Apr 052015
 

‘ತೃಷ್ಣೆ’ಯ ಬಗ್ಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಅಲಂಕಾರಯುತ ಪದ್ಯಗಳನ್ನು ರಚಿಸಿರಿ

  61 Responses to “ಪದ್ಯಸಪ್ತಾಹ ೧೪೫: ವರ್ಣನೆ”

 1. ಸೊಡರಲ್ತೆ ತೃಷ್ಣೆ ಮನದಾ
  ಕಿಡಿಯಂದದೊಲೊತ್ತಿ ನಡೆಯಿಸುತಿರಲ್ಕೆಮ್ಮಂ?
  ಕಡೆಗಣಿಸಲ್ಕಿದ ಮೇಣ್ಮುಂ
  ದಡಿಯನಿಡಲ್ಕಪ್ಪುದೇನು?ಶಿಲೆಯಾಗಲ್ ಬಾಳ್!

  • ಪದ್ಯ ಚೆನ್ನಾಗಿದೆ. ಹಳಗನ್ನಡದ ಹದವೂ ಸಾಕಷ್ಟಿದೆ. ಆದರೆ “ಅಕ್ಕೆ” ಎಂಬುದು ಅಶುದ್ಧರೂಪ. ಅದು ’ಅಪ್ಪುದೆ’ ಅಥವಾ “ಅಪ್ಪುದೇ” ಎಂದಾಗಬೇಕು.

  • ಕಾ೦ಚನ ಮೇಡಮ್, ಶಿಲೆಯಪ್ಪುದೆ ಎ೦ದು ಸ೦ಶಯಪಡುವ ಬದಲು ಕಲೆಯಪ್ಪುದೆ ಎ೦ದರೆ ಭಾವಸಾಮ೦ಜಸ್ಯ ಮೂಡುವುದಲ್ಲವೇ? ಈ ಆಸೆಯ ಕಿಡಿಯನ್ನುಪೇಕ್ಷಿಸಿದರೆ ಬದುಕು ಮುನ್ನಡೆಯುತ್ತದೆಯೇ, ಕಲೆ ಬೆಳೆಯುತ್ತದೆಯೇ?

 2. ಪಾರಮಿರದಂಬುಧಿ, ಕು-
  ಠಾರಮೆರಗದ ಬನಂ,
  ಸೂರನುದಿಸದ ರಾತ್ರಿಯಂತ್ಯಯಾಮಂ|
  ಕ್ರೂರವಾಸ್ತವಮಪ್ಪ
  ಘೋರತೃಷ್ಣಾಕಾರ-
  ಕಾರೊ ನಿಸ್ತಾರಮೆನಿಪುದು ನಿತಾಂತಂ||

  ಕುಸುಮಷಟ್ಪದಿಯಲ್ಲಿ ವಿನೋಕ್ತ್ಯಲಂಕಾರವನ್ನೇ ಮುಖ್ಯವಾಗಿ ಹೊಂದಿರುವ ಈ ಪದ್ಯದ ಉತ್ತರಾರ್ಧದಲ್ಲಿ ಅತಿಶಯೋಕ್ತಿಯ ಛಾಯೆಯೂ ಇದೆ.

 3. ತೃಷ್ಣೆ ಭೋಗಲತೆಗಳ್ಗನಾರತಂ
  ದೇಷ್ಣುವೃಷ್ಟಿಯೆನುವಂತೆ ಸಂದೊಡಂ|
  ಭೂಷ್ಣುವಾಗವಕಟಾ! ಅದೆಂತೊ ವ-
  ರ್ಧಿಷ್ಣುವಪ್ಪುವವು; ಚೋದ್ಯಮೀ ಕ್ರಮಂ||

  ರೂಪಕ ಮತ್ತು ವ್ಯತಿರೇಕಾಲಂಕಾರಗಳ ಮೇಳನವಿಲ್ಲಿದೆ.

  • ಗುರುಗಳೇ, ವ್ಯತಿರೇಕಾಲಂಕಾರ ಸೊಗಸಾಗಿದೆ. ಪಂಪಭಾರತದ ಮೊದಲ ಪದ್ಯವೂ ಈ ಅಲಂಕಾರದಲ್ಲಿಯೇ ಇದೆಯಲ್ಲವೇ?

