Feb 132017
 

  27 Responses to “ಪದ್ಯಸಪ್ತಾಹ ೨೪೨: ಚಿತ್ರಕ್ಕೆ ಪದ್ಯ”

  1. ಮೊಗಂದಳೆವ ರೂಪದಿಂ ಮೊಗದವಾಡಗಳಾಗಿರಲ್
    ಜಗಜ್ಜಗಿಪ ಲಾಸ್ಯದಿಂದಮಿತ ಶೋಕವಿಷಾದಕಂ
    ತಗುಳ್ಚಿದೊಡಮಂತರಂಗಮದರಿಂ ಬಗೆಗೊಳ್ವುದೇಂ
    ಜಗಕ್ಕುಮಿದೆ ಸಾಜಮೈ ಪ್ರಕಟರೂಪಿನಸತ್ಯದೊಲ್

    • ಚೆನ್ನಾಗಿದೆ ರಾಮ್.. ಆದರೆ ಇದಾವ ಛಂದಸ್ಸು.. ಪೃಥ್ವಿಯ ಹಾಗಿದೆ..

      • ಪೃಥ್ವಿಯ ಒಂದು ಗುರು ಲಘುವಾಗಿದೆ.ಪೃಥ್ವಿ ಎಂದೇ ಬರೆದದ್ದು. ಮುಂದೆ ಸರಿಮಾಡುತ್ತೇನೆ.

    • ಈಗ ಪೃಥ್ವಿಛಂದಸ್ಸಿನ ಲಕ್ಷಣಕ್ಕೆ ಸರಿಹೊಂದಿರಬೇಕು:

      ಮೊಗಂದಳೆವ ರೂಪಮೇ ಕೃತಕರೂಪಮಂತಾಗಿರಲ್
      ಜಗಜ್ಜಗಿಪ ಲಾಸ್ಯದಿಂದಮಿತಶೋಕ ಸಾರ್ವನ್ನೆಗಂ
      ತಗುಳ್ಚಿದೊಡಮಂತರಂಗಮದರಿಂ ಸಮಂಗೊಳ್ವುದೇಂ
      ಜಗಕ್ಕುಮಿದೆ ಸಾಜಮೈ ಪ್ರಕಟರೂಪಕಾಪಟ್ಯದೊಲ್

      • ಮೂರನೆಯ ಸಾಲನ್ನು ಸ್ವಲ್ಪ ಸರಿ ಮಾಡಬೇಕೆನ್ನಿಸುತ್ತದೆ…

      • ಚೆನ್ನಾಗಿದೆ. ಮೊದಲು ಇದು ಜಲೋದ್ಧತ ಅಂದುಕೊಂಡಿದ್ದೆ 🙂 ಅಮಿತಶೋಕ – ಅಂ ಇಲ್ಲದಾಗಿದೆ. ಅಮಿತಶೋಕಮೈವನ್ನೆಗಂ ಎಂದೇನಾದರೂ ಮಾಡಬಹುದು.

  2. ನಗೆವೆಣ್ಣೆs ನಿನ್ನsಯs ಮೊಗಕೆಮ್ಮs ಪರಿಚsಯs
    ಸೊಗಮಾಗಲ್ಕೇಕೌ ಮೊಗವಾಡs – ಮೊಗದೋರಿs
    ನಗೆಬೀರಲ್ಕದುವೇ ಹದನಕ್ಕುಂ

    • ಪೃಥ್ವೀಪ್ರಭುತ್ವಂ ತ್ರಿಪದೀವಿಲಾಸಮುಂ
      ಸಾರ್ಥಕ್ಯವೊಂದಿರ್ಪುವು ರಾಮಚಂದ್ರರೊಳ್ ! 🙂

  3. ಬಗೆಬಗೆಯ ಮೊಗವಾಡಗಳ ನೀ
    ಮೊಗದಿ ಧರಿಸುತೆ ನಟಿಸೆನುತೆ ಬಿದಿ
    ಜಗವೆನುವ ನಾಟಕದ ರಂಗದೊಳೆಮ್ಮ ತಳ್ಳಿಹುದೇ?
    ಸೊಗವ ನೀಡುತಲೊಮ್ಮೆ ನಗಿಸುತೆ
    ಮೊಗವ ತಾಮುದುಡಿಸುತೆ ಮರುಚಣ
    ಸಿಗದ ಜಾಗದಿ ಕುಳಿತು ನಮ್ಮನು ನೋಡಿ ನಗುತಿಹುದೇ?

