Ragini,
Welcome to Padyapaana. You have a poetic bent of mind. As a next step, please watch the video lessons on chandass, alaMkAra etc. available in the ‘Learn Posody’ link at the top of this page, for this blog is exclusively meant for metrical poetry.
It may be noticed that the gang has pushed the youngest lad to the front. Your verse may be rephrased thus:
ಮರದ ಕೊಂಬೆಯೆ ಸೇತುವಾಯ್ತೇಂ
ತರಳಪೋರರು ದಾಟೆ ಮೋರಿಯ-
ನೊರುವನಿಂಗಿನ್ನೊರುವನಾಸರೆ
ಕಿರಿಯಗಾಧಾರಮದುಮೇಂ?
1) This is in a metre called pallava (ಗೋವಿನ ಹಾಡಿನ ಧಾಟಿ)
2) The second letter of each line should be the same (ರ in this case)
3) You will get to know the other rules of prosody once you start with the video lessons.
Welcome to the class of 2016 (one year is quite enough to graduate some).
From right to left the colours of their shorts are black, blue, yellow and grey. The second lad has removed his pink shirt so that the colours of the shirts/tops are also in the same colour order, though in the reverse – His bare torso is more near to yellow than his pink shirt.
ಕಾರಣವ ಬಲ್ಲಿರೇಂ ತರಲದ್ವಿತೀಯನೇತಕೆ ಬಿಚ್ಚಿಹನು ತನ್ನ ಕಂಚುಕವನುಂ
ವರ್ಣಮದರಂ ನೋಡು ರಕ್ತವಿದೆ, ಹಳದಿಯಿದ್ದಿದ್ದೊಡಾಗಲ್ಲೊಂದು ಕ್ರಮವಿರುವುದೈ|
ನೋಡೆ ಚಿಣ್ಣರ ಚಡ್ಡಿಗಳ ಬಣ್ಣವಿದೆ ಬಲದಿನೆಡಕೆ ಶಾಮಲ-ನೀಲಿ-ಹಳದಿ-ಊದಾ
ಕಂಚುಕಂಗಳು ವಿಲೋಮದೊಳಿವೇ ಬಣ್ಣಗಳವಾಗಿರುತ್ತಿರ್ದವಾಗಲ್ತೆ ಪೇಳಿಂ||
ತನ್ನಯೂರ್ಧ್ವಭಾಗಮನ್ನಾತ ಪೀತಕ್ಕೆ
ಹತ್ತಿರಕ್ಕೆ ತರಲು ಬಿಚ್ಚಿರುವನೈ|
ತನ್ನ ಕಂಚುಕವನು ಮೈಬಣ್ಣವೀಗವನ
ಹತ್ತಿರವಿದೆ ಹಳದಿಬಣ್ಣಕ್ಕಲ್ತೆ!!
(ಮಾತ್ರಾ)ಸೀಸಪದ್ಯದಲ್ಲಿ ಪೂರ್ವದ ಸೀಸವು ಪೂರ್ಣವಾಗಿ ಪಂಚಮಾತ್ರದಲ್ಲಿರುತ್ತದೆ. ಉತ್ತರದ ಗೀತಿಯಲ್ಲಿ ತ್ರಿಮಾತ್ರಾಗಣಗಳೂ ಇರುತ್ತವೆ. ನನ್ನ ಆಟವೆಲದಿಯ ಗಣವಿಭಜನೆ ಇಂತಿದೆ:
ತನ್ನ/ಯೂರ್ಧ್ವ/ಭಾಗ/ಮನ್ನಾತ/ ಪೀತಕ್ಕೆ (ಬ್ರಬ್ರಬ್ರವಿವಿ)
ಹತ್ತಿ/ರಕ್ಕೆ/ ತರಲು/ ಬಿಚ್ಚಿ/ರುವನೈ| (ಬ್ರಬ್ರಬ್ರಬ್ರಬ್ರ)
ತನ್ನ/ ಕಂಚು/ಕವನು,/ ಮೈಬಣ್ಣ/ವೀಗವನ
ಹತ್ತಿ/ರವಿದೆ/ ಹಳದಿ/ಬಣ್ಣ/ಕ್ಕಲ್ತೆ!!
ಸಮಪಾದಗಳ ಕೊನೆಯ ಗಣದಲ್ಲಿ ೪ ಮಾತ್ರೆಗಳಿರಬಹುದಾಗಿದೆ. ಇಲ್ಲಿನ ಅಪವಾದ ಎಂದರೆ ಅಂತ್ಯಪೂರ್ವಗಣದಲ್ಲಿ ೪ ಮಾತ್ರೆಗಳಿವೆ (ಬಣ್ಣಕ್). ಇದು ಕ್ಷಮ್ಯವೇನೋ! ಇದು ಅಸಾಧುವೆಂದಾದರೆ, ಕೊನೆಯ ಪದವನ್ನು ಬಣ್ಣಕಲ್ತೆ ಎನ್ನಬಹುದು.
(ಗೀತಿಸಮಸ್ತವನ್ನು ೫-೫ಮಾತ್ರೆಗಳಾಗಿ ವಿಭಜಿಸಲಾಗದಿರುವುದರಿಂದ, ನಿಮ್ಮ ವಿಭಜನೆಯಲ್ಲಿ ಪಂಚೇತರಮಾತ್ರೆಗಳ ಗಣವೊಂದಿದೆ: ವಭಾಗಮನ್. ’ನಾ ಪೀತಕ್’ ಎಂಬ ಗಣವೇ ಇಲ್ಲವಲ್ಲ!)
