasons each day round the year in the equatorial (ನಿರಕ್ಷ) regions of the earth. Mere two seasons per year in the cold west. It is only in India that we get to see six seasons.
    ಭುಜಂಗಪ್ರಯಾತ|| ನಿರಕ್ಷಪ್ರದೇಶಕ್ಕೆ ನಿತ್ಯದ್ವಯಂ ಮೇಣ್
    ಧರಾಪಾಶ್ಚಿಮಕ್ಕಂ ದ್ವಯಂ ವರ್ಷಕೆಲ್ಲಂ|
    ನರರ್ ಕಾಲಮನ್ನಿಲ್ಲಿ ತಾವ್ ಕಾಂಬರಾರಂ
    ಪರಾಭೂಮಿ ಭವ್ಯಾದ್ಭುತಂ ಭಾರತಮ್ ತಾಂ||

  9. “के यूयं?” “ननु पारसीकजनता मौहम्मदैःपीडिताः,
    संभ्रान्ताश्च पराजये हतनृपाः” “किं वेच्छथाभ्यागताः”।
    “त्वद्राज्ये स्वनिवासभूमिमभयां” “विद्रोहिता स्यान्न वः”
    “क्षीरे शर्करवद्भवेम शरणं भव्याद्भुतं भारतम्”॥

    [परिश्कारः – वेच्छथागताः → वेच्छथाभ्यागताः ]

    • ಮಹಾಶಯ, ಕಿಂ ವಿವಕ್ಷಿತಂ ಭವತಾ ಇತಿ ಕೃಪಯಾ ಸ್ಪಷ್ಟೀಕ್ರಿಯತಾಮ್ | ದ್ವಿತೀಯಪಾದೇ ಛಂದೋಭಂಗಃ ಜಾತಃ ಕಿಲ !

      • भद्र केयूर।

        छन्दोभङ्गो न जात इति मन्ये – मन्मित्रेण प्रकाशितेन छन्दೲपरीक्षणयन्त्रेण ( http://1e.sanskritmetres.appspot.com/identify ) परीक्षितमेवेदं पद्यम्।

        अत्र पारसीकानां शरणागतिकथा वर्ण्यते – https://en.wikipedia.org/wiki/Qissa-i_Sanjan , https://en.wikipedia.org/wiki/Jadi_Rana । यदीतोऽप्य् अस्पष्टता वर्तते, कृपया अस्पष्टपदानि सूच्यन्ताम्।

        • ಸತ್ಯಮಾಹ ವಯಸ್ಯಃ ಕೇಯೂರಃ | ಭವತಃ ಪದ್ಯಸ್ಯ ದ್ವಿತೀಯೇ ಪಾದೇ ನೂನಮಸ್ತಿ ಛಂದೋಭಂಗಃ | ಯದಿ ಭವನ್ಮಿತ್ರವರಸ್ಯ ಛಂದೋವಿಮರ್ಶನಯಂತ್ರಮತ್ರ ಪ್ರಮಾಣಂ ತರ್ಹಿ ಹತಃ ಕಿಲ ತತ್ರ ಭವಾನ್ ಪಿಂಗಲಾಚಾರ್ಯಃ 🙂
          ಭವತಃ ಪದ್ಯಸ್ಯ ಭಾವೋ ಭವ್ಯಃ| ಅಭಿನಂದನಾನಿ ||

          • हा हन्त 🙂 यान्त्रिकपिङ्गलोत्तरावगमने मम दोषस् स्पष्टः। आर्षपिङ्गलमतानुकारिणं यन्त्रपिङ्गलं कर्तुं‌ मन्मित्रम् अभ्यर्थयिष्ये।

            दोषस्तु परिहृतोऽधुनेति मन्ये।

    • “के यूयं?” “खलचीनराज्यदलिताः हैमालयास् तान्त्रिका”,
      “अस्मद्राजसु राजनीतिपटुता-ऽभावद्धि सा त्वद्दशा!
      सद्यः क्षात्रबले स्थिते तु भवतां‌ रक्षां विदध्मो वयम्”
      “हेमे मौक्तिकवद्भवेम शरणं भव्याद्भुतं भारतम्”॥

