Aug 102014
 

janivara_rakshabandhana

ಇಲ್ಲಿ ಎರೆಡು ಚಿತ್ರಗಳಿವೆ, ಇವೆರೆಡನ್ನು ಅಥವಾ ಎರೆಡರಲ್ಲಿ ಒಂದನ್ನು ಕುರಿತು ಪದ್ಯ ಬರೆಯಿರಿ

  97 Responses to “ಪದ್ಯಸಪ್ತಾಹ ೧೨೧: ಚಿತ್ರಕ್ಕೆ ಪದ್ಯ”

 1. Don’t be misled by the tightly bound yajnopaveeta-s!
  ಕ್ರೋಂಚಪಾದ||
  ಮುಕ್ತರು ಬಾಲರ್| ಬಂಧನ ಕಾಣರ್| ಮದುವೆಯವರೆವಿಗು| ಚಪಲತೆ ತಡೆಯರ್
  ಸಕ್ತಿಯ ರೋಧಂ| ಕಷ್ಟವದೆಂಬ| ಪ್ರತಿಮೆಯೆ(ಪ್ರತೀಕ) ವಿರಲದ(loosely tied)| ಭುಜದೊಳ ಸರಿತಂ(thread)|
  ಸಿಕ್ತವು(wet) ಪಾಣಿ|ಗ್ರಾಹ್ಯದೆ ಹಸ್ತಂ|ಗೊಳಲದು ಯಮನವು(control)| ವಟುಗಳ ಬಗೆಗಂ(ways)
  ಯುಕ್ತಿಯು ರಕ್ಷಾ|ಬಂಧವದಾ ಪ|ರ್ವದ ವರೆವಿಗವರ| ದಮಿಸಲು ಮನವಂ

  (ಭಾಷೆಯ ಬಗೆಗೆ ಕ್ಷಮೆ ಇರಲಿ)

  • Wow!! ಕ್ರೌಂಚಪದದಂಥ ದೊಡ್ಡ ಹಾಗೂ ಸಿಕ್ಕುಸಿಕ್ಕಾದ ವೃತ್ತದಲ್ಲಿ ಬರೆದಿದ್ದೀರಿ!! ಅಭಿನಂದನೆಗಳು. ಇಂದು ಜನಿವಾರ ಹಾಕಿಕೊಳ್ಳುವಾಗ ಅದು ತುಂಬ ಸಿಕ್ಕಾಗಿತ್ತೇ? ಅದಕ್ಕೇ sick ಆಗಿ ನೀವು ಇದನ್ನು ಬರೆದಿರಾ? 🙂

  • 🙂

 2. ಪದ್ಯರಚಿಸಲು ಅಪಾರವಾದ ಮಾರ್ಗದರ್ಶನ,ಪ್ರೋತ್ಸಾಹಗಳನ್ನು ನಿರಂತರವಾಗಿ ನನಗೆ ನೀಡುತ್ತಿರುವ ಪೂಜ್ಯ ಸಹೋದರರಾದ ಶತಾವಧಾನಿ ಡಾ|ರಾ.ಗಣೇಶ್
  ಹಾಗೂ ಪದ್ಯಪಾನದ ಇತರ ಆತ್ಮೀಯ ಸಹೋದರರೆಲ್ಲರಿಗೂ ರಕ್ಷಾಬಂಧನದ ಹಾರ್ದಿಕಶುಭಾಶಯಗಳು. 🙂

  || ಕಂದಪದ್ಯ,ಉಪಮಾಲಂಕಾರ||

  ರಕ್ಷಾಬಂಧನಮಿರಲಿಂ-
  ದಕ್ಷಯಮಾಗಲ್ಕೆ ಪದ್ಯಪಾನದ ನಂಟೆಂ-|
  ದಕ್ಷರಿಸಲಳ್ತಿಯಿಂದಾಂ,
  ನಕ್ಷತ್ರಂಗಳವೊಲೆಮ್ಮ ನೇಹಂ ಮೆರೆಗುಂ ||

  (ಇಂದು ರಕ್ಷಾಬಂಧನಮಿರಲ್,ಪದ್ಯಪಾನದ ನಂಟು ಅಕ್ಷಯಮಾಗಲ್ಕೆಂದು ಆನಳ್ತಿಯಿಂದಕ್ಷರಿಸಲ್,ನಕ್ಷತ್ರಂಗಳವೊಲೆಮ್ಮ ನೇಹಂ ಮೆರೆಗುಂ.)

  • ಸಾಗರದಾಚೆಯೊಳಿರ್ದುಂ
   ನಾಗರಪಂಚಮಿಯ ತಂಗೆ, ರಕ್ಷೆಯನೀಯಲ್|
   ನೀಗಲ್ಕಕ್ಕುಮೆ? ಸಾರ್ಚಿದೆ-
   ನೀಗಳೆ ಕರಮಂ ಮಹಾಶಯನೆನಲ್ ಸಲ್ಗುಂ ||

   (ನಮ್ಮಲ್ಲಿ ನಾಗರಪಂಚಮಿ ಸೋದರ-ಸೋದರಿಯರ ಪರ್ವ. ಉತ್ತರಭಾರತದ ರಕ್ಷಾಬಂಧನಪರ್ವಕ್ಕೂ ಹಾರ್ದಿಕಸ್ವಾಗತ. ಮಹಾ+ಶಯ ಎಂದರೆ ಉದ್ದದ ಕೈಯವನೆಂದೂ ಅರ್ಥಾಂತರ:-)

   • chennaagide 🙂

   • ನೆಲಸಿರಲವಧಾನಮಹಾ-
    ಕಲೆಯೊಳ್,ಸರಸತಿಯೆ ಮೆರೆವವೋಲಣ್ಣಾ, ನೀಂ-|
    ಛಲದಿಂ ಮಹಾಶಯರಿರುತೆ,
    ಸಲಲೇವಿರುದಿರ್ಕುಮಂತು ಕರಮಂ ಸಾರ್ಚಲ್ ?! || 🙂