 4. ಸುಳಿಸುಳಿದು ಸುತ್ತಿ ಸುಖವೀವ ತಿಳಿಗಾಳಿಯ೦-
  ತಲೆಯಲೆಯ ಮೇಲ್ಮೈಯ ತಿಳಿಗೊಳದ ಚೆಲುವಿನ೦-
  ತೊಲಿದೊಲಿದು ನಾಸಿಕಕೆ ಸೋ೦ಕಿ ಮೈಮರೆಯಿಸುವ ಸುಮದ ಸೌರಭದ೦ತೆಯೋ
  ಸೆಳೆಸೆಳೆದು ಹೆಮ್ಮರನ ಬಲ್ಗಾಳಿ ಬೀಸುವ೦-
  ತೆಳೆದೆಳೆದು ಬೀಳಿಸುವ ಹೆದ್ದೊರೆಯ ಸುಳಿಯ೦ತೆ
  ಕೊಳೆತಿರುವ ಪೆಣನ ವಾಸನೆಯ೦ತೆಸೆವುದಾಸೆ ಹಲಹಲವು ರೂಪಗಳಲಿ

  ಕಟ್ಟುಗಳ ಬಿಡಿಸಿಕೊ೦ಬಾಸೆ, ಬಿಡಿಸಿಟ್ಟು ಹೆ-
  ಬ್ಬೆಟ್ಟಗಳ ಮೇಲೇರಿ ನಿಲುವಾಸೆ, ಬಾ೦ದಳವ
  ತಟ್ಟಿ ತೆಗೆತೆಗೆದು ಚುಕ್ಕಿಗಳ ಮನೆಬಾಗಿಲಿಗೆ ತೋರಣವ ಕಟ್ಟುವಾಸೆ
  ಹುಟ್ಟಿನಿ೦ದಲಿ ನರನೊ ಮೇಣ್ ಮೃಗವೊ ಮೇಣ್ ಖಗವೊ
  ಕಟ್ಟಕಡೆತನಕ ಬಗೆಯಾಸೆಗಳನೊಟ್ಟಿ ಗುಡಿ-
  ಕಟ್ಟಿ ಗರ್ಭದಿ ಗುರಿಯ ವಿಗ್ರಹವ ಕಡೆದಿಟ್ಟು ನೇಮದಲಿ ಪೂಜಿಸುವರು

  ಆಸೆಯದೆ ಚಿಗುರೊಡೆದು ನಿರುಪಾಧಿಕ ಬ್ರಹ್ಮ-
  ನೀ ಸೊಬಗು-ಸಿರಿ-ಬೆರಗು-ಬಲುಹುಗಳ ಸೃಷ್ಟಿಗೈ-
  ದಾಸೆಯನೆ ಜೀವಿಗಳ ವಕ್ಷದಲಿ ಹಣತೆದೀಪದೊಲಿಟ್ಟ ದಾರಿನಡೆಗೆ
  ಈಸು ಕೆಳಗಿರುವ ಹೊಟ್ಟೆಯೊಳಿಳಿದು ಬೆಳೆಬೆಳೆದು-
  ದಾಸೆಯದು ಕಿಚ್ಚಿನ೦ದದಿ ದಹಿಸುತಾತ್ಮನನೆ
  ಲೇಸನೆಲ್ಲವ ನೂ೦ಕಿ ಕೊ೦ಕುಕೆಲಸದಿ ಪರರ ಕೊರಗ ಹಿರಿಹಿರಿದು ಮಾಡಿ

  ಕ೦ಡಿದನು ಜಗದ ಜನರಲ್ಲಿ ತನ್ನ ಮನದ-
  ಲ್ಲ೦ಡಲೆದನೂರು-ಕೇರಿಗಳ ಕಾಡು ಮೇಡುಗಳ
  ಭ೦ಡಧೈರ್ಯದೊಳಗುದ್ದ೦ಡತಪಗೈದೈದಿದನು ಬೆಳಕಿನೆಡೆಗೆ ಬುದ್ಧ
  ಕ೦ಡುಕ೦ಡುದ ಬೇಕುಬೇಕೆ೦ಬತಿಶಯ-ತೃಷ್ಣೆ
  ಕೊ೦ಡುತರುವುದು ಕು೦ದದಿಹ ದಃಖವನು ಮಿತದೊ-
  ಳು೦ಡು ಮೇಣುಣಿಸು ನೆರೆಹೊರೆಯ ಜನರಿ೦ಗಿದುವೆ ದಾರಿಯೆ೦ದ

  • ಸೊಗಸಾದ ರಚನೆ.

