ಧನ್ಯವಾದಗಳು
ಇಷ್ಟು ಸಹಾಯ ಮಾರ್ಗದರ್ಶನ ಸಿಕ್ಕಿದರೆ ಇನ್ನಷ್ಟು ಬರೆಯುವ ಧೈರ್ಯ ಬಂದಿದೆ. (ಬರೆಯುವುದರಿಂದ ಕಾವ್ಯಗಳನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಲ್ಲಬಹುದೆಂಬುದು ನಿಮಗೆಲ್ಲಾ ಗೊತ್ತೇ ಇದೆ.) ನಾನಿನ್ನೂ ಪ್ರೈಮರಿ ಸ್ಚೂಲು.
ಶಯನಿಸಿದ(ಮಲಗಿದ) ಎಂಬುದನ್ನು ಮರಣಿಸಿದ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ. ಸೈಲಿಸು=ಸಡಿಲಿಸು,ಗುಡಿ~ಧ್ವಜ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ.
ಕದನದಲ್ಲಿ ಮರಣವನ್ನಪ್ಪುವ ಸಂದರ್ಭದಲ್ಲೂ ತಾಯ್ನಾಡ ಬಾವುಟವನ್ನು ಬಿಗಿದಪ್ಪಿದ ವೀರಸೈನಿಕನ ದೇಶಪ್ರೇಮದ ಬಗ್ಗೆ ಬರೆಯಲು ಪ್ರಯತ್ನಿಸಿದ್ದೇನೆ. ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ,ತಿದ್ದಿ.
ಚೆನ್ನಾಗಿದೆ.
ಪಳಗಿದವರು ಹೆಚ್ಚು ಹೇಳಾರು!
ಇಂಗ್ಲಿಷ್ ಪದಗಳನ್ನು ತೆಗೆದುಬಿಟ್ಟರೆ ನೋಡಲಿಕ್ಕೆ ಇನ್ನೂ ಚೆನ್ನಾಗಿರುತ್ತದೆ ಪದ್ಯ ಎಂದು ನನ್ನ ಅನಿಸಿಕೆ. (ಇಲ್ಲಿ ಓದುವವರಿಗೆಲ್ಲಾ ಪದಗಳು ಎಲ್ಲಿ ಬಂದಿವೆ ಎಂದು ತಿಳಿದೇ ತಿಳಿಯುತ್ತದೆಂದು ಭಾವನೆ.)
ಪದ್ಯವು ಸರಳಸುಂದರವಾಗಿದೆ.
’ಟ್ಟೀಯುವು’ ಹಾಗೂ ’ಕಾರ್ಯವು’ ಎಂಬ ಗಣಗಳಲ್ಲಿ ಒಂದೊಂದು ಮಾತ್ರೆ ಕಡಿಮೆಯಿರುವುದನ್ನು ಹೊರತುಪಡಿಸಿ ಉಳಿದೆಲ್ಲ ಗಣಗಳೂ ಪೂರ್ಣಪಂಚಮಾತ್ರೆಯವುಗಳು. ಇದು ರಗಳೆಯೆನಿಸುತ್ತದೆ. ಆದರೆ ರಗಳೆಗೆ ಅಂತ್ಯಪ್ರಾಸವಿರಬೇಕು. ಇಲ್ಲವೆ, ಸಮಪಾದಗಳಲ್ಲಿ ಕೊನೆಯ ಗಣವನ್ನು ಊನವಾಗಿಸಿ ಇದನ್ನು ಪಂಚಮಾತ್ರವಾಗಿಸಬೇಕು. ಹೀಗೊಂದು ಸವರಣೆ:
ನೆರೆಯವಂ ತುಡುಕಿದಡೆ ‘ಸೈಲ’ವೆಮ್ಮಭಿಮಾನ