    • ಆನಾಗೆ ಸರಸ್ವತಿ; ತಂ
     ಗೀ! ನಾನಾರ್ಗೆಂದು ರಕ್ಷೆಯಂ ಕಟ್ಟಿದಪೆಂ?
     ಹಾ! ನೀಗಿತೆ ಜನಿವಾರಂ?
     ಹೋ! ನಾರಿಗಮುಂಟು ಯಜ್ಞಸೂತ್ರವಿಧಾನಂ 🙂

   • ಅವಿಲಂಬಸರಸ್ವತಿಯೆಂ-
    ಬ, ವಿರಲಮಾದಂಥ ಬಿರುದನುಳ್ಳಣ್ಣಾ ,ಬ-|
    ಲ್ಸವಿಯಲ್ತೆ, ರಕ್ಷೆಯಂ ಕ-
    ಟ್ಟುವವಸರದೆ ನೀಮಿರುತಿರೆ ,ಜನಿವಾರದೊಡಂ||

    (ಕ್ಷಮಿಸಿರಿ,ಇದು ವಿನೋದವಲ್ಲ,ಅನುಪಮಸುಂದರವಾಸ್ತವದ ರಮಣೀಯಕಲ್ಪನೆ )

  • ಶಕುಂತಲಾ ಅವರೆ ನಿಮ್ಮ ಆಶಯವೇ ನಮ್ಮ ಆಶಯವೂ ಕೂಡ, ಚೆನ್ನಾಗಿದೆ ಪದ್ಯ 🙂

   • ಧನ್ಯವಾದಗಳು ಸೋಮರೆ. 🙂

 3. ಜನಿವಾರ ಧಾರಣೆಯ ಸಮಯದಲ್ಲಿ ಗೊಂದಲವಾದಾಗ:

  ಬರಿಸದ ಪಾಪವ ಕಳೆಯಲ್
  ಕರದಿಂದ್ಯಜ್ನೋಪವೀತಮಂ ಪಿಡಿಯಲ್ಕಾ|
  ತುರದಿಂಗೊಂದಲಮಾಗಳ್
  ಧರಿಸಿದಬಲದಿಂದೆಡಕ್ಕೆ ಮರಳನುಮಕಟಾ|

  • ಒಳ್ಳೆಯ ಪದ್ಯ ಚೀದಿ! “ಕರದಿಂ ಯಜ್ಞೋಪವೀತ……” ಎಂದು ತಿದ್ದಿದರೆ ಎಲ್ಲ ಸರಿ.

  • ವರ್ಷವೆಲ್ಲದರ ಪಾಪಮಂ ಕಳೆಯೆ ಧರಿಸಪೊರಟುಮಾತಂ
   ಮರ್ಷದಿಂ (patience) ತೊಡದೆ ಪೊಂದಿದಂತೆಲಿನ್ನೆನಿತೊ ಪಾಪಮನ್ನುಂ!

  • ಚೀದಿ, ಚೆನ್ನಾಗಿದೆ…

   ಧರಿಸಿದ -> ಧರಿಸಿದಂ, ಹಾಗೆಯೇ ಮರಳನುಂ ಅಲ್ಲ ಮರಳಂ ಅಲ್ಲವೇ, ಹಾಗಾದರೆ ಛಂದಸ್ಸನ್ನು ಸವರಿಸಬೇಕಾಗುತ್ತದೆ

 4. ರಕ್ಷಾಬಂಧನಸೂತ್ರ(ರಾಖಿ)ವನ್ನು ಕುರಿತು:

  ಧರ್ಮಸೋದರರನೀವುದೇಗಳುಂ
  ವರ್ಮಮಪ್ಪುದಪಮಾನಘಾತಿಗಂ |
  ಶರ್ಮದಾಯಿ ಗಡ ರಕ್ಷೆಯಪ್ಪ ಚಿ-
  ತ್ಕರ್ಮಸೂತ್ರಮಿದು ಸಂಸ್ಕೃತೀಪ್ಸಿತಂ||

 5. ಜನ್ನನೂಲೆ! ನಿನಗಂಶುಕರೂಪಂ
  ಪನ್ನಮಾಗೆ ಭರತೋರ್ವಿಯ ಜಾತ್ಯು-
  ತ್ಪನ್ನಘರ್ಷಣೆ ಗಡಂ ಜಗುಳ್ದತ್ತೆಂ-
  ದೆನ್ನ ಚಿತ್ತಮುಲಿಗುಂ ಬಗೆನೋವಿಂ||

  (ಯಜ್ಞೋಪವೀತವು ತುಂಬ ಹಿಂದೆ ಉತ್ತರೀಯವೇ ಆಗಿತ್ತೆಂಬ ಪ್ರಾಚೀನವೈದಿಕತಥ್ಯದ ಆಧಾರದ ಮೇಲೆ ಈ ಪದ್ಯ ನಿಂತಿದೆ. ಈಗ ಮತ್ತೆ ಅದೇ ಪದ್ಧತಿ ಬಂದರೆ ಆಗಲಾದರೂ ಈ ಜಾತಿ-ಜನಿವಾರಗಳ ಜಗಳ ನಿಂತೀತೇ ಎಂಬ ದೂರಾಶೆಯೂ (ದುರಾಶೆಯಲ್ಲ! 🙂 ಇಲ್ಲಿದೆ.

