May 152017
 

  43 Responses to “ಪದ್ಯಸಪ್ತಾಹ ೨೫೫: ಚಿತ್ರಕ್ಕೆ ಪದ್ಯ”

  1. ರೆಪ್ಪೆ ಕಣ್ಣನು ಪೊರೆಯುವಂದದಿ
    ಸಿಪ್ಪೆ ಹಣ್ಣನು ಪೊರೆಯುವಂದದಿ
    ಚಪ್ಪಲಿಯು ಪದಯುಗ್ಮವನುತಾ ಪೊರೆಯುವಂದದಲಿ
    ಒಪ್ಪವಾಗಿಹ ನಡೆಯ ಕಲಿಸುತ
    ತುಪ್ಪವಾಗಿಹೆ ಬದುಕ ದೀಪಕೆ
    ಅಪ್ಪನೇ ನೀ ನೆನ್ನ ಬಾಳಿನ ಕಲ್ಪತರುವಹುದೈ

    • ರೆಪ್ಪೆಯುಂ ಪೊರೆವಂದದಕ್ಷಿಯ
      ಸಿಪ್ಪೆಯುಂ ಫಲವನ್ನು ಕಾವೊಲ್ (ಕಾಯ್ವೊಲ್)
      ಚಪ್ಪಲಿಯುಮಂಘ್ರಿಯನು ಕಾಪಿಡುವಂದದೊಳು ಪಿತನೆ|
      ಒಪ್ಪದಾಚರವನ್ನುಮರುಹಿ
      ತುಪ್ಪವಾಗುತೆ ಬಾಳ ದೀಪಕೆ
      ಅಪ್ಪ ನೀ ಕಲ್ಪತರುವಪ್ಪೆಯೊ ಎನ್ನ ಪಾಲಿಂಗೆ||
      • ಕಣ್ಣು~ಅಕ್ಷಿ, ಪದ~ಅಂಘ್ರಿ, ನಡೆ~ಆಚರ, ಕಲಿಸುತ~ಅರುಹಿ – ಹೀಗೆ ಸ್ವರಾದಿಯಾದ ಶಬ್ದಗಳನ್ನು ಬಳಸಿ ಸಂಧಿಯಾಗಿಸುವ ಮೂಲಕ ಭಾಷೆಯನ್ನು ಹಳತಾಗಿಸಬಹುದು; ರೆಪ್ಪೆ/ಸಿಪ್ಪೆ ಇತ್ಯಾದಿ ಪದಗಳ ಪ್ರತ್ಯಯರಾಹಿತ್ಯವನ್ನೂ ನಿವಾರಿಸಬಹುದು.
      • ’ಪೊರೆಯುವಂದದೆ’ ಎಂದು ಏಕತಾನವಾಗಿಸದೆ ವಿವಿಧವಾಗಿ ಹೇಳುವುದೊಳಿತು.
      • ಬದುಕ=ಸರ್ವಲಘು. ಸುಲಭವಾದ ಪರ್ಯಾಯಪದವಿರುವಾಗ ಬಳಸಿಕೊಳ್ಳಿ – ಬಾಳ
      • ಬದುಕ (೫ ಪಾದ), ಬಾಳ (೬ ಪಾದ) – ಪುನರಾವೃತ್ತಿ. ಬಾಳ/ಪಾಲಿಂಗೆ

      • ತಿದ್ದುಪಡಿಗ,ಸಲಹೆಗಳಿಗೆ ಅನಂತಾನಂತ(:-)) ಧನ್ಯವಾದಗಳು ಸರ್_/_.ನಾಲ್ಕನೆಯ ಸಾಲಿನಲ್ಲಿ ಕೊನೆಗೊಂದು ಮಾತ್ರೆಯನ್ನು ಸೇರಿಸಿದ್ದೇನೆ ಹಾಗೂ ಕೊನೆಯ ಸಾಲಿನ ಮೊದಲಲ್ಲೊಂದು ಸಂಧಿ ಮಾಡಿದ್ದೇನೆ. ನಿಮ್ಮೆಲ್ಲರ ನಿರಂತರ ಪ್ರೋತ್ಸಾಹಕ್ಕೆ ನಾನು ಆಭಾರಿ_/_