   • ವಾರ್ಧಕದಲ್ಲಿ ಆಶೆಯ ವಿಶ್ವರೂಪವನ್ನೇ ತೋರಿಸಿದ್ದೀರಿ; ಅಭಿನಂದನೆಗಳು.
    ಆದರೆ ಸೌರಂಭ ಎಂದರೆ ಸೌರಭವೆಂದು ಅರ್ಥವುಂಟೇ?

  • ಮೆಚ್ಚುಗೆಗೆ ಧನ್ಯವಾದಗಳು, ಶ್ರೀಪಾದರವರಿಗೆ ಗಣೇಶ ಸರ್ ಅವರಿಗೆ.
   ಸೌರ೦ಭ ಎ೦ದು ಅದೇಕೊ ಮನಸ್ಸಿನಲ್ಲಿ ಇತ್ತು, ಎಲ್ಲೋ ಓದಿದ್ದ ನೆನಪೇನೊ… ತಾವೇ ಖಾತ್ರಿಪಡಿಸಬೇಕು 🙂
   ಯಾವುದಕ್ಕೂ “ಸುಮದ ಸೌರಭದ೦ತೆಯೊ” ಎ೦ದು ತಿದ್ದುತ್ತೇನೆ.

   • ಸಂರಂಭವಿದೆಯಾದರೂ ಸೌರಂಭವಿಲ್ಲ. ಬಹುಶಃ ಸೌರಭ್ಯ ಎಂಬ ಸುಗಂಧವಾಚಕವೇ ಆದ ಪದವು ನಿಮಗೆ ಸೌರಂಭದ ಭ್ರಾಂತಿಯನ್ನು ಕಲ್ಪಿಸಿರಬಹುದು.

 5. ಮತ್ತಿನ ಕತ್ತಲಂ ತರಿದು ಕಾಂತಿಯ ಬಾಳಿರೆ ಬಾಲಭಾಸ್ಕರಂ
  ಪೆತ್ತ ಕರುಳ್ ಫಲಂಗಳನೆ ಜೀರ್ಣಿಸಿ ಜೀವಿಸೆ ತೃಷ್ಣಮಾರ್ಜರಂ
  ಬತ್ತಿದ ದೇಹಮಂ ಬಿಸುಟಿ ಮೆರ್ಚಿನ ಬಾಳ್ಮೆಯನಾತ್ಮವಿಚ್ಚಿಸಲ್
  ಚಿತ್ತಸರೋವರಂ ಸೃಜಿಸಿದಾಸೆಯ ಮೊಗ್ಗದು ಕುಂದಿ ಪೋಪುದೇ??

  (ಬಾಲಭಾಸ್ಕರ, ಮಾರ್ಜರ, ಆತ್ಮಗಳೆಲ್ಲವೂ ಬೃಹದಾಸೆಗಳನ್ನು ಪೂರೈಸಿಕೊಳ್ಳುತ್ತಿರುವಾಗ ಚಿತ್ತಸರೋವರದ ಚಿಕ್ಕಪುಟ್ಟ ಆಸೆಯ ಮೊಗ್ಗುಗಳು ಅರಳವೇನು?)

  • ವೃತ್ತವು ಸೊಗಸಾಗಿದೆ. ಆದರೆ ಕುಡ್ಮಲ/ಕುಟ್ಮಲ ಎಂಬುದನ್ನುಬಿಂದುವಿಲ್ಲದೆ ಬಳಸಿದಲ್ಲಿ ಹಳಗನ್ನಡದ ಹದ ಸ್ವಲ್ಪ ಬಾಡುವುದು. ಹೀಗಾಗಿ ಅದನ್ನು “ಮೊಗ್ಗದು…….” ಎಂದು ತಿದ್ದಬಹುದು.