  • ನಿಮ್ಮ ಆಸೆ ಈಡೇರದೇನೋ! ಅಂಶುಕದ ಸ್ತ್ರೀರೂಪವೆನಿಸಿದ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಜಗಳವಾಡುತ್ತಿದ್ದರು ಅಂದು. ಈಗ ಸ್ತ್ರೀಯರು ಇಜಾರ ತೊಡಲು ಆರಂಭಿಸಿದಮೇಲೆ ಜಗಳವಾಡುವುದು ಕಮ್ಮಿಯಾಗಿದೆಯೆ?
   ಸ್ವಾಗತ||
   ಸಲ್ಲದೆಂಬೆ, ಬಿಡಿ ನಿಮ್ಮ ಮನೀಷಂ
   ’ಪಲ್ಲು’ವೆಂಬ ಪರಿಯಂಶುಕಮನ್ನುಂ|
   ಹಲ್ಲೆಗೈಯೆ ಕಟಿಯೊಳ್ ಸಿಗಿಸಂದೇಂ
   ಚಲ್ಲಣಂ ಹಗೆಯ ವಾರಿಸುಗಿಂದೇಂ|| 😉

   • ಆಹಾ! ನಿಜಕ್ಕೂ ಒಳ್ಳೆಯ ಕಲ್ಪನೆ; ಒಳ್ಳೆಯ ಪದ್ಯ!!

  • ಸಾಮರಸ್ಯಕ್ಕಾಗಿ ಉತ್ತರೀಯಾರ್ಥದಯಜ್ಞೋಪವೀತದ ಪೂರಣ ಚೆನ್ನಾಗಿದೆ ಸರ್ 🙂

   • ಸೋಮಾ! ನೀನಲ್ಲದೆ ಮ-
    ತ್ತೀ ಮಹಿಯೊಳ್ ಪದ್ಯಪಾನಕೆ ಪ್ರತಿಕ್ರಿಯೆಯಂ |
    ತಾಮಸಮಿಲ್ಲದೆ ನೀಡುವ
    ಧೀಮಂತರದಾರೊ? ಶ್ರೀಶ-ಹೊಳ್ಳಾದಿಗಳೇಂ? 🙂
    (ಪಾಠಾಂತರ: ಧೀಮಂತರದಾರೊ ರಾಮ-ಕೊಪ್ಪಲದವರೇಂ?:-)

   • ಸಾಲದಿತ್ತೆ ಬರಿ ಸೋಮನಂ ಪೊಗಳೆ, ಶ್ರೀಶ-ಮೇಣಿತರರಂ|
    ಗೇಲಿಗೈದಿರಲ್ ತೀರ ಮುನಿದವರ್ ದೂರಮಿನಿತು ಪೋಪರ್|| 🙂

 6. ಸ್ನೇಹಸೂತ್ರವದೃಶ್ಯವಾದೊಡೇಂ
  ಸಹ್ಯವಾಗಲು ಭದ್ರಮಪ್ಪುಗುಂ
  ವಾಹಕಂ ಖಲು ಸರ್ವಬಂಧದಂ
  ಮೋಹಪಾಶವ ಮೀರಿ ಕಾವುದುಂ

  • ಸ್ವಾಗತದಿಂದ ಮಧ್ಯದ ಅಕ್ಷರವನ್ನು ತೆಗೆದರೆ ಅದು ಮಣಿರಂಗ ಆಗುತ್ತದೆ. ಆದರೆ ಇದು ರಥೋದ್ಧತದಿಂದ ಮಧ್ಯದ ಅಕ್ಷರವನ್ನು ತೆಗೆದಿರುವುದು. ಇದು ಯಾವ ಛಂದಸ್ಸು?
   (ಕೊನೆಯ ಪಾದದಲ್ಲಿ ಐದನೆಯ ಅಕ್ಷರ ಲಘುವಾಗಬೇಕು)

  • ಕಾಂಚನ ಅವರೇ ಪ್ರಸಾದರೆಂದಂತೆ ಆದಿಪ್ರಾಸವನ್ನು ಸರಿಪಡಿಸಬೇಕು, , ಅಂತೆಯೇ ಪದ್ಯದ ಆಶಯ ಅಷ್ಟು ಸ್ಪಷ್ಟವಾಗಿಲ್ಲ ಅಲ್ಲವೇ. ಹೊಸ ಛಂದಸ್ಸಿನ ಗತಿ ಗಣೇಶ ಸರ್ ಹೇಳುವಂತೆ mathematically possible aesthetically not viable ಎನ್ನುವ ಹಾಗಿದೆ 🙂

   • ಆದರೆ ಸೋಮ, ಮಣಿರಂಗ ಚೆನ್ನು ಎಂದಾದರೆ, ಅದಕ್ಕೆ ತೀರ ಹತ್ತಿರದ ದಾಯಾದಿಯಾದ ಇದೇಕೆ ಚೆನ್ನಿರದು?

    • ಹತ್ತಿರದ ಸಂಬಂಧವಿದ್ದರೂ ಕೆಲವೊಮ್ಮೆ
     ತೆತ್ತಿರದ ಭಾವವಿರೆ ಬಂಧ ಸೊಗಯಿಸದು|
     ಹತ್ತಿರವದಾದರೂ ಬಾಯ್ಗೆ ಮೂಗದರಿಂದೆ
     ತುತ್ತು ಸವಿಯಲ್ಕಳವೆ ಕೇಳ್ ಹಾದಿರಂಪಾ!

     • 🙂

     • ಬೇಡವೇ ಬೇಡ,ಪ್ರಸಾದರೇ, ಸರಿಯಾದ ಹೆಜ್ಜೆಯನ್ನೇ ಇಡೋಣ(ಬಾಯಿಯಲ್ಲೇ ಊಟ ಮಾಡೋಣ) 🙂 ಹೀಗಿದೆ ಅದಕಾಗಿ ಈ ಚುಟುಕು:

      ಸ್ನೇಹಸೂತ್ರವದದೃಶ್ಯವಾದೊಡೇಂ
      ದಾಹವಿರ್ಪುದಲೆ ಬಧ್ರವಾಗುವಾ
      ವಾಹಕಂ ದಿಟದೆ ನೀಳ ಬಂಧದಂ
      ಮೋಹಪಾಶವನೆ ಮೀರಿಕಾವುದುಂ

      ಸೋಮರೇ, ನಾನೆಣಿಸಿಕೊಂಡ ಅರ್ಥ:
      ಸ್ನೇಹವೆಂಬ ಸೂತ್ರ(ರಕ್ಷೆಯ ಹಿಂದಿರುವ)ವು ಕಣ್ಣಿಗೆ ಕಾಣದಿದ್ದರೂ ಇದು ಬಲವಾಗುವ ಆಕಾಂಕ್ಷೆಯನ್ನು ತಾಳಿದೆ.
      ಎತ್ತರದ ಬಂಧಗಳ ಮಧ್ಯವರ್ತಿಯೂ ಇದಾಗಿದೆ ಮತ್ತು ಲೌಕಿಕ ಬಂಧನವನ್ನು ಮೀರಿ ರಕ್ಷಿಸುವುದು(ನಿಲ್ಲುವುದು).

