Dec 262016
 

ಮಾಲಿನೀ ಛಂದಸ್ಸಿನ ಈ ಪಾದಾಂತ್ಯಕ್ಕೆ ಪದ್ಯಪೂರಣವನ್ನು ಮಾಡಿರಿ:

“ವ್ಯಗ್ರನಾದಂ ಕವೀಶಂ”

ಪಂಚಮಾತ್ರಾಚೌಪದಿಯಲ್ಲಿ ಕೂಡಾ ಪೂರಯಿಸಬಹುದಾದರೂ, ಮಾಲಿನಿಗೆ ಮೊದಲ ಅದ್ಯತೆ ನೀಡಬೇಕಾಗಿ ವಿನಂತಿ

  69 Responses to “ಪದ್ಯಸಪ್ತಾಹ ೨೩೫: ಪದ್ಯಪೂರಣ”

 1. वेधोवाहं तनुरुचिभरन्यक्कृताखण्डलाद्रिं प्रेङ्खत्पक्षद्वयरयवशाद्वारि सीमन्तयन्तम् । ईक्षाञ्चक्रे निजभुजयुगीपञ्जरान्तर्निबद्धं सानुक्रोशो निषधनृपतिर्व्यग्रनादं कवीशम् ॥

  • द्रुहिणवहनमाभान्यक्कृताखण्डलाद्रिं छदविधुतिविलासैर्वारि सीमन्तयन्तम् ।
   करगतमनुकम्पासम्भृतो वैरसेनिर्भयविवशमपश्यद्व्यग्रनादं कवीशम् ॥

  • ನಮಸ್ಕಾರ ಶಂಕರ್ :), ನೀವು ಈ ಬಾರಿ ಭಾಗವಹಿಸಿದ್ದು ಬಹಳ ಸಂತೋಷ, ದಯವಿಟ್ಟು ಸಂಸ್ಕೃತದಲ್ಲಿ ಅಳವಡಿಸಿದ ಪೂರಣಗಳನ್ನು ವಿವರಿಸಿ _/\_

   • ವ್ಯಗ್ರನಾದಂ – ವ್ಯಾಕುಲತೆಯಿಂದ ಶಬ್ದಮಾಡುವ ಕವೀಶಂ – ಕವಿ ಎಂದರೆ ಜಲಪಕ್ಷಿ, ಇಲ್ಲಿ ಹಂಸ, ಕವೀಶಂ – ರಾಜಹಂಸ. ನಿಷಧನೃಪತಿಯಾದ ನಲನು (ವೀರಸೇನನ ಮಗ ವೈರಸೇನಿಯು) ತನ್ನ ಭುಜಪಂಜರದಲ್ಲಿ ಬಂಧನಕ್ಕೊಳಗಾದ, ಬ್ರಹ್ಮನ ವಾಹನವಾದ, ದೇಹಕಾಂತಿಯಿಂದ ಬಂಗಾರದ ಬೆಟ್ಟವನ್ನೂ ಧಿಕ್ಕರಿಸುತ್ತಿರುವ, ಭಯಜನಿತವಾದ ವ್ಯಾಕುಲತೆಯಿಂದ ಶಬಮಾಡುತ್ತಿರುವ ಹಂಸಪಕ್ಷಿಯನ್ನು ಕರುಣೆಯಿಂದ ಕಂಡನು

    • _/\_

    • ಬಹಳ ಚೆನ್ನಾಗಿದೆ ಶಂಕರಾವಧಾನಿಗಳೆ :). ನೀವು ಭಾಗವಹಿಸಿದ ಪದ್ಯಸಪ್ತಾಹಕ್ಕೆ ಹೆಚ್ಚಿನ ಸಾರ್ಥಕತೆ. ದಯವಿಟ್ಟು ಹೀಗೆ ತಾಣದಲ್ಲಿ ಪದ್ಯಗಳನ್ನು ಬರೆದು ಮಾರ್ಗದರ್ಶಕರಾಗಬೇಕು _/\_

