May 172014
 

ಸಪ, ಜದ, ಅದ ಮತ್ತು ಜಪ ಎನ್ನುವ ಪದಗಳಿಂದ ರಣವಿಜಯದ ಬಗ್ಗೆ ಪದ್ಯಗಳನ್ನು ರಚಿಸಿರಿ

  47 Responses to “ಪದ್ಯಸಪ್ತಾಹ ೧೦೯: ದತ್ತಪದಿ”

  1. ಮಣಿರಂಗ|| ಭಾಜಪಕ್ಕದು ಲೆಕ್ಕಮೆ ಕಾಂಗೈ
    ಸಾಜಮಲ್ತೆಲೆ ಮೋದಿಯ ಜೈತ್ರಂ|
    ಬಾಜಿಯೇಂ ಸ.ಪ. (ಸಮಾಜವಾದಿಪಕ್ಷ) ಮೇಣ್ ಜ.ದ. (ಜನತಾದಳ)ಗಳ್ ತಾ-
    ವೀಜಬಲ್ಲವೆ ಆಳದ ನೀರೊಳ್||

  2. ದತ್ತಪದಿಗೆ ಆಮೇಲೆ ಬರೆಯುತ್ತೇನೆ. ಕ್ಷಮಿಸಿರಿ.. ಈಗ ಇದು –

    ವಾಜಪೇಯಿಸಮಾರಂಭಾಂ ನರೇಂದ್ರಮೋದಿಮಧ್ಯಮಾಮ್ |
    ಅಸ್ಮದನ್ವಯಪರ್ಯಂತಾಂ ವಂದೇ ಭಾಜಪರಾಜತಾಮ್ ||

    ವಾರ್ತ್ತಿಕಮ್ 😀 – ಅತ್ರಾಸ್ಮಚ್ಛಬ್ದೇನ ಸನಾತನಧರ್ಮೀಯಾ ವಾಚ್ಯಾಃ |

  3. ||ದೃತವಿಲಂಬಿತ||
    ಹತಸಪತ್ನಸಮುಚ್ಚಯನಾಂತ ಸಂ-
    ಕೃತವಿಮರ್ದನಭೂಜದಯಾಶ್ರುವಿಂ
    ಪ್ಲುತಜನರ್ಗದರಿಂ ಮಿಗೆ ಬಾಳ್ಮೆ ಸು-
    ಶ್ಮಿತಪದಂ ಜಪಮಾಯ್ತು ಯಶಸ್ಕ್ರಿಯಂ

    ಶತ್ರುಗಳನ್ನು ಸಂಹರಿಸಲ್ಪಟ್ಟವನಲ್ಲಿ ರಣಭೂಮಿಯ (ದಾರುಣ ದೃಶ್ಯಗಳಿಂದ ಪರಿವರ್ತಿತವಾದ) ದಯೆಯ ಅಶ್ರುವಿನಿಂದ ಪ್ಲುತರಾದ ಜನರು (ಆ ಕರುಣೆಯ ಉದಧಿಯಿಂದ) ಒಳ್ಳೆಯ ಬಾಳನ್ನು ಸಂತೋಷದ ಸ್ಥಿತಿಯನ್ನು ಗಳಿಸಿದರು ಮತ್ತು ರಾಜನ ಈ ಯಶಸ್ಸಿನ ಕ್ರಿಯೆ ಜನರ ಜಪವಾಯ್ತು (ಶ್ಲಾಘನೆಗೆ ಪಾತ್ರವಾಯಿತು)