    • ಬಹಳ ಚೆನ್ನಾಗಿದೆ ನಿಮ್ಮ ಪದ್ಯದ ಆಶಯ 🙂

     • ಅಬ್ಬಾ! ಜಾಗೃತಿಗೊಳಿಸಿದ ಎಲ್ಲ ಸಹೋದರರಿಗೂ ಧನ್ಯವಾದಗಳು 🙂

   • ನೆರೆಯವರ್ ಪಾರಕ್ಯರಿರಲಕ್ಕುಮೆಂದರಿದೆ
    ನಿರುಕಿಸೆನಿತೋ ಗೃಹಸಮುಚ್ಚಯಗಳಂ|
    ಪರಮದಾಯಾದರೊಳ್ ಸಾವಯವಸಂಬಂಧ-
    ವಿರದೆ ನೀಂ ತಿಳಿಯಪೇಳಿರಿ ದೇಶಿಕರ್|| 🙂

  • ಜುಟ್ಟು-ಜನಿವಾರ ಹಿಡಿದುಕೊಳ್ಳುವುದು!

   ಮಾತ್ರ ನೀಂ ಗಣಿಸೆ ಸ್ನೇಹಸೂತ್ರಮಂ (ರಾಖಿ)
   ಚಿತ್ರವಲ್ತೆರವೆ ಯಜ್ಞವೀತ ತಾಂ?(ವಿಚಿತ್ರವಲ್ತೆ? ಎರವೆ……?)
   (ನಾಣ್ಣುಡಿ) ಸೌತ್ರದುಕ್ತಿವೊಲುಮಿಂದು ಕಂಡಿರೇಂ
   ಮೈತ್ರಿ ಜುಟ್ಟಜೊತೆ ಯಜ್ಞವೀತದಂ|| 🙂

 7. ಜನಿವಾರ ಹಾಗೂ ರಾಕಿಯ ನಡುವಿನ ಸಂಭಾಷಣೆ –

  ಇರುವುದೊಂದೇ ಬಿಳಿಯ ಬಣ್ಣವ
  ಬರಿಯ ಮೂರೆಳೆಯಿರ್ಪ ನಿನ್ನನು
  ಮರೆಯಮಾಳ್ಪರು ವಸ್ತ್ರದಿಂ ತೋರಿಸದೆ ರೂಪವನು|
  ತರತರದ ವರ್ಣಗಳುಮಿದ್ದರು
  ತೊರೆವರೊಂದೇ ದಿನಕೆ ಕಡಿಯುತೆ
  ಮರೆವರೈ ನೀನಿತ್ತರಕ್ಷೆಯನಿದುವೆ ದಿಟಮೆಂದು|

 8. रक्षा मत्सोदरीबद्धा भृशं विस्माययत्यहो !
  मणिबन्धे निषण्णैषा किन्तु बध्नाति मानसम् ॥

  ತಾತ್ಪರ್ಯ – ನನ್ನ ಸೋದರಿ ಕಟ್ಟಿದ ಈ ರಕ್ಷೆ ವಿಸ್ಮಯಕಾರಿಯಾಗಿದೆ. ಇದು ಇರುವುದು ನನ್ನ ಮಣಿಬಂಧದಲ್ಲಿ, ಆದರೆ ಬಂಧಿಸಿದ್ದು ನನ್ನ ಹೃದಯವನ್ನು !

  • तद्वद्यद्वद्विपाशं स्या-
   न्नासासूत्रं करोति वै।
   वैवाहितस्य पादानाम्,
   भार्यहस्तान्तरं गतम्॥ 🙂

   Not very confident about the genders of विपाशं (I meant द्वितीयाबिभक्ति) and नाससूत्रं (I meant प्रथमाविभक्ति)

   Your verse is good. How was your Sringeri-aShTAvadhAnaM?

   • सुन्दरं पद्यम् 🙂
    ಧನ್ಯವಾದಗಳು ಸರ್ 🙂 ಅಷ್ಟಾವಧಾನ ಚೆನ್ನಾಗಾಯ್ತು 🙂

   • त्रीणि सन्त्यत्र हस्काराः किं निमित्तं महाप्रभो
    कस्यास्ति वद का छाया, (मदीय)मन्दबुद्धिं विमोचय।

    Please correct the errors. How to make the last letter guru?

  • हृदयहारिणी किलैतत्पद्यम्। किं च सोदरी इति रूपात् सोदरामेव शाब्दिका अधिकमाद्रियन्ते।

   प्रासदुपद्ये तु ” विपाशं ” विशुद्धमपि “नाससूत्रं” तु नासासूत्रं इति भवेत्।

   • ಧನ್ಯವಾದಗಳು. ತಿದ್ದಿದ್ದೇನೆ.

   • धन्यवादाः । तथा परिष्कुर्वे ।
    रक्षा मत्सोदराबद्धा भृशं विस्माययत्यहो !
    मणिबन्धे निषण्णैषा किन्तु बध्नाति मानसम् ॥

  • ಪೆಜತ್ತಾಯರೆ ಬಹಳ ಚೆನ್ನಾಗಿದೆ ರಕ್ಷಾಬಂಧನ ವಾಸ್ತವವಾಗಿ ಹೃದಯದ ಬಂಧನವೆಂಬುವ ಪದ್ಯ

 9. शिशिरकरसनाभि द्योतते यज्ञसूत्रं
  सुरविभुधनुराभं रक्षणासूत्रमन्यत् ।
  द्वितयमपि जनानां भावनादित्यदीप्तं
  भवति किल विनैवं छिन्नमेवात्र सत्त्वम्॥

  (Either YajnasUtra or rakShaasUtra, inspite they shining like moon light or rainbow, loose significance unless they are lightened by the true sun-light-spirit of feelings and emotions.)