   • ಇನಿತು ಸಮಯದಿಂ ಹಾ! ಪದ್ಯಮಂ ನೀಡೆ ಸಂದೀ
    ಬನದ ಬರವನೀಗಲ್ ಸಂದ ಸದ್ವರ್ಷದಂತೇ
    ಹನಿಸಿರೆ ಚೆಲುವಾಡಂ ಶಂಕರರ್ ಪ್ರೀತಿಯಿಂದಂ,
    ಎನಬಹುದೆ ,”ನಿಜಂ! ನಿರ್ವ್ಯಗ್ರನಾದಂ ಕವೀಶಂ!” _/_ 🙂
    (ಪದ್ಯವನ್ನು ಬೆಳೆವ್ ಈ ವನದಲ್ಲಿ ಉಂಟಾದ ಬರವನ್ನು ನೀಗಲು ಬಂದ ಒಳ್ಳೆಯ ಮಳೆಯಂತೆ ,ಒಳ್ಳೆಯ ಪದ್ಯವನ್ನು ಪ್ರೀತಿಯಿಂದ ಶಂಕರರು ಇತ್ತಿರಲಾಗಿ,ಹೀಗೆನ್ನಬಹುದೇ-“ನಿರ್ವ್ಯಗ್ರನಾದಂ ಕವೀಶಂ(ಶಂಕರಂ) ಅಂದರೆ ನಿಜಕ್ಕೂ ಈಗ ಕಾರ್ಯಬಾಹುಳ್ಯದಿಂದ ಹೆಚ್ಚಿದ್ದ ಕಳವಳವು ಅವರಿಂದ ದೂರವಾಯಿತೋ!)

    • ಚೆನ್ನಾದ ಪ್ರತಿಕ್ರಿಯಾಪದ್ಯ

    • ಕಾಂಚನಾ,” ಪದ್ಯಮನ್ನೀಯೆ” ಎಂಬುದನ್ನು “ಪದ್ಯಮಂ ನೀಡೆ” ಎಂದು ಸವರಬಹುದಲ್ಲವೆ ?( “ಪದ್ಯಮಂ +ಈಯೆ=ಪದ್ಯಮನೀಯೆ ಆಗುವುದರಿಂದ) ಎರಡನೇ ಪಾದದಲ್ಲಿ ಛಂದಸ್ಸು ತಪ್ಪಿದೆ. “ಸದ್ವರ್ಷದವೋಲೇ” ಎಂಬುದನ್ನು “ಸದ್ವರ್ಷದಂತೇ” ಎಂದು ಸವರಬಹುದೆ ?

    • ಕಾಂಚನ ಅವರೆ, ನಿಮ್ಮ ಪದ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳು

    • ಬಹಳ ಚೆನ್ನಾಗಿದೆ

   • Thanks Soma

 2. ಮೊರೆಯುತೆ ಪರಿದಿರ್ದಾ ಗಂಗೆಯಂ ನೋಡುತಂತೇ
  ಬರೆದನು ಮುದದಿಂದಂ ಕಾವ್ಯಮೊನ್ದಮ್ ಬಳಿಕ್ಕಮ್ /
  ನೆರೆತಿರ್ದರಸಿಕರ್ಗಮ್ ಪೇಳ್ದನೈ ಮೋದದಿಂದಂ
  ಮರುಳು ತನಗೆನುತ್ತುಮ್ ವ್ಯಗ್ರನಾದಂ ಕವೀಶಮ್//
  ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು.

  • ಚೆನ್ನಾಗಿದೆ. ಮೂರನೆ ಸಾಲಿನ ಮೊದಲ ಭಾಗದ ಮಾತ್ರಾ ಜೋಡಣೆ ಸರಿಯಿಲ್ಲ. ತಿದ್ದುವುದು. “ನೆರೆತಿಪರಸಿಕರ್ಗಂ ” ಮಾಡಬಹುದೇ .. ತಿಳಿದವರು ಹೇಳುವುದ.

   • ಧನ್ಯವಾದಗಳು. ಮಾಡಬಹುದೇನೋ. ಶಿಥಿಲದ್ವಿತ್ವ ಎಂದುಕೊಂಡು ಬರೆದದ್ದು.

