Jun 142011
 

5 5 5 5
5 5 5 3
5 5 5 5
5 5 5 1

ಘಂಟೆಗಳ ಮುಳ್ಳೊಂದು ನಿಮಿಷಗಳಿಗೊಂದು, ನಾ
ಭಂಟ ಕ್ಷಣಕೆನೆವೊಂದು ದುಡಿಯೆ, ಅನ್ಯೋನ್ಯ
ನಂಟಿನರಿವಲಿ ಸಮಯಸೂಚಿತಾ ಸಾಗುವೆನೆ
ಜಂಟಿ ದಾಂಪತ್ಯವನುಸರಿಸು ಜಾಣ(ಣೆ) |೧|

ಬೇರೊಂದರಿಂದಹುದೆ ಕಾಂಡವಷ್ಟೆಯೆ ಸಾಕೆ

ನೀರ ಹೀರುವ ಬೇರೆ ಸಸ್ಯಕಾಧಾರ
ಸಾರದೂಟವು ಎಲೆಗಳಿನ್ದೆಂಬ ತೆರೆದಿ ಸಂ-
ಸಾರ ಕೆಲಸದಿ ಮೇಲು-ಕೀಳೆಮ್ಬುದಿಲ್ಲ |೨|
ಆಗಸದಿ ಧಗಧಗಸೆ ಸೂರ್ಯ ಭೂಮಿಗೆ ಬೆಳಕು
ಸಾಗರದಿ ಮುಳುಗೆ ರವಿ ಚಂದಿರನೆ ಗತಿಯು
ಸಾಗುವುದು ಒಂದಳಿಯೆನಿನ್ನೊಂದರಿಂ ಚಕ್ರ-
ವಾಗುಮಂತೆಯೆ ಸುಳಿಯೆ ದುಗುಡಾನ್ಯಗೆ |೩|
ಕುಲಗಳೆರಡನು ಹೆಣಿಪ ಸೇತುವೆಯೆ ಪತಿಪತ್ನಿ
ಚಲಿಪರಾಚೀಚೆ ಜನ ಬಾಂಧವ್ಯ ಬೆಳೆಯೆ
ಕಲಹ ನಿಮ್ಮೀರ್ವರಲಿ ಸೇತುವೆಯ ಬುಡ ಕುಸಿಯೆ
ಜಲಸಮಾಧಿಯೆ ನೋಡು ಬಾಂಧವ್ಯಗಳ್ |೪|

ಇದನ್ನು ಸಾಕಷ್ಟು ಬೆಳೆಸ ಬಹುದು 🙂

  4 Responses to “ಕಗ್ಗದ ಶೈಲಿಯಲ್ಲಿ ದಂಪತಿಗಳಿಗೊಂದು ಕಿವಿಮಾತು”

  1. ನೀತಿ-ಮೌಲ್ಯಗಳಂತೆ ಯಾತಯಾನಗಳಂತೆ
    ಪ್ರೀತಿ-ಮುನಿಸಂತೆ ಯಿಮ್ಮುಖದನಾಣ್ಯ
    ಮಾತು-ಮೌನಗಳಂತೆ ಕಣಕ-ಹೂರ್‍ಣಗಳಂತೆ
    ದ್ವೈತೋದಿತಾದ್ವ್ವೈತ ದಂಪತಿಯದು

    ಸೋಮ ಚೌಪದ ಚತುಷ್ಕದೊಲು ಬಿಗಿದು

  2. ಮೌಲಿಯವರೇ,

    "ದ್ವೈತೋದಿತಾದ್ವ್ವೈತ"
    ತುಂಬಾ ಚೆನ್ನಾಗಿದೆ ಪ್ರಯೋಗ

  3. ಗಂಡು ಹೆಣ್ಣುಗಳೆರಡು ಗಂಡ ಹೆಂಡತಿಯಾಗೆ
    ಮುಂದಾಗೊ ಕಂದಗಳ ಘಟ್ಟಿಯಾಸರೆಯು
    ಪರಸ್ಪರರ ಹೆಗಲುಗಳನ್ನೇರಿ ಮೇಲೇರಿ
    ಪದ ನೆಲವ ಬಿಡದಲೆಯೆ ನಭಚುಂಬನ

  4. Please excuse the lack of aadi / antya praasa in my above comment. Was done in a hurry 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)