ಸೀಸಭಾಗದಲ್ಲಿ ಮಾತ್ರಾಗತಿ ಸರಿಯಾಗೇ ಇದೆ. ಗೀತಿಯಲ್ಲಿಯೂ ಆಟವೆಲದಿ ಕೂಡುತ್ತಿದೆಯಲ್ಲ. ಆಟವೆಲದಿಯಲ್ಲಿ ವಿಷ್ಣುಬ್ರಹ್ಮಗಣಗಳನ್ನು ಪಂಚಮಾತ್ರಾ ಮತ್ತು ತ್ರಿಮಾತ್ರಾಗಣಗಳಾಗಿ ಬಳಸುತ್ತೇವಲ್ಲವೇ!
btw
ಪ್ರಸಾದು ಅವರಿಂದ ಇಂತಹದೊಂದು ಪದ್ಯದ ನಿರೀಕ್ಷೆಯಲ್ಲಿದ್ದೆ. ಆದರೆ ಅಷ್ಟು ಸ್ಪಷ್ಟವಾಗಿ ಕಾಣುತ್ತಿರುವ ಮರಗಿಡಇಬ್ಬನಿ-ಸೂರ್ಯರನ್ನು ಬಿಟ್ಟು ನೇರವಾಗಿ ಮಕ್ಕಳ ಬಗೆಗೇ ಬರೆಯುತ್ತೀರಿ ಎಂದುಕೊಂಡಿರಲಿಲ್ಲ. 🙂 😉
@ Sri RG, Amsha shall be an enigma to me for ever. Each time I correct myself, another lacuna surfaces! Except the gaNa ಬಣ್ಣಕ್, the verse is fully mAtrAseesa. Hence I proposed to change ಬಣ್ಣಕ್ಕಲ್ತೆ to ಬಣ್ಣಕಲ್ತೆ. Please let me know if the last gaNa in pUrvArdha viz., ರುವನೈ is permissible in a mAtrAseesa. And please let me know where my seesa is an admix of aMsha and mAtrA. Will not a mAtrAseesa be automatically construed to be an aMshaseesa if the number of mAtras in just one gaNa is truncated to four, thereby necessitating karShaNa for that one gaNa, provided that there are no 5 laghus in any gaNa (which is in principle permissible in a mAtrAgaNa)? In such an instance, are not all the other gaNas too – though perfectly panchamAtra – rendered karShita? Inference: A seesa is either mAtrA or aMsha. An ‘alloy’ is non-existent.
With clarifications for these, I look forward to rectify my understanding of seesapadya.
@ Ram, As per http://padyapaana.com/?page_id=1024 all these gaNa-s are valid: ನನನಾನಾ, ನಾನಾನಾ, ನನನಾನs, ನನನsನs, ನನನsನಾ, ನಾನಾನs, ನಾನsನs and ನಾನsನಾ- of course in aMshaseesa. In mAtrAseesa, it has to be exactly five. Hence ವೀಗವನ.
@ KoppalatoTa, Thanks for endorsing the metrics of my verse. ಸ್ಪಷ್ಟವಾದ ಇಬ್ಬನಿ (clear mist) ಎನ್ನುವಿರಲ್ಲ! ಏನು ಹೇಳೋಣ? 🙂
ಗೌತಮರೆ, ಚೀದಿಯವರು ಹೇಳಿದಂತೆ ಆದಿ/ಆದ್ಯಕ್ಷರಪ್ರಾಸವುಳಿದು ಪದ್ಯವು ಚೊಕ್ಕವಾಗಿದೆ. ಒಂದಷ್ಟು ಕಾಲ ಹೀಗೇ ಮುಂದುವರಿಯಿರಿ. ಪ್ರಾಸವು ತಾನೇ ಸಿದ್ಧಿಸುತ್ತದೆ. ನಾನು ಸಾಗಿದ್ದೂ ಇದೇ ಮಾರ್ಗದಲ್ಲಿ.
(ಈ ಕಪ್ಪು ಗಳವನ್ನು ಒಟ್ಟಿಗೆ ದಾಟುತ್ತ, ದಡಕ್ಕೆ ಸೇರುವ ಆಟದಲ್ಲಿರುವ ಸಂತೋಷವನ್ನು,ಸಹನೆಯನ್ನೂ ಬಳಿಯೇ ಕಂಡಾಗ,ನಭೋಸರೋವರಕ್ಕೆ ಧುಮುಕಿ, ಕಷ್ಟದಮಾರ್ಗವನ್ನು ಸಂತೋಷದಿಂದ ಈಜುತ್ತಿರುವ ಖಗಾಳಿಯ ಚಿತ್ರವು ಮನದಲ್ಲಿ ಮೂಡುತ್ತದೆ)
They are just perfecting the art of reverse walking on a log.
ದಾಟಲಾಗದ ಹಳ್ಳವೂ ಅಲ್ಲ ಮೋರಿಯೂ,
ಪಾಟವದ ಪದ್ಯವೇತಕೊ ಕಬ್ಬಿಗ|
ಸಾಟಿಯಿಲ್ಲದ ಸಾಧನೆಯ ಗಳಿಸೆ ಬಾಲಕರು
ಚೂಟಿಯಿಂ ನಡೆದಿಹರು ಹಿಂಗಾಲಿನಿಂ||
Baagitu Marada Kombe
Bandaru benna hinde
Nade munde nade munde
Hejje mele hejje hakuta
Nuggi nade munde
Chellide belaku ellellu
Bandihanu raviyu
Naliyona baa geleya
hejje mele hejje hakuta
Nade munde nade munde
Hejje mele hejje hakuta
Nuggi nade munde
Ragini,
Welcome to Padyapaana. You have a poetic bent of mind. As a next step, please watch the video lessons on chandass, alaMkAra etc. available in the ‘Learn Posody’ link at the top of this page, for this blog is exclusively meant for metrical poetry.