  • ಮುದದಿಂದಂ, ಮೋದದಿಂ ಎರಡು ಬಾರಿಯಾಯ್ತು ಬೇರೆಯದನ್ನು ಬಳಸಬಹುದು. ಪೂರಣ ಚೆನ್ನಾಗಿದೆ

 3. ನಿವೃತಿಪದಕೆ ಸೋಪಾನಂ ಸುಲಾಲಿತ್ಯ ಛಂದಂ
  ಕವಿಹೃದಯವಿಚಾರಂ ಪಾರಮಾರ್ಥ್ಯಕ್ಕೆ ಸಖ್ಯಂ
  ಅವಿದಿತರಸಜ್ಞಾನಂ ನವ್ಯಕಾವ್ಯಾನು ಸಾರಂ
  ನವಕವಿನುಡಿಯಂ ಕೇಳ್ದುಂ, ವ್ಯಗ್ರನಾದಂ ಕವೀಶಂ ||

  ಛಂದಸ್ಸು ಇತ್ಯಾದಿಗಳಿಂದ ಕೂಡಿದ ನಿಜ ಕಾವ್ಯ ಪಾರಮಾರ್ಥ್ಯವನ್ನೇ ತೋರಿಸುತ್ತದೆ. ಆದರೆ ರಸ ಜ್ನಾನವಿಲ್ಲದ್ದು ನವ್ಯ ರೀತಿ. ಈ ಹೊಸ ಕವಿ ನುಡಿಯನ್ನು ಕೇಳಿ ನಿಜ ಕವೀಶನೊಬ್ಬ ವ್ಯಗ್ರನಾದ.

  • ಕೇಳ್ದುಂ ಎಂದರೆ “ಕೇಳಿಯೂ”ಎಂಬ ಅರ್ಥ ಬರುತ್ತದೆ, ಕೇಳಲ್ ಎನ್ನಬಹುದೇನೋ,

   • ನಾಲ್ಕನೇ ಪಾದದ ಛಂದಸ್ಸು ತಪ್ಪಿದೆ.ಒಂದು ಗುರು ಹೆಚ್ಚಾಗಿದೆ.”ನವಕವಿನುಡಿಯಂ ಕೇಳ್ದುಂ” ಎಂಬುದನ್ನು “ನವಕವಿನುಡಿಯಿಂದಂ” ಎಂದು ಸವರಬಹುದೆನಿಸುತ್ತದೆ.

   • ಇನ್ನೊಂದು ಸಂದೇಹ. “ಕವಿನುಡಿ”- ಅರಿಸಮಾಸವೆನಿಸುವುದಿಲ್ಲವೆ ? “ನವಕವಿಯುಲಿಯಿಂದಂ” ಎಂದು ಸವರಬಹುದೆ?

    • ಮನಸ್ಸನ್ನು ಕವಿಯುವಂಥ ನುಡಿ ಎಂಬರ್ಥದಲ್ಲಿ ಅರಿಸಮಾಸವಲ್ಲ 😉

     • ನಿಮ್ಮಅರ್ಥವು ಈ ಪದ್ಯಕ್ಕೆ ಅನ್ವಯಿಸುವುದಿಲ್ಲ. ಅಥವಾ ಹಾಗಾದರೂ “ನವಕವಿನುಡಿ” ಅರಿಸಮಾಸವಾಗುವುದಲ್ಲಾ. 😛

     • ನನ್ನದೊಂದು ಅಪ್ರಸ್ತುತ ಪ್ರಶ್ನೆ, ಆದರೂ ಉತ್ತರಿಸುವಿರೆಂದು ಭಾವಿಸುತ್ತೇನೆ. ಪದ್ಯಪಾನದಲ್ಲಿ ನಗುವುದು,ಕಣ್ಣು ಹೊಡೆಯುವುದು,ಮುಖವನ್ನು ಗಂಟುಹಾಕಿಕೊಳ್ಳುವುದು ಗೊತ್ತು. ನಾಲಿಗೆ ಹೊರಹಾಕುವುದು ಹೇಗೆ? 🙂

