Jun 122011
 

ಬಾಬಾ ರಾಮದೇವ ಇಂದು ಸರ್ಕಾರ ಅವರ ಬೇಡಿಕೆಗಳನ್ನ ಈಡೇರಿಸದಿದ್ದರು ಉಪವಾಸ ಮುಗಿಸಬೇಕಾಯ್ತು, ಆದರೆ ಬಾಬಾ ರಾಮ್ದೇವ್ ಅವರ ಪ್ರಯತ್ನ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಿದೆ… ಇದರ ಹಿನ್ನೆಲೆಯಲ್ಲಿ ಒಂದು ಪದ್ಯ.

ಸಾವಿರದ (1000) ಜನ ಶಾಂತ ಧರಣಿಯ
ಕೋವಿಧರದಳವಟ್ಟಿ ಚೆದುರಿಸೆ
‘ಬಾವಿ’ ಜಲಿಯಾವಾಲಭಾಗಿನ ನೆನಪು ಹಸಿರಾಯ್ತು
ಸಾವಿರದ (ಸಾವು ಇರದ) ಚಳುವಳಿಗೆ ಕಿಚ್ಚನು
ಕೋವಿದರ ಸಮ್ಮತಿಯ ಬಲದಲಿ
ಭಾವಿಯಾಡಳಿತವನು ತಿದ್ದಲು ನಾಂದಿಯೀ ಘಟನೆ


  3 Responses to “ಪೂರ್ವಾರ್ಧ ಮತ್ತು ಉತ್ತರಾರ್ದಧ ಸಾಲುಗಳಲ್ಲಿ allitration ಪ್ರಯತ್ನ ಮಾಡಿದ್ದೇನೆ ಭಾಮಿನಿಯಲ್ಲಿ”

  1. ಸೋಮ, ಚೆನ್ನಾಗಿದೆ. ಇದಕ್ಕೆ, Introduction ಆಗಿ ನನ್ನಕೆಲವು ಸಾಲುಗಳು:

    ಪ್ರೇಮಭಾವನುರಾಮದೇವನು
    ಕಾಮರಹಿತನುಸಾಮಸಹಿತನು
    ನೇಮದಿಂದಲಿತೊಡಗಿಕೊಂಡನುನಿರಶನದಗತಿಯ|
    ತಾಮಸೀಕರು,ಸುಡುವತಪಸಿನ
    ಸೋಮಶಕ್ತಿಗೆ ಹೆದರಿಬಳಲುತ
    ವಾಮಮಾರ್ಗದಿತಿರುಗಿಬಿದ್ದರುರಕ್ಕಸರತರದಿ||

    "ಅಳವಟ್ಟಿ" ಎಂದರೆ ಏನು?
    Alliteration ಹೇಗಾಗಿದೆಯಂತ ಸ್ವಲ್ಪ ವಿವರಿಸುತ್ತೀರಾ?

  2. Alliteration ಅರ್ಥವಾಯ್ತು. ಚೆನ್ನಾಗಿದೆ 🙂

  3. Raveendra,

    nimma padyavu chennagide… 🙂

    2nd line ಕೋವಿಧರ ದಳವನ್ನು ಅಟ್ಟಿ -> having sent gunmen (police/military personnel)
    5th line ಕೋವಿದರ -> panditara

    ಅನ್ನೋ ಅರ್ಥದಲ್ಲಿ 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)