Aug 012016
 

ದಟ್ (that), ದಿಸ್(this), ವೇರ್ (where), ವೆನ್ (when) ಪದಗಳನ್ನು ಬಳಸಿ ಪತ್ರಕರ್ತನ ಬಗ್ಗೆ ಅಥವಾ ವೃತ್ತಪತ್ರಿಕೆಯ ಬಗ್ಗೆ ಅಥವಾ ಆಕಾಶವಾಣಿ/ದೂರದರ್ಶನ ಮಾಧ್ಯಮಕ್ಕೆ ಸಂಬಂಧಪಡುವಂತೆ ಪದ್ಯರಚನೆ ಮಾಡಿ.

  13 Responses to “ಪದ್ಯಸಪ್ತಾಹ ೨೧೩: ದತ್ತಪದಿ”

 1. My friend Sri Suryaprakash Pandit is primarily a publisher and orator. Journalism is his avocation. Though he exclusively writes features for supplements of a Daily, I have generalized his avocation for this verse (I have obtained more than his ratification for the satire; he liked the verse.):
  ಪಲ್ಲವ|| ಒಟ್ಟಿ ಕಾವೇರಿರ್ಪ ತೆರದೊಳ್
  ಗಟ್ಟಿಸುದ್ದಿಯ ಪೊಂದಿಸುತ್ತುಂ
  ದಿಟ್ಟ ತಾವೆನ್ನಿಸಿಹರಲ್ತೇಂ
  ದಟ್ಟದಾಡಿಯ ಸೂರಿಯರ್||

  • ಒಳ್ಳೆ ಪೂರಣ ಪ್ರಸಾದು ಸರ್. ದತ್ತಪದಗಳ ಪ್ರಯೋಗ ಚೆನ್ನಾಗಿದೆ.

  • ಚೆನ್ನಾಗಿದೆ ಸಾರ್!

  • ಹಾದಿರಂಪರೆ,

   “ಹೊಂದಿಸುತ್ತುಂ” ಎಂಬುದು “ಪೊಂದಿಸುತ್ತುಂ” ಆದಲ್ಲಿ ಹಳಗನ್ನಡವಾಗುತ್ತದೆ.
   ನನಗನಿಸುವಂತೆ, “ತಾವೆನ್ನಿಸಿಹರಲ್ತೇಂ” ಎಂಬಲ್ಲಿಯೂ ಹಳಗನ್ನಡವು ತಪ್ಪಿದೆ.” ತಾಮೆನ್ನಿಸಿರ್ಪರಲ್ತೇಂ” ಎಂದಾಗಬೇಕು .ಆದರೆ, ದತ್ತಪದಕ್ಕೂ,ಛಂದಸ್ಸಿಗೂ ಹೊಂದದು.

   • ಧನ್ಯವಾದಗಳು. ಒಂದನ್ನು ತಿದ್ದಿದ್ದೇನೆ. ಇನ್ನೊಂದನ್ನು ಸದ್ಯಕ್ಕೆ ಉಳಿಸಿಕೊಳ್ಳಬೇಕಾಗಿದೆ 🙁

 2. || ಶುದ್ಧಕಾಮದಾವೃತ್ತ||

  ಅದಟಿನಿಂದಿರಲ್ ದೇಶರಕ್ಷಕಂ,
  ಕುದಿಸಿ ನೆತ್ತರಂ ಯುದ್ಧರಂಗದೊಳ್,|
  ಸದೆದು ವೈರಿಯಂ ವೇರಮಂ ಸುಡಲ್,
  ಮುದದೆ ವಾರ್ತಿಕಂ ಸಾವೆನಲ್,ಪ್ರಿಯಂ ||

  ( ಅದಟು= ಪರಾಕ್ರಮ,ವೇರ=ದೇಹ)