    • “के यूयं?” “मरुमत्तसैन्यविहताः वाङ्गास् त्वदीया जना”
      “वीर्ये वङ्गनरेशकर्णसदृशाः दानेऽपि तत्प्रेरिताः।
      युष्मद्धन्तृबलं विनश्य भवतां‌ दद्मस् स्वदेशेऽभयं”
      “मालायां मणिवद् भवेम शरणं भव्याद्भुतं भारतम्”॥

  10. || ಶಾರ್ದೂಲವಿಕ್ರೀಡಿತ ವೃತ್ತ ||

    ನಾನಾ ಸಂಸ್ಕೃತಿಭಾಷೆಗಳ್,ಜನರ ಭಾವಂಗಳ್ ಸಮಾವೇಶಿಸಲ್,
    ಗಾನಾಸಕ್ತರ ನೃತ್ಯದಿಂ,ಕಥೆಗಳಿಂದಧ್ಯಾತ್ಮವಿಜ್ಞಾನದಿಂ, |
    ಭೂನಾಕಂ ಪಸಿರುಟ್ಟು, ಶೋಭಿಸುತೆ ಪೂಬಾನಾಡಿಬೆಟ್ಟಂಗಳಿಂ,
    ಬಾನೊಳ್ ಕೀರ್ತಿಪತಾಕೆಯಂ ಮೆರೆಸಿರಲ್,ಭವ್ಯಾಧ್ಭುತಂ ಭಾರತಂ ||

    • ಪದ್ಯ ಚೆನ್ನಾಗಿದೆ. ಆದರೆ “ಗಾನಾಸಕ್ತರ ನಾಟ್ಯದಿಂ” ಎಂಬುದು “ಗಾನೋನ್ಮಾನಿತನೃತ್ಯದಿಂ” ಎಂದು ಸವರಿಸಿದರೆ ಒಳಿತು.

    • ಸಹೋದರರಾದ ಶತಾವಧಾನಿಗಳ ಅನಿಸಿಕೆ,ಸವರಣೆಗಳಿಗೆ ತುಂಬ ಧನ್ಯವಾದಗಳು.ಪ್ರಾಸಕ್ಕಾಗಿ”ಗಾನ”ವನ್ನು ಇಟ್ಟುಕೊಂಡು, ಅರ್ಥ,ಛಂದಸ್ಸು,ವ್ಯಾಕರಣ ಕೆಡದಂತೆ ಪದ್ಯ ರಚಿಸುವುದಕ್ಕೆ ಸ್ವಲ್ಪ ಯೋಚಿಸುವಂತಾಯಿತು.”ಗಾನಾಸಕ್ತರ ನೃತ್ಯದಿಂ” ಎಂಬುದು ಸರಿಯೆಂದೆನಿಸದಿದ್ದರೂ ಅನಿವಾರ್ಯವಾಗಿ ಬಳಸಬೇಕಾಯಿತು.”ಉನ್ಮಾನಿತ”ವೆಂಬ ಪದ ನನಗೆ ಹೊಸತು.

  11. ಪರಿಪರಿಯ ನಡೆನುಡಿಯ ಮತಪಂಥ ಪರಿಧಿಯೊಳ್
    ಮೆರೆದಿರಲ್ ಶತಕೋಟಿ ನರಶಕ್ತಿಯುಂ ।
    ಬೆರಗೆನಿಪ ವಿವಿಧತೆಯೊಳೇಕತೆಯ ಸಾಧ್ಯದಿಂ
    ಧರಣಿಯೊಳ್ ಭವ್ಯಾಧ್ಭುತಂ ಭಾರತಂ ।।

  12. ಜನನೀ ಜೀವನದಾತೆಯಿರ್ದು ತಿರೆಗಂ ತನ್ನಾತ್ಮಜಾತರ್ಕಳಂ
    ಹನನಂಗೈದಪಳಲ್ತೆ ಪುತ್ರಶತಳೇ ನಿಷ್ಪುತ್ರಳಾದಳ್ ಸುರರ್-
    ಗೆನೆ ಜಾತರ್ ತಿರೆಯಾಳ್ದ ಪಾಂಡವರ ಪುತ್ರರ್ ಸಾವನಪ್ಪಲ್ಕೆ ತಾ-
    ತನುಮಾ ಜನ್ನದೆ ಪಾತ್ರನಲ್ತದಮಮಾ ಭವ್ಯಾದ್ಭುತಂ ಭಾರತಂ