        ರೆಪ್ಪೆಯುಂ ಪೊರೆವಂದದಕ್ಷಿಯ
        ಸಿಪ್ಪೆಯುಂ ಫಲವನ್ನು ಕಾಯ್ವೊಲ್
        ಚಪ್ಪಲಿಯುಮಂಘ್ರಿಯನು ಕಾಪಿಡುವಂದದೊಳು ಪಿತನೆ|
        ಒಪ್ಪದಾಚರವನ್ನುಮರುಹುತೆ
        ತುಪ್ಪವಾಗುತೆ ಬಾಳ ದೀಪ-
        -ಕ್ಕಪ್ಪ ನೀ ಕಲ್ಪತರುವಪ್ಪೆಯೊ ಎನ್ನ ಪಾಲಿಂಗೆ||

        • ಎರಡು ತಿದ್ದುಗೆಗೆಳೂ ಚೆನ್ನಿವೆ. ಅಭಿನಂದನೆಗಳು. ನನ್ನಮಟ್ಟಿನ ತಿದ್ದುಗೆ ಇದು. ಕೊಪ್ಪಲತೋಟ, ನೀಲಕಂಠ ಇತ್ಯಾದರ ಸಲಹೆ/ಪದ್ಯಗಳನ್ನು ಗಮನಿಸಿಕೊಂಡರೆ ಹೆಚ್ಚಿನೆ ಬೋಧೆಯು ದೊರೆಯುತ್ತದೆ.

    • Original padya of Ananta, is better, while it is in naDu-gannaDa form, which is suitable for chaupadi, and ShaTpadis etc. Prasaad sir went for making it in haLagannaDa but with some unaccepted forms like ರೆಪ್ಪೆಯುಂ ಪೊರೆವಂದದಕ್ಷಿಯ, ಫಲವನ್ನು, ಒಪ್ಪದಾಚರವನ್ನುಮರುಹಿ. _/\_
      (kaalu keredu / kedari nanna hesarannu ettiddakke hELabeekaayitu :))

    • It is better to avoid repeating the poreyuvandadi, and visandhi in the 5th line, as Prasad sir pointed out.

      • ಈ ಪದ್ಯ ನಾನು ಪದ್ಯಪಾನದಲ್ಲಿ ಬರೆಯಲಾರಂಭಿಸಿದ ದಿನಗಳಲ್ಲಿ ಬರೆದದ್ದು.ಈ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ ಎನಿಸಿದ್ದರಿಂದ ಹಾಗೇ ಪೋಸ್ಟ್ ಮಾಡಿದ್ದೆ. ಈ ಕೆಳಗಿನ ತಿದ್ದಿದ ಪದ್ಯದಲ್ಲಿ ಪೊರೆಯುವಂದದಿ ಎನ್ನುವ ಪದದ frequency ಕಡಿಮೆ ಮಾಡಿದ್ದೇನಾದರೂ ಕಾಯ್ವೊಲು,ಉಳಿಸುವಾ(ಉಳಿಸುವ+ಆ) ತೆರದಿಂ- ಈ ಶಬ್ದಗಳೂ ಅದೇ ಅರ್ಥವನ್ನು ಸೂಚಿಸುತ್ತವೆ.ಪುನರುಕ್ತಿಯು ಪದಗಳ ಮಟ್ಟದಿಂದ ಅರ್ಥದ ಮಟ್ಟಕ್ಕಿಳಿದಂತಾಯಿತು.