  • ಶ್ರೀನಾಥರೆ, ಚನ್ನಾಗಿದೆ. ಒಂದಂಶ, ಕನ್ನಡಪದ್ಯಗಳಲ್ಲಿ ಯತಿಯನ್ನು ಪಾಲಿಸದಿದ್ದರೂ ನಡೆಯುತ್ತದೆ. ಆದರೆ ನಿಮ್ಮ ಪದ್ಯದಲ್ಲಿ ಗತಿಸುಭಗತೆ ತಪ್ಪಿದೆ, ಮುಂದಿನ ಪದ್ಯಗಳಲ್ಲಿ ಗಮನಿಸುವಿರೆಂದು ಭಾವಿಸುತ್ತೇನೆ

   • ಎಲ್ಲರಿಗೂ ಧನ್ಯವಾದಗಳು. ನಾಲ್ಕನೆಯ ಸಾಲನ್ನು
    ಶಕುಂತಲಾ ಅವರ ಸವರಣೆ ಯಿಂದ ತಿದ್ದಿದ್ದೇನೆ.

    ಸೋಮ ಅವರೇ,
    ಮತ್ತೊಮ್ಮೆ ಓದಿದೆ. ಎಲ್ಲಿ ಗತಿಸುಭಗತೆ ತಪ್ಪಿದೆ ಎಂದು ತಿಳಿಯಲಿಲ್ಲ.
    ಶಕುಂತಲಾ ಅವರ ತಿದ್ದುಪಡಿಯನ್ನು ಒಳಪಡಿಸಿದರೆ
    ನಾಲ್ಕನೇ ಪಾದವೂ ಸರಿ ಹೋಗುತ್ತದೆ. ತಿದ್ದಿದ ಪದ್ಯ ಹೀಗಿದೆ:

    ನಿವೃತಿಪದಕೆ ಸೋಪಾನಂ ಸುಲಾಲಿತ್ಯ ಛಂದಂ
    ಕವಿಹೃದಯವಿಚಾರಂ ಪಾರಮಾರ್ಥ್ಯಕ್ಕೆ ಸಖ್ಯಂ
    ಅವಿದಿತರಸಜ್ಞಾನಂ ನವ್ಯಕಾವ್ಯಾನು ಸಾರಂ
    ನವಕವಿಯುಲಿಯಿಂದಂ, ವ್ಯಗ್ರನಾದಂ ಕವೀಶಂ ||

    ದಯವಿಟ್ಟು ತಿಳಿಸುವುದು. ಫೋನಾಯಿಸಿ ಕಲಿಯಲು ತಯಾರು.

    ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

    • ನಮಸ್ತೇ ಶ್ರೀನಾಥರೆ, ಗತಿಸುಭಗತೆಯ ಅಂಶವನ್ನು ಪದ್ಯಪಾನದಲ್ಲಿಯೇ ಚರ್ಚೆಮಾಡೋಣ, ಉಳಿದವರೂ ಭಾಗವಹಿಸಬಹುದು. ಇಂದು ಸಂಜೆ/ರಾತ್ರಿ comment ಮಾಡುತ್ತೇನೆ 🙂

     • ಶ್ರೀನಾಥರೆ,

      ಇನ್ನೊಮ್ಮೆ ಗಮನಿಸಿದೆ ಗತಿ ಅಡ್ಡಿಯಿಲ್ಲವೆನಿಸಿತು…

      ಈ ಹಿಂದೆ ಮೊದಲನೆ ಪಾದವನ್ನ ಓದೊಕೊಂಡಾಗ…”ನಿವೃತಪದಕೆ ಸೋಪಾ—ನಂ ಸುಲಾಲಿತ್ಯ ಛಂದಂ” ಎಂಬದು ಮನಸ್ಸಿಗೆ ನಾಟಿಬಿಟ್ಟಿತ್ತು…