  4. ನರೇಂದ್ರಂ ಗೆಲ್ದಂ ತಾಂ ನಿಜಬಲದಿನಾ ತಾಮಸಪಥರ್
    ಸುರೇಂದ್ರಾರಾತ್ಯಾದ್ಯರ್ಕಳಹಿತರೆನಲ್ಕೋಜದ ವಚಃ
    ಪರಂ ಸಲ್ಲಲ್ ಶಸ್ತ್ರಂಗಳಖಿಲಮುಮಂತೆಯ್ದುವದರೊಳ್
    ಸ್ವರಂ ಪೊಣ್ಮಲ್ಕಾರಾರ್ಪರೆನೆ ಜಪದಿಂ ಗೆಲ್ವರೆ ಗಡಾ|
    (ನರೇಂದ್ರಂ ತಾಂ ನಿಜಬಲದಿಂ ಗೆಲ್ದಂ. ಆ ತಾಮಸಪಥರ್ ಸುರೇಂದ್ರ-ಅರಾತಿ-ಆದ್ಯರ್ಕಳ್ ಅಹಿತರೆನಲ್ಕೆ ಓಜದ ವಚಃಪರಂ ಸಲ್ಲಲ್, ಶಸ್ತ್ರಂಗಳ್ ಅಖಿಲಮುಂ ಅಂತೆಯ್ದುದು. ಅದರೊಳ್ ಸ್ವರಂ ಪೊಣ್ಮಲ್ಕೆ ಆರ್ ಆರ್ಪರ್? ಎನೆ ಜಪದಿಂ ಗೆಲ್ವರೆ ಗಡಾ!)
    (ನರೇಂದ್ರನು ತನ್ನ ಬಲದಿಂದ ಗೆದ್ದ, ಆ ತಾಮಸಪಥರಾದ ಸುರೇಂದ್ರನ ಶತ್ರುಗಳಲ್ಲಿ ಆದ್ಯರಾದ(ರಾಕ್ಷಸರೇ) ಶತ್ರುಗಳಾಗಿರಲು ಓಜಸ್ಸಿನ ಮಾತಿನವನು ಸಲ್ಲುತ್ತಿರಲು ಶಸ್ತ್ರಗಳೆಲ್ಲವೂ ಹಾಗೇ ಬಂದವು. ಅದರಲ್ಲಿ ಸ್ವರ ಹೊಮ್ಮುತ್ತಿರುವಾಗ ಯಾರು ತಾನೆ ಉಳಿಯಲು ಸಾಧ್ಯ? ಇನ್ನು ಬರಿಯ (ಗೆಲುವಿನ ಕುರಿತಾದ)ಜಪದಿಂದ ಗೆಲ್ಲಲು ಸಾಧ್ಯವೇ? )
    ಯತಿಗಳನ್ನೂ ಓಡಿಸಿಬಿಟ್ಟಿರುವ ಈ ಪದ್ಯ ಸ್ವಾರಸ್ಯವಿಲ್ಲದ್ದಾದರೂ ಪ್ರಸ್ತುತ ರಣವಿಜಯದ ಸ್ವಾರಸ್ಯ ನರೇಂದ್ರವಿಜಯದಲ್ಲೇ ಇರುವ ಕಾರಣ ಹಾಕುತ್ತಿದ್ದೇನೆ. 🙂

  5. ಪ್ರಸಾದು, ಸೋಮ ಮತ್ತು ಕೊಪ್ಪಲತೋಟರ ಛಂದೋವೈವಿಧ್ಯವಿನ್ಯಾಸ ಸುತರಾಂ ಸ್ತುತ್ಯರ್ಹ. ಅಂತೆಯೇ ಸೋಮ-ಕೊಪ್ಪಲತೋಟರ ಹಳಗನ್ನಡಸಿದ್ದಿಯೂ ಹಾರ್ದ, ಶ್ಲಾಘ್ಯ.
    ಕೇಯೂರರ ಪದ್ಯದಲ್ಲಿ ದತ್ತಪದಗಳಿರದಿದ್ದರೂ ಅಲ್ಲಿ ತುಂಬ ಒಳ್ಳೆಯ ಕಾವ್ಯವಿದೆ. ಹೀಗಾಗಿ ಅದೂ ಪ್ರಶಂಸನೀಯ.

  6. सपदि दक्षदमं मनसा स्मरन्
    स निगदन् शिवनामजपं मुदा।
    समरभूमिगतश् शिवनामभृत्-
    शिवमयो ह्यकरोत् लयताण्डवम्॥

    कोऽयमिति केनचिदपि भारतस्य पुण्यभूमौ जातेनोच्यताम् 🙂

    [परिवर्तनानि – हाऽजदमम् → दक्षदमम्। मनसि → मनसा। ननु → लय।]

    • ವಯಸ್ಯವರ, ವಿಶ್ವಾಸವರ್ಯ!
      ಪದ್ಯಭಾವಸ್ತಾವಕೀನೋ ನ ಮೇ ಸ್ಫೌಟ್ಯಮಗಾನ್ಮನಾಕ್ |
      ವಿಶಿಷ್ಯ ಪ್ರಥಮಃ ಪಾದೋ ಯತ್ರ “ಹಾSಜದಮಂ” ಪದಮ್ ||

      • नौमि प्रिय शिवसुताख्य 🙂
        अजो नाम दक्षः। अजदमस्तु दक्षयज्ञे प्रलयताण्डवकृत्।
        हा इति निपातः अव्ययम्। (तेन प्रागृह्यसंज्ञकेन सवर्णदीर्घसन्धिर् भवितुमर्हति वेति प्रश्न उदेति।??]