  • ಭಾವವಿಲ್ಲದ ಸಂಕೇತಗಳಿಗೆ ಬೆಲೆಯಿಲ್ಲವೆಂಬ ಪದ್ಯ ಬಹಳ ಚೆನ್ನಾಗಿದೆ ಸರ್

 10. ದಾರಂಗಳಂ ತಂದೆಯು ಮೈಯೊಳಿಕ್ಕಲ್
  ದಾರಂಗಳಂ ತಂಗೆಯು ಕೈಗೆ ಸುತ್ತಲ್
  ದಾರಂಗಳಂ ಸೊಂಟಕೆ ತಾಯಿ ಕಟ್ಟಲ್
  ದಾರಾಜನರ್ಗಾದುದು ಮೂಗು ಶೇಷಂ

  😉

  • ಚೆನ್ನಾಗಿದೆ. ಆದರೆ ‘ಮೈಯೊಳಿಕ್ಕಲ್’ ಬದಲು ‘ಪಕ್ಷದೊಳ್ ಮೇಣ್’ (ಭುಜ) ಎಂದು ನಿರ್ದಿಷ್ಟವಾಗಿ ಹೇಳುವುದೊಳ್ಳೆಯದು. ಏಕೆಂದರೆ ಕೈ, ಸೊಂಟ ಹಾಗೂ ಮೂಗು ‘ಮೈ’ನ ಅಂಗಗಳೇ ಅಲ್ಲವೆ?
   ಮೇಲೆ ೮ರಲ್ಲಿನ ನನ್ನ ಪ್ರತಿಕ್ರಿಯಾಪದ್ಯವೂ ಇದೇ ಜಾಡಿನದು.

   • ಸಮಾನಶೀಲವ್ಯಸನೇಷು ಸಖ್ಯಂ
    ಸಮಾನಮಾಲೋಚನೆಯುಂ ಬುಧರ್ಕಳ್
    ಸಮಾನಮೈ ಕೂಳರ ಚಿಂತನಂಗಳ್
    ಸಮಾನಪದ್ಯಂಗಳು ಚೋದ್ಯಮೆಂತು?

    • ಇದು ಶುದ್ಧ ಉಪೇಂದ್ರವಜ್ರ. ಉಪಜಾತಿ ಎಂಬುದೊಂದಿದೆ, ಇಂದ್ರ-ಉಪೇಂದ್ರವಜ್ರಗಳ ಸಂಕರದ್ದು. ಇಲ್ಲಿ ಸಂಸ್ಕೃತ-ಕನ್ನಡಗಳ ಸಂಕರವಾಗಿರುವುದರಿಂದ, ಇದನ್ನು ಪಾಪಜಾತಿ ಎನ್ನೋಣವೆ?

     • ಪೆಸರ್ಗಳೊಲೇನುಂಟು ಗೆಳೆಯ?
      ಕಸವರ ಪೊಳೆಗುಂ ಗುಲಾಬಿ ನಾರ್ಗುಂ ಪದ್ಮಂ
      ಕೆಸರಿನೊಳಲರ್ದು ಸಾರ್ಗುಂ
      ಪೆಸರಿನ ಪಂಗೇಕೆ ಗುಣಿಗೆ ಗುಣಮಿರೆ ಸಾಲ್ಗುಂ

     • Wah!

   • ಗುಲಾಬಿ ನಾರುತ್ತೆ; ಪದ್ಮ ಮಾತ್ರ ಸಾರುತ್ತದೆಯೋ?
    Just as ಕಸ in gold (ಕಸವರ), there is no ಧ್ವನಿ in the word ಗುಲಾಬಿ; you have set out to establish the inappropriateness of names.

    ಹುಂ, ಸಾರ್ಗುಂ ತಾಂ ಪದ್ಮಂ
    ಘ್ರಂಸಾಘಾತದೆ (sunshine) ಗುಲಾಬಿವೊಲ್ ನಾರುವರಂ| 🙂
    ಮೇಣ್…
    ರಂಸು(delight)ವದಿಲ್ಲಂ, ’ಕಸವರ’
    ಕಂ ಸಾಟಿಯದೇಂ ’ಗುಲಾಬಿ’ ಶೂನ್ಯಧ್ವಾನಂ||
    ——-
    ಗುಣಮಿಽರದಿರೆ ಗುಽಣಿಽಯಂ ಗುಽಣಿಯೆಂಬಽರೆ
    ಪ್ರಣಮಿಽಸಽಗುಣಿಯಽ ಸತ್ತ್ವಽವಽ|ದಿನಿತಿರ್ದೇ
    ನಣುವಿಂದಽಲಲ್ತೆಽ ಬ್ರಹ್ಮಾಂಡಂ||

  • ಬಹುದಿನಗಳ ಬಳಿಕ ಬರುತ್ತಿದ್ದೀರಿ! ಸ್ವಾಗತ!! ಒಳ್ಳೆಯ ಪದ್ಯವನ್ನೇ ನೀಡಿದ್ದೀರಿ; ಇದಕ್ಕಾಗಿ ಮತ್ತೂ ಮಿಗಿಲಾದ ಅಭಿನಂದನೆ.

