Sep 082017
 

ದಿನಾಂಕ೨೭೦೮೨೦೧೭
ಆಯೋಜನೆ
ಪದ್ಯಪಾನ
ಸ್ಥಳ
ಅಭಿನವ, ಬಸವನಗುಡಿ ಬೆಂಗಳೂರು

ಪೀಠಿಕಾಪದ್ಯಗಳು

अभिनवशुभरङ्गे नित्यनृत्यप्रसङ्गे
निरुपमरसयोगे राजदानन्दयागे
|
उपसरतु मुदारं वाणिनीवात्मवाणी
विधुकरमधुपूरं व्यञ्जयन्ती जयन्ती
||

ಇಷ್ಟತಮವಯಸ್ಯವರೋ
ತ್ಕೃಷ್ಟಮನೀಷಾವಿತಾನವೇಲ್ಲನ್ಮಲ್ಲೀ
ಸೃಷ್ಟಿಗೆ ಸರಿಯೆನೆ ಮಾಮಕ-
ಮಷ್ಟವಧಾನಂ ಸರಸ್ವತೀ ಸಾರವತೀ
||

ಚಾರುಚಂದ್ರಚರಣಾನುರಾಗದಿಂ
ಕೈರವಂ ಮಲರ್ವವೊಲ್ ವಿಭಾವರೀ
ದ್ವಾರದೊಳ್ ವಿಲಸದರ್ಜುನರ್ಮವಾಕ್
ಸ್ಫಾರದಿಂದೆ ಸಭೆ ಸಲ್ಗೆ ಮಾಮಕಂ
||

ಅವಧಾನಾಂಗಗಳುಪದ್ಯಗಳು

*ಅಪ್ರಸ್ತುತ ಪ್ರಸಂಗಪೃಚ್ಛಕರುಶ್ರೀ ಶಶಿಕಿರಣ ಬಿ ಎನ್

*ಕಾವ್ಯವಾಚನಪೃಚ್ಛಕರುಶ್ರೀ ಕಶ್ಯಪ ನ ನಾಯಕ

*ನಾಟಕವಾಚನಪೃಚ್ಛಕರು ಶ್ರೀ ಸೋಮಶೇಖರ ಶರ್ಮ
(ನಾಟಕವಾಚನದಲ್ಲಿ ಪೃಚ್ಛಕರು ಓದಿದ ನಾಟಕವನ್ನು ಗುರುತಿಸುವುದರ ಜೊತೆಗೆ ಅವಧಾನಿಗಳು ಆಶುವಾಗಿ ನಾಟಕದ ಗದ್ಯಪದ್ಯಗಳನ್ನು ಗದ್ಯಪದ್ಯಾತ್ಮಕವಾಗಿಯೇ ಅನುವಾದ ಮಾಡಿ ಹೇಳುತ್ತಿದ್ದರು)

*ನಿಷೇಧಾಕ್ಷರಿಪೃಚ್ಛಕರುಗಣೇಶ ಭಟ್ಟ ಕೊಪ್ಪಲತೋಟ
ವಸ್ತು
ಸಮುದ್ರ (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು)
ಕಂ
||
()ಧಾ ()ಟೀ(-)()ನೆ (-)ಪಾ()ಟಿ()()ಲೇಂ
()ಘಾಟಿ ()ಮು ()()ಕ್ಕಾ()()()ತ್ರ()ದಾ(-)ಜ್ಯಾ()ಭಂ (-)ಹೃ
()ಚ್ಚಾಟು()()ಳೇ(-)ನೌ(-)ರ್ವ()ತೆ()ಗೆ
ಸ್ಫೋಟಕಮಿಂತಾದುದಲ್ತೆ ಸಾಗರ ನಿನ್ನೊಳ್

ಧಾಟೀಕನೆ ಪಾಟಿಸಲೇಂ
ಘಾಟಿಮುಖಕ್ಕಾಹ ಸತ್ರದಾಜ್ಯಾಭಂ ಹೃ-
ಚ್ಚಾಟುಗಳೇನೌರ್ವತೆಗೆ
ಸ್ಫೋಟಕಮಿಂತಾದುದಲ್ತೆ ಸಾಗರ! ನಿನ್ನೊಳ್
||