        दक्षदमम् इति स्पष्टतायै परिवर्तयामि।

      • भावस्फोटार्थम् एकमिङ्गितम् वच्मि – “हर हर महादेव”। तदाप्यनवगते सूच्यायहम् कृपया – येन स्वीयाम् असफलविवक्षां निर्वदेयम्।

        • ಇದಾನೀಂ ಸಮ್ಯಗವಬುದ್ಧಮ್| ಅಜಸಂಜ್ಞಯಾ ನ ಖಲು ದಕ್ಷೋ ವ್ಯಪದಿಶ್ಯತೇ; ಸ ತು ಪುರಾಣೇಷ್ವಜಮುಖತ್ವೇನೈವ ಪ್ರಸಿದ್ಧಃ|

  7. ಜಪಮಂ ಗೈದ ಸಮಾಜದ
    ತಪಮಂ ಕಳೆದಿರ್ಪುದೀ ವಿಜಯ ತಾಂ ನಾಡೊಳ್
    ಅಪಗತಿಯಮದಳಿಸುತಲೆ ಜ
    ಸ ಪರಡಲೆಲ್ಲೆಡೆ ನಮೋ ಪಡೆದಿರಲವನಿಯಂ

    • ದತ್ತಪದನಿರ್ವಾಹ ಚೆನ್ನಾಗಿದೆ. ಆದರೆ ಪದ್ಯಬಂಧವು ಸ್ವಲ್ಪ ಸೊರಗಿದೆ. ನಾಡದ್ದು ಶನಿವಾರ ಮುಖತಃ ವಿಸ್ತರಿಸುವೆ.

  8. test

  9. ॐ नमः शिवाय

    पद्यधारा प्रेमिनः मम सादर: प्रणामः |

    Santa Cruz नगरे SAT (www.satramana.org) नाम्ना आश्रमं अस्ति। तस्मिन् अश्रमे एकम् नूतनं मन्दिरं कृतवन्तः। मन्दिरेशम् शिव लिङ्गम् उद्धिश्य मया कृतम् एतत् अष्टकम्।

    कृपालुः विश्वास् महोदयः अस्य संशोधनं कृतवान्। यदि भवन्तः किंचिद् दोषान् पश्यति चेत् कृपया सूचयतु।

    ॥ श्री सन्मन्दिरेशाष्टकं ॥
    Octet On The Lord Of SAT Temple

    ओंकाररूपाय महेश्वराय
    गौरीसमेताय मनोहराय
    पूर्णस्वरूपाय सदाशिवाय
    सन्मन्दिरेशाय नमः शिवाय ॥ १ ॥

    To the one of the nature of Omkara, the great Lord, accompanied/united with Gauri, heart-stealing/beautiful, of the nature of perfect fullness, the eternal Siva, the Lord of SAT temple, prostrations to Siva

    नन्द्यादिभक्तैः बहु कीर्तिताय
    नोम्यादिपूज्यैरुपसेविताय
    वैराग्यशान्त्यादिगुणप्रदाय
    सन्मन्दिरेशाय नमः शिवाय ॥२॥

    To the one much glorified by Nandi and such devotees, worshipped by Nome and such venerable/revered ones, who grants dispassion, peace and such qualities, the Lord of SAT temple, prostrations to Siva.

    मन्त्रस्य मूलाय सदात्मकाय
    ध्यानस्य मूलाय चिदात्मकाय
    ज्ञानस्य मूलाय सुखात्मकाय
    सन्मन्दिरेशाय नमः शिवाय ॥ ३ ॥

    To the source/origin of mantra, full of existence, the source/origin of meditation, full of Consciousness, the source/origin of Knowledge, full of Bliss, the Lord of SAT temple, prostrations to Siva.