  • ಜೀವೆಂ ಬಹಳಕಾಲದ ಬಳಿಕ… ಹೀಗೆಯೇ ಬರೆಯುತ್ತಿರಿ… ನಿಮ್ಮ ಮೂಗುದಾರದ ಪದ್ಯ ಚೆನ್ನಾಗಿದೆ 🙂

 11. ಮೆರೆಯಲೇತಕೆ ಬಣ್ಣಬಣ್ಣದ
  ಬೆರಗ ರಕ್ಷಾಬಂಧ ನೀನೀ-
  ಗಿರುವೆ ಸಿದ್ಧಳು ಕೈಯನೇರಲುಮಿನಿತು ತಡೆಯೌ ನೀಂ|
  ಧರಿಸೆ ಜನಿವಾರವನು ಬಿಡಿಸು-
  ತ್ತರಿಸಿನವ ಮೇಣ್ ಕುಂಕುಮಂಗಳ
  ಮೆರುಗನೀಯುವೆವಾಗ ನೀ ಪೈಪೋಟಿಗಂ ನಿಲ್ಲೌ||

  • ಅರಿಸಿನ-ಕುಂಕುಮಸೇರಿದ ಸೊಗಸಿನ
   ಮೆರೆವ ಬಣ್ಣಗಳ ಬೆಡಗೆಲ್ಲಾ |
   ಸರಿದೋಡುವುದಯ್ ಮರುದಿನ ಮಜ್ಜಿಸೆ
   ನೊರೆಸೋಪಿನೊಳೋ ಜನಿವಾರಾ!!!

   • ಅರಿಸಿನ ಕುಂಕುಮ ರಾಗದ್ವೇಷದ
    ಕುರುಹನು ಬಿಂಬಿಸೆ ಶಾಸ್ತ್ರಗಳು
    ಅರಿವಿನರವಿ ವರ್ಣಗಳನು ನುಂಗಲು
    ಪರಿಶುದ್ಧವಲಾ ಜನಿವಾರಾ !!!

  • ಪೋದೊಡಮೇನಾ ಬಣ್ಣವು, ತಳೆವುದ-
   ದೂದಾ ಬಣ್ಣವನನಿತರೊಳೇ|
   ಕಾದಲೆಯುಜ್ಜದ ಬೆನ್ನೊಳು ಸೇರಿಹ-
   ನಾದಿಯ ಕಾಲದ ಕರ್ದಟದಿಂ|| (ಕೊಳೆ)

  • ಉಪನಯನವಾಗುವ ತನಕ ರಕ್ಷಾಬಂಧದ ತಂತುವು ಮೆರೆದಿರಬಹುದು, ತದನಂತರ ಜನಿವಾರದೊಡನೆ ಪೈಪೋಟಿಗೆ ನಿಲ್ಲಬೇಕಾಗುವುದೆಂಬ ಪದ್ಯ ಚೆನ್ನಾಗಿದೆ, ಸಂವಾದವೂ ಚೆನ್ನಾಗಿದೆ

 12. ಶ್ರೀಯುತ ಸೋಮರೆ,

  ನನ್ನ ಪೂಜ್ಯ ತೀರ್ಥರೂಪರಾದ ದಿವಂಗತ ಶ್ರೀ ಗಣಪತಿ ಮೊಳೆಯಾರರ ಕೃತಿಗಳನ್ನು ಬಯಸಿರುವಿರಿ.ಅವರು ಅತ್ಯಂತಕಠಿನಪರಿಶ್ರಮದಿಂದ ರಚಿಸಿರುವ ಮೇಘದೂತದ ಪ್ರತಿಕೃತಿಯ ಮಂದಾಕ್ರಾಂತ ವೃತ್ತದ ಕನ್ನಡಾನುವಾದ(ಮೂರನೇ ಭಾಗ)ವನ್ನು ಗಣಕಯಂತ್ರಕ್ಕೆ ಅಳವಡಿಸಲಾಗಿದ್ದು,ನಿಮಗೆ ಕಳುಹಿಸುವೆ.ಉಳಿದೆರಡು ಭಾಗಗಳೂ ಶೀಘ್ರವೇ ನಿಮ್ಮ ಕೈ ಸೇರಲಿವೆ.ಇವುಗಳನ್ನು ಪದ್ಯಪಾನಕ್ಕೆ ಸೇರಿಸಲಾಗುವುದಾದಲ್ಲಿ ಆಸಕ್ತರೆಲ್ಲರೂ ಪ್ರಯೋಜನವನ್ನು ಪಡೆಯುವಂತಾಗುವುದು.ಮೊಳೆಯಾರರ ಬರವಣಿಗೆಯ ಮೋಹಕಶೈಲಿ,ಪ್ರೌಢಿಮೆಗಳಿಂದಾಗಿ ಎಷ್ಟು ಬಾರಿ ಓದಿದರೂ ಮತ್ತೆ ಮತ್ತೆ ರಸಾಸ್ವಾದಿಸಬೇಕೆನಿಸುವಂತಿದ್ದು,ಕನ್ನಡದಲ್ಲಿ ರಚಿಸಲು ಕಷ್ಟವೆನಿಸುವ ಮೂಲಛಂದಸ್ಸಿನಿಂದ ಕೂಡಿ,ಮೂಲದ ಮಾಧುರ್ಯವನ್ನು ಈ ಕೃತಿಯು ವ್ಯಕ್ತಪಡಿಸುತ್ತಿದೆಯೆಂದು ಹಲವರು ವಿದ್ವಾಂಸರ ಅಭಿಪ್ರಾಯ.

  • ಶಕುಂತಲಾ ಅವರೆ, ಬಹಳ ಧನ್ಯವಾದಗಳು, ನಾನು ಶ್ರೀಯುತ ಗಣಪತಿ ಮೊಳೆಯಾರರ ಮೇಘದೂತದ ಕನ್ನಡಾನುವಾದದ ಬಗ್ಗೆ ಶತಾವಧಾನಿಗಳ ಪ್ರಶಂಸೆಯನ್ನು ಕೇಳಿದ್ದೆ ಓದಿರಲಿಲ್ಲ, ಇದರ ಲಾಭವನ್ನು ಎಲ್ಲ ಪದ್ಯಪಾನಿಗಳೂ ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಇದನ್ನು upload ಮಾಡಿ link ಅನ್ನು ಎಲ್ಲರಿಗೂ ತಿಳಿಸುತ್ತೇನೆ