It may be noticed that the gang has pushed the youngest lad to the front. Your verse may be rephrased thus:
ಮರದ ಕೊಂಬೆಯೆ ಸೇತುವಾಯ್ತೇಂ
ತರಳಪೋರರು ದಾಟೆ ಮೋರಿಯ-
ನೊರುವನಿಂಗಿನ್ನೊರುವನಾಸರೆ
ಕಿರಿಯಗಾಧಾರಮದುಮೇಂ?
1) This is in a metre called pallava (ಗೋವಿನ ಹಾಡಿನ ಧಾಟಿ)
2) The second letter of each line should be the same (ರ in this case)
3) You will get to know the other rules of prosody once you start with the video lessons.
Welcome to the class of 2016 (one year is quite enough to graduate some).
ನನ್ನ ಕೆಲಸವನ್ನು ಹಗುರಾಗಿಸಿದ ನಿಮ್ಮ-
ನೆನ್ನಲೆಂತು ಹಾದಿರಂಪರೆಂದು?
ಚೆನ್ನೆನಿಸುವ ಹಾಗೆ ಸೂಚಿಪ್ಪ ನಿಮ್ಮನ್ನು
ಭಿನ್ನಿಸುವುದೆ ಮೋದಿಗಿಂಪರೆಂದು? 🙂
_/\_
ಎದುರಿಪ್ಪಿಳಿಗುಳಿಯೊಂದೇ
ಕುದಿರಿಸುತೆ ಗೆಳೆತನಮಂ ಸಲೆ ಸುಲಭದಿಂದಂ
ಹದನಗೊಳಿಸುತಿರ್ಪುದಲಾ
ಚದುರಿಪುಗುವ ಕಂದರಂ!ಪವಾಡಕೆ ಬರಮೇಂ!
(ಪ್ರಕೃತಿಯಲ್ಲಿ ಈ ರೀತಿಯ ಪವಾಡಗಳಿಗೆ ಬರವುಂಟೇ?-ಒಂದು ಇಳಿಗುಳಿಯೇ ಈ ಮಕ್ಕಳಲ್ಲಿ ಗೆಳೆತನವನ್ನು ಕುದುರಿಸಿ ,ಒಪ್ಪವನ್ನು ಮೂಡಿಸಿದೆಯಲ್ಲ!)
ನಿಜಕ್ಕೂ ತುಂಬ ಸೊಗಸಾದ ಭಾವ-ಬಂಧಗಳ ರಚನೆ; ಅಭಿನಂದನೆಗಳು.
dhanyavaadagaLu
ಚೆಲ್ಲಿದ ಬೆಳಕಲಿ ಚಿಣ್ಣರ ಬಂಡಿಯು
ಮೆಲ್ಲೆನೆ ಸಾರಿತು ಮೇಳದಲೀ I
ಬಲ್ಲೆವು ನಾವೀ ಪರಿಸರ ಗರ್ಭವ
ಕಲ್ಲನು ಮುಳ್ಳನು ಜಾಡಿನಲಿ II
ಸೊಗಸಾದ ಸರಳಸುಂದರಪದ್ಯ. ಧನ್ಯವಾದ.
ತಮಗೂ ಧನ್ಯವಾದಗಳು ಸರ್
ತಿರೆಯಾದ೦ತಿರೆ ಚಿತ್ರಲೀಲೆಗೆ ಪಟ೦ ಭೌಮ೦ ಕಣಾ ಕಲ್ಪನಾ-
ವರಣ೦ ಬಿ೦ಬಿಸುತಿರ್ದುದಾ ಕರಣಮ೦ ಮಾಯಾವಿಲಾಸ೦ ದಿವಾ-
ಕರಬಾಹುಪ್ರಚಯಪ್ರಭಾವಿಸರಮ೦ ಬೀರುತ್ತೆ ನೋಳ್ಪಾತನಾ
ಪರಮಾತ್ಮ೦ ಮುದಮ೦ಗೊಳುತ್ತೆ ಸತತ೦ ತನ್ನಾಕೆಯಾಟ೦ಗಳೊಳ್
ಆಹಾ! ತುಂಬ ಸುಂದರವೂ ಪ್ರೌಢವೂ ಆದ ಅರ್ಥಪೂರ್ಣಪದ್ಯ. ಅಭಿನಂದನೆಗಳು.
Thank you sir!
From right to left the colours of their shorts are black, blue, yellow and grey. The second lad has removed his pink shirt so that the colours of the shirts/tops are also in the same colour order, though in the reverse – His bare torso is more near to yellow than his pink shirt.
ಕಾರಣವ ಬಲ್ಲಿರೇಂ ತರಲದ್ವಿತೀಯನೇತಕೆ ಬಿಚ್ಚಿಹನು ತನ್ನ ಕಂಚುಕವನುಂ
ವರ್ಣಮದರಂ ನೋಡು ರಕ್ತವಿದೆ, ಹಳದಿಯಿದ್ದಿದ್ದೊಡಾಗಲ್ಲೊಂದು ಕ್ರಮವಿರುವುದೈ|
ನೋಡೆ ಚಿಣ್ಣರ ಚಡ್ಡಿಗಳ ಬಣ್ಣವಿದೆ ಬಲದಿನೆಡಕೆ ಶಾಮಲ-ನೀಲಿ-ಹಳದಿ-ಊದಾ
ಕಂಚುಕಂಗಳು ವಿಲೋಮದೊಳಿವೇ ಬಣ್ಣಗಳವಾಗಿರುತ್ತಿರ್ದವಾಗಲ್ತೆ ಪೇಳಿಂ||
ತನ್ನಯೂರ್ಧ್ವಭಾಗಮನ್ನಾತ ಪೀತಕ್ಕೆ
ಹತ್ತಿರಕ್ಕೆ ತರಲು ಬಿಚ್ಚಿರುವನೈ|
ತನ್ನ ಕಂಚುಕವನು ಮೈಬಣ್ಣವೀಗವನ
ಹತ್ತಿರವಿದೆ ಹಳದಿಬಣ್ಣಕ್ಕಲ್ತೆ!!