    ಭಾರತ – ಮಹಾಭಾರತ
    ಭೂಮಿಗೇ ಜೀವನವನ್ನು ಕೊಡುವವಳು (ಗಂಗೆಯು) ತನ್ನ ಮಕ್ಕಳನ್ನೆ ಕೊಂದಳಲ್ಲವೇ, ನೂರುಜನ ಮಕ್ಕಳಿದ್ದವಳೂ (ತಾನು ಬದುಕಿರುವಾಗಲೇ) ನಿಷ್ಪುತ್ರಲಾದಳಲ್ಲವೇ, ಭೂಮಿಯನ್ನು ಆಳಿದ ಸುರಪುತ್ರರಾದ ಪಾಂಡವರ ಮಕ್ಕಳು ಸಾವನ್ನಪ್ಪಲು (ಪಾಂಡವರ ಮಕ್ಕಳ) ತಾತ ಯಮ (ತನ್ನ ಎಳೆವಯಸ್ಸಿನ ಮೊಮ್ಮಕ್ಕಳ ಪ್ರಾಣವನ್ನು ತೆಗೆದುಕೊಂಡು ಹೋಗುವ) ಪಾತ್ರಧಾರಿಯಷ್ಟೇ… ಆಹಾ ಮಹಾಭಾರತವು ಭವ್ಯಾದ್ಭುತವಾದದ್ದು

    • ಆಹಾ! ಭವ್ಯಾಧ್ಭುತಂ ಪೂರಣಂ!

    • ಪ್ರಿಯ ಸೋಮ! ನಾನೂ ಭವ್ಯಾದ್ಭುತಂ ಪೂರಣಂ ಎನ್ನುತ್ತೇನೆ:-). ಪದ್ಯ ಸಲೆಸೊಗಸಾಗಿದೆ. ಆದರೆ ಜನನೀ ಎಂಬಲ್ಲಿ ದೀರ್ಘವು ಸಂಸ್ಕೃತಕ್ಕೆ ಸರಿ; ಕನ್ನಡದಲ್ಲಿ ಇದು ಕೇವಲ ಜನನಿ ಎಂದಾಗುತ್ತದೆ. ಆಗ ಛಂದಸ್ಸು ಕೆಡುತ್ತದೆ:-(

  13. ವ್ಯಾಸಾವೇದಿತಪೌರುಷೇಯಮಪಿ ಯತ್ ಸ್ಯಾತ್ಪಂಚಮಾಮ್ನಾಯಕಮ್
    ಧರ್ಮಾಧರ್ಮವಿವೇಕಸೌಕ್ಷ್ಮ್ಯನಿಕಷಂ ಸಾರಸ್ವತಾಸಾರಕಮ್ |
    ಗೋವಿಂದಾದ್ಭುತಸೂತ್ರಧಾರರಚಿತೈಸ್ತಂತ್ರೈಃ ಸುವಿಸ್ಮಾಪಕಂ
    ಗೀತಾಮಂಗಲಗರ್ಭಮಾತ್ತವಿಜಯಂ ಭವ್ಯಾದ್ಭುತಂ ಭಾರತಮ್ ||

    • प्रिय बन्धो। नूनं ज्ञानवर्धकं त्वत्पद्यम्। “अर्तिह्रीव्लीरीक्नूयीक्ष्माय्यातां पुङ्णौ” इति सूत्रं स्मारयति स्मापकशब्दप्रयोगः। आत्तविजयम् = गृहीतविजयम्? तथा तव विपत्रसङ्केतं जिज्ञासे।

    • ರಮಣೀಯಮಿದಂ ಪದ್ಯಂ ವಾಣೀಕೇಯೂರತಾಮಗಾತ್ 🙂

      • ಧನ್ಯೋsಸ್ಮಿ. ಅಯಿ ಭಗವನ್
        ಮತ್ಪದ್ಯಪುಷ್ಪಜಾತಸ್ಯ ರಸಗಂಧವಿಯೋಗಿನಃ |
        ಸಾರ್ಥಕ್ಯಂ ಪರಮಂ ಮನ್ಯೇ ತ್ವನ್ನೇತ್ರಪಥಗಾಮಿತಾಮ್ ||