 13. ರಾಕಿಯ ಬಗ್ಗೆ ಒಂದು ಪದ್ಯ

  ಪುಟ್ಟ ತಂಗಿಯು ಮೆದುವೆರಳನಿಂದ ಬೆಸೆದು ಚೊ-
  ಕ್ಕಟ್ಟಿನಿಂ ಮಣಿಗಳಂ ಬಂಧಿಸಿರ್ಪಳ್|
  ಕಟ್ಟುತುಂ ರಕ್ಷೆಯಂ ನಲ್ಮೆಯಿಂದಣ್ಣನಿಗೆ
  ಗಟ್ಟಿಯಾಗಿಸುತೆ ಬಾಂಧವ್ಯಗಳನು|

 14. ಇಳೆಯೊಳ್ ಸಂಸ್ಕಾರವಂತರ್ಕಳ ಹದನಕೆನಲ್ ದ್ವೈಧಮಾರ್ಗಂಗಳಿರ್ಕುಂ
  ತಿಳಿಪಿಂದೊರ್ಮೆಯ್ಯನಾಂತಾ ಶತಶಕನಿಧಿಯಿಂ ವಿಸ್ತೃತಾಭ್ಯಾಸಕಲ್ಪಂ,
  ತಿಳಿಯಾ ತತ್ಕಾಲಕರ್ಮಂ ಜನಗಣಮನದೊಳ್ ಶಿಷ್ಟಮೆಂದಿರ್ದು ದೇಶಂ-
  ಗಳ ಮೇಣ್ ಕಾಲಂಗಳಿಂದಂ ವಿವಿಧವಿಧಿಗಳಿಂ ರಂಜಿಪಾಹ್ಲಾದಪುಂಜಂ

  ಲೋಕದಲ್ಲಿ ಸಂಸ್ಕಾರ ಪಡೆಯಲು ಎರೆಡು ಮಾರ್ಗಗಳಿವೆ, (ಮೊದಲನೇಯದು)ನೂರಾರು ವರ್ಷಗಳಿಂದ ಪರಂಪರೆಯ ತಿಳಿವಿಂದ ಒಂದು ಅಗಾಧವಾದ ಜ್ಞಾನಭಂಡಾರದ ವಿಧಿವಿಧಾನಗಳ ವಿಸ್ತೃತಾಭ್ಯಾಸವು (ಉಪನಯನ, ಉಪಾಕರ್ಮ, ಜನಿವಾರ ಬಳೆಸಿ ಮಾಡುವ ಇತರ ಕರ್ಮಗಳು), (ಎರಡನೆಯದು) ತಿಳಿಮನದಿಂದ ಪೂರೈಸಬಹುದಾದ ಜನರಮನಸ್ಸಿನಲ್ಲಿ ದೇಶಕಾಲಗಳಿಗೆ ಬದಲಾಗುವಂತಹ ಸಧ್ಯದ ಶಿಷ್ಟಾಚಾರಗಳಿಂದ ರಂಜಿಸುವ ಸಣ್ಣವಿಧಿಯ ಪುಂಜಗಳು (ರಕ್ಷಾಬಂಧನ ಇತ್ಯಾದಿಗಳು)

  ಇವತ್ತು ಸ್ವಾತಂತ್ರ್ಯದಿನಾಚರಣೆ ಹಾಗಾಗಿ ಸ್ವಾಭಾವಿಕವಾಗಿ ‘ಜನಗಣಮನ’ ಬಂದುಬಿಟ್ಟಿತ್ತು, ನಿಮ್ಮೆಲ್ಲರಿಗೂ ಶುಭಾಷಯಗಳು 🙂

  • ಎರಡುಂ ತಾನೇಕಮೆಂದುಂ ಋಷಿಋಣಮದುತಾಂ, ಪದ್ಯಪಾನಾಬ್ಧಿ ಸೋಮಾ !

  • ಸೋಮ, ಒಳ್ಳೆಯ ಮಹಾಸ್ರಗ್ಧರೆಯನ್ನೇ ರಚಿಸಿದ್ದೀಯ. ಅಭಿನಂದನೆಗಳು.

  • ಗಣೇಶ್ ಸರ್, ಮೌಳಿಯವರೇ ಧನ್ಯವಾದಗಳು

 15. ಗಿಡನೊಳ್ ಪುಟ್ಟಿದ ಗೌರತೂಲವದುತಾಂ ಪೊಂದುತ್ತ ವರ್ಣಂಗಳಂ
  ತೊಡುವಂತಾಗಿರೆ ರಕ್ಷೆಯೆಂಬ ಪೆಸರಿಂದೀಯುತ್ತಲೇ ಕಾಂತಿಯಂ |
  ಪಡೆದುಂ ಪ್ರೀತಿಯ ರಂಗನುಂ ಮನಸಿನೊಳ್ ಸಾರ್ಚಿರ್ದ ಭಾವಂಗಳುಂ
  ಒಡತಂದುಂ ಸಹಜೀವಜಂತುಗಳನೇ ಸಾಂಗತ್ಯಮಂ ತೋರಲೈ ||
  ಸಾಂಗತ್ಯ=ಸಾಮರಸ್ಯ
  ಸಾರ್ಚು=ಸಂಭವಿಸು,ಹುಟ್ಟು
  ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು 🙂

  • ಪದ್ಯ ಚೆನ್ನಾಗಿದೆ. ಕೆಲವೂಂದು ಸವರಣೆಗಳು:
   ……………………..ಗೌರತೂಲ……………
   ತೊಡುವಂತಾಗಿರೆ……………………………..
   ……………………………………………….
   …………………..ಸಾಂಗತ್ಯಮಂ………….

  • ಆಹಾ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ರಂಗನನ್ನೂ ಪದ್ಯದಲ್ಲಿ ಅಳವಡಿಸಿದ್ದೀರಿ 🙂

   on a serious note, ಪದ್ಯ ಬಹಳ ಚೆನ್ನಾಗಿದೆ

   • 🙂 ರಂಗನನ್ನು ಎಲ್ಲೆಡೆಯಲ್ಲೂ ಕಾಂಬ ಭಕ್ತನಿಂದ ಹೊಗಳಿಸಿಕೊಂಡುದೆನ್ನ ಭಾಗ್ಯ!