ಬರಿದೆ ಪಂಚಾಯ್ತಿಯಿದ’ಕಿಲ್ಲ’ ಬೆಲೆಯುಂ|
ತಿರುಗಿ ಪೆಟ್ಟೀಯುವುದೆ ’ಎಲ್ಲ’ದಕು ಸಮಮೆಂದು
ಅರಿಯ ಭಯ’ವಿಲ್ಲ’ದೊಲ್ ಸೈನ್ಯಕಾರ್ಯಂ||
ಪೃಥ್ವೀ|| ಪಲಾಯನವ ಗೈಯನೈ (Deceitful)ತಕಿಲವೈರಿಯಂ ಕೋದಿಪಂ
ಶಲಾಕೆಗಳ(Arms) ಹೋರಿ (Slack)ಸೈಲೆನಿಸದಾತ್ಮವಿಶ್ವಾಸಮಂ|
ಕಲಾಪವಿದು ಮಾತ್ರಮಾ ಗಡಿಯ ಭಂಗಮೇನೆಲ್ಲಮಂ (ಗಡಿಯನ್ನು ಮಾತ್ರವೆ? ಅಲ್ಲ, ಇಡಿಯ ಭೂಭಾಗವನ್ನು…)
ವಿಲೀನಗೊಳಿಸಲ್ಕೆ ರಾಷ್ಟ್ರದೊಳು ಚೆಲ್ವ ಗಾಂಧಾರಮಂ||
(This is just what the soldier did. That he laid down his life is not explicitly stated in this verse. It is suggested in ‘ಪಲಾಯನವ ಗೈಯನೈ’.)
ಸೂಚನೆ:
ಪದ್ಯದ ಪಾನದಿ ಚೊಚ್ಚಲ ಕೊಳವೆಯ
ಹಳೆಯದ ಹೊಸದಿದ ತಿಳಿಯದೆ ಬೆರೆಸಿದ
ಓದಿರಿಯೆನ್ನಯ ತರಲೆಯ ರಗಳೆಯ
ಕನ್ನಡ ಮನಸಿನ ತಪ್ಪನು ತಿಳಿಸುತ
— ಮೈನಾಶ್ರೀ
——–
ನೀವೀವ ಕಾವಿಲ್ಲದಿರೆಯೆಂತ ಗತಿಯೆಮಗೆ
ನೀವಾವ ಕೊಂಕಿಲ್ಲದೆಲೆ ರಕ್ಷಿಪಿರಿ ಸುಮಗೆ
ನಾವೀವ ಬೆಲೆಯೆಲ್ಲ ಬರಿಮಾತುಗಳೆ ನಿಮಗೆ
ಸಾವೀಗ ಸೈ! ಲಕ್ಷಿಸದೆ ಜವನ ಸೆಣೆಪರಿಗೆ
ನಮಸ್ಕಾರ,
೩,೪ ನೇಯ ಪಾದಗಳ ಮಾತ್ರೆಗಳಲ್ಲಿ ಸ್ವಲ್ಪ ತೊಂದರೆಯಾದಂತಿದೆ
ಯಮಗೆ – ಇದನ್ನು ಸ್ವತಂತ್ರವಾಗಿ ಬಳಸುವದು ತರವಲ್ಲವೆನಿಸುತ್ತದೆ(ಗತಿಯೆಮಗೆಯಲ್ಲಿ ಸರಿಯಾಗಿದೆ)
ಸುಮಗೆ – ?
“ನಾವೀವ ಬೆಲೆಯೆಲ್ಲ ಬರಿಮಾತೆನುವೆ ನಿಮಗೆ!”
“ಸಾವನ್ನೆ ಸೈ!ಲಕ್ಷಿಸದೆ ಮಡಿದ ಯೋಧರಿಗೆ!!”
ಕ್ಷಮಿಸಿ. “ಬರಿಮಾತುಗಳೆ ನಿಮಗೆ” ಎಂದು ಬರೆದಿದ್ದೇನೆ. ಕಂಪ್ಯೂಟರ್ ಗೆ ವರ್ಗಾಯಿಸುವಾಗ ಮರೆತಿದ್ದೇನೆ.