  14. Sorry about any political incorrrectness —

    सौधा द्वित्रजनैर्युता हिमगिरिप्राया भवन्ति क्वचित्
    वल्मीका इव सन्ति सद्मनिचयाः तत्सौधपार्श्वस्थिताः ।
    केचित् भूरिधनैर्युताश्च बहवः शेषा वराका जनाः
    अत्यन्तव्यतिरेकपूर्णविभवं भव्याद्भुतं भारतम् ॥

    • ಆರ್ಯ ರಾಮಪ್ರಿಯಮಹೋದಯ!
      ನೂನಮತಿಶೇತೇ ಭವತಃ ಕವಿತಾ ಯತೋSತ್ರ ಮಾರ್ಮಿಕೀ ಯಾ ಕಾಪಿ ಕಾಂದಿಶೀಕತಾಸುಷಮಾ ಜಾಗರ್ತಿ ಯಾಮತ್ಯಂತತಿರಸ್ಕೃತವಾಚ್ಯಧ್ವನಿಮಾರ್ಗೇಣ ವಿದಾಂಕುರ್ವಂತಿ ಸಹೃದಯಾಃ | ಅತಃ ಕಿಲ ನ ಮನಾಗಪಿ ಭವತಾ ರಾಜನೀತಿಮತಿಸ್ಥೌಲ್ಯಂ ಸಮುತ್ಪ್ರೇಕ್ಷಣೀಯಮ್ | ಸಂತಿ ನೈಕೇ ಮಾದೃಶಾ ಭವತ್ಪಾರ್ಶ್ವೇ 🙂

      • भोः भगवन्। कान्दिशीकता = कां दिशां यामि इति भावः, सुषमा = सुष्ठु समं सर्वं यस्मात् इति कोशदर्शनेनावगतम्।
        “ಯಾಮತ್ಯಂತತಿರಸ್ಕೃತವಾಚ್ಯಧ್ವನಿಮಾರ್ಗೇಣ” इति नावैमि – वाच्यध्वनिमार्गो नाम कः? कुतस् स अत्यन्ततिरस्कृतः?

        • ವಯಸ್ಯವರ ವಿಶ್ವಾಸ,
          ಕಾಂದಿಶೀಕತಾ ಇತ್ಯೇಕಂ ಪದಮ್| ಅಸ್ಯ melancholy ಇತಿ ಪ್ರಾಯೇಣಾರ್ಥಃ | ಅತ್ಯಂತತಿರಸ್ಕೃತವಾಚ್ಯಾರ್ಥ ಇತ್ಯೇಕಾ ಪರಿಭಾಷಾ ಧ್ವನಿಪ್ರಭೇದಂ ವ್ಯಪದಿಶ್ಯತಿ| ಅಸ್ಯ ವಿವರಣಂ ತು ಸುದೀರ್ಘಮಿತಿ ಹೇತುನಾ ಕದಾಚಿನ್ಮುಖತ ಏವ ಕ್ರಿಯತೇ|

        • अस्य पदस्य प्रयोगः वेङ्कटनाथस्य दयाशतकेन उद्धृतः –
          वृषगिरिसविधेषु व्याजतो वासभाजां
          दुरितकलुषितानां दूयमाना दये त्वम् |
          करणविलयकाले कान्दिशीकस्मृतीनां
          स्मरयसि बहुलीलं माधवं सावधाना ||

          • तुरङ्गमहाशय ! निगमान्तदॆशिकानां पद्येन नूनं मॊदितोsस्मि। व्युत्पिपत्सुभिः
            असाधारणीं संस्कृतवाग्धोरणीमवाप्तुं सर्वैरनुसरणीयॆषु विद्वत्कविषु खल्वन्यतमास्ते कवितार्किककेसरिणः ।

      • अस्यामेव श्रेण्यां पुनरेकं पद्यम् –

        बाह्याकाशगयन्त्रमेति च शनैर्याने ह्यहो वार्षभे
        मार्गेषु स्थगिता भवन्ति बहवो नानाविधाश्चक्रिकाः ।
        पादैश्शीघ्रतरं प्रयान्ति कतिचित् ये निर्धनत्वे स्थिताः
        अत्यन्तव्यतिरेकपूर्णविभवं भव्याद्भुतं भारतम् ॥