        ರೆಪ್ಪೆ ಕಣ್ಣನು ಪೊರೆಯುವಂದದಿ
        ಸಿಪ್ಪೆ ಹಣ್ಣಿನ ಸಿಹಿಯ ಕಾಯ್ವೊಲು
        ಚಪ್ಪಲಿಯು ಸವೆಯುತಲಿ ಪಾದವನುಳಿಸುವಾ ತೆರದಿಂ
        ಒಪ್ಪದಾಚರವನ್ನು ಕಲಿಸುತೆ
        ತುಪ್ಪವಾಗಿಹೆ ಬದುಕ ದೀಪ-
        -ಕ್ಕಪ್ಪನೇ ನೀನೆನ್ನ ಬಾಳಿನ ಕಲ್ಪತರುವಹುದಯ್

        ಕಾಯ್ವೊಲು/ಕಾವೊಲು ಕೂಡಾ ಅಸಾಧುವೆನಿಸುತ್ತದಲ್ಲವೆ? ಕಾಯ್ವವೊಲ್/ಕಾವವೊಲ್ ಎಂದರೆ ಛಂದಸ್ಸು ಕೆಡುತ್ತದಾದ್ದರಿಂದ ಹಾಗೇ ಉಳಿಸಿದ್ದೇನೆ. ಧನ್ಯವಾದಗಳು _/_

  2. ಬೀಗಿ ನೀನುಂ ಬೀಗಿಸೆನನುಂ
    ಮೈಗಮಾಗುವ ವೋಲು ಶಿಕ್ಷೆಯು
    ಜಾಗರೂಕದೆ ಎಸೆಯುತಾಡೈ ಪಿತನೆ ಬೇಡೆನ್ನೆ (ಬೇಡ ಎನ್ನೆ)|
    ಬೈಗ ಸೂರ್ಯನು ಬಿದ್ದೊಡೀಗಳ್
    ಮೇಗಳಕ್ಕೇರುವನು ಜಾವದೆ
    ಆಗದೇನೋ ಎನಗೆ ಏಳಲು ಜಾರಿಸಿರೆ ಕೈ ನೀಂ!!

  3. (ತಂದೆಯಿಂ ಕಂದಗಂ ಸಂದೇಶಂ)

    ಯೌವನದೊಳಿದ್ದ ಹಯಗಂ
    ಕಾವಿಯುಡುಗೆಯೊಳ್ ಪಯೋಧಿಯಂ ಪೊಕ್ಕಿದನುಂ |
    ಕೋವಿದನಾಗೈ ಕಂದಂ
    ದೇವತೆಯಾಗು ಸಕಲಾರ್ತ ಜನರಿಗೆ ರವಿಯೊಲ್ ||

    (ಸೂರ್ಯನು ತನ್ನ ಯೌವನದಲ್ಲಿ ಭೂಮಿಯನ್ನು ಪೋಷಿಸಿ ನಂತರ ಸಂನ್ಯಾಸಾಶ್ರಮ ಪ್ರವೇಶಿಸಿದ. ನೀನು ವಿದ್ವಾಂಸನಾಗಿ, ನೊಂದವರ ಪಾಲಿಗೆ ಸೂರ್ಯದೇವನಂತೆ ಬೆಳಕಾಗಿ ಅವನ ಸ್ಥಾನ ತುಂಬುವಂತಾಗಲಿ)

    • Good idea. Few corrections. yauvanadoLirda, hayaNgam (why use rare words like this, when soorya is there?), pokkirpam, kandaa (sambOdhane), janaringam.

      • Thanks for your notable suggestions sir
        Here is the editted verse

        ಯೌವನದೊಳಿರ್ದ ಸೂರ್ಯಂ
        ಕಾವಿಯುಡುಗೆಯೊಳ್ ಪಯೋಧಿಯಂ ಪೊಕ್ಕಿರ್ಪಂ |
        ಕೋವಿದನಾಗೈ ಕಂದಾ !
        ದೇವತೆಯಾಗು ಸಕಲಾರ್ತಿ ಜನರಿಂಗಂ ನೀಂ ||

        please suggest the correctness.

