May 112015
 

1

  15 Responses to “ಪದ್ಯಸಪ್ತಾಹ ೧೫೦: ಚಿತ್ರಕ್ಕೆ ಪದ್ಯ”

  1. ನೃಸಿ೦ಹನಿವನಲ್ತೆಯೇ೦ ನರನ ರೂಪನು೦ ವೀರ್ಯಮಿ-
    ರ್ಕೆ ಸಿ೦ಹದೊಲು ಮೇಣ್ ಗಡಾ, ಬಣಗು ಕಾವ್ಯಗಳ್ ಬಣ್ಣಿಪಾ
    ನೃಸಿ೦ಹನವನಾವನೋ! ಭರತನಾಮದಿ೦ದಲ್ತೆ ಸಾ-
    ಹಸ೦ಮೆರೆದು ಮೈಮೆಯಿ೦ ಭರತವರ್ಷದೊಳ್ ಶೋಭಿಪ೦

    • ಪೃಥ್ವೀವೃತ್ತನಿರ್ವಾಹ ಸೊಗಸಾಗಿದೆ. ಆದರೆ ಒಳ್ಗೆ ಎಂಬುದು ಅಸಾಧುರೂಪ. ಅದು ಒಳಗೆ ಒಳಗಂ ಒಳಗಡೆ ಇತ್ಯಾದಿ…ಎಂದೇ ಆಗಬೇಕು.

  2. ಖುಲ್ಲ ಮೃಗೇ೦ದ್ರನಗ್ಗದ ತಳೋದರಿ ನೀ೦, ಬಿಸಿಲೊಳ್ ಮದ೦ಬೆಯೀ
    ಪುಲ್ಲಿನ ಹಾಸ ಮೇಗಡೆಯೊಣ೦ಗಿಸಲಿಕ್ಕಿದ ನೀಲವರ್ಣದಾ
    ಚಲ್ಲಣಮ೦ ಕುಡಲ್ಕಿದಿರನಾಡಿದಡೀ ವನದೆಲ್ಲೆಯೊಳ್ ಗಡಾ೦
    ನಿಲ್ಲಗುಡೆ೦ ತ್ವದೀಯ ಮರಿಸಿ೦ಗಮನೆ೦ದಣುಗ೦ ಗದರ್ದನಯ್

    • ಇಲ್ಲದ ಚಲ್ಲಣಕ್ಕರರೆ! ಎಲ್ಲಿಯುಪಸ್ಥಿತಿ ಚಿತ್ರದೊಳ್ ಕವೀ???

  3. ಕೇಸರಿಕುಟುಂಬಕಿಲ್ಲದ
    ಭಾಸುರನಗ್ನತೆಯ ಭೀತಿ-ಬೀಭತ್ಸಂಗಳ್|
    ಬಾಸಣಿಸಲೇತಕೆನಗೆನು-
    ತೀ ಸುಭಗಂ ಬೆತ್ತಲಾಗಿ ಬೀಗಿದನೇನೋ?

  4. ತುಂಬ ವಾಚ್ಯವಾದ (Explicit) ಈ ಚಿತ್ರದಲ್ಲಿ ವಾರದುದ್ದಕ್ಕೂ ಹತ್ತಾರು ಮಂದಿ ಮಾಡಬಲ್ಲಂಥ ಬಗೆಬಗೆಯ ಕಲ್ಪನೆಗಳಿಗೆ ಅವಕಾಶ ಕಡಮೆಯೆಂದು ತೋರುತ್ತದೆ. ಇದಂತೂ ಸ್ಪಷ್ಟವಾಗಿ ಶಾಕುಂತಲನಾಟಕದ ಒಂದು ಸಂದರ್ಭವನ್ನಷ್ಟೇ ಆಧರಿಸಿದೆ. ಈ ಏಕೈಕಾತ್ಯುತ್ತಮಸಾಧ್ಯತೆಯನ್ನು ನೀಲಕಂಠರು ಈಗಾಗಲೇ ಚೆನ್ನಾಗಿ ಬಳಸಿ ಮುಗಿಸಿದ್ದಾರೆ. ಹೀಗಾಗಿ ಉಳಿದಂತೆ ಕಲ್ಪಿಸುವವರಿಗೆ ಕಳಪೆಯ, ಅಂತೆಯೇ ದೂರಾನ್ವಯದ ಬಾಲಿಶಕಲ್ಪನೆಗಳೇ ಅನಿವಾರ್ಯವಾದರೆ ಗತಿಯೇನು?