    सन्मन्दिरे नित्यनिवासशुद्ध –
    चैतन्यरूपाय सनातनाय
    मोक्षस्वरूपाय विमुक्तिदाय
    सन्मन्दिरेशाय नमः शिवाय ॥४॥

    To the one of the nature of pure awareness who resides for ever in the SAT templel, the eternal, of the nature of liberation, who grants liberation, the Lord of SAT temple, prostrations to Siva.

    दीनस्य मित्राय दयार्णवाय
    त्यागस्य काष्ठाय तपोमयाय
    वेदान्तसाराय निराश्रयाय
    सन्मन्दिरेशाय नमः शिवाय ॥५॥

    To the friend of the distressed, the ocean of compassion, the highest limit of renunciation, full of tapas, the essence of vedanta, the supportless one/who alone is, the Lord of SAT temple, prostrations to Siva.

    श्वस्त्वातिवेगेन नरस्य शङ्काः
    स्वस्यात्म संपूर्णगतिं प्रदाय
    कोऽहं विचारस्य महाफलाय
    सन्मन्दिरेशाय नमः शिवाय ॥ ६ ॥

    Blowing away the doubts of man very fast, granting the abode of perfect fullness of one’s own Self, the great result of inquiry “Who am I”, the Lord of SAT temple, prostrations to Siva.

    राध्याय स्तुत्याय मृदङ्गवाद्य –
    गीतादिघोषैरनुमोदिताय
    निष्कामभक्त्या सुलभाय तस्मै
    सन्मन्दिरेशाय नमः शिवाय ॥७॥

    To the one to be worshipped, praised, pleased by sounds of mridangam, musical instruments, songs and such, easily attainable through devotion with no desires in return (pure devotion), the Lord of SAT temple, prostrations to Shiva.

    यस्मात्परं नास्ति कदापि नास्ति
    यः सर्वभूतेषु हृदिस्थ आत्मा
    अद्वैतसत्यस्य पदाय तस्मै
    सन्मन्दिरेशाय नमः शिवाय ॥ ८ ॥

    To the one beyond whom there is nothing superior, never, he who is the Self which resides in the hearts of all, the abode of non-dual truth, to Him, the Lord of SAT temple, prostrations to Siva.

    ओं नमः सदीश्वराय

    namo namaH
    gaNeshaH

    • प्रिय गणेश, मधुरं हि ते स्तोत्रम्। परन्तु, समस्योचितमेव पद्यं साधरणतः प्रकाश्यते ऽत्र। यदि कन्नडभाषां न जानासि संस्कृतविभागसमस्या दृश्यन्ताम् – http://padyapaana.com/?cat=7 । नमः शिवाय।

      (प्रायो मया प्राक् सम्यक् न सूचितमिति कृत्वा ऽत्र पुनरुच्यते।)

      • क्षम्यतां विश्वास् महोदय कन्नड भाषा न जनामि। भवतः समस्यां दृष्ट्वा अत्रास्ति इव अचिन्तयम्।
        Sorry posting in the worng place.

        namaH shivAya

        • सर्वेषां पद्यपानिनां परतःश्रीगणॆशसदाशिवमहॊदयाय सादरं सस्नेहं च स्वागतं व्याहरामि।

          भवतः शिवस्तुतौ केचन व्याकरण-वृत्तदॊषा विद्यन्ते।तांस्तु प्रायेण विश्वासवर्य एव परिहरिष्यति। यदि दूरवाण्यां भवता संभाष्यते चेत् मयापि तत्कर्तुमलम् ।
          भवान् यथाकालं पद्यपानस्य पद्यानां पूरणॆ जातोत्साहः शनैश्शनैः कृतकृत्यो भवत्वित्याशासे ।

    • ಅವಧಾನಿ ಶ್ರೀ ರಾ. ಗಣೇಶರೆ,

      ಅಂದು ಗಣೇಶ ಕೊಪ್ಪಲತೋಟರು ಅಡಿಯಿಟ್ಟಾಗ ಇಂತೆಂದಿರಿ (http://padyapaana.com/?p=540):
      ಆನೊರ್ವನೇ ಗಣೇಶಂ
      ತಾನಿರ್ಪೆಂ ಪದ್ಯಪಾನಜಾಲದೊಳೆಂದಾಂ|
      ಧ್ಯಾನಿಸುತಿರ್ದೆನಿದೇನಯ್
      ಮಾನಿತನಿನ್ನೊರ್ವನಿಲ್ಲಿ ಕೊಪ್ಪಲತೋಟಂ!!