   • ಕುಟ್ಮಲವನ್ನು ಬದಲಾಯಿಸಿದ್ದೇನೆ, ಧನ್ಯವಾದಗಳು .

 6. ಪಾರುವ ತೃಷ್ಣೆಯಿಂ ನೀಲಿಬಾನಂಗಳ-
  ಕ್ಕೇರುತುಂ ನವ್ಯಲೋಕಂಗಳಂ ಮೆಟ್ಟುತುಂ
  ದಾರಿಯೊಳ್ ತೃಷ್ಣೆಯಿಂ ನೀರ ಕಾಣಲ್ಕೆ ತಾಂ
  ನೇರಮಾಗೆಣ್ಣೆಯಂ ಪೀರಿತೈ ಭ್ರಾಂತಿಯಿಂ

  • ಒಳ್ಳೆಯ ಸ್ರಗ್ವಿಣೀವೃತ್ತಕ್ಕಾಗಿ ಧನ್ಯವಾದ. ಆದರೆ “ಋ”ಒತ್ತಿನ ಹಿಂದಿನ ಅಕ್ಷರ ಗುರುವಾಗದು. ಹೀಗಾಗಿ “ಪಾರುವ ತೃಷ್ಣೆ…..” ಎಂಬಲ್ಲಿ ’ವ’ ವರ್ಣವು ಗುರುವಾಗದು. ಆದುದರಿಂದ ಇಲ್ಲಿ ಆಗಿರುವ ಛಂದೋದೋಷವನ್ನು ತಿದ್ದಬೇಕು.

   • ಸವರಣೆಗೆ ಧನ್ಯವಾದಗಳು… ಪಾರುವಾ ಎಂದೇ ಬರೆಯಬೇಕೆಂದಿದ್ದೆ… sorry for typo

  • ಪಾರುವತ್ಯಾಶೆಯಿ೦ ಎ೦ದು ತಿದ್ದಬಹುದಲ್ಲವೆ?
   ಆದರೆ ಪದ್ಯದ ಅರ್ಥ ಆಗಲಿಲ್ಲ 🙁

 7. ದುರ್ಗಂಧಪುಷ್ಪಮಂ ಬೇಳ್ದುಂ
  ಶಿರಕೇರಿಪರಿರ್ಪರಯ್
  ತೃಷ್ಣಾಗ್ರಣಿಯ ಸಾಂಗತ್ಯಂ
  ವೇಳ್ಕೆಂದಿಚ್ಚಿಪರಿರ್ಪೊಡಂ !

  (ತೃಷ್ಣಾಗ್ರಣಿ = ಆಸೆಬುರುಕ ?)

 8. simple verse inspired from तृष्णैका तरुणायते

  न स्थित्वा देवलोके त्वं विना दैवत्वमप्यहो |
  त्रिदशत्वं कथं प्राप्ता तृष्णा विभ्रमकारणा ||

  • साधुपद्यम्। परं ” त्वां विना ” इति भवेत्।

   • Sir,
    ondu doubtu, “tvam devaloke na sthitvA..” anta anvyaya sAdhyavillave? should tRshnA etc should become sambodhana vibhakti then?

   • Sir, should it not be “tvayA vinA”? as in “tEna vinA triNamapi na chalati”. OR either is fine?

    • vinA as far as I know can occur with words which are in dvitiyA or tRtiyA vibhakti. If I’m wrong please correct me.

     • Your first version is correct but only thing is tRShNaa should be in saMbOdhana-vibhakti along with its adjectives.

 9. अत्र निवेश्यते पद्यद्वयम् —
  तृष्णा तरूणां भवतीह नित्यम्
  निवासिनः प्राप्य तु चातकत्वम् ।
  निरीक्षमाणा जलदान् सदा ते
  शाक्रं मखं प्रत्यपि चिन्तयन्ति ॥ (यत्र अनावृष्टिः भवति तत्र)

  तृष्णा जलाय भवतीह वराकचित्ते
  तृष्णा धनाय महती हि धनाढ्यचित्ते ।
  कृष्ण ! त्वदीयपदपङ्कजयुग्मसेवा-
  तृष्णा भवेदनुदिनं मम मन्दचित्ते ॥

  • अभियुक्ततरं त्वभाणि नूनं
   भवता हि प्रिय रामपूर्व! सूरे!