    • Houdu Ganesh Sir, I realized it now, I shall provide one more ೧೫೦-೧: ಚಿತ್ರಕ್ಕೆ ಪದ್ಯ for this week 🙂

      • ಸೋಮಾ! ಧನ್ಯೋsಸ್ಮಿ! ಭೂಮಾನುಭವಭವನದ ಪ್ರಾಂಶುಮದ್ವೈಜಯಂತೀ-
        ಸ್ಥೇಮಾ! ಅನ್ಯಾಯಮೆಲ್ಲಂ ಸರಿಯೆನಿಸಿದುದಯ್ ಚಿತ್ರಪರ್ಯಾಯದಿಂದಂ|

  5. ಉನ್ನತಪೀಠದೊಳಿರ್ಪ೦-
    ಗಿನ್ನಿತರರ ಬನ್ನಮೆತ್ತಣದೊ, ತನಗದರಿ೦
    ಗನ್ನಮಿನಿತಿಲ್ಲಮೆ೦ದೆನೆ
    ತಣ್ಣಗೆ ನಿ೦ತಿರ್ಪುದೇನುದಾಸದೆ ಸಿ೦ಹ೦?!

    ಪಾಪ, ಈ ಸಿ೦ಹಿಣಿಯು ಮರಿಗಾಗಿ ಹೋರುತ್ತಿದ್ದರೆ, ಮೇಲೆ ಆ ಸಿ೦ಹ ಶಾ೦ತಿಯಿ೦ದ ನಿ೦ತಿದೆ 🙂

  6. ಪೊಗುತುಂ ಧೈರ್ಯದೆ ಗುಹೆಯೊಳ್
    ಪೆಗಲೊಳ್ ಪೊತ್ತಿರ್ಪ ನೋಡ ಸಿಂಹದ ಮರಿಯಂ
    ಜಗಕೀ ಭರತನ ಕಥೆಯೆಂ
    ದಿಗು ಚಿರಮಾಗಿರ್ಪುದಲ್ತೆ ಈ ಚಿತ್ರಣದಿಂ

    • ಚೇದಿಯವರೆ, ಚಿತ್ರದ ಪ್ರಕಾರ ಪೆಗಲೊಳ್ ಅಲ್ಲ, ಬಗಲೊಳ್ ಎ೦ದಾಗಬೇಕು 🙂

  7. ಕಾಂಚನರ ಹಿಂದಿನ ಪೂರಣದ ಗುಂಗಿನಲ್ಲಿ ಮತ್ತೊಂದು ಪದ್ಯ (ತಾಯಂದಿರಿಗಾಗಿ..!)

    ಅಪರಿಮಿತ ಬಯಕೆಯೊಳ್ ಪರಿ-
    ತಪಿಸಿರೆ ಗಂಡುಮಗುಗಾಗೆ ಗರ್ಭವತಿಯು ತಾಂ ।
    ಅಪರೂಪದ ನರಸಿಂಗದ
    ಸಪನದೆ ವಿಪರೀತದೀ ಪ್ರಸವದ ಪರಿಯ ಕಾಣ್ ।।

    ಸಪನ = ಸ್ವಪ್ನ ಸರಿಯೇ?
    (ಮನೆಗೊಂದು ಅಂತಹುದೇ ಮುದ್ದು ಕಂದನ ನಿರೀಕ್ಷೆಯಲ್ಲಿ !!)

  8. ಆರೀತಂ ಬರಿಮೈಯೊಳಿರ್ದ ಕುವರಂ ದೇವಾಂಶ ಸಂಭೂತನೇಂ!
    ನಾರಾಚಕ್ಕುರೆ ಭೀತಿಯಿಂ ಮಣಿಯದಾ ಕಾಂತಾರ ಸಾಮ್ರಾಟನಂ
    ದೂರಕ್ಕಟ್ಟುತಲೊಂದೆ ಕಡ್ಡಿಯಿನೆ ತಾಂ ಶಾಂತಾಸ್ಯದಿಂ,ಧೈರ್ಯದಿಂ
    ತೋರುತ್ತಿರ್ಪನೆ ತಕ್ಕನೆಂದೆ ಭುವಿಗಂ ಕೌಮಾರ್ಯಕಂ ಭಾವ್ಯದೊಳ್!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)