ಅರ್ಥವಾಗಲಿಲ್ಲ ಸ್ವಲ್ಪದಷ್ಟಾದರೂ
ವ್ಯರ್ಥವಾದೆನೇನೊ? ಹಾದಿರಂಪ!!
ಸೇರಿ ಧ್ಯಾನದೆ ನೋಡೆ ರಂಪಮತಿಮೂಲಕವೆ
ತೋರುವುದು ಪದ್ಯಾರ್ಥವಸ್ಪಷ್ಟದೊಲ್
ಸೇರಿಸಲ್ಕಂಗಿ ಮೇಣ್ ಚಡ್ಡಿಬಣ್ಣಗಳನ್ನು
ಮೀರಿರ್ಪರರ್ಥಗ್ರಹಣದಂಕೆಯಂ
😀
ಹ್ಹಹ್ಹ
ಅಸ್ಪಷ್ಟದೊಲ್=ಅಸ್ಪಷ್ಟದ ಹಾಗೆ
ಅಸ್ಪಷ್ಟದಿಂ=ಅಸ್ಪಷ್ಟವಾಗಿ
ಅಸ್ಪಷ್ಟದೊಲ್ ಎಂಬುದೇ ಬರಹದಾಶಯ. ☺
ತಗದು, ತಗದು
ಗಣೇಶರೆ, ವಿವರಣೆಯನ್ನು ಮೂಲದಲ್ಲೇ ನೀಡಿದ್ದೇನೆ.
ee pariya lekkaachaaravanaava kavigalaloo naa kaaNe!!
hhahha
ಯಾಕೆ ಅಲ್ಲಿಗೇ ನಿಲ್ಲಿಸಿಬಿಟ್ಟಿರಿ. ಕೊನೆಮುಟ್ಟಿಸಿ: ಪಾಪಿsಜನಪ್ರಿಯ ರಂಪಂಗದಲ್ಲದೆ!
ಪದ್ಯ ನನಗೆ ಅರ್ಥವಾಯಿತು 🙂
ಆದಿಪ್ರಾಸದ ಕೊರತೆಯಾಗಿದೆ. ಪಂಚಮಾತ್ರಾ ಉಚ್ಛಾರಣೆಗೆ ಒದಗುತ್ತಿಲ್ಲ (ಲಗಂಗಳಿವೆ; ಗಣಗಳ ಮಾತ್ರಾಲೆಕ್ಕವೂ ಕೆಲವೆಡೆ ತಪ್ಪಿದಂತಿದೆ).
ಸೀಸಪದ್ಯದಲ್ಲಿ ಪ್ರಾಸಕ್ಕೆ ವಿನಾಯಿತಿಯಿದೆ. ಉಚ್ಚಾರಣೆಗೆ ಎಲ್ಲಿ ಅಡಚಣೆ? ಲಗಂ ಎಲ್ಲಿ? ಮಾತ್ರಾಲೆಕ್ಕವು ತಪ್ಪಿ’ದಂತಿ’ದ್ದರೆ ಪರವಾಗಿಲ್ಲ 🙂 ತಪ್ಪಿದ್ದರೆ, ಎಲ್ಲಿ ಎಂದು ತಿಳಿಸಿ.
ಎರಡನೆಯ ಭಾಗದಲ್ಲಿ ಪಂಚಮಾತ್ರಾ ಲಯಕ್ಕೆ ಅಡಚಣೆಯಿದೆ. ಉದಾ:
ತನ್ನಯೂರ್ಧ್ + ವಭಾಗಮನ್ + ನಾ ಪೀತಕ್ + ಕೆ => ಲಗಂ ಹಾಗೂ ಮಾತ್ರಾದೋಷ
ಸೀಸ ಪದ್ಯದ ಸರಿಯಾದ ಚಂದೋಕ್ರಮ ನನಗೆ ನೆನಪಿಲ್ಲ. ಅದರಲ್ಲಿ ಅಂಶ ಛಂದಸ್ಸಿನ ಪ್ರಕಾರದಲ್ಲೇನಾದರೂ ಮಾಡಿದ್ದೀರೆ?
(ಮಾತ್ರಾ)ಸೀಸಪದ್ಯದಲ್ಲಿ ಪೂರ್ವದ ಸೀಸವು ಪೂರ್ಣವಾಗಿ ಪಂಚಮಾತ್ರದಲ್ಲಿರುತ್ತದೆ. ಉತ್ತರದ ಗೀತಿಯಲ್ಲಿ ತ್ರಿಮಾತ್ರಾಗಣಗಳೂ ಇರುತ್ತವೆ. ನನ್ನ ಆಟವೆಲದಿಯ ಗಣವಿಭಜನೆ ಇಂತಿದೆ:
ತನ್ನ/ಯೂರ್ಧ್ವ/ಭಾಗ/ಮನ್ನಾತ/ ಪೀತಕ್ಕೆ (ಬ್ರಬ್ರಬ್ರವಿವಿ)
ಹತ್ತಿ/ರಕ್ಕೆ/ ತರಲು/ ಬಿಚ್ಚಿ/ರುವನೈ| (ಬ್ರಬ್ರಬ್ರಬ್ರಬ್ರ)
ತನ್ನ/ ಕಂಚು/ಕವನು,/ ಮೈಬಣ್ಣ/ವೀಗವನ
ಹತ್ತಿ/ರವಿದೆ/ ಹಳದಿ/ಬಣ್ಣ/ಕ್ಕಲ್ತೆ!!