 10. ಭೋಗಸಮುದ್ರದ ನಡುವೊಳ್
  ಸಾಗುತೆ ಬಾಯಾರಿ ತೃಷ್ಣೆಯಿಂ ಬಳಲಿದಪಂ|
  ನೀಗುವುದೇನೀಂಟಿದೊಡಂ
  ಯೋಗಕೃಪಾವೃಷ್ಟಿಯೊಂದೆ ಕಾಪಿಡಲಕ್ಕುಂ||

  • ಹೊಳ್ಳಾ! ಒಳ್ಳೆಯ ಪದ್ಯ. ಸಮುದ್ರದ ನಡುವೆ ಇದ್ದರೂ ಬಾಯಾರಿದಾಗ ನೀರು ಸಿಗದೆಂಬ ವ್ಯಂಗ್ಯವಿಲ್ಲಿ ಸೊಗಸಾಗಿದೆ. ಶೈಲಿಯಂತೂ ಚೆನ್ನಾಗಿಯೇ ಇದೆ.

 11. पन्चेन्द्रियभर्तृरता
  तृष्णा कृष्णॆव दीनतां नीता ।
  परमात्मरता सैषा
  शिष्टैरनुकरणयोग्याभूत् ॥

 12. ರಥೋದ್ಧತ|| ತೃಷ್ಣಮೊಂದಹುದಭಾವದಿಂದೆ (ನೀರಿನ) ಮೇಣ್
  ದೇಷ್ಣುವಲ್ಲದನ ವೃದ್ಧಿಯಿಂದಲುಂ| (ವೃದ್ಧಿ=ಸಮೃದ್ಧಿ)
  (fever)ಉಷ್ಣವಾತಗದು ದೇಹಮಾತ್ರಕಂ (ಬಾಯಾರಿದವಗೆ)
  (evil)ಕೃಷ್ಣವೀತಗದುಮಂತರಾತ್ಮಕಂ|| (ಲೋಭಿಗೆ)

  • ದುಷ್ಕರಂ ಗಡ ಭವತ್ಕವಿತ್ವಮೀ
   ಪುಷ್ಕಲಾರ್ಥಪರಿಪಿಂಡಿತಂ; ವೃಥಾ|
   ಮುಷ್ಕರಂ ಕಠಿನಶಬ್ದರೀತಿಯಿಂ
   ಪುಷ್ಕರಾಸ್ಯೆ ನುಡಿವೆಣ್ಗೆ ಸಲ್ಗುಮೇಂ?

  • ಪುಷ್ಕರಾಸ್ಯೆ ನುಡಿವೆಣ್ಗೆ ತಮ್ಮದೀ
   ಪುಷ್ಕಲಾರ್ಥ‍ಗಿರಮಂ(ಪದ್ಯ) ಪ್ರಚೋದಿಸಲ್|
   ಶುಷ್ಕಮಾಗಿಹುದೆ ಪದ್ಯಮೆನ್ನದೀ!
   ದುಷ್ಕರಂ ಗಡೆನಿತಯ್ಯ ಪೇಳೆಯೇಂ||

   Before reading the next verse, please visit http://www.spokensanskrit.de/index.php?tinput=muSkara&direction=SE&link=yes&choice=yes

   ’ಮುಷ್ಕರ’ಅರ್ಥಮನು ನೋಡೆ ಘಂಟುವೊಳ್
   ಮೂರ್ಛೆಬೀಳುವುದೆ ಬಾಕಿಯಾದುದೈ!
   ಪ್ರಾಸಶಬ್ದಗಳ ಕೊಂಡೆ ನಿಮ್ಮವೇ
   ವರ್ಜಿಸುತ್ತಲಿದ ಮಾತ್ರಮೊಂದನುಂ!! 😉

   • ನಿಘಂಟುವುಂ ಘಂಟೆನಿಸಲ್ಕೆ ಪದ್ಯದೊಳ್
    ವಿಘಾತಮಾದತ್ತಲ ಹಾದಿರಂಪರೇ!
    ಅಘಾಟ್ಯಮೇ ಮುಷ್ಕರಮೊಂದು ಪಾಂಗಿನಿಂ-
    ದಘಾತಿರಿಕ್ತಂ ಮುಗುಳರ್ಥಭೇದದಿಂ||

    • 1st line rephrased: ’ಮುಷ್ಕರ’ಅರ್ಥವನು ನೋಡೆ ಕೋಶದೊಳ್. Enjoyed your responses.