    • पुनरेकम् —
      अध्यात्मादिकचिन्तनेषु निरतास्सन्तो महाज्ञानिनः
      जातास्सन्ति च सर्वविश्वविदिता: विज्ञानिनो भारते ।
      निर्भाग्याश्च निरक्षराश्च नितरां सन्ति प्रजाः कोटिशोऽ
      प्यत्यन्तव्यतिरेकपूर्णविभवं भव्याद्भुतं भारतम् ॥३॥

      • ದ್ವೇ ಅಪಿ ಪದ್ಯೇ ಬಹುಸ್ಪೃಹಣೀಯೇ ಶೋಭೇತೇ ತಮಾಮ್ | ಕಸ್ಮಾದಿವ ಭವತಾ ಮುಕುಟೇsಸ್ಮಿನ್ ಲಘುಕಾವ್ಯಮೇಕಂ ನ ಕರಣೀಯಮಿತಿ ಮದುಪಜ್ಞಾ ವಿಜ್ಞಾಪಯತಿ|

        • धन्योऽस्मि भवतः प्रोत्साहेन । रचयेयं यथामति यथावकाशम् । अत्रास्ति नूतनं पद्यत्रयम् ।
          श्रीरामानुजमध्वशङ्करगुरून् सम्भावयन्तो मुदा
          जैना बौद्धमतानुगाश्च सुजनाः क्रैस्ताश्च माहम्मदाः ।
          भ्रष्टाचारविशिष्टदुष्टचरिताः सन्त्यप्यहो पांसुलाः
          अत्यन्तव्यतिरेकपूर्णविभवं भव्याद्भुतं भारतम् ॥४॥

          संन्यासाश्रममाश्रितास्तु कतिचित् सम्यक्स्थितास्संयमे
          मोदन्ते खलु देवता इति वचः स्त्रीपूजयात्रोच्यते ।
          दुश्शीलाः परिपीडयन्ति पुरुषाः क्रूरा बलेनाबला:
          अत्यन्तव्यतिरेकपूर्णविभवं भव्याद्भुतं भारतम् ॥५॥

          पुण्यक्षेत्रपवित्रतीर्थनिचयाः दृश्याश्च शान्तिप्रदाः
          रम्यास्सन्ति च पान्थवासनिलयाः ये पञ्चताराङ्किताः । (5-star hotels)
          तिष्ठन्मूत्रविसर्जकैः परिसरे दुर्गन्ध उत्पाद्यते
          ह्यत्यन्तव्यतिरेकपूर्णविभवं भव्याद्भुतं भारतम् ॥६॥

        • पुनरत्र पद्यत्रयम् —
          केचित् सन्ति महात्मगान्धिपथगाः निस्स्वार्थसेवापराः
          भूम्ना कर्मचरा भवन्त्यनुदिनं स्वार्थाविरोधेन ये ।
          लञ्चास्वीकरणे रताश्च बहवः स्वार्थस्य संवर्धकाः
          अत्यन्तव्यतिरेकपूर्णविभवं भव्याद्भुतं भारतम् ॥७॥

          पूज्यन्तेऽत्र रमा हिमाद्रितनया वाणी च भक्त्या जनैः
          राष्ट्राध्यक्षपदं प्रधानिपदवीं प्राप्ते स्त्रियौ भारते ।
          स्त्रीभ्रूणा निहता भवन्ति बहवः दुःखप्रदं खल्विदं
          ह्यत्यन्तव्यतिरेकपूर्णविभवं भव्याद्भुतं भारतम् ॥८॥

          लोकस्यास्ति बृहत्तमं जनमतैः सृष्टं स्वराज्यं श्रुतम्
          शान्त्या यत्र ददाति सर्वजनता चेतुं स्वपक्षं मतम् ।
          केचिद्धान्यधनादिभिः किल मतं क्रीणन्ति पापात्मनो
          ह्यत्यन्तव्यतिरेकपूर्णविभवं भव्याद्भुतं भारतम् ॥९॥

        • गणेशवर्य, भवतः प्रोत्साहेन उद्भूतं विंशतिश्लोकीयं लघुकाव्यम्
          https://sites.google.com/site/priyapadyadhaama/bhavyadbhutam-bharatam
          इति जालस्थाने स्थापितम् । तत्र pdf-सञ्चिका अपि अस्ति यस्यां कतिचित् चित्राणि सन्ति । भवतः परिष्करणेन उपकृतो भवेयम् ।