ಸುಮಗೆ = ಸುಮ್ಮನೆ…ಸರಿಯಿಲ್ಲವೇ?
ಯಮನನ್ನು ತರಬೇಕಿತ್ತು. ಬದಲಿಸಿದ್ದೇನೆ. ಸರಿಯಿದೆಯೇ? ಧನ್ಯವಾದಗಳು.
೧) ’ಯೆಂತ’ ಎಂಬ ಆಡುಮಾತನ್ನು ಬಳಸಲಾಗದು.
೨) ಸುಮಗೆ – ಸುಮ್ಮಗೆ ಎಂಬರ್ಥದಲ್ಲಿ ಪ್ರಯೋಗವಾಗಿದ್ದು ನನಗೆ ತಿಳಿಯದು
ನನ್ನ ಸವರಣೆ:
ಸಾವೀಗ ಸೈ! ಲಕ್ಷಿಸದೆ ಜವನ ಸೆಣೆಪರಿಗೆ
ನೀವೀವ ಕಾವಿಲ್ಲದಿರದೆಂತು ಗತಿಯೆಮಗೆ|
ನೀವಾವ ಕೊಂಕಿಲ್ಲದಿತ್ತ ರಕ್ಷೆಗಮೆಮಗೆ
ನಾವೀವ ಬೆಲೆಯೆಲ್ಲ ಬರಿಮಾತುಗಳೆ ನಿಮಗೆ||
ಧನ್ಯವಾದಗಳು
ಇಷ್ಟು ಸಹಾಯ ಮಾರ್ಗದರ್ಶನ ಸಿಕ್ಕಿದರೆ ಇನ್ನಷ್ಟು ಬರೆಯುವ ಧೈರ್ಯ ಬಂದಿದೆ. (ಬರೆಯುವುದರಿಂದ ಕಾವ್ಯಗಳನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಲ್ಲಬಹುದೆಂಬುದು ನಿಮಗೆಲ್ಲಾ ಗೊತ್ತೇ ಇದೆ.) ನಾನಿನ್ನೂ ಪ್ರೈಮರಿ ಸ್ಚೂಲು.
ಜಗಕೆಂದೆ ಹೋರಿದರು, ಜಗವಿಲ್ಲ ಬಳಿಗೆ,ಹಿತ
ಬಗೆದ ಮನಕಿಲ್ಲವೈ ಹಿತಮೆಂಬರೇಂ!
ನಗರ,ಮನೆಯೆಲ್ಲಮಂ ಬೆಳಗಿಸಿರೆ, ಸೇರ್ದಪಂ
ಜಗದೀಶನನ್ನೆ ಸೈ!ಲಲಿತಾರ್ಯನೀ!!
(ಜಗಕ್ಕಾಗಿ ಹೋರಾಟ ಮಾಡಿದರೂ ಸಾಯುವಾಗ ಬಳಿಗೆ ಜಗವಿಲ್ಲ,ಹಿತವನ್ನು ಪರರಿಗೆ ಬಯಸಿದ ಮನಕ್ಕೇ ಹಿತವಿಲ್ಲೆಂಬ ಕೊರಗೇ??
ನಗರ ,ಮನೆಗಳನ್ನು ಬೆಳಗಿಸಿದ ಈ ಉತ್ತಮನು ಶಿವನಲ್ಲೇ ಒಂದಾಗುವನು)
ಚೆನ್ನಾಗಿ ಮೂಡಿದೆ.
ಇದೂ ಲಲಿತ ವೇ?
ಒಳ್ಳೇ ಕಲ್ಪನೆ
ಸಾವಿಲ್ಲೈ ಯೋಧನಿಗಂ
ಭಾವುಕನೈ, ತನಗೆ ಮನೆಯೆ ಬೇಕಿಲ್ಲೆಂಬಂ/
ಸೇವೆಯ ಗೈಯುತೆಯೆಲ್ಲರ
ಸಾವಂ ತಡೆದು ನೆಲೆಸೆಲ್ಲರೆರ್ದೆಯೊಳೀಗಳ್ //
ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು .
ಚೆನ್ನಾಗಿದೆ. ಗೈಯುತೆ ಎಲ್ಲರ ಸಂಧಿಯಾಗಿ ಗೈಯುತೆಲ್ಲರ ಆಗುತ್ತದೆ. ಗೈಯುತುಮೆಲ್ಲರ ಮಾಡಿಕೊಳ್ಳಿ.
Is it ok for yell if did so?
Ohh you need yell , sorry.. ಸೇವಿಸುತಂತೇಯೆಲ್ಲರ ಹೀಗೆನಾದರೂ ಮಾಡಬಹುದು.
Thank you sir_/\_
ಭಯವಿಲ್ಲದೆದೆಯೊಡೆಯ ಭಾರತಾಂಬೆಯತನಯ
ಜಯಪಥದಿ ತೊಡಕಿಲ್ಲದೆಯೆಸಾಗುತೊಮ್ಮೆ
ನಿಯತದಲಿ ಮೈಯೆಲ್ಲ ಕಣ್ಣಾಗಿ ಹೋರುತಲಿ
ಶಯನಿಸಿದ ಸೈಲಿಸದೆ ತಾಯಗುಡಿಯ
ಶಯನಿಸಿದ(ಮಲಗಿದ) ಎಂಬುದನ್ನು ಮರಣಿಸಿದ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ. ಸೈಲಿಸು=ಸಡಿಲಿಸು,ಗುಡಿ~ಧ್ವಜ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ.
ಕದನದಲ್ಲಿ ಮರಣವನ್ನಪ್ಪುವ ಸಂದರ್ಭದಲ್ಲೂ ತಾಯ್ನಾಡ ಬಾವುಟವನ್ನು ಬಿಗಿದಪ್ಪಿದ ವೀರಸೈನಿಕನ ದೇಶಪ್ರೇಮದ ಬಗ್ಗೆ ಬರೆಯಲು ಪ್ರಯತ್ನಿಸಿದ್ದೇನೆ. ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ,ತಿದ್ದಿ.
ಚೆನ್ನಾಗಿದೆ.
ಪಳಗಿದವರು ಹೆಚ್ಚು ಹೇಳಾರು!
ಇಂಗ್ಲಿಷ್ ಪದಗಳನ್ನು ತೆಗೆದುಬಿಟ್ಟರೆ ನೋಡಲಿಕ್ಕೆ ಇನ್ನೂ ಚೆನ್ನಾಗಿರುತ್ತದೆ ಪದ್ಯ ಎಂದು ನನ್ನ ಅನಿಸಿಕೆ. (ಇಲ್ಲಿ ಓದುವವರಿಗೆಲ್ಲಾ ಪದಗಳು ಎಲ್ಲಿ ಬಂದಿವೆ ಎಂದು ತಿಳಿದೇ ತಿಳಿಯುತ್ತದೆಂದು ಭಾವನೆ.)
ಧನ್ಯವಾದಗಳು 🙂 ಇಂಗ್ಲಿಷ್ ಪದಗಳನ್ನು ತೆಗೆದಿದ್ದೇನೆ.
ಚೆನ್ನಾಗಿದೆ. ಶ್ರೀನಾಥರೆಂದಂತೆ ದತ್ತಪದಗಳನ್ನು ಪ್ರತ್ಯೇಕ ತೋರಿಸುವ ಅಗತ್ಯವಿಲ್ಲ. ಬೇಕಿದ್ದರೆ font highlight ಮಾಡಿ.