 13. ಬಾಹುಬಲಿ ನಿಂದಿಹನು ಮನ್ಮಥ
  ರೂಹಿನೊಳು ಬೆಳ್ಗುಳದ ಬೆಟ್ಟವ
  ಗೇಹವಾಗಿಸಿಕೊಂಡನೇಕೋ ಮನೆಯ ತೊರೆದವನು!
  ನೇಹ ತುಂಬಿದ ಮೊಗವ ನೋಡುವ
  ಮೋಹ ತೊರೆಯುವುದೆಂತು? ಕರುಣೆಯ
  ದಾಹ ತಣಿಯದೆ ಪೋದುದೈ ಕಣ್ತುಂಬಿ ನೋಡಿದರೂ!

  (ಬೆಳಗೊಳದ ಬೆಟ್ಟದ ಮೇಲಿನ ಗೊಮ್ಮಟನ ಮೊಗವನ್ನೆಷ್ಟು ನೋಡಿದರೂ, ಮತ್ತೂ ನೋಡುತ್ತಲೇ ಇರಬೇಕೆನಿಸುವ ದಾಹದ ಬಗ್ಗೆಯ ಪದ್ಯವಿದು. ಸ್ವಭಾವೋಕ್ತಿಯಂತೂ ಇದೆ. ಇನ್ನಾವುದಾದರೂ ಅಲಂಕಾರವಿದೆಯೇ? )

  ಈ ಪದ್ಯಕ್ಕೆ ಕಾರಣವಾಗಬಹುದಾದಂತ ಒಂದು ಚಿತ್ರ: http://www.jainheritagecentres.com/index.php/photo-gallery/delhi/shravanabelagola-indragiri/shravanabelagola-indragiri-173

  • ಯಾಕಿಲ್ಲ? ಪ್ರೇಯೋಲಂಕಾರವಿಲ್ಲಿ ತೋರುತ್ತದೆ. ಅಲ್ಲದೆ ಆರಂಭದಲ್ಲಿ ಅತಿಶಯ ಮತ್ತು
   ಕಡೆಗೆ ವ್ಯತಿರೇಕಗಳೂ ಇಣಿಕಿವೆ.

   • ವಸ್ತ್ರವನೆ ತೊಡದಿರ್ಪ ಗೊಮ್ಮಟನ ನಿಲವಿನೊಳು
    ಶಾಸ್ತ್ರೋಕ್ತದಿನಿತಲಂಕಾರವಿಹುದೇಂ?

 14. ಪಾಲುಗಲ್ಲದ ಕುಡಿಗಳಂತಿರೆ
  ನೀಲಿಬಾನೊಳ ಮೇಘಮೇಳವು ,
  ಮಾಲೆಯಾಗಿಸಿ ನೇಯಿಸಿರ್ಕೇಂ ಬಯಕೆ ಕುಸುಮಗಳಾ?
  ತಾಲದನುರಣಿ ನಾಟ್ಯದೀರ್ಘಿಕೆ
  ವೇಲ ಬಳುಕಿಸುತಾಲಿ ತುಂಬುತೆ
  ಕಾಲಕಾಯದ ನೆಗ್ಗಿ ಹೊಸತನವಿತ್ತು ಮೆರೆದಪಳಾ?

 15. || ಕುಸುಮಿತಲತಾವೃತ್ತ ||

  ಲೋಗರ್ ನಿಚ್ಚಂ ಪಂಬಲಿಸುತೆಯಿರಲ್ ಬುದ್ಧರಾಗಲ್,ಸುಶೀಲರ್,
  ರಾಗೋತ್ಸಾಹಾತ್ಮರ್ ತಪದ ತೆರದಿಂ ಸಾಧನಂಗೈಯೆ ಮಾನ್ಯರ್,|
  ಸಿಂಗಾರಂಗೊಳ್ಳಲ್ ಜಯದ ಫಲದಿಂ ಜೀವನಂ,ಸಿದ್ಧರಾಗಲ್,
  ಬೆಂಗಾರೊಳ್ ನೀರಂ ಪರಿಸೆ ,ಕೃಷಿಯಿಂ ಕಂಗೊಳಿಪ್ಪಂತೆಯಲ್ತೇ ?