  4. ಗುಣಿತಾಕ್ಷರಿ /
    ವದನವಾರಿಧಿಯಲ್ಲಿ ಬಹುವಿಧ
    ದೆದೆಯ ವೀಪ್ಸೆಯ ಫಲವದೆನ್ನುತೆ
    ಮುದದ, ಕೋಪದ, ಬೆತೆಯ ವೀಚಿಗಳಿಂತು ತೋರುವುವು /
    ಛದದ ವೇಷಕೆ ವೈದ್ಯನಾ ಶ್ರೀ
    ಮದನ ರಿಪುವಲಿ ಮಂಗಳೆಯವೋ
    ಲದುರದಾ ಮನವೌಷಧವು ವಂದ್ಯನೆಲೊ ವಸ್ತಾರಂ//

    ಮುಖದಲ್ಲಿ ಬಯಕೆಗಳ ಫಲದಿಂದಾಗಿ ಭಾವನೆಯ ಅಲೆಗಳು ಮೂಡುತ್ತವೆ. ಅವನ್ನು ಸತತಾಧ್ಯಾನದಿಂದ ನಿಗ್ರಹಿಸುವವನು ವಂದ್ಯನು.

    ಗುಣಿತಾಕ್ಷರದಲ್ಲಿ ೩ನೇ ಸಾಲಿನ ಕೊನೆಯ ಅಕ್ಷರವನ್ನು ‘ವೂ’ ಎಂದು ಪರಿಗಣಿಸಿದ್ದೇನೆ. ಉಳಿದಂತೆ ಸಂಸ್ಕೃತ ವರ್ಣಮಾಲೆಯಂತೆ ನಿರ್ವಹಿಸಿದ್ದೇನೆ.
    ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು.

  5. ಪರಿಪರಿಯೊಳ್ ಮೊಗವಾಡಂ
    ಧರಿಸಿರ್ದೊಡನುಂ ಸುಖಾಂತಕೆಂದು ಪ್ರತಿದಿನಂ,
    ಧರೆಗುರುಳುತ್ತಿರೆ ಕಳಚರೆ?
    ಪುರುಡಿಂ ಪೊಂದ್ವರೆ ?ನಿಜಾಸ್ಯಮಂ ತೊರೆಯುತ್ತುಂ!
    (ಧರೆಗುರುಳುವಾಗ(ನಿದ್ರಿಸುವಾಗ) ಇದನ್ನೆಂದಾದರೂ ಧರಿಸಲಾಗುವದೇ,ದಿನವಿಡೀ ಧರಿಸಿರುವದಾದರೂ!
    ಇಲ್ಲಿ ಅವಳು ದಿನಾಂತ್ಯದಲ್ಲಿ ತನ್ನ ಮೊಗವಾಡವನ್ನೂ ಕಳಚಿಡುತ್ತಿರುವಳೇ!)

  6. ಮೊಗಹೊತ್ತಗೆಯ ಯುಗಮದಕೆ
    ಮೊಗವಾಡ ಹುಡುಕುದೆ ಹುಡುಗಿ ಮೊಗದಿರುಗಿಂತುಂ ।
    ಬಗೆಯಾಕಾರದೊಳೆ ಮೊಗಂ-
    ಬುಗುತಿರೆ ಮೈದಳೆದುದೇo ಗಡಾ ಮಮಕಾರಂ ।।

    ಮೊಗ ಹೊತ್ತಗೆ = ಫೇಸ್ ಬುಕ್
    ಮೊಗದಿರುಗು = ವಿಮುಖವಾಗು, ಮೊಗಂಬುಗು = ಇದಿರಾಗು

  7. How many of them will you make? As you mature you will discard the earlier ones as alien.
    ಎಷ್ಟೆಂದು ಪಡಿಯಚ್ಚ ಮಾಡಿ ಪೇರಿಸುವೆಯೌ
    ಇಷ್ಟೆಂದು ಮಿತಿಯುಂಟೆ ತವಭಾವಕಂ|
    ಸೃಷ್ಟಿಯೌನ್ನತ್ಯಮಂ ಸಾಧಿಪಾಗೆಲ್ಲ ನೀ-
    ನೆಷ್ಟನ್ನೊ (ಸ್ವಂತ)ನಿಜಮಲ್ಲಮೆಂದೊಗೆಯುವೆ||

  8. ನೋಡಲ್ ಕಾಣದ ಕಣ್ಣಿಂ
    ದೋಡುವ ಮನಮಿಂತು ಚಿತ್ರಿಸಲ್ಕಾನನಮಂ
    ಮೂಡಲ್ ಬಗೆಬಗೆಯಿಂ ಮೊಗ
    ವಾಡದೊಲವಳಂತರಾಳಮಂ ತೋರ್ದಪುದೇಂ