  4. ಪಗಲೊಳ್ ನಿದ್ರೆಗೆ ಸಂದು ಸಂಜೆ ಮುಸುಕಲ್ ಮೆಯ್ಬಿಚ್ಚಿ ಕಣ್ಬಿಟ್ಟು ಕಾ-
    ಲೊಗೆದೇಳ್ವಂ ಗಡಮೀ ಇರುಳ್ವಸುಳೆ ತಾಂ, ಬಾನಿಂದಮಾ ಭಾಸ್ಕರಂ
    ತೆಗೆವಾಗಳ್ ಸಲೆಯಿಂತು ಕಾಲಪುರುಷಂ ತನ್ನೀ ಶಿಶುಕ್ರೀಡೆಗಂ
    ಬಗೆಗೊಟ್ಟಂ, ಚೆಲುವಾಯ್ತು ಪೊಂಗದಿರಿದಿರ್ಗಂ ಕರ್ಪಿನೀ ಖೇಲನಂ

  5. ಕರಮೆತ್ತಿ ತೋರಿರೆ ಜಗಕೆ
    ನರ ತನ್ನೆದೆಯ ಶಿಶುಭಾವವಂ ಭರವಸೆಯಿಂ ।
    ಅರುಣಮಯ ರೂಪದೊಳ್ ರವಿ
    ಶಿರಮೆತ್ತಿಣುಕಿರ್ಪ ಬಳಿಯೆ ತಾಂ ಪರವಶದಿಂ !!

  6. ಸಲುವೆಂ ತಂದೆಗದೆಂದು ಬಾಲನಹಹಾ ಗೈದಿರ್ಪ ಕೇಕಾರವಂ,
    ತಲುಪುತ್ತುಂ ನಿಜಕಾಂತೆಯಂ ಪಸರಿದಾ ಸೂರ್ಯಾತ್ಮತಸ್ತೇಜಮುಂ,
    ಬಲದಗ್ರೇಸರ ಸಾಗರಂ ಬುವಿಯನುಂ ತಾಂ ಸಾರ್ಚಿ ಬಂದಿರ್ಪೊಡಂ,
    ಕೆಲದೊಳ್ ತೋರ್ಪುದು ಚಿತ್ರಮಲ್ತೆ ದಿಟವುಂ ಸಂಭಾವ್ಯಮಂ ಪ್ರೀತಿಯಾ!!

    • enartha?

      • ಈ ಚಿತ್ರದಲ್ಲಿ ಎಲ್ಲವೂ ಪ್ರೀತಿಯು ಉಂಟುಮಾಡಬಹುದಾದ ಕೃತ್ಯವನ್ನೇ ತೋರುವಂತಿದೆ—ತಾನೆಂದಿದ್ದರೂ ತಂದೆಯನ್ನೇ ಸೇರುವೆನೆಂದು ಬಾಲನಿಗಾದ ಸ್ಂತೋಷ,ಸಂಧ್ಯೆಯನ್ನು ಕಾಣುತ್ತಲೇ ಸೂರ್ಯನಿಂದ ಉಕ್ಕಿದ ಕಾಂತಿ, ಸಾಗರನೂ ಕೂಡ ಭೂಮಿಯನ್ನೇ ಬಳಸಿಕೊಂಡು ಬರುವ ರೀತಿ.
        (ತಂದೆ-ಮಗ,ಸೂರ್ಯ-ಸಂಧ್ಯೆ,ಸಾಗರ-ಭೂಮಿ,–ಇವುಗಳಲ್ಲಿ ಪ್ರೀತಿಯುಕ್ಕುತ್ತಿದೆ)
        (ಪ್ರ್ರೀತಿಭೂಯಿಷ್ಠವಾದ ಚಿತ್ರಣವಿದು)

  7. ಇರುಳಿನಲಿ ಶಶಿ ಬರುವ ಸಮಯದೊಳ್ ,ಸಾಗರವು
    ಭರದ ತೆರೆಗಳನು ಮೇಲೆತ್ತಿ ತೋರಿಹುದು
    ಪಿರಿದಾದ ಕಾರ್ಯವಂ ತಾತೊರೆದು ಪಿತನು ತಾಂ
    ಅರರೆ ! ಚೆಲುವಿನ ಕಂದಗೆತ್ತಿಯಾಡಿಸಿಹ

    ( ಪಂಚಮಾತ್ರಾ ಚಾಪದಿಯ ಸಮಪಾದಗಳಲ್ಲಿ 5+5+5+3 ಮಾತ್ರೆಗಳು ಬರಬಹುದೇ?)