*ಸಮಸ್ಯಾಪೂರಣಪೃಚ್ಛಕರುಶ್ರೀ ಕೆ.ಬಿ.ಎಸ್ ರಾಮಚಂದ್ರ
ಸಮಸ್ಯೆ
ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ
.ವಿ||
ಸರಸೋದಾರಸುಧಾಕರಸ್ಫುರದುರುಸ್ಫಾರಾಸ್ಪದಂ ಸಂದಿರಲ್
ಪರಿಪೂರ್ಣತ್ವವಿಲೋಕನಾರ್ಹಕವನಂ ಮೇಣ್ ಸಾವನಂ ಭಾವಿಸಲ್
ದೊರೆತಾಗಳ್ ಮತಿಗೆಟ್ಟು ಬೇರ್ಪಡುತೆ ನಾಂ ನೊಂದೆಂ ಧವಂ ನೀಳ್ದ ತೋಳ್

ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ||

*ದತ್ತಪದಿಪೃಚ್ಛಕರುಶ್ರೀ ಶ್ರೀಶಕಾರಂತ
ವಸ್ತು
ನೃತ್ಯಪದಗಳುರಾಗ, ತಾನ, ಪಲ್ಲವಿ, ತನಿ
||
ರಾಗರಸಕ್ರಿಯಾಪ್ರವಹಣಕ್ಕುರುವಾಜಿಯೆನಲ್ಕೆ ನೂಪುರಂ
ಮಾಗಿಸಿ ಚಿತ್ತಮಂ ಮಲರ್ದಿರಲ್ಕೆ ವಿತಾನಲತಾಂತಸನ್ನಿಭಂ
ಬಾಗುತೆ ಬಳ್ಕುತುಂ ತನುಲತಾನಟಿ ಪಲ್ಲವಿಸಲ್ಕೆ ತೋರದೇಂ
ಪೂಗಳವೊಲ್ ಸಮಸ್ತಕರಣಾರ್ಥಕಮೀಪರಿ ಮಾತನೀವುದೇಂ
||

*ಉದ್ದಿಷ್ಟಾಕ್ಷರಿಪೃಚ್ಛಕರು ಶ್ರೀ ರಾಘವೇಂದ್ರ ಜಿ ಎಸ್
ವಸ್ತು
ದಂತಪಂಕ್ತಿ
ಅನುಷ್ಟುಪ್

मुक्ताहारतयानूनं दाडिमीबीजराजिवत् |
कालकीरेण हन्ता सा शुक्तिरूपा तु लुप्तिला ||

*ಆಶುಕವಿತೆಪೃಚ್ಛಕರುಶ್ರೀ ಅರ್ಜುನ ಭಾರದ್ವಾಜ
. ರತಿವಿಲಾಪ (रतिविलापम्)
जगदस्तु कथं विचिन्त्यतामभिलाषः किल भस्मतां गतः |
अनुभोगविदा न दक्षता रतिरेका त्ववशिष्यते कथम् ||

ಕತ್ತರಿ
ಅಖಂಡಮಂ ಖಂಡಿಸೆ ತಾಂಡವಿಪ್ಪೀ
ಮುಖಾಕ್ಷಿಪದ್ಯುಗ್ಮತೆಯೇತಕೋ ಮೇಣ್
ಸುಖಂಗಳಂ ಪೊಂದಿಯುಮಿಂತು ಸಖ್ಯದೊಳ್
ಮಖದ್ವಿಷರ್ಕಳ್ಗೆ ಸಮಾನಮಪ್ಪುದೇಂ
||

. ಕಂಪ್ಯೂಟರ್ ಮೌಸ್ (computer mouse)
गणकयन्त्रगतोन्दुरुजीवनं
गणपतेरथपत्रवदीहितम्
|
विगततां तव सन्ततिरञ्जसा
विभुमहो नयतीह यथारुचि
||

. ನಟರಾಜ (नटराजः)
अञ्चितं कुञ्चितं पादं पर्यायेण पुनःपुनः|
तन्वन्नाभाति शर्वोऽसौ नर्तने खलमर्दने
||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)