Jun 092011
 
ಸುನೀತಾ ಅವರ ಪರವಾಗಿ ಇಲ್ಲಿ ಹಾಕಿದ್ದೇನೆ

ಚಂದಿರ ನಿನ್ನಯ ಚೆಲುವನು ಬಣ್ಣಿಸೆ ಪದಗಳು ಎನಗಿಲ್ಲ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲುವೆ ಚಿತ್ರಿಪರಾರಿಲ್ಲ ||

ದಿನದಿನ ಬೆಳೆಯುತ ಬೆಳಕನು ಚೆಲ್ಲುತ ಬಾನಲಿ ನೀನಿರುವೆ
ನಿನ್ನನೆ ನೋಡುತಲಂದವ ಸವಿಯುತ ರಜನಿಯ ನಾ ಕಳೆವೆ ||

ಒಂದೆಡೆ ನಿಲ್ಲದೆ ಅಲ್ಲಿಂದಿಲ್ಲಿಗೆ ಸರಿಯುವೆ ನೀನೇಕೆ?
ಮೋಡಗಳೊಂದಿಗೆ ಓಡುವ ತೆರದಲಿ ಕಾಣುವೆಯದು ಏಕೆ? ||

ತಾರೆಯು ಸಾವಿರ ಮಿನುಗಲು ಬಾನಲಿ ನಿನಗದು ಸಮವೇನು?
ನೀನೊಂದಿಲ್ಲದ ಬಾನದು ರಸಿಕಗೆ ಸವಿಯಲು ಬಹುದೇನು? ||

ದಿನಕರನುದಯಿಸಲಡಗುವೆ ಎಲ್ಲೀ ಹಗೆತನ ನಿನಗೇಕೆ?
ಹಗಲೊಳು ನಿನ್ನನು ಕಾಣುವ ಭಾಗ್ಯವದಿಲ್ಲವು ನಮಗೇಕೆ? ||

ತಂಪನೆ ಕಿರಣವ  ನೀಡುವ ನಿನ್ನನು ಕುಮುದಿನಿ ಬಯಸುವುದು
ಹುಣ್ಣಿಮೆ ಬೆಳಕನು ಚೆಲ್ಲಲು ಚಂದದಿ ಸಾಗರ ಉಕ್ಕುವುದು ||

ಬೆಳ್ಳಿಯ ಚಂದಿರ ನಿನ್ನಯ ಚೆಲುವಿಗೆ ಹೋಲಿಕೆಯೇನಿಲ್ಲ
ನಿನ್ನಯ ರೂಪವ ಸವಿಯದ ಮನುಜರು ಭೂಮಿಯ ಮೇಲಿಲ್ಲ ||

– ಸುನೀತಾ

  5 Responses to “ಚಂದಿರ”

  1. Suneetha avare,

    Wonderful…..!!!
    Welcome to the league….

  2. ಪದ ಲಾಲಿತ್ಯದಿ ಮುದವಾದರ್ಥದಿ ಹರಿಯುತ ನುಡಿ ಕಲೆತು
    ಒದಗುತ ಚಂದಿರ ಕವನ ದವನಘಮ ಸೂಸಿದೆ ಕಳೆ ಬೆರೆತು

  3. ದಿನಕರನುದಯಿಸಲಡಗುವೆ ಎಲ್ಲಿ ಹಗೆತನ ನಿನಗೇಕೆ?…
    ದಿನಕರನುದಯಿಸಲಡಗುವೆ ಎಲ್ಲಿಯ ಹಗೆತನ ನಿನಗೇಕೆ?
    ಬೆಳ್ಳಿಯ ಚಂದಿರ ನಿನ್ನಯ ಚೆಲ್ಲುವಿಗೆ ಹೋಲಿಕೆಯೇನಿಲ್ಲ
    ಬೆಳ್ಳಿಯ ಚಂದಿರ ನಿನ್ನಯ ಚೆಲುವಿಗೆ ಹೋಲಿಕೆಯೇನಿಲ್ಲ

    ಮಾಡಿದರೆ ಸರಿ.

  4. Thanks for your suggestions Chandramowly. How about making 'elliya' as 'ellii'?

    suneeta

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)