    • ಆಹಾ, ತುಂಬ ಸೊಗಸಾದ ಕಲ್ಪನೆ 🙂 ತಂದೆ ಸಾಗರ, ಶಿಶು ಶಶಿ 🙂
      (ಬರಬಹುದು)

  8. ಇಂಬುಗೊಂಡಿಂತಿರ್ಪ ವಂಶವೃಕ್ಷದನಿಲವು
    ನಂಬುಗೆಯದಂಬಿನಲಿ ಹಾಯಿ ಹುಟ್ಟು ।
    ಬಿಂಬಮದೆ ಬಿಂಬಗೊಂಡಿರ್ಪ ಬೆಳಕಿನ ಕಂಬ-
    ಮಂಬರಕೆ ಕೆಂಪೆರೆದ ಹಾಸ ಗುಟ್ಟು ।।

  9. ಸ್ತಂಭೀಭೂತಂ ದಿನೇಶಂ ನಯನಕೆಸೆಯಲೀ ಪುತ್ರವಾತ್ಸಲ್ಯಮೀಗಳ್
    ಕುಂಭಪ್ರೋದ್ಭೂತಸಚ್ಛಿಷ್ಯನರಿಪುಮಣಿಯಂ ,ಸೂನುವಂ ಧ್ಯಾನಿಸುತ್ತ/
    ಶ್ರ್ವoಭೋರಾಶಿಪ್ರವಷರ್oಗರೆದನೆ ಬುವಿಯೊಳ್ ದುಃಖತಪ್ತಾಗ್ನಿಯಿಂ ಮೇಣ್
    ಶಂಭೋ!ಎನ್ನುತ್ತುಮಲ್ಲೇಹೃದಯಮೊಡೆದಿರಲ್ ರಕ್ತದೊಳ್ ಪೂತುವೋದo//
    ಕುಂಭಪ್ರೋದ್ಭೂತ-ದ್ರೋಣ , ಆತನ ಸಚ್ಛಿಷ್ಯ -ಅರ್ಜುನ , ಅವನ ಕಡುವೈರಿ-ಕರ್ಣ.

    ತಂದೆ ಮಗನನ್ನು ಎತ್ತಿ ಆಡಿಸುತ್ತಿರುವ ದೃಶ್ಯವನ್ನು ನೋಡಿ ರವಿಗೆ ಕರ್ಣನ ನೆನಪಾಯಿತು. ಆ ನೆನಪಿನಲ್ಲೇ ಒಂದು ಸಾಗರವಾಗುವಷ್ಟು ಕಣ್ಣೀರನ್ನು ಹರಿಸಿ ಶಿವನೇ ! ಎನ್ನುತ್ತಾ ಹೃದಯವೊಡೆದು ಅದೇ ರಕ್ತದಲ್ಲಿ ಹೂತುಹೋಗುತ್ತಿದ್ದಾನೆ.

  10. ಬೆಳಗೈ ಭೂಮಿಯನೆಲ್ಲಮಂ ದಿನಪನೊಲ್ ಸುಜ್ಞಾನಮಂ ನೀಡುತುಂ,
    ಬೆಳೆಯೈ ಸಾಗರದಾಳಮೇ ಕಲಿಕೆಯೊಳ್ ಸಲ್ಲಲ್ಕೆ ,ವಿದ್ವತ್ಪ್ರಭಾ-
    -ವಳಿಯೇ ಭೂಷಣಮಾಗಿ ಸಾಗೆ,ವಿನಯಂ ಸೇರಲ್ಕೆ, ಸದ್ಭಾವದಿಂ-
    -ದಳಿಸೈ ದುರ್ಗುಣಮೆನ್ನುವಾ ತಮಮದಂ ತ್ವನ್ಮಾನಸಾಕಾಶದಿಂ