  • ಕುಸುಮಿತಲತಾವೇಲ್ಲಿತವೃತ್ತದಲ್ಲಿ (ಕೆಲವು ಛಂದೋಗ್ರಂಥಗಳಲ್ಲಿ ಈ ಹೆಸರೂ ಇದೆ. ಸುಮ್ಮನೆ ಮಾಹಿತಿಗಾಗಿ ಈ ವಿಷಯ; ಅಷ್ಟೆ) ನಿಜಕ್ಕೂ ಒಳ್ಳೆಯ ಪ್ರಯತ್ನ.ಎಂದಿನಂತೆ ನಿಮ್ಮ ಅಚ್ಛವಾದ ಹಳಗನ್ನಡಶೈಲಿ ಮತ್ತು ವೃತ್ತನಿರ್ವಾಹಕೌಶಲಗಳು ದಿಟವಾಗಿ ಮುದಾವಹ. ಧನ್ಯವಾದ.

   • ಸಹೋದರರೆ, ನಿಮ್ಮ ಪ್ರೋತ್ಸಾಹದ ನುಡಿಗಳಿಗಾಗಿ ತುಂಬ ಧನ್ಯವಾದಗಳು.ವೃತ್ತದ ಹೆಸರಿನ ಬಗೆಗೆ ತಿಳುವಳಿಕೆಯಿತ್ತುರುವುದೂ ತುಂಬ ಉಪಯುಕ್ತ.ಪದ್ಯದ ಪಾದಾರಂಭದ ಐದು ಗುರುಗಳ ಬಗ್ಗೆಯೇ ಗಮನವಿತ್ತು ಪ್ರಾಸದಲ್ಲಿ ಎಡವಿದ್ದು ಈಗ ಗಮನಕ್ಕೆ ಬಂತು:-) ಕ್ಷಮಿಸಿರಿ,ಸವರಣೆ ಈ ಕೆಳಗಿನಂತಿದೆ.

    ರಂಗಂ ಬಾಳೊಳ್ ಪಂಬಲಿಸುತೆ ನರರ್ ಬುದ್ಧರಾಗಲ್, ಸುಶೀಲರ್,
    ಶೃಂಗೋತ್ತುಂಗಕ್ಕೇರೆ, ತಪದವೊಲೇ ಸಾಧನಂಗೈಯೆ ಮಾನ್ಯರ್,|
    ಸಿಂಗಾರಂಗೊಳ್ಳಲ್ ಜಯದ ಫಲದಿಂ ಜೀವನಂ, ಸಿದ್ಧರಾಗಲ್,
    ಬೆಂಗಾರೊಳ್ ನೀರಂ ಪರಿಸೆ,ಕೃಷಿಯಿಂ ಕಂಗೊಳಿಪ್ಪಂತೆಯಲ್ತೇ ?

 16. ತಿನ್ನುತ್ತಿರ್ಪುದು ಶಾಂತಿನೆಮ್ಮದಿಗಳಂ ಕೊಚ್ಚುತ್ತೆ ಸಂಬಂಧಮಂ
  ಬೆನ್ನಂ ಪತ್ತಿ ಪಿಶಾಚಲಕ್ಷಗಳವೊಲ್ ಕೊಲ್ಲುತ್ತೆ ಸದ್ಬುದ್ಧಿಯಂ
  ತನ್ನಂ ತಾನಿರಲಾರದಂತೆ ಜಡಿದುಂ ಮೆಟ್ಟಿರ್ಪುದೈ ವ್ಯಕ್ತಿಯಂ
  ಕನ್ನಂ ಪಾಕುತೆ ತೋಷಭಾಂಡಕದರಿಂ ದೋಚುತ್ತೆ ತಾನೇರುತುಂ