ಸಮಪಾದಗಳ ಕೊನೆಯ ಗಣದಲ್ಲಿ ೪ ಮಾತ್ರೆಗಳಿರಬಹುದಾಗಿದೆ. ಇಲ್ಲಿನ ಅಪವಾದ ಎಂದರೆ ಅಂತ್ಯಪೂರ್ವಗಣದಲ್ಲಿ ೪ ಮಾತ್ರೆಗಳಿವೆ (ಬಣ್ಣಕ್). ಇದು ಕ್ಷಮ್ಯವೇನೋ! ಇದು ಅಸಾಧುವೆಂದಾದರೆ, ಕೊನೆಯ ಪದವನ್ನು ಬಣ್ಣಕಲ್ತೆ ಎನ್ನಬಹುದು.
(ಗೀತಿಸಮಸ್ತವನ್ನು ೫-೫ಮಾತ್ರೆಗಳಾಗಿ ವಿಭಜಿಸಲಾಗದಿರುವುದರಿಂದ, ನಿಮ್ಮ ವಿಭಜನೆಯಲ್ಲಿ ಪಂಚೇತರಮಾತ್ರೆಗಳ ಗಣವೊಂದಿದೆ: ವಭಾಗಮನ್. ’ನಾ ಪೀತಕ್’ ಎಂಬ ಗಣವೇ ಇಲ್ಲವಲ್ಲ!)
ವಿವರಣೆಗಾಗಿ ಧನ್ಯವಾದಗಳು.
ಬಣ್ಣಕ್ ಸರಿ, ಆದರೆ ‘ವೀಗವನ’ ಎಂಬುದು ವಿಷ್ಣು ಗಣಕ್ಕೆ ಹೊಂದುತ್ತದೆಯೇ?
’ಈಗವನ’ ಎಂದಾಗಿ ಒದಗುತ್ತದೆ.
ವಿಷ್ಣು ಗಣದಲ್ಲಿ ನಾನಾನಾ ಅಥವಾ ನನನಾನಾ ಎಂಬೆರಡು ಸಾಧ್ಯ ಎಂದು ನನ್ನ ತಿಳುವಳಿಕೆ
ರಾಮಚಂದ್ರನ ಆಕ್ಷೇಪ ಸರಿಯಾಗಿದೆ. ಬಹುಶಃ ಪ್ರಸಾದು ಅವರು ಮಾತ್ರಾಸೀಸ ಮತ್ತು ಅಂಶಸೀಸಗಳನ್ನು alloy ಮಾಡಿರಬಹುದು.
ಸೀಸಭಾಗದಲ್ಲಿ ಮಾತ್ರಾಗತಿ ಸರಿಯಾಗೇ ಇದೆ. ಗೀತಿಯಲ್ಲಿಯೂ ಆಟವೆಲದಿ ಕೂಡುತ್ತಿದೆಯಲ್ಲ. ಆಟವೆಲದಿಯಲ್ಲಿ ವಿಷ್ಣುಬ್ರಹ್ಮಗಣಗಳನ್ನು ಪಂಚಮಾತ್ರಾ ಮತ್ತು ತ್ರಿಮಾತ್ರಾಗಣಗಳಾಗಿ ಬಳಸುತ್ತೇವಲ್ಲವೇ!
btw
ಪ್ರಸಾದು ಅವರಿಂದ ಇಂತಹದೊಂದು ಪದ್ಯದ ನಿರೀಕ್ಷೆಯಲ್ಲಿದ್ದೆ. ಆದರೆ ಅಷ್ಟು ಸ್ಪಷ್ಟವಾಗಿ ಕಾಣುತ್ತಿರುವ ಮರಗಿಡಇಬ್ಬನಿ-ಸೂರ್ಯರನ್ನು ಬಿಟ್ಟು ನೇರವಾಗಿ ಮಕ್ಕಳ ಬಗೆಗೇ ಬರೆಯುತ್ತೀರಿ ಎಂದುಕೊಂಡಿರಲಿಲ್ಲ. 🙂 😉
@ Sri RG, Amsha shall be an enigma to me for ever. Each time I correct myself, another lacuna surfaces! Except the gaNa ಬಣ್ಣಕ್, the verse is fully mAtrAseesa. Hence I proposed to change ಬಣ್ಣಕ್ಕಲ್ತೆ to ಬಣ್ಣಕಲ್ತೆ. Please let me know if the last gaNa in pUrvArdha viz., ರುವನೈ is permissible in a mAtrAseesa. And please let me know where my seesa is an admix of aMsha and mAtrA. Will not a mAtrAseesa be automatically construed to be an aMshaseesa if the number of mAtras in just one gaNa is truncated to four, thereby necessitating karShaNa for that one gaNa, provided that there are no 5 laghus in any gaNa (which is in principle permissible in a mAtrAgaNa)? In such an instance, are not all the other gaNas too – though perfectly panchamAtra – rendered karShita? Inference: A seesa is either mAtrA or aMsha. An ‘alloy’ is non-existent.
With clarifications for these, I look forward to rectify my understanding of seesapadya.
@ Ram, As per http://padyapaana.com/?page_id=1024 all these gaNa-s are valid: ನನನಾನಾ, ನಾನಾನಾ, ನನನಾನs, ನನನsನs, ನನನsನಾ, ನಾನಾನs, ನಾನsನs and ನಾನsನಾ- of course in aMshaseesa. In mAtrAseesa, it has to be exactly five. Hence ವೀಗವನ.
@ KoppalatoTa, Thanks for endorsing the metrics of my verse. ಸ್ಪಷ್ಟವಾದ ಇಬ್ಬನಿ (clear mist) ಎನ್ನುವಿರಲ್ಲ! ಏನು ಹೇಳೋಣ? 🙂
Baduku sEtuve
Bidda vrkshavu
Geddu pOdare mukti nAlvarige ||
Ondu hejjeyu
Hinde mungade
BiddarAyitu daiva gati avage ||
(Jala shatpadi)
ಗೌತಮರೆ, ಆದಿಪ್ರಾಸವಿಲ್ಲವಲ್ಲಾ!!!