      ಇಂದು ಗಣೇಶ ಸದಾಶಿರವನ್ನು ಇಂತು ಸ್ವಾಗತಿಸುವಿರಲ್ಲವೆ:
      ಆವೀರ್ವರೇ ಗಣೇಶರ್
      ತಾವಿರ್ಪೆವು ಪದ್ಯಪಾನಜಾಲದೊಳೆನಲಾಂ|
      ನೀವೈದಿದಿರೈ ಸಾರೆ ಕ
      ಲಾವಿದರಪ್ರತಿಮರೀ ಪೆಸರವರೆನುತ್ತುಂ||

      • ಒಳ್ಳೆಯ ಸ್ಮಾರಿಕೆಗಾಗಿಯೂ ಮತ್ತೂ ಒಳ್ಳೆಯ ಕಂದಪದ್ಯಕ್ಕಾಗಿಯೂ ಧನ್ಯವಾದಗಳು ಪ್ರಸಾದು!

  10. ನಿಜಮಣಿಮಕುಟಂ, ಪರಿಪಂ-
    ಕಜ ಪದ ಮೋಹರದೊಳಂಜದ “ನರೇಂದ್ರ”ನಿಗಂ ।
    ಗಜಕೇಸರಯೋಗಂ! ನೀ-
    ರಜ ದಸೆಯೊಳ್ ಸಂದುದೈ ಸಪತ್ನ ಸಮಯದೊಳ್ ।।

    (ನರೇಂದ್ರ ( =ಗಾರುಡಿಗ !)ನಿಗೆ ಅಭಿನಂದನಾ ಪದ್ಯ)

  11. ಅದನೇಂ ಮರೆಗುಂ ಪಿರಿದು ಗ
    ಜದ ಬಲದಿಂ ವೈರಿಯಂ ಹಣಿದ ಬಗೆಯ ನೃಪಂ!
    ಮದಮೇರ್ದು ಸಪದಿಯೊಳ್ ತಾಂ
    ಮುದದಿಂದಲೆ ನಿಜಪರಾಕ್ರಮವನೆ ಕಡೆಸುಗುಂ!

    ಸಪದಿ=ಆ ಕ್ಷಣ

  12. || ಮಲ್ಲಿಕಾಮಾಲಾ ವೃತ್ತ ||

    ಯುದ್ಧಕಂಜದ,ವೀರರಾಜನ ಧೈರ್ಯಶೌರ್ಯದ ಸೈನಿಕರ್,
    ಶುದ್ಧರಾಗುತೆ,ಕತ್ತಿನೊಳ್ ಜಪಕೆಂದು ಪೊರ್ದುತೆ ಮಾಲೆಯಂ,|
    ಸಿದ್ಧರಾಗಿರೆ,ದೇವರಂ ನೆನೆಯಲ್,ಸಪರ್ಯೆಗೆ ಭಕ್ತಿಯಿಂ,
    ಬದ್ಧರಾಗರೆ ವೈರಿವೃಂದಮನೋಡಿಸಲ್ ರಣರಂಗದಿಂ?||

    (ಸಪರ್ಯೆ=ಪೂಜೆ)

    • ಸಲ್ವುದೀ ನವಮಲ್ಲಿಕೋತ್ತರಮಾಲೆ ಕಾವ್ಯವಧೂಟಿಗಂ
      ಗೆಲ್ವುದೇ ದಿಟಮಲ್ತೆ ನೈಜಸುಗಂಧದಿಂ ರಸಧಾಟಿಯೊಳ್ 🙂

    • ವಂದಿಪೆಂ ಸಹಜಾತರಾಂ ಬರೆದಿರ್ಪ ಪದ್ಯಮನೊಪ್ಪಿರಲ್,
      ಕುಂದಪುಷ್ಪದ ಮಾಲೆಯೊಲ್ ಚೆಲುವಾದ ಕಾವ್ಯದೆ ಮೆಚ್ಚುತುಂ 🙂