ಧನ್ಯವಾದಗಳು 🙂
ಐಕಿಲ್ವೆಟ್ಟಿನೊಳಟ್ಟುತುಂ ಪಗೆಗಳಂ ಕಾಲಾಸ್ಯದಾಂತರ್ಯದೊಳ್
ಲೋಕಾತೀತಪರಾಕ್ರಮಕ್ಕುಪಮನೈ ಸಾವಿಲ್ಲದಂತಿರ್ದು ನೀ-
ನೈಕಿಲ್ವಟ್ಟೆಯನೆಲ್ಲ ರಕ್ತಜಲದಾ ಚಿತ್ರಂಗಳಿಂ ತುಂಬಿ ತ-
ನ್ನಾಕಕ್ಕೇರ್ವುದೆ ಸೈ ಲವಕ್ಷಣದೊಳಂ ಮೆಯ್ಯೆಲ್ಲ ತಾಯ್ಗೀಯುತುಂ
ಧನ್ಯವಾದಗಳು, ಪದ್ಯವೊಂದನ್ನು ಕರುಣಿಸಿದ್ದಕ್ಕೆ 🙂
ಧನ್ಯವಾದಗಳು ನಿಮ್ಮ ಸಹೃದಯತೆಗೆ
ಆಹ!
ನೆರೆಯವನು ತುಡುಕಿದರೆ ‘ಸೈಲ’ವೆಮ್ಮಭಿಮಾನ
ಬರಿದೆ ಪಂಚಾಯ್ತಿಯಿದ’ಕಿಲ್ಲ’ ಕಿಮ್ಮತ್ತೆನುತೆ
ತಿರುಗಿ ಪೆಟ್ಟೀಯುವು’ದೆಲ್ಲ’ದಕು ಸಮವೆಂದು
ಅರಿಯ ಭಯ’ವಿಲ್ಲೆ’ನುವ ತೆರ ಸೇನೆ ಕಾರ್ಯವು
ಪದ್ಯವು ಸರಳಸುಂದರವಾಗಿದೆ.
’ಟ್ಟೀಯುವು’ ಹಾಗೂ ’ಕಾರ್ಯವು’ ಎಂಬ ಗಣಗಳಲ್ಲಿ ಒಂದೊಂದು ಮಾತ್ರೆ ಕಡಿಮೆಯಿರುವುದನ್ನು ಹೊರತುಪಡಿಸಿ ಉಳಿದೆಲ್ಲ ಗಣಗಳೂ ಪೂರ್ಣಪಂಚಮಾತ್ರೆಯವುಗಳು. ಇದು ರಗಳೆಯೆನಿಸುತ್ತದೆ. ಆದರೆ ರಗಳೆಗೆ ಅಂತ್ಯಪ್ರಾಸವಿರಬೇಕು. ಇಲ್ಲವೆ, ಸಮಪಾದಗಳಲ್ಲಿ ಕೊನೆಯ ಗಣವನ್ನು ಊನವಾಗಿಸಿ ಇದನ್ನು ಪಂಚಮಾತ್ರವಾಗಿಸಬೇಕು. ಹೀಗೊಂದು ಸವರಣೆ:
ನೆರೆಯವಂ ತುಡುಕಿದಡೆ ‘ಸೈಲ’ವೆಮ್ಮಭಿಮಾನ
ಬರಿದೆ ಪಂಚಾಯ್ತಿಯಿದ’ಕಿಲ್ಲ’ ಬೆಲೆಯುಂ|
ತಿರುಗಿ ಪೆಟ್ಟೀಯುವುದೆ ’ಎಲ್ಲ’ದಕು ಸಮಮೆಂದು
ಅರಿಯ ಭಯ’ವಿಲ್ಲ’ದೊಲ್ ಸೈನ್ಯಕಾರ್ಯಂ||
ಪೃಥ್ವೀ|| ಪಲಾಯನವ ಗೈಯನೈ (Deceitful)ತಕಿಲವೈರಿಯಂ ಕೋದಿಪಂ
ಶಲಾಕೆಗಳ(Arms) ಹೋರಿ (Slack)ಸೈಲೆನಿಸದಾತ್ಮವಿಶ್ವಾಸಮಂ|
ಕಲಾಪವಿದು ಮಾತ್ರಮಾ ಗಡಿಯ ಭಂಗಮೇನೆಲ್ಲಮಂ (ಗಡಿಯನ್ನು ಮಾತ್ರವೆ? ಅಲ್ಲ, ಇಡಿಯ ಭೂಭಾಗವನ್ನು…)
ವಿಲೀನಗೊಳಿಸಲ್ಕೆ ರಾಷ್ಟ್ರದೊಳು ಚೆಲ್ವ ಗಾಂಧಾರಮಂ||
(This is just what the soldier did. That he laid down his life is not explicitly stated in this verse. It is suggested in ‘ಪಲಾಯನವ ಗೈಯನೈ’.)