ಗೌತಮರೆ, ಚೀದಿಯವರು ಹೇಳಿದಂತೆ ಆದಿ/ಆದ್ಯಕ್ಷರಪ್ರಾಸವುಳಿದು ಪದ್ಯವು ಚೊಕ್ಕವಾಗಿದೆ. ಒಂದಷ್ಟು ಕಾಲ ಹೀಗೇ ಮುಂದುವರಿಯಿರಿ. ಪ್ರಾಸವು ತಾನೇ ಸಿದ್ಧಿಸುತ್ತದೆ. ನಾನು ಸಾಗಿದ್ದೂ ಇದೇ ಮಾರ್ಗದಲ್ಲಿ.
ಚೀದಿಯವರೆ, ತಾವು ಸ್ವಲ್ಪ …..
ಪಾಪ ಗೌತಮರು ಈಗಲೇ ತಿದ್ದಲು ಶಕ್ಯರಿದ್ದರೂ ರ೦ಪರ ರ೦ಪವೇಕೋ ಕಾಣೆ!!
I do not want to be a ‘leader without a follower’ 😉
Neelakanth avare,Aa padyavannu hEge tiddabahudu? Dayavittu torisi kodi..
NK, ತಿದ್ದೋಕೆ ಆಸೆ ಪಟ್ರಿ. ತಥಾಸ್ತು.
Thank you sir, I will work on that
ತಿಳಿಯsದ ಕಡಿದಾದ ಹಾದಿsಯ ಕಾಣಲ್ಕೆ
ತಳsಮsಳಗೊಳ್ಳುsವರೆಲ್ಲರ್
ಸುಲಭsದ ಮಾರ್ಗsವ ದಾಂಟಲೀ ಮಕ್ಕsಳ
ಗೆಲುವಿಂದೆs ಸಾಧ್ಯs ಮಾಯ್ತಲ್ತೆ
ಪದ್ಯ ಚೆನ್ನಾಗಿದೆ.
ಕರಿಗಳಮಂ ತಳರ್ದು ಜೊತೆಯೊಳ್ ದಡಮಂ ಪುಗುವಾಟದೊಳ್ ದಿಟಂ
ಸುರಿದುರೆ ತೋಷಮಂ,ಸಹನೆಗೊಗ್ಗಿದ ಜಾಣ್ಮೆಯನಾಂತು ಕಂಡಿರ
ಲ್ಕೆರಗುತುಮಾ ನಭಸ್ಸರಕೆ,ದುರ್ಗಮಮಾರ್ಗದ ದೂರತೀರಮಂ
ಹರುಷದಿನೀಸುತಿಪ್ಪ ಖಗಕೂಟಮೆ , ಸಲ್ಲುಗುಮೆನ್ನ ಚಿತ್ತದೊಳ್
(ಈ ಕಪ್ಪು ಗಳವನ್ನು ಒಟ್ಟಿಗೆ ದಾಟುತ್ತ, ದಡಕ್ಕೆ ಸೇರುವ ಆಟದಲ್ಲಿರುವ ಸಂತೋಷವನ್ನು,ಸಹನೆಯನ್ನೂ ಬಳಿಯೇ ಕಂಡಾಗ,ನಭೋಸರೋವರಕ್ಕೆ ಧುಮುಕಿ, ಕಷ್ಟದಮಾರ್ಗವನ್ನು ಸಂತೋಷದಿಂದ ಈಜುತ್ತಿರುವ ಖಗಾಳಿಯ ಚಿತ್ರವು ಮನದಲ್ಲಿ ಮೂಡುತ್ತದೆ)
ನಭಸ್ಸರ ಆಗಬೇಕಲ್ಲ… ಚೆನ್ನಾದ ಕಲ್ಪನೆ ಮೇಡಮ್
ಸರಿಪಡಿಸಿದ್ದೇನೆ,ಧನ್ಯವಾದ.
ಪದ್ಯ ಚೆನ್ನಾಗಿದೆ. ಶಬ್ದಾರ್ಥಗಳ ಹದ ಸೊಗಸಾಗಿದೆ. ಆದರೆ ಎರಡನೆಯ ಪಾದಾಂತ್ಯವು ಮೂರನೆಯ ಪಾದಾದಿಯೊಡನೆ ಸಂಧಿಯಾಗಬೇಕು. ಇಲ್ಲವಾದರೆ ಪದ್ಯದಲ್ಲಿ “ಸಂಹಿತೆ”ಯು ಕೆಡುವುದು.
ಕಂಡಿರಲ್ಕೆರಗುತುಂ, ಎಂಬುದಾಗಿ ತಪ್ಪನ್ನು ತಿದ್ದಿದ್ದೇನೆ. ಧನ್ಯವಾದಗಳು .
ಬೇರನ್ನು ಚಾಚಿ ಸಖನಂ ಬಳಿ ಬಾಚುತಿರ್ಪಂ
ತೋರುತ್ತೆ ಶುದ್ಧರಮಣೀಯ ಮನೋಹರತ್ವಂ
ಬೀರಿರ್ದ ನಲ್ಮೆಯೆಸಕಕ್ಕೆಳೆಬಾಲರೆಲ್ಲರ್
ತೇರಾಗೆ ಬಾಹುಗಳನುಂ ಬೆಸೆದಿರ್ಪ ಮೋದಂ
ಒಳ್ಳೆಯ ವಸಂತತಿಲಕ. ಕಲ್ಪನೆಯೂ ಚೆಲುವಾಗಿದೆ.