  13. ದತ್ತಪದಿ –
    ಮೇಘವಿಸ್ಫೂರ್ಜಿತಂ ||
    ಸಪಕ್ಷಾಸ್ಯಾಂಭೋಜಂ ವಿಕಸಿತತಮಂ ಹ್ಯುದ್ಗಮಾದ್ಯಸ್ಯ ರೇಜೇ
    ಖಲವ್ರಾತೇ ಭೀತಿಂ ತ್ವಸೃಜದಶನಿರ್ಯಸ್ತು ಕಾಂಗ್ರೆಸ್ವನಾನಾಮ್ |
    ಕಲಾಶೌರ್ಯಶ್ರದ್ಧಾಃ ಕಲಿತಸದನಾ ಯಸ್ಯ ರಾಜ್ಯೇ ಭವೇಯುಃ
    ನರೇಂದ್ರೋsಯಂ ಧೀಮದ್ವ್ರಜಪರಿವೃತೋ ವರ್ದ್ಧತಾಂ ಭಾಗ್ಯಭಾಸ್ವಾನ್ ||

    • ಅನನ್ಯಂ ಮೂರ್ಧನ್ಯಂ ನವಕವನಧನ್ಯಂ ಭವತ್ಕರ್ಮ ಮಾನ್ಯಂ 🙂

      • ಸುಧನ್ಯಂ ಮೇ ಜನ್ಮ ತ್ವದಿದಮಮಲಂ ಸ್ನೇಹಮಾಪ್ತ್ವಾ ಪ್ರಕಾಮಂ 😀

    • ಸಪಕ್ಷಾಸ್ಯಾಂಭೋಜಂ … – ಯಾವ ಭಾಗ್ಯಸೂರ್ಯನ ಉದಯದಿಂದ ತನ್ಮಿತ್ರರ (ಸಮರ್ಥಕರ) ಮುಖಕಮಲವು ಅರಳಿತೋ, ಅಥವಾ ತನ್ನ ಪಕ್ಷದ ಮುಖವಾದ (ಗುರುತಾದ) ಕಮಲವು ವಿಕಾಸ ಹೊಂದಿತೋ…
      ಕಾಂಗ್ರೆಸ್ವನಾನಾಂ – ಪಾರ್ಥೇನಿಯಂ ಕಾಡು ಅಥವಾ ಪಕ್ಷನಾಮ (ಕಾಂಗ್ರೆಸ್ ಮತ್ತು ತತ್ಪ್ರತಿಮರಾದ ವಾಮಾದಿ ಇನ್ನಿತರರು ಎಂದು ಸೂಚಿಸಲು ‘ವನಾನಾಂ’ ಎಂದು ಬಹುವಚನಪ್ರಯೋಗ )
      ಕಲಾಶೌರ್ಯಶ್ರದ್ಧಾಃ – ಎಲ್ಲ ಸತ್ಕಲೆಗಳು (ವಿಜ್ಞಾನ, ತಂತ್ರಜ್ಞಾನಾದಿಗಳನ್ನೂ ಒಳಗೊಂಡಂತೆ ), ಬೃಹತ್ ಸೇನಾಬಲದ ಸದುಪಯೋಗ-ಆತ್ಮಸಮ್ಮಾನರಕ್ಷಣೆ, (ದುರ್ವಾದಿಗಳಿಂದಲೂ ಅಪವ್ಯಾಖ್ಯಾತೃಗಳಿಂದಲೂ ಕ್ಷೀಣವಾಗುತ್ತಿರುವ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಬಗೆಗಿನ) ಶ್ರದ್ಧೆ

    • …ನಿರ್ಯಸ್ತು इति नावगतम् – कृपया विवृणोतु।

      • … त्वसृजदशनिर्यस्तु = तु + असृजत् + अशनिः + यः + तु …

        अन्वयः – यः कांग्रेस्वनानां अशनिः (सः) खलव्राते भीतिम असृजत् |
        अशनिः – Indra’s thunderbolt

  14. ಕರಸೈನಿಕರಂ ಮತ ಸಂ-
    ಗರದೊಳ್ ನೀರಜದೆ ಗೆಲ್ದು ಕರಸೇವಕರಿಂ ।
    ಕರತಾಲನದೊಳ್, ವೆರಳುಗ-
    ಳೆರಡೊಳ್ ಸಾಫಲ್ಯ ಸಾರ್ದುದೈ “ಭಾಜಪ”ವುಂ ।।

    “ಕಾಲಾಳು”ಗಳ ಬದಲಿಗೆ “ಕರಸೈನಿಕ”ರು !!