ಸೈಲಿಸು=ಸಡಿಲಿಸು
ತಣಿವಲ್ಲಿ ದಣಿವಿಲ್ಲದುಜ್ಜುಗವನೆಸಗುತ್ತ
ಇಣಿಕಿಲ್ಲಿ ಇಣಿಕಲ್ಲಿ ಶತೃಸಂಹರಿಸಿದನ
ಮಣ್ಣಿಗಿಡುತಲಿ ತನಗೆ ಕಿರಿಪುತ್ತನಿಲ್ಲೆಂದು
ಕಣ್ಣೀರ ಸೈಲಿಸಿದಳಾ ಮಾತೆಗೊಂದಿಪೆನು
ನಮಸ್ಕಾರ,
ಯೆಲ್ಲ್ ಎಂಬ ೩ನೇ ಪದವು ಕಾಣುತ್ತಿಲ್ಲ,
೨ನೇ ಸಾಲಿನಲ್ಲಿ ಮಾತ್ರೆಯೊಂದು ಕಡಿಮೆಯಿದೆ,ಮತ್ತೆ
ಕಣ್ಣೀರ ಸೈಲಿಸಿದ ಮಾತೆಗೊಂದಿಪೆನು ನಾಂ(ಸರಿಯಾದ ಅರ್ಥ ಬರಬಹುದಲ್ಲವೇ)
೧) ಶತೃ ತಪ್ಪು. ಶತ್ರು ಎಂದಾಗಬೇಕು.
೨) ಶತ್ರುಸಂಹರಿಸಿದನ = ಶತ್ರುವು ಸಂಹರಿಸಿದವನ (ಇವನೇ!) ಎಂದಾಗುತ್ತದಲ್ಲವೆ? ಶತ್ರುಸಂಹಾರಿಯೆಂದಾಗದು.
೩) ಮಾತೆಗೊಂದಿಪೆನು=ಮಾತೆಗೆ+ಒಂದಿಪೆನು. ವಂದಿಪೆನು?
೪) ಊನಗಣಗಳಿಲ್ಲವಾದ್ದರಿಂದ ಇದು ರಗಳೆಯೆನಿಸುತ್ತದೆ, ಹಾಗಾಗಿ ಅಂತ್ಯಪ್ರಾಸವಿರಬೇಕು. ನೀವು ಆದಿಪ್ರಾಸವನ್ನು ಪಾಲಿಸಿರುವುದರಿಂದ, ಸಮಪಾದಗಳ ಕೊನೆಯ ಗಣವನ್ನು ಊನವಾಗಿಸುವುದೊಳಿತು. ಉಳಿದಂತೆ ಪದ್ಯವು ಚೆನ್ನಾಗಿದೆ.
ಕಾಂಚನಾರಿಗೆ ಮತ್ತು ಹಾದಿರಂಪರಿಗೆ ಧನ್ಯವಾದಗಳು.
ತಣಿವಲ್ಲಿ ದಣಿವಿಲ್ಲದುಜ್ಜುಗವಗೈದವನ
ಇಣಿಕಿಲ್ಲಿ ಇಣಿಕಲ್ಲಿ ಶತ್ರುವಧೆಗೈದವನ
ಮಣ್ಣಿಗಿಟ್ಟೆಲೆ ಕಿರಿಯ ಪೋಗು ಗೈ ರಿಪು ಹನನ
ಅಣ್ಣನಂ ಮೀರಿಸೆಂದಾಮಾತೃವಿಗೆ ನಮನ
ಸರಿಯಾಗಬಹುದೆ?