      ಇನ್ನೊಂದು ಅಂಶ… “ಅವಿದಿತರಸಜ್ಞಾನಂ” ಎಂಬಲ್ಲಿ “ಸ” ದೀರ್ಘವೇ ಆಗುವುದು ಪದ ಸಂಸ್ಕೃತವೇ ಆದದ್ದರಿಂದ ಶಿಥಿಲದ್ವಿತ್ವವಾಗುವುದಿಲ್ಲ… ಗಮನಿಸಿ

     • ಧನ್ಯವಾದಗಳು ಸೋಮ. ಅವಿದಿತ ಎನ್ನುವುದನ್ನು ನಾನು “ತಿಳಿಯದ” ಎಂಬ ಅರ್ಥದಲ್ಲಿ ಬಳಸಿದೆ. ತಿಳಿಯದ ಅಥವಾ ಇಲ್ಲದ ರಸಜ್ಞಾನ ಎಂಬ ಅರ್ಥದಲ್ಲಿ.

 4. ನವನವರವಿವಾರಂ ಬಂದುನಿಂದಾಗಳೆಲ್ಲಂ
  ಹವಣುಮಿರಲು ಪಂಥಂ, ಪದ್ಯಪಾನಾಂಕಣಕ್ಕಂ|
  ಛವಿಯಪದಗಳನ್ನುಂ ಕೂಡಿಸುತ್ತೆಂತೊ ಪಾಂಗಿಂ
  ಕವನರಚಿಸೆ ಕಾರ್ಯ್ಯವ್ಯಗ್ರನಾದಂ* ಕವೀಶಂ||
  *Galvanized into action

 5. ಒಗಟಿನೊಲಿಹ ಸಾಲಂ ಪದ್ಯಪೂರ್ತಕ್ಕಮಿತ್ತರ್!
  ಚಿಗುರದಿಹುದುಮಿಂದುಂ ಸ್ವಲ್ಪಮುಂ ಕಲ್ಪನಾಂಶಂ|
  ಸೊಗಸಿನೊಳಿರುವೊಂದುಂ ಕೀಲಕಪ್ರಾಯಶಬ್ದಂ
  ಸಿಗದಿರದಿರೆ ಚಿಂತಾವ್ಯಗ್ರನಾದಂ ಕವೀಶಂ||

 6. ಚತುರನಿರುತುಮಂದುಂ ಖ್ಯಾತಿಯಂ ಪೊಂದುತೆಂತೋ
  ಮಿತಮಿರದಿಹ ಮಾತ್ರಂ(quantity) ಕೂಡಿಬಂಧಂಥ ದ್ರವ್ಯಂ!
  ಸತತವಿಷಯಭೋಗವ್ಯಗ್ರನಾದಂ ಕವೀಶಂ
  ಪತಿತನಹನುಮಂದಿಂ ವ್ಯರ್ಥದಿಂ ಬೀಗುತುಂ ತಾಂ||

 7. ಓಜಸ್ವಿಯಾದೊಡೇಂ ಕವಿಯು ಮೇಣಿಂದವನ
  ಸೋಜಿಗದಿನಿದ್ದೇನು ಖಂಡಕಾವ್ಯಂ|
  ಪೂಜಕರು-ಪೋಷಕರುಮಿಲ್ಲದಿರೆ ಜಗದೊಳದೊ
  ಭೋಜನವ್ಯಗ್ರನಾದಂ* ಕವೀಶಂ||
  *Starved for food

  • ಅನುಭವದ ಮಾತೇ ?

   • ಖಂಡಿತ ಅಲ್ಲ. ಏಕೆಂದರೆ ನಾನು ಕವಿಯಲ್ಲ. ಏನೋ ಒಂದಿಷ್ಟು ಛಂದೋನಿಯಮಗಳನ್ನು ಕಲಿತಿರುವ ಪದ್ಯಕಾರ ಅಷ್ಟೆ. ಸಂಖ್ಯೆ ೪ ಹಾಗೂ ೫ರಲ್ಲಿರುವ ಪದ್ಯಗಳು ನನ್ನ ಅನುಭವಜನ್ಯವಾದವು.