  9. ಎಂತಿರ್ದೊಡೇನೌ ಮೊಗವಾಡದೊಳ್ಪು ಲೋ-
    ಕಾಂತರ್ಯಮಂ ಕಾಂಬೊಡೆ ಕಂಗಳಿರ್ಪುದೇಂ?!
    ಕಾಂತೇ ಭವದ್ದೃಷ್ಟಿಯನೊಂದು ತಿದ್ದಿ ಸ-
    ಲ್ವಂತಾಗೆ ಚೆಲ್ವೆಂಬೆನಿಳಾಂತಜೀವ್ಯದೊಳ್

    ಹೇಗಿದ್ದರೇನು ಮೊಗವಾಡದ ಚೆಂದ?! ಲೋಕಾಂತರ್ಯವನ್ನು ಕಾಣುವ ಕಣ್ಣು ಅವಕ್ಕಿದೆಯೇ? ನಿನ್ನ ದೃಷ್ಟಿಯನ್ನಿಷ್ಟು ತಿದ್ದಿಕೊಂಡರೆ ಸಾಕು, ಅದು ಈ ಜೀವನಕ್ಕೆ ಸಲ್ಲುವುದು.

    • ಎಂತಿರ್ದೊಡಂತೀಕ್ಷಣಮನ್ನು ತೋರಿರಲ್ (ಈಕ್ಷಣ=sight)
      ಕೀಂತಿರ್ಪ ನೇತ್ರಂಗಳ ಮೇಣಿನಿಂದವಳ್|
      ಅಂತಿಂತು ಬೀಳ್ವಳ್ ಸಿ.ಸಿ.ಟೀ.ವಿ.ಗಂ ಗಡಾ
      “ಇಂತಾಯ್ತೆ ಬಾಳೆನ್ನ”ದೆನುತ್ತೆ ರೋದಿಪಳ್!!

  10. ಬಳಿಯಿರ್ಪರ್ ಮೊಗವಾಡಂ-
    ಗಳೊಳಡಗಿರ್ಪರ್ ಗಡಾ ಕಪಟ ಕಾಮುಕರೌ ।
    ತಳೆದವರವತಾರದ ಪೊರೆ-
    ಕಳಚೆ ತರಳೆ ತಿರುಗಿನಿಂದ ನೀಂ “ನಿರ್ಭಯ”ಳೇo ?!

  11. Some masks have their eyes closed. If she dons them, she can’t see through their eyes. She has to see through their mouths or nostrils 😉
    ಸಂತುಲಿಲಮಧ್ಯಾವರ್ತಗತಿ||
    ಕೆಲವು ತಾಮಿಹವು ಕಣ್ಣ ಮುಚ್ಚಿಹವು; ಬಿಚ್ಚಿ ಕಣ್ಣನಿನ್ನುಂ(ಕೆಲವು);
    ನಲವಿನಿಂದೆ ತೊಡುತೆಲ್ಲವನ್ನು ನೀನೆಳಸಲೀಕ್ಷಿಸಲ್ ಕೇಳ್|
    ಒಲಿದುಬರುವುವೌ ಕಣ್ಣ ಬಿಟ್ಟಿಹವು, ಕಣ್ಣ ಮುಚ್ಚಿರುವರಾ
    ಉಲಿವ ಬಾಯೊಳೋ ಉಸಿರ ಮೂಗೊಳೋ ಜಗವ ನೀನು ನೋಡೌ||

  12. Notwithstanding that you don the same feeling on your face on covering it with a given mask, people will still remark that you have ‘donned faces’. So, for compatibility sake, match your body language with the mask; do not match your face with it.
    ಸಂತುಲಿತದ್ರುತಾವರ್ತಗತಿ||
    ನೀ ತೊಟ್ಟಿರುವಂಥಾಚ್ಛದ*ಭಾವಂ ತೆವೆ ನಿನ್ನಾ
    ಚೌತೀಂದುವಿನಾಸ್ಯಾಶ್ರಯಮಂ ಪೊಂದಿರಲೇನೌ|
    “ಏತಕ್ಕಿವಳಿಂತುಂ ತಳೆದಿರ್ಪಳ್ ಮುಖವಾಡಂ”
    ಎಂತೆಂಬರು; ಮೈಮಾಟವ ನೀಂ ಸಾಧಿಸುಮಂತುಂ (ಅಂತುಂ>compatible with the mask=ಆಚ್ಛದ*||

  13. ಘನಸಾಗರಚಿದ್ರೂಪಂ
    ಯಥಾ ವೀಚ್ಯಾ ಪ್ರಸಾರ್ಯತೇ
    ಹೃದಯಾಂತರಭಾವೋಪಿ
    ತಥಾಸ್ಯೇನ ಖಲು ಪ್ರಿಯೇ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)