    • ಒಳ್ಳೆಯ ಕಲ್ಪನೆ-ಭಾಷೆ-ಶೈಲಿಗಳ ಪೂರಣಕ್ಕಾಗಿ ಅಭಿನಂದನೆಗಳು.

      • ಧನ್ಯವಾದಗಳು ಗಣೇಶ್ ಸರ್
        ದತ್ತ ಪದಗಳಲ್ಲಿ “ಅಪರೂಪದಾಪದಚಾಪ” ತರಲು (ವೃತ್ತದಲ್ಲಿ ರಚನೆ) ಸಾಧ್ಯವಾಗಲಿಲ್ಲ.

  15. ಬಿರುಗಾಳಿಯಂತೆ ಜಪಜಪನೆ ರಣರಂಗದಿಂ
    ಬರುಲು ವಿಜಯಧ್ವಜದ ರಥಮನೇರಿ|
    ಪುರದರಕ್ಷಣೆಗಿನ್ನು ಜೀವನೀಡುವೆನೆನುತೆ
    ಕರವೆತ್ತಿ ನೃಪನು ಸಪತವಗೈದನೈ|

    ಜಪಜಪನೆ – quickly
    ಸಪತ – ಶಪಥ

    • ಜಪಜಪನೆ, ಸಪತ ಇತ್ಯಾದಿಪದಗಳಿಗೆ ಕಾವ್ಯದಲ್ಲಿ ಪ್ರಯೋಗಪ್ರಸಿದ್ಧಿಯಿಲ್ಲವಲ್ಲಾ ಚೀದೀ!!

  16. ಚಿತ್ರಕವಿತ್ವದಲ್ಲಿ ನನ್ನ ಮೊದಲ ಪ್ರಯತ್ನ – ಏನಾದರೂ ಆಭಾಸಗಳಾಗುವಂತಿದ್ದರೆ ದಯವಿಟ್ಟು ಕ್ಷಮಿಸಿರಿ.

    ನನ್ನ ಇಷ್ಟದೈವ ಶಂಕರನ ಸ್ತುತಿ –

    || ತ್ರ್ಯಕ್ಷತ್ರ್ಯಕ್ಷರೀಸ್ತೋತ್ರಮ್ ||

    ಪೀಠಿಕಾಪದ್ಯ || ತ್ರ್ಯಕ್ಷರೀರಮಣಂ ತ್ರ್ಯಕ್ಷಂ ಚಕ್ಷುದಗ್ಧಸುಮಾಶುಗಮ್ |
    ರಕ್ಷಿತಾರಮಹಂ ವಂದೇ ರಕ್ಷಸ್ಸಭನಿಷೂದನಮ್ ||

    (ತ್ರ್ಯಕ್ಷರೀರಮಣಂ – ತ್ರ್ಯಕ್ಷರೀ ಪದ್ಯಗಳನ್ನು ಪ್ರೀತಿಸುವವನು ಅಥವಾ ಪಾರ್ವತೀಪ್ರಿಯ (ತ್ರ್ಯಕ್ಷರೀ ದಿವ್ಯಗಂಧಾಧ್ಯಾ ….. ಲಲಿತಾಸಹಸ್ರನಾಮಸ್ತೋತ್ರ – 126)

    ದ,ನ,ಮ || ನಂದಿಮಂದನದೀಂದೂನಾಂ ಮಾನದಂ ದೀನನಂದನಮ್ |
    ಮದನೋದ್ದಾಮಮೇದೋsದಂ ಮೇದಿನೀಮೋದದಂ ನುಮಃ ||

    ( ನಂದಿಮಂದನದೀಂದೂನಾಂ ಮಾನದಂ – ನಂದಿಗೆ ವಾಹನತ್ವವನ್ನು, ಮಂದ- ಶನೈಶ್ಚರನಿಗೆ ಶಿಷ್ಯತ್ವವನ್ನು, ನದಿ (ಗಂಗೆ) ಹಾಗೂ ಚಂದ್ರರಿಗೆ ಶಿರಃಸ್ಥಾನವನ್ನು ನೀಡಿ ಲೋಕಮಾನ್ಯತೆಯನ್ನು ದಯಪಾಲಿಸಿದ )