          • ತತ್ರ ಗತ್ವಾ ಮಯಾ ತೂರ್ಣಂ ಜಾಲಸ್ಥಾನೇ ವಿಲೋಕಿತಮ್ |
            ಪದ್ಯಜಾತಂ ಚ ಭಾವತ್ಕಂ ನೂತನಂ ಮಾರ್ಮಿಕಂ ತಥಾ ||
            ಅಸ್ಯಾರ್ಥಂ
            ಧನ್ಯವಾದಾ ಮೇ
            ವ್ಯಾಹೃತಾ ಕವಿಸತ್ತಮ!
            ರಾಮಪ್ರಿಯ ಮಹಾಭಾಗ!
            ಶಬರ್ಯಾ ಬದರಾ ಇವ ||

  15. ಒರೆಗುಂ ಕೌರವ, ಪಾಂಡವಾದಿ ಕಥೆಯಂ ವ್ಯಾಸಪ್ರಣೀತೋಕ್ತಿ ಮೇಣ್
    ನರರೊಳ್ ಪುಟ್ಟಿಸುಗುಂ ಮನಸ್ಥಿರತೆಯಂ ಶ್ರೀಕೃಷ್ಣಸಂದೇಶಮೊ
    ಳ್ತಿರುಳಂ ತೋರ್ದು ನಿಜಸ್ವಭಾವಗತಮಂ ಸತ್ಯಾಂಶಮಂ ಸಾರುತುಂ-
    ನೆರವಾಗಿರ್ಪುದಿದೇ ಬರ್ದುಂಕಿಗೆ ದಿಟಂ ಭವ್ಯಾಧ್ಬುತಂ ಭಾರತಂ!

    • ಹಳಗನ್ನಡದ ಹದ ಮಿಂಚಿದೆ; ಅಭಿನಂದನೆಗಳು. ಕೆಲವೊಂದು ಸವರಣೆಗಳು:
      ……………………………………………………..ಪ್ರಣೀತೋಕ್ತಿ ಮೇಣ್
      …………………………….ಮನಸ್ಸ್ಥಿರತೆಯಂ ………………..ಸಂದೇಶಮೊ-
      ಳ್ತಿರುಳಂ ತೋರಿ ನಿಜಸ್ವಭಾವಗತಮಂ …………………………..
      ನೆರವಾಗಿರ್ಪುದಿದೇ ಬರ್ದುಂಕಿಗೆ ……………………………………

  16. ಬಗೆಯಂದೋರುವಸರ್ವ ಧರ್ಮಿಗಳನದ್ವೈತಾರ್ಥದಿಂ ಕಾಣುತುಂ
    ಭಗವತ್ಪಾದರ ತತ್ವಚಿಂತನೆಳೊಳ್ ಮಿಂದಿರ್ಪರೆಲ್ಲರ್ ಬುಧರ್
    ನೆಗೆಳ್ದೀ ದೇಶದ ದಿವ್ಯಸಂಸ್ಕೃತಿಗೆ ಸೋಲ್ತಿರ್ಪರ್ ವಿದೇಶೀಯರಾ
    ಜಗಕಂ ಮಾದರಿಯೆಂಬುವೊಲ್ ದಿಟಮಿದೇ ಭವ್ಯಾದ್ಭುತಮ್ ಭಾರತಂ

    • small typo in 2nd line corrected: ಭಗವತ್ಪಾದರ ತತ್ವಚಿಂತನೆಗಳೊಳ್ ಮಿಂದಿರ್ಪರೆಲ್ಲರ್ ಬುಧರ್

      • ಒಳ್ಳೆಯ ಪದ್ಯ ಚೀದಿ; ಒಂದು ಸಣ್ಣ ತಿದ್ದುಪಡಿ: “ಮಾದರಿಯೆಂಬವೊಲ್”
        ಎನ್ನುವ ರೂಪ ಮತ್ತೂ ಸಾಧು, ಸುಂದರ.