  ಮುನ್ನಂ ವಿದ್ಯೆಯ ಗೆಲ್ವ ತೃಷ್ಣೆಯದರಿಂದುದ್ಯೋಗದಂತಸ್ತಿಗಂ
  ಚೆನ್ನಾಗಲ್ ಸ್ಫುರರೂಪಿ ಸಂಗದೊಡೆ ಮೇಣ್ ಚೆಲ್ವೆಂಬುವಂತಃಪುರಂ
  ಚಿನ್ನಂ ಗೋಚುತೆ ಮುತ್ತುರತ್ನಗಳನುಂ ಬೇಕೆಂಬಲಂಕಾರಕಂ
  ಪನ್ನಂಗೊಳ್ವರೆ ಮತ್ತಮತ್ತಮೆನುತುಂ ಬೀಳಲ್ಕೆ ಮೇಲೇರುತುಂ
  [ಪನ್ನ = ಜಂಭ, ಅಹಂಕಾರ]

  ನೀರಂ, ತೀರಿಸೆ ಸೋಲ್ತುಪೋಪುದಕಟಾ ಮೇಣ್ ಜೇನ ಮಾಧುರ್ಯ ತಾಂ
  ಕ್ಷೀರಂ ಬಾಯ್ಬಡಿಯುತ್ತೆ ಪುಕ್ಕಲರವೋಲಜ್ಞಾತವಕ್ಕುಂ ಗಡಾ
  ಏರಲ್ಕಾಗದುಮಂಘ್ರಿಮಟ್ಟದನಕಂ ಮದ್ಯಾದಿಪಾನಂಗಳಿಂ
  ತೀರಲ್ಕೊಲ್ಲದ ತೃಷ್ಣೆಗಲ್ತುಮಿವುಗಳ್ ಪೀರಲ್ಕವಾತ್ಮಂಗಳಂ

 17. मदादृशानां खलु पद्यतृष्णा
  दिने दिने वर्धत एव, सत्यम् ।
  भवादृशैरेव हि पद्यपाने
  प्रशाम्यते जालतरङ्गवृन्दे ॥

  • “dhanyO’smi nUnaM bhavataaM prashastyaa
   sarvaM kilEdam suhRdaaM samajyaa”

   But coming to the grammatical part of your verse,I think maadRShaanaaM is the correct usage. Pl once again look at your prayOga : madaadRshaanaaM.

   • दोषदर्शनेन धन्योऽस्मि । अत्र परिष्कृतं पद्यम् ।
    पद्याय तृष्णा खलु मादृशानाम्
    दिने दिने वर्धत एव, सत्यम् ।
    भवादृशैरेव हि पद्यपाने
    प्रशाम्यते जालतरङ्गवृन्दे ॥

 18. दूरात्स्वयं द्रुतवती प्रियसंगमार्थं
  श्लिष्ट्वा धवं प्रमुदिता मुखमर्पयन्ती ।
  चुम्बत्यसौ सपदि सात्त्विकलज्जयॆव
  गन्गानदी लवणवारिमयी बभूव ।|

  When the river mouth meets the salty ocean…….as if sweating with saattvika lajjaa bhaava, the waterns turned salty.
  The root dru means both run and melt.

  Not fully satidfied with the tenses, but going with the principle of aashuKavitha, I’ve posted what came instantly. Corrections welcome

  • गन्गानदी लवणवारिमयी बभूव – This topic is being discussed in the neighboring class. Not here!
   ಪಾಠಂಗಳಂ ತಪ್ಪಿಸದೆ ನಿತ್ಯವೂ ಬರೆಯೆ
   (Brahmin)ಮಾಠರನೆ ಇಂತಾಗದೈ ಗಡಿಬಿಡಿ|
   ಪೀಠವನು ನಿಕಟಕಕ್ಷೆಯೊಳೂರಿ ಮೆರೆದಿರುವ
   (path)ಮಾಠಚ್ಯುತನ ಕಂಡ ಹಾದಿರಂಪ|| 😉

  • Sudhir! real good pUraNa!! thanks a lot for such a nice poem which has so much of rasa and alaMkaara (samaasOkti)

Leave a Reply to Sudheer Kesari Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)