  • ಊಟಕ್ಚೆಕೂ ಗತಿಯಿಲ್ಲದ ಕವಿ, ಚೆನ್ನಾಗಿದೆ 🙂

 8. ಮಿಗೆ ತಂತ್ರವನು ಗೈದು ಪಡೆಯೆ ಪ್ರಶಸ್ತಿಯ-
  ನ್ನಗರುಚಂದನಗಳಿಂ ಮೇಲವರ್ಗಂ|
  ಪಗೆಯ ಕಬ್ಬಿಗನದಂ ಪಡೆಯೆ ಪ್ರತಿತಂತ್ರದಿಂ
  ಹೊಗೆಯಾಡಿ ವ್ಯಗ್ರನಾದಂ ಕವೀಶಂ||

 9. ಪದಮನಿಡುತುಮಿರ್ದಂ ಸ್ವಪ್ನಲೋಕಂಗಳೊಳ್ ತಾಂ
  ಮುದಿತಸಖಿಯೊಡೊಳ್ಪಿಂ ,ಪದ್ಯಚಾತುರ್ಯವಂತಂ!
  ಉದಯಸಮಯಮೆಂದುಂ,ಪತ್ನಿಯೆನ್ನಲ್ಕೆ ,”ಪಾನಂ”-
  ಹೊದೆದ ಸೆರಗಿನಿಂದಂ, ವ್ಯಗ್ರನಾದಂ ಕವೀಶಂ 🙂

  (ಕನಸು ಕಾಣುತ್ತಲಿದ್ದ ಕವಿಗೆ,ಉದಯಕಾಲದಲ್ಲಿ ಪತ್ನಿಯು ಪಾನವನು ತಂದು ,ಹೊದೆದ ಸೆರಗಿನೊಳಗಿಂದ ನುಡಿದಾಗ,ಕೋಪವುಕ್ಕೇರಿತು)

  • ತುಂಬ ಅತಿಯಾಯ್ತೀ ಕವೀಶ್ವರನ ನಡವಳಿಯು
   ಕೆಂಬೂತವವನನ್ನು ಕುಕ್ಕಲೆಂಬೆಂ|
   ಚೊಂಬ ಕೊಂಡೊಯ್ಯಲಾರದವಗಿತ್ತರೆ (bed)ಪಾನ-
   ನಂಬುಜಾನನೆಯೊಳಿಂತೇಕೊ ಕೋಪಂ!!

  • ಚೆನ್ನಾಗಿದೆ, ಎರಡನೆ ಸಾಲಿನಲ್ಲಿ ಛಂದಸ್ಸನ್ನು ಗಮನಿಸಿರಿ

 10. ಬರೆಯುತುಮತಿಯುಗ್ರರ್ ಭೀಮದುರ್ಯೋಧನರ್ಗಳ್
  ಕರಿಗಳತೆರದಿಂದಲ್ ಕಾದಿದಾ ದೃಶ್ಯಮಂ ತಾನ್
  ಮರೆಯುತುಮಿಹಲೋಕಾಸ್ತಿತ್ವಮಂ ತನ್ನನುಂ ಮೇಣ್
  ಸ್ಫುರಿಸಿರಲಹ ಕೋಪಂ ವ್ಯಗ್ರನಾದಂ ಕವೀಶಂ

  ಭೀಮದುರ್ಯೋಧನರ ಕಾಳಗವನ್ನು ವರ್ಣಿಸುತ್ತಾ, ಭಾವವಶನಾದ ಕವಿಯೊಬ್ಬ ಕುಪಿತನಾದ‌‌ ಎಂದು ಬರೆಯುವ ಪ್ರಯತ್ನ..ದಯವಿಟ್ಟು ತಪ್ಪುಗಳನ್ನು ತಿಳಿಸಿ ಸಹಕರಿಸಿ..

  • ಅವನದು ಯಾವ ಪಾರ್ಟಿ ಎಂದು ಸ್ಪಷ್ಟವಾಗಲಿಲ್ಲ ಅಷ್ಟೆ – ಅವನು ಭೀಮನಮೇಲೆ ಕುಪಿತನಾದನೋ? ದುರ್ಯೋಧನನಮೇಲೆ ಕುಪಿತನಾದನೋ?