 16. ಜನಿವಾರಂ ಬಿಳಿಮೂರುನೂಲಿನೆಳೆಗಳ್ ಮೇಣ್ ಗಂಟಿನಾಧಾರಮೇನ್?
  ದನಿಗಳ್ ಮಧ್ಯಮತಾರಮಂದ್ರಗಳವೇಂ? ಧರ್ಮಾರ್ಥಕಾಮಂಗಳೇಂ?
  ಇನಗಂ ನೀಡಿಪದರ್ಘ್ಯಮೂರ ಸಮಮೇಂ? ಮೇಣ್ ಭೂರ್ಭುವಸ್ಸ್ವಃಗಳೇಂ?
  ಘನತತ್ವಂಗಳುಮಿಲ್ಲದಿರ್ದೊಡಮಹಾ ! ಕೀಳಪ್ಪುದೇಂ ಭಾವಕಂ?

  • ಘನತತ್ತ್ವಕ್ಕಿದು ಯಜ್ಞಸೂತ್ರ ದಿಟದೊಳ್ ಪದ್ಯಾರ್ಘ್ಯಮೈ ರಾಮನಾ!

   • ಮೌಳಿ – ಧನ್ಯವಾದಗಳು. ಈ ಪದ್ಯಕ್ಕೆ ನೀವು ಸ್ಪಂದಿಸದಿದ್ದರೆ ಕೊಂಚ ನಿರಾಶೆಯೇ ಆಗುತ್ತಿತ್ತು 🙂

  • ಸಸಂದೇಹ-ಉಲ್ಲೇಖಾಲಂಕಾರಗಳ ಜೋಡಣೆ ಚೆನ್ನಾಗಿದೆ.

   ಆದರೆ “…..ತಾರಮಂದ್ರಸುರ…..” ಎಂಬಲ್ಲಿ ಸುರ ಎಂಬ ಪ್ರಯೋಗವು ಸ್ವರ ಎಂಬುದರ ತದ್ಭವವಾಗಿದ್ದಲ್ಲಿ ಅರಿಸಮಾಸವಾಗುವುದು. ಹೀಗಾಗಿ ಅದನ್ನು “ದನಿಗಳ್
   ಮಧ್ಯಮ-ತಾರ-ಮಂದ್ರಕೆಣೆಯೇಂ….” ಎಂದು ತಿದ್ದಿದರೆ ಯುಕ್ತವಾದೀತು.

   • ಗಣೇಶ್ – ಸಲಹೆಗೆ ಧನ್ಯವಾದಗಳು.ಸುರ ಎಂಬುದು ಸ್ವರದ ತದ್ಭವವೆಂದೇ ಉಪಯೋಗಿಸಿದ್ದು. ಸರಿ ಮಾಡುತ್ತೇನೆ.

  • ರಾಮ್ ಪದ್ಯ ಬಹಳ ಚೆನ್ನಾಗಿದೆ 🙂
   ಯಾವಘನತತ್ವವನ್ನೂ ಹೊತ್ತಿಲ್ಲದ ಸಂಕೇತಗಳಿಗಾಗುವ ಮರ್ಯಾದೆಯೇನಿರಬಹುದು ಎನ್ನುವ ಪ್ರಶ್ನೆಯನ್ನು ಬಹಳ ಚೆನ್ನಾಗಿದೆ ಮೂಡಿಸಿದ್ದೀರಿ

   • ಧನ್ಯವಾದಗಳು ಸೋಮ. ಪದ್ಯದ ಇಂಗಿತಕ್ಕಿಂತಲೂ ಕೊಂಚ ಹೆಚ್ಚಿನ ಮರ್ಯಾದೆಯನ್ನೇ ಕೊಟ್ಟಿದ್ದೀರಿ 🙂

 17. रक्षा सुरक्षा नवबालिकानां
  भूषा सुशिक्षा खलु बालकानाम्
  धनस्य मूलं हि वणिग्जनानां
  सद्वस्तु काव्यस्य शुभा कवीनाम्

  • कामातुराणां न भयं न लज्जा
   तैर्नास्ति मानो नव वा पुराणा।
   वार्त्ता नु नित्या प्रमथो जराणाम्
   स्त्रीणामशीतिः ह्यपि षोडशानाम्॥
   Not that there aren’t other mistakes, but I feel that the prayoga स्त्रीणामशीतिः is wrong (Is स्त्रीणामशीत्याः correct?). What the last line means is ‘women of eighty as well as those of sixteen’. Please suggest corrections.

   • स्त्रीणाम् अशीतिः इति प्रयोगो न दोषाय । संख्यावाचकत्वात् प्रयोगस्य ।परन्तु कृपया अन्वयः कथम् इति प्रेष्यताम्।

   • Thanks for the clarification. You have said about the security of ‘नवबालिका:’| In today’s newspaper there is report about sexual assault on a 80-year old woman. So, not just the teens, but also old women need security. The ravagers have no reservations as to age of their quarry.
    कामातुराणां न भयं न लज्जा| तैः नव-पुराणा इति मानः नास्ति। जराणाम् स्त्रीणामशीतिः षोडशानाम् अपि प्रमथः वार्त्ता नु नित्या?

    • अस्तु धन्यवादाः।
     तैः इत्यत्र तेषाम् इति स्यात् इति मन्ये ।
     नवपुराणा इति पदम् इतोपि अवलोकनीयम्।
     जराणाम्………….. इत्यत्र संख्यावाचकस्य संख्येयवाचकस्य च एकत्र एव समावेशः कथं शक्यते?।

  • ಉಮಾಮಹೇಶ್ವರರೇ, ಈ ನೂಲಿನ ಬಗ್ಗೆ ಉಲ್ಲೇಖಾಲಂಕಾರವಲ್ಲವೇ, ಬಹಳ ಚೆನ್ನಾಗಿದೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)