    ಕ, ಯ, ಲ || ಕಕೋಲಕಲಿಲಾಲೋಕ ಲೀಲಾಕೋಲ ಕಲಾಲಿಕ |
    ಕಲಯೇ ಕಾಲಿಕಾಲೋಲ ಕಲಯೇ ಕಾಲಲೀಲಕ ||

    [ಕಕೋಲಕಲಿಲಾಲೋಕ – ಕ (ಬ್ರಹ್ಮ), ಕೋಲ (ವರಾಹರೂಪಿ ವಿಷ್ಣು ) , ಆಲೋಕ – ಜ್ಯೋತಿಸ್ತಂಭದ ರೂಪದಲ್ಲಿ ಪ್ರಕಟನಾದ ಶಿವ ; ಲೀಲಾಕೋಲ – ಕಿರಾತಾರ್ಜುನೀಯ ಪ್ರಸಂಗ ; ಕಲಾಲಿಕ – ಹಣೆಯ ಮೇಲೆ ಚಂದ್ರಕಲೆಯನ್ನು ಧರಿಸಿದವನು ; ಕಲಯೇ ಕಾಲಲೀಲಕ – ಕಲಿಗೆ ಮೃತ್ಯುವಿನಂತಿರುವವನೇ )]

    ದ, ಭ, ವ || ವೇದಿಭಿದ್ವೇದವಿದ್ದೇವ ದೇವಭೂಭಾವದಾಭವ |
    ಭೋ ವಿಭೋ ಭವ ದೇವೇಭ ವಿದ್ವದ್ವಿಭವದೋ ಭವ ||

    ( ದೇವಭೂಭಾವದ – ಸ್ವರ್ಗವಾಸಾದಿ ಫಲಗಳನ್ನು ಕೊಡುವವನೇ )

    ಮ, ರ, ಸ || ಸೋಮಸೂರರಸಾಸೋಮಿಸಮೀರರಸಸಂಸರೇ |
    ರಾಮಾಸಮಾಸಸಂರಾಮೇ ಸ್ಮರಾರೌ ಸರಸೇ ರಮೇ ||

    (ರಾಮಾಸಮಾಸಸಂರಾಮೇ – ಅರ್ಧನಾರೀಶ್ವರತತ್ತ್ವ )

    • ಪ್ರಿಯ ಕೇಯೂರ!
      ತುಂಬ ಶ್ಲಾಘ್ಯವೂ ವಿಸ್ಮಯಾವಹವೂ ಆದ ನಿನ್ನ ಪ್ರಯತ್ನಕ್ಕಾಗಿ ಅನಂತಾಭಿನಂದನೆಗಳು. ಕೆಲವೊಂದು ಸವರಣೆಗಳು ಬೇಕಿವೆ. ಅವನ್ನು ದೂರವಾಣಿಯ ಮೂಲಕ ಚರ್ಚಿಸೋಣ.

    • ಎನಿತು ಚೆನ್ನಾದ ಕಬ್ಬಮನ್ನೊರೆದೊಡೇನು ಭಾಗ್ಯವಯ್ಯ
      ಇನಿತು ಸುಳ್ಳನುಂ ಪೇಳಲೆಲ್ಲ ಭಾಗ್ಯವದು ಲುಪ್ತವಯ್ಯ|
      ಪೊನಲು ಶಕ್ಯಮೇನಿನಿತು ಕಬ್ಬದೊಳ್ ಮೊದಲಯತ್ನದೊಳೆ ಪೇಳ್
      ವಿನಯವೇತಕೈ ವಾಗ್ಯವೇತಕೈ ಸಂನತಿಯದದೇಕೈ||
      (ವಿನಯ=ವಾಗ್ಯ=ಸಂನತಿ)

  17. एतत् पद्यं लिख्यते कूरेशस्य (श्रीवत्सचिह्नस्य) अतिमानुषस्तवस्य श्लोकमेकं स्मरता मया [“अब्धिं न तेरिथ न जिग्यिथ राक्षसेन्द्रं नैवास्य जज्ञिथ यदा हि बलाबलं त्वम् । निस्संशयस्सपदि तस्य पदेऽभ्यषिञ्चः तस्यानुजं कथमिदं हि विभीषणं च ॥”]

    स पादयुग्मप्रणते विभीषणे (सप)
    स्वराजपादप्रहृते पदच्युते । (जप)
    अदाच्छरण्यः शरणागतिं ततः (अद)
    विराजदात्माभिजयं विनिर्दिशन् ॥ (जद)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)