ಬ೦ಡಿಯೇ೦ ಮಕ್ಕಳೀ ಕೇಳಿಯಾಕರ್ಷಮೇ೦
ಕೊ೦ಡಿಯೇ೦ ನೇಹದಾನ೦ದಕ೦ ಸ೦ತತ೦
ಖ೦ಡಿಸಲ್ ಭೇದಮ೦ ನೇಸರಾವಾರದೊಳ್
ಮ೦ಡಿಸಲ್ಕೈಕ್ಯದಿ೦ ಮಾರ್ಗದುತ್ಕ್ರಾ೦ತಿಯ೦
ಇದು ಸೊಗಸಾದ ಸ್ರಗ್ವಿಣೀ. ಅಭಿನಂದನೆಗಳು.
ಕೊಡುವೆನೆಂದೊಡೆ ಕೊಳ್ಳಲೊಲ್ಲದೆ,
ಕಡೆದ ನವನೀತಮನೆ ಮೆಲ್ಲ
ಲ್ಕಡಿಯನಿಟ್ಟನೆ ಚೌರ್ಯಕೆರಗುತೆ ಕೃಷ್ಣನಾಪ್ತರೊಡೆ!
ಎಡರದಿರ್ಪೊಡೆ, ಹುಲ್ಲುಹಾಸಿರೆ,
ದಡಮನಪ್ಪುವ ಹಾದಿ ಹಲವಿರೆ,
ಗಡಣಮಾದುದೆ,ಬಿರುಸಬಟ್ಟೆಯೆ!ಜಾಣಪೋರರಿಗೆ!
ಆಹಾ! ತುಂಬ ಉದಾತ್ತಸುಂದರಕಲ್ಪನೆ!! ಒಳ್ಳೆಯ ರಚನೆ ಕೂಡ.
ಧನ್ಯವಾದಗಳು 🙂
ರಜ ಕಳೆಯೆ ಮೋಜಿನಿಂ ಹಲಮಜಲು ಬಾಲರ್ಗೆ
ಭುಜಕೆ ಭುಜ ಕೊಂಡಿಂತು ಸೇತು ಬಂಧಂ ।
ನಿಜಗುಣವನಿತ್ತರುಣ ಬಲುಮುದದೆ ಮುತ್ತೆ ತ್ರಿ-
ಭುಜಬಂಧವೆತ್ತುದಿದೊ ಹೇತು ಬಂಧಂ ।।
ಭುಜ ಹಿಡಿದು ನಡೆದ ಬಾಲಕರಿಗೆ, ಸಹಜ ಸತ್ತ್ವ (ವಿಟಮಿನ್ – D) ನೀಡುತ್ತಿರುವ “ಅರುಣ” – ತಾನೂ ಸಂತೋಷದಿಂದ ಭುಜ ನೀಡಿದ್ದಾನೆಯೇ ?! (ಅರುಣನ ಕಿರಣಗಳ ಓರೆ ಕೋನ ತ್ರಿಭುಜ ಬಂಧ ತಂದಿದೆ – ಎಂಬ ಕಲ್ಪನೆಯಲ್ಲಿ )
ಕಲ್ಪನೆ ಸೊಗಸಾಗಿದೆ.
ಧನ್ಯವಾದಗಳು ಗಣೇಶ್ ಸರ್,
“ಕಲನೆ” ಸೊಗಸದಲ್ಲವೇ ?!
aDigaDigakkasa
paDutali naDedare
suDuvudu karmada kahi phalavu ||
beDagina sEtuve
yoDetanavEtake?
aDaviya pokkiha mAnisare ||
ನಾನು ಹೇಳಲಿಲ್ಲವೆ! ಪ್ರಾಸವು ತಾನೇ ಸಿದ್ಧಿಸುತ್ತದೆ 😉
Yes Prasad sir, thank you very much
ಪದ್ಯ ಚೆನ್ನಾಗಿದೆ. ಗೌತಮ ದೀಕ್ಷಿತರೇ! ನಿಮ್ಮನ್ನು ಪದ್ಯಪಾನವು ಹಾರ್ದಿಕವಾಗಿ ಸ್ವಾಗತಿಸುವುದು. ದಯಮಾಡಿ ಕನ್ನಡಲಿಪಿಯಲ್ಲಿ ನಿಮ್ಮ ಪದ್ಯಗಳನ್ನು ಟಂಕಿಸುವುದು.
Thank you sir, coming from you it’s a great thing.
Let’s see if the ‘great thing’ will be complied with 🙂
ಇನನೆ ಕೋದಿರ್ಪ ಪೊನ್ನಕಿರಣಮೇ ಮಾಲೆಗಿಂತ ಸೊಗಸು!
ಬನದ ದೇವಿಯಿಳಿಬಿಟ್ಟ ತೋರಣದೆ ಬತ್ತದಿರ್ಪ ಪಸುರು!
ಹೊನಲು ಬೆಳಕಿನೊಳ್ ಬಾಲರಾಡುತಿರೆ ಚಿತ್ರದೊಂದು ಬೆಡಗು!
ಮನುಜರೆಂಬರಿದು ಸಗ್ಗಮಲ್ತೆ!ಭೂದ್ವಾರಮಾದೊಡೇನು!
(ಸೂರ್ಯನು ಕೋದ ಕಿರಣದ ಮಾಲೆ, ವನದೇವಿ ಇಳಿಬಿಟ್ಟ ತೋರಣ, ಚಿತ್ರದಂತೆ (ರಂಗೋಲಿ)ಶೋಭಿಸುತ್ತಿರುವ ಮಕ್ಕಳಿಂದಾಗಿ ,ಇದು ಕೇವಲ ಭುವಿದ್ವಾರವಾದರೂ ಸ್ವರ್ಗದಂತಿದೆ!)