  17. ಬೆಸೆಗುಂ ಬಂಧನಮಂ ಕಲಾನಿಧಿಯು ಬಲ್ ವೈಶಿಷ್ಟ್ಯಮಾಗಿರ್ದು ಮೇಣ್
    ರಸಮಂ ತಾಂ ಸುಧೆಯಂತದೀದು, ಭುವಿಯಂ, ಸ್ವರ್ಗಂ,ಸಮಂ ಮಾಡುತುಂ
    ಜಸಮಂ ಬೀರುತೆ ದೇಶಮಂ ಬೆಳಗಿರಲ್, ಭೂದೇವಿಗಂ ಹಾರಮಾ-
    ಗೆಸೆಗುಂ ಚೆಂದದ ಪೆರ್ಮೆಯೀ ನೆಲನಿದಯ್ ಭವ್ಯಾದ್ಭುತಂ ಭಾರತಂ

    • ಕೆಲವೊಂದು ಅರಿಸಮಾಸಗಳನ್ನುಳಿದು (ಕಲಾಸಿರಿ, ಭೂತಾಯಿ, ಪೊನ್ಮಾಲೆ) ಮಿಕ್ಕಂತೆ ಪದ್ಯ ಚೆನ್ನಾಗಿದೆ. “ನೆಲನಿದಯ್” ಎಂದು ಸವರಿಸಿದಸರೆ ಮತ್ತೂ ಉತ್ತಮ.

      • ಧನ್ಯವಾದಗಳು. ಅರಿಸಮಾಸಗಳ ಸವರಣೆಯನ್ನು ಮಾಡಿರುವೆನೆಂದು ಬಗೆದಿರುವೆ. 🙂

    • ಎಲ್ಲ ಸೊಗಸಾಗಿದೆ; ಒಂದೇ ಸವರಣೆ: “ಮಾಡುತುಂ ಜಸಮಂ” ಎಂದಾಗಿಸಿದರೆ ಮತ್ತೂ ಚೆನ್ನ.

  18. ಹವ್ಯಕ್ಕೀಯುತೆ ಬಂಧದೊಳ್ ಪದಗಳಂ ಭಾವಾಗ್ನಿಯಿಂ ಬಾಣಿಗಂ
    ಕಾವ್ಯಕ್ಕಿತ್ತರು ಚಿತ್ತದೆತ್ತರಗಳಂ ತ್ರೈಗುಣ್ಯದಿಂ ನೇಯ್ದು ಬಾಂ –
    ಧವ್ಯಕ್ಕಿರ್ಪ ಗಭೀರ ಬಿತ್ತರಗಳಮ್ ತೋರುತ್ತೆ ಮೇಣ್ ಶೋಧಿಪರ್
    ದಿವ್ಯಂ ವ್ಯಾಸರ ಭಾರಿಭೂರಿಗವನಂ ಭವ್ಯಾದ್ಭುತಂ ಭಾರತಂ

    [ಹವ್ಯ = ಹೋಮಕ್ಕೆ ಹಾಕುವ ಪದಾರ್ಥ; ಬಾಣಿ = ವಾಣಿ, ಸರಸ್ವತಿ; ಗಭೀರ = ಗಂಭೀರ, ಆಳ; ಬಿತ್ತರ = ವಿಸ್ತಾರ]

    • ನಿರ್ವಾಚನಕೋಲಾಹಲ-
      ದೌರ್ವಾನಲಮಪ್ಪ ವಿಪಿನವಾಸದ ಬಳಿಕಂ|
      ಪರ್ವಕರಪದ್ಯಪಾನಸು-
      ಪರ್ವರ ಬಳಿ ಬಂದ ರಾಮ! ಸುಸ್ವಾಗತಮಯ್ ! 🙂
      (ನಿರ್ವಾಚನ = ಚುನಾವಣೆ, ಔರ್ವಾನಲ = ಬಡಬಾಗ್ನಿ, ವಿಪಿನವಾಸ = ವನವಾಸ, ಸುಪರ್ವ = ದೇವತೆಗಳು)
      ಕೆಲವೊಂದು ಸವರಣೆಗಳು:
      ಕಾವ್ಯಕ್ಕೀಯುತೆ, ಗಭೀರವಿಸ್ತೃತಿಯನೇ, ದಿವ್ಯರ್ ವ್ಯಾಸರ್ ಅವರ್ಕಳಾಢ್ಯಕವನಂ