   • 🙂 ಎರಡೂ ಪಾತ್ರಗಳ ಕರ್ತೃ ಅವನೇ ಆದ್ದರಿಂದ, ಭೀಮನ ಮಾತುಗಳನ್ನು ಬರೆಯುವಾಗ ದುರ್ಯೋಧನನ ಮೇಲೆ ಹಾಗೂ ದುರ್ಯೋಧನನ ಸಂಭಾಷಣೆಯನ್ನು ಬರೆಯುವಾಗ ಭೀಮನ ಮೇಲೆ ಕುಪಿತನಾದ

  • ಚೆನ್ನಾಗಿದೆ, ನನ್ನ ಪದ್ಯವೂ ಮಹಾಕಾವ್ಯಕ್ಕೇ ಕೈ ಹಾಕಿದೆ 🙂

 11. ಸರಳ ಕೊರಳ ಛೇದಂ, ಕೊಂಜೆವೆಣ್ಗೈದ ಶೋಕಂ,
  ಕರುಳೆ ಕಲಕುವಂದಂ ಸಂದ ದೃಶ್ಯಂಗಳೆಂತೋ
  ಪರಿಪರಿವಿಧದಿಂದಂ ಕಾಂಬರಯ್ ಮಾನಿಸರ್ಕಳ್,
  ಕರುಣೆಯುಲಿಯ ಸಾಲಿಂ ವ್ಯಗ್ರನಾದಂ ಕವೀಶಂ

  ಮನಸ್ಸು ಕಲುಕುವ ಎಷ್ಟೋ ಪ್ರಸಂಗಗಳನ್ನು ಸಾಧಾರಣ ಮನುಷ್ಯರು ಕಾಣುವರು, ಆದರೆ ಕರುಣೆಯ ಮಾತುಗಳ ಸಾಲಿನಿಂದ ಕವೀಶನು (ವಾಲ್ಮೀಕಿಯು) ವ್ಯಗ್ರನಾದನು

 12. ಕವಿತಾನು ಕನಸಿನಾ ಲೋಕದಲಿ ತೇಲುತಲಿ
  ಸವಿವ ಕಾವ್ಯದ ರಸವನನುದಿನವು ತಾಂ
  ಬವಣೆತಾಂಡವಿಸಲ್ಕೆ ಬಡತನವು ಭರದಿಂದೆ
  ಕವಿಯಲು, ವ್ಯಗ್ರನಾದಂ ಕವೀಶಂ

 13. ಸ್ವರಚಿತರಸಕಾವ್ಯಂ ಲೋಕವಿಖ್ಯಾತಮಾಗಲ್,
  ವಿರಮಿಸದೆಯೆ ಕಾರ್ಯಂಗೈದು ದುಡ್ಡಾಗಿ ವೆಚ್ಚಂ,|
  ದೊರಕದೆ ಜಯಲಾಭಂ,ನಷ್ಟದಿಂದಾಗೆ ಕಷ್ಟಂ,
  ಜರೆಯೆ ವಿಧಿಗೆ ನೋವಿಂ, ವ್ಯಗ್ರನಾದಂ ಕವೀಶಂ ||

 14. ಉರಗ ಶಶಿ ಗಂಗೆಯೊಡಲಂಕಾರಗೊಳುತುಂ, ಡ-
  ಮರುಗದ ಬಡಿತದೊಳ್ ಶಬ್ದಾರ್ಥಮಂ
  ಸ್ಪುರಿಸಿ, ಸುಕುಮಾರಬಂಧದೆ ಬಾಳ್ಗೆ ರಾಗಮಂ
  ಭರಿಸಲುಂ ವ್ಯಗ್ರನಾದಂ ಕವೀಶಂ !!

  ಬಾಳ ಕವಿತೆಯಲ್ಲಿ “ಛಂದೋಬದ್ಧತೆ”ತರಲು ವ್ಯಗ್ರಗೊಂಡನೇ ಕವಿ – “ಈಶ” !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)