ದೊಗೆದೊಗೆಯಿಂ ಗಡಾ ಮರದುತಾಂ ಮರಕಂ ಮರಗಟ್ಟೆ ಸೇತು ಮೇಲ್
ಲಗುಬಗೆಯೊಳ್ಗೆ ನಾಲ್ದೆಸೆಯ ಬಾಲಕರೊಪ್ಪುಗಿಬಂಡಿಯಾಡಿರಲ್
ಹೊಗೆಯುಗುಳಿರ್ದುದೇಂ ? ಬಳಿಯಲೀಪರಿ ಧೂಪಮದೆದ್ದುದಿಂತು ಮೇಣ್
ನಗೆಯೆರದಿರ್ದುದೇನರುಣನೀ ಮರುಳಾಟಕೆ ಬೆಳ್ಸುರಿರ್ದು ತಾಂ ?!
ದೊಗೆದು+ಒಗೆ ಯಿಂದಾದ ಮರದ ಸೇತುವೆ ಮೇಲೆ ನಾಲ್ಕು ಬಗೆಯ ಮಕ್ಕಳಾಡಿದ ಉಗಿಬಂಡಿಯಾಟದೆ ಎದ್ದಿಹ ಹೊಗೆಯೋ? ಈ ಮರುಳಾಟ ಕಂಡು ಅರುಣ ಸುರಿಸಿದ ಬೆಳ್ಳನೆ ನಗೆಯೋ ?!
ಸೊಗದೊಗೆಯಿಂ ಗಡಾ ಮರದುತಾಂ ಮರಕಂ ಮರಗಟ್ಟೆ ಸೇತು ಮೇಲ್
ಲಗುಬಗೆಯೊಳ್ಗೆ ನಾಲ್ದೆಸೆಯ ಬಾಲಕರೊಪ್ಪುಗಿವಂಡಿಯಾಡಿರಲ್
ಪೊಗೆಯುಗುಳಿರ್ದುದೇಂ ? ಬಳಿಯಲೀಪರಿ ಧೂಮ್ರವದೇರುದಿಂತು ಮೇಣ್
ನಗೆಯೆರದಿರ್ದುದೇನರುಣನೀ ಮರುಳಾಟಕೆ ಬೆಳ್ಸುರಿರ್ದು ತಾಂ ?!
ಸೊಡರೀವ ಪಿತನಿನನಿರಲ್,
ಮಡಲಿತ್ತು ಸಲಹುತೆ, ಕಾಯೆ,ಧಾತ್ರಿ ಬಳಿಯಿರಲ್,
ಪೊಡವಿಪಸುಳೆಯರ್ ನಲಿಯರೆ!
ಕಡೆಗಾಣುತೆವೈರಮಂ,ಬದುಕಿನಾಟದೆ ತಾಂ!
ಕ್ರಮಮಂ ಕಾಣ್ ಬಾಲರ ಸಂ-
ಭ್ರಮಮಂ ಕಂದಕಮ ದಾಟೆ ಪರದಾಟದೊಳುಂ ।
ಸಮ ತೋಳ್ಬಲದಿಂ ಪುಷ್ಟಿಯ-
ಸಮ ಕೈವೆರಳ ಬಿಗಿಮುಷ್ಟಿಯದೆ ಪರಿಪಾಟಂ ।।
ಮೊದಲ ಬಾಲಕ ತನ್ನ ಕೈಗಳ ಮುಷ್ಟಿಹಿಡಿದು / ಉಳಿದ ಬಾಲಕರು ಎರಡೂ ಕೈಗಳಲ್ಲಿ ಮುಂದಿನವನ ಭುಜವನ್ನು ಹಿಡಿದು – ಸಮತೋಲನದಲ್ಲಿ ಸಂಭ್ರಮದಿಂದ ಕಂದಕವನ್ನು ದಾಟುತ್ತಿರುವುದನ್ನು ಗಮನಿಸಿ
They are just perfecting the art of reverse walking on a log.
ದಾಟಲಾಗದ ಹಳ್ಳವೂ ಅಲ್ಲ ಮೋರಿಯೂ,
ಪಾಟವದ ಪದ್ಯವೇತಕೊ ಕಬ್ಬಿಗ|
ಸಾಟಿಯಿಲ್ಲದ ಸಾಧನೆಯ ಗಳಿಸೆ ಬಾಲಕರು
ಚೂಟಿಯಿಂ ನಡೆದಿಹರು ಹಿಂಗಾಲಿನಿಂ||
ಈ “ಒಗಟ” ಬಿಡಿಸಬಲ್ಲಿರಾ…?!
ಜನಿಪುದು ಮರದೊಳ್ ಮರತಾ-
ನನಿಮಿತ್ತಂ ಸೃಜಿಸುತುಂ ತಿರೆ ಪರಿಭ್ರಮದೊಳ್
ತನುಗೊಳ್ಳುತೆ ಕಾಯಾಗುದು
ತಿನಲಾಗದ ಪಣ್ಗಡಾ ! ಬಲುವೆ ರುಚಿಯದು ಮೇಣ್ !!
(ಪ್ರಕೃತಿಯ ತಿನ್ನಲಾಗದ ಬಲುರುಚಿ ಹಣ್ಣು – ಅದುವೆ “ಮಕ್ಕಳು”)
ರವಿಕಿರಣ ತಲುಪದಿಹ ತಂಪಿನಾತಾಣದೊಳು
ಸವಿನೆನಪು ಬಾಲ್ಯದೊಳ್ ಮೂಡಿಬರುತಿಹುದು
ಬವಣೆಯಾ ಅಂಚಲಿಹ ಕಾಡಪಾಡದು ಗೊತ್ತೆ ?
ಶಿವಶಿವಾ ! ರೈಲಿನಾಟವನಾಡುತಿಹರು
Nice one!