  19. ಸರ್ವಶ್ರೇಷ್ಟಮಹಾನ್ ಸನಾತನಿಗಳೇ ಪುಟ್ಟಿರ್ಪರೀದೇಶದೊಳ್
    ಪೂರ್ವಾಚಾರಗಳಂ ಸದಾಚರಿಸುತುಂ ಸತ್ಪಾತ್ರರಾಗಿರ್ಪರೈ
    ತೋರ್ವರ್ ಜೀವನ ಮೌಲ್ಯಮಂ ಸುಲಭದಿಂ ಭಾವೈಕ್ಯದಾ ಮಾರ್ಗದಿಂ
    ದಿರ್ವರ್ ಸಂತಸದಿಂ ಸ್ವದೇಶದೊಳೆನಲ್ ಭವ್ಯಾದ್ಭುತಮ್ ಭಾರತಂ

    • ವ್ಯಾಕರಣ ಮತ್ತು ಹಳಗನ್ನಡದ ಹದಗಳ ನಿಟ್ಟಿನಿಂದ ಕೆಲವೊಂದು ಸವರಣೆಗಳನ್ನು ಹೀಗೆ ಮಾಡಬಹುದು:
      ಸರ್ವಶ್ರೇಷ್ಠಮಹಾಸನಾತನಿಗಳೇ…………………………………
      ಪೂರ್ವಾಚಾರಚಯಂಗಳಂ ಚರಿಸುತುಂ ಸತ್ಪಾತ್ರರಾಗಿರ್ಪರಯ್ |
      ಬೀರ್ವರ್ ಜೀವನಮೌಲ್ಯಮಂ………………….ಭಾವೈಕ್ಯಸನ್ಮಾರ್ಗದೊಳ್
      ಸೇರ್ವರ್…………………………………………………………

      ತೋರ್ವರ್ (ತೋರಿಸುವರು ಎಂಬ ಅರ್ಥದಲ್ಲಿ) ತೋರ್ದಪರ್ ಅಥವಾ ತೋರ್ಪರ್ ಎಂದೂ ಇರ್ವರ್ (ಇರುವರು ಎಂಬ ಅರ್ಥದಲ್ಲಿ) ಇರ್ದಪರ್ ಅಥವಾ ಇರ್ಪರ್ ಎಂದೂ ಆಗಬೇಕು.

  20. ಸರ್ವಋತು ಸಂಚಾರಿ, ಸರ್ವಮನ ಸಂಸ್ಕಾರಿ
    ಸರ್ವದಾ ಭಾವಜ್ಞಳಂ ಭಾರತೀಂ ।
    ಸರ್ವಾಂಗ ಸಂಪನ್ನ, ಸರ್ವಾರ್ಥ ಸಂಪೂರ್ಣ
    ಸರ್ವತ್ರ ಭವ್ಯಾಧ್ಭುತಂ ಭಾರತಂ ।।

  21. कार्यान्तरेषु मग्नो बहुभ्यो दिनेभ्यः पद्यपानेऽकृतपादोऽहं विलम्बेन पद्यमेकं लिखामि अस्या धारायाः ।

    जामाता न्यगदत् पठामि किमहं भव्याद्भुतं भारतं ?
    तद्वा भागवतं ततः पुनरपि स्थित्वा गृहे श्वाशुरे ।
    यौ दीपौ पुरतस्तयोः कथमहो निर्वापनं संभवेत्
    तद्बुद्ध्या यतनं कृतं तु विफलं ! कान्तिः स्फुटा विद्युता ॥

    ಭಾರತ ಓದಲೋ? ಭಾಗವತ ಓದಲೋ? ಎಂದು ಹೇಳಿ “ಭ”ಕಾರದ ಪ್ರಭಾವದಿಂದ ಎಣ್ಣೆದೀಪಗಳನ್ನು ಆರಿಸಿದ ಅಳಿಯನನ್ನು ಸ್ಮರಿಸಿ ಕಿಂಚಿತ್ ನವೀಕೃತಪ್ರಯತ್ನ.
    ಭವ್ಯಾದ್ಭುತ ಭಾರತ ಓದಲೋ ? ತತಃ ಪುನರಪಿ ಭಾಗವತ ಓದಲೋ? ಎಂದು ದೀಪಗಳನ್ನು ಆರಿಸುವ ಪ್ರಯತ್ನ ಮಾಡುತ್ತ ಮಾವನ ಮನೆಯಲ್ಲಿ ಕೇಳಿದ. ಆದರೆ ಆ ಪ್ರಯತ್ನವೇನೋ ವಿಫಲವಾಯಿತು. ವಿದ್ಯುದ್ದೀಪಗಳವು ಬೆಳಗುತ್ತಿದ್ದವು!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)