  • ಚೆನ್ನಾಗಿದೆ. ಹೊಸವೃತವೊಂದನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
   ಶುಧ್ದ/ಯುಧ್ದ: ’ಧ್ದ’ ಎಂಬ ರೂಪವಿಲ್ಲ; ಅದು ’ದ್ಧ’ ಎಂದಾಗಬೇಕು.
   ವಾರ್ತ್ತಿಕ ಎಂದರೆ commentary. ಇಲ್ಲಿ news ಎಂಬರ್ಥದಲ್ಲಿ ಬಳಸಿರುವಿರ?
   ಇಲ್ಲೊಂದು ಕೌತುಕಮಯಪದನಿಷ್ಪತ್ತಿಯಿದ್ದಂತಿದೆ: ಯಾವುದು ವಸ್ತ್ರವನ್ನು wearಮಾಡುತ್ತದೆಯೋ ಅದು ವೇರ, ದೇಹ 😉

   • ಧನ್ಯವಾದಗಳು. ಈ ವೃತ್ತದಲ್ಲಿ ಈ ಮೊದಲೇ ಪದ್ಯವನ್ನು ಪದ್ಯಪಾನದಲ್ಲೇ ರಚಿಸಿದ್ದೆ.
    ನನ್ನ ಗಣಕಯಂತ್ರದಲ್ಲಿ ನಾನು ತಿಳಿದೇ ಇರುವ ,ನೀವು ತಿಳಿಸಿದ ಸರಿಯಾದ ರೂಪದಲ್ಲಿ ಮಹಾಪ್ರಾಣದ ಒತ್ತಕ್ಷರವನ್ನು ಟಂಕಿಸಲಾಗುವದಿಲ್ಲ. ಅದಕ್ಕಾಗಿ ಹಾಗೆ ಬರೆಯಬೇಕಾಯಿತು.
    ವಾರ್ತಿಕವೆಂದರೆ ಕಿಟ್ಟೆಲ್ ಶಬ್ದಕೋಶದಲ್ಲಿ relating to news, reporter .. ಎಂಬರ್ಥಗಳಿವೆ. ಮಾಧ್ಯಮಗಳ news reporter ಎಂಬರ್ಥದಲ್ಲಿ ಪದ್ಯದಲ್ಲಿ “ವಾರ್ತಿಕಂ”ಬಳಕೆಯಾಗಿದೆ.

 3. ದಿನವು ಕಾವೇರಿಸುವ ಸುದ್ದಿಗದ್ದಲಗಳಿಂ
  ಧನಿಕನಾಗುವೆನೆಂಬ ಪತ್ರಕರ್ತ|
  ಮನದಟ್ಟುವಂತೊಂದೆ ವಾರ್ತೆಯಂ ಬಡಬಡಿಸು
  ತನಿಸಿದುದನೆಲ್ಲ ದಿಸೆಗುಂ ಪಾಡಿದ|

 4. ಎದ್ದರಾಳಿವ ಭೂತಕನ್ನಡಕವೇರಿಸಿಹ (where)
  ಮುದ್ದೆ ಮುದ್ದಿಸುವಾತ ಪೇಳ ಯಾರಿವನುಂ ? (this)
  ಸುದ್ದಿಸಂಪಾದಕನು ಹರಿವು-ಹರವೆನ್ನದೆಲೆ (when)
  ಸದ್ದ ಮನದಟ್ಟಿಸುವ ಜಗದ “ನಾರದ”ನುಂ !! (that)

  (ಮುದ್ದೆ = ಸಂಗತಿ,ವಿಚಾರ)

 5. ಇಲಿಯು ಚಲಿಸಿರೆ ದಟ್ಟ ಪುಲಿಯೆ ಬಂತೆಂಬರು-
  ಜ್ವಲ ದೇಶದೇಳಿಗೆಯ ನಂದಿಸುವರು|
  ಛಲವೇರುತೊಬ್ಬರೊಬ್ಬರನಲ್ಲಗಳೆಯುತುಂ
  ಸುಲಭವೆನಿಸಿದ ಮತಕೆ ತಲೆದೂಗುವರ್|

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)