  11. ತನ್ನ ಗಗನಾ೦ಗಣಕೆ ಬಣ್ಣವನು ತಾ ಕೊಡುತೆ
    ಕನ್ನಡಿಯ ಜಲದೊಳಗೆ ನೋಡೆ ಭಾಸ್ಕರನು
    ಎನ್ನ ಸುಂದರ ಬಾಲ್ಯ ಕಂದ ನಿನ್ನೊಳು ಕಾ೦ಬೆ
    ಎನ್ನಪ್ಪನಿಹನಲ್ಲೆ ನೆನಪಿನೊಳಗೆ

    ಸೂರ್ಯನನ್ನು ನೀರು ಪ್ರತಿ ಬಿಂಬಿಸುವಂತೆ , ನೀನು ನನ್ನ ಬಾಲ್ಯವನ್ನೇ ಪ್ರತಿ ಬಿಂಬಿಸುತ್ತಿರುವೆ . ನನ್ನಪ್ಪ ನನ್ನನ್ನು ಮುದ್ದಿಸಿದ ರೀತಿಯನ್ನೂ , ನನ್ನಲ್ಲಿ ಕೋಪಿಸಿದ ರೀತಿಯನ್ನೂ ಅರಿಯಬಲ್ಲೆ . ಅಂದರೆ ನಿನ್ನಿಂದಾಗಿ ನಾನು ಈಗ ಅಪ್ಪನಾಗಿಯೂ ,ಮಗನಾಗಿಯೂ ಯೋಚಿಸಬಲ್ಲೆ ಎಂಬರ್ಥದಲ್ಲಿ

  12. ಸಮುದ್ರಂ ಗೈದಿಪ್ಪಂ ಜಲದರವಮಂ ತಂದೆಯೆದೆಯೊಲ್ |
    ಸಮಾನಂ ಸೂರ್ಯಂಗಂ ಶಶಿಜಶಿಶು ತಾಂ ಕಟ್ಟಪಡೆಯಲ್ ||
    ಸುಮೋಹಂ ತೋರಿಪ್ಪಂ ಪಿತಮಣುಗಗಂ ತೋಯದುಗಿಯೊಲ್ |
    ಕುಮಾರಂ ಪೊಕ್ಕಿರ್ಪಂ ಹೃದಯಶರಮಂ ಬೀರಿ ಸೊಗಮಂ ||

    (ಸಮುದ್ರದ ಭೋರ್ಗರೆತ ತಂದೆಯ ಹೃದಯದ ಬಡಿತದಂತಿದೆ. ಚಂದ್ರನ ಮಗನೇನೋ ಎಂಬಂತೆ ಸುಂದರವಾಗಿಹ ಶಿಶುವು ಸೂರ್ಯನಿಗೆ ಹೋಲಿಕೆ. ರವಿಯ ಉರಿಬಿಸಿಲಂತೆ ಕೂಸು ಕಷ್ಟಪಡುತ್ತಿದ್ದಾಗ ಪಿತನು ಮಗುವಿಗೆ ಸ್ಪಂದಿಸುತ್ತಾನೆ; ನೀರು ಆವಿಯಾಗಿ ರವಿಯ ಬಳಿ ಹೋದಂತೆ. ಪ್ರತಿಯಾಗಿ ಪುತ್ರನು ತಂದೆಯ ಪ್ರೀತಿಯ ಕಡಲಲ್ಲಿ ಮುಳುಗುತ್ತಾನೆ; ಸೂರ್ಯನು ಕಡಲಲ್ಲಿ ಮುಳುಗುತ್ತಿರುವಂತೆ!)

  13. ಕಡಲದಡದೆ ಸುತನಂ ಕೈ
    ಬಿಡುತೆತ್ತರಕೆತ್ತಿ ನೋಡೆನಲ್ ಜಗಮಂ ಸಂ-
    ಗಡಮಿರ್ಪಂ ರಕ್ಷೆಯವೊಲ್
    ಪಿಡಿಯಲ್ ಬೀಳ್ದೊಡನೆ ಮಿತ್ರನಂದದೊಳಿರ್ಪಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)