If at all we can push time wheel backwards, there is so much for a curious observer then!
[Sorry for not writing for so many days! I hope, my situation will improve in writing verses – as samasya line says 🙂 ]
ಹಾಲನ್ನು ಕಾಯಿಸಿ ಪೂರ್ತಿ ತಣ್ಣಗಾಗದಂತೆ ಆರಿಸಿ ಅದರಲ್ಲಿ ಒಂದಷ್ಟು ಮಜ್ಜಿಗೆಯನ್ನು ಮುಳುಗಿಸಿದಾಗ ಅದು ಮೊಸರಾಗಿ ಪರಿಣಮಿಸಿತು.
ಅಜ್ಜಿಯು ಕಾಯಿಸುತಾರಿಸಿ
ಸಜ್ಜಾಗಿಸಿ ಪಾಲ ಮೇಣದರೊಳಕ್ಕಾಗಳ್|
ಮಜ್ಜನಗೈದಿರ್ಪಿನಿತೇ
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ||
Thank you_/\_..@mujjaga===moojaga..I hope so..after you asked,I googled and found a couple of daasara padyas where the word is mentioned..http://www.sugamakannada.com/articles/?v=5416
ಒಪ್ಪಿದೆ. ಮುಕ್ಕಣ್ಣ ಇತ್ಯಾದಿ ಇವೆ. ಕಿಟೆಲ್ಲದಲ್ಲಿ ನೋಡಿದೆ, ಮುಜ್ಜಗ ಸಿಗಲಿಲ್ಲ. ಅದಕ್ಕೆ ಸಂಶಯಿಸಿದೆ. ಮುಚ್ಚಂಜೆ ಎಂಬುದನ್ನು ಮುನ್ನಿನ ಸಂಜೆ ಎಂದೇನೋ ತಿಳಿದುಕೊಂಡಿದ್ದೆ. ಧನ್ಯವಾದಗಳು.
ಬೊಜ್ಜು ಕರಂಗಿದ ದೇಹಕೆ
ಸಜ್ಜನ ವೈದ್ಯಂ ಸುಪಥ್ಯಕೊಪ್ಪೊತ್ತು ಮೊಸರ್- I
ಗೊಜ್ಜಿನೊಳಗಿರಲು ಲೇಸೆನೆ
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾII
ಈ ಮೊದಲು ಬೊಜ್ಜು ಕರಗಿಸಲು ನೀರುಮಜ್ಜಿಗೆಯನ್ನು ಮಾತ್ರ ಸಲಹೆ ಇತ್ತ ವೈದ್ಯರು ಇನ್ನು ಮುಂದೆ ಊಟಕ್ಕೆ ಮೊಸರುಗೊಜ್ಜು ಬಳಸಬಹುದು ಎಂದಾಗ ..
ಒಜ್ಜೆಯ ಕಾಲನ ಕೀಲಿಯ-
ನುಜ್ಜುಗದಿಂ ಪಿಂದೆ ಸರಿಸಲಾದೊಡೆ! ಸಮವೇನ್
ಬಿಜ್ಜೆಗನಚ್ಚರಿಗಾಗಲೆ
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ||
If at all we can push time wheel backwards, there is so much for a curious observer then!
[Sorry for not writing for so many days! I hope, my situation will improve in writing verses – as samasya line says 🙂 ]
Hahaa ಸೊಗಸಾಗಿದೆ! ಗೋಷ್ಠಿಯಲ್ಲಿ ಇದೇ ಥರ ಪರಿಹರಿಸಿದ್ದೆ. ಕೆಳಗೆ ಹಾಕಿದ್ದೇನೆ.
ಹಾಲನ್ನು ಕಾಯಿಸಿ ಪೂರ್ತಿ ತಣ್ಣಗಾಗದಂತೆ ಆರಿಸಿ ಅದರಲ್ಲಿ ಒಂದಷ್ಟು ಮಜ್ಜಿಗೆಯನ್ನು ಮುಳುಗಿಸಿದಾಗ ಅದು ಮೊಸರಾಗಿ ಪರಿಣಮಿಸಿತು.
ಅಜ್ಜಿಯು ಕಾಯಿಸುತಾರಿಸಿ
ಸಜ್ಜಾಗಿಸಿ ಪಾಲ ಮೇಣದರೊಳಕ್ಕಾಗಳ್|
ಮಜ್ಜನಗೈದಿರ್ಪಿನಿತೇ
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ||
Good idea! But presented as ‘dry fact’. Poetry gets new life with vakrokti. I will try something using your idea.
You have already achieved it. Your comment in itself is vakrOkti. For buttermilk to become curd, some water in it has to dry up 😉
ಕಜ್ಜದೆ ಕೊಸರಾಗಲ್ಕದೊ
ಸಜ್ಜುಗಗೊಂಡ ರವೆ ಪಾಯಸಂ ಬಿಸಿಯಾರಲ್
ಸಜ್ಜಿಗಮಾದಿತ್ತುo ಗಡ
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ !!
(ನೀರಾಗಿದ್ದದ್ದು ಗಟ್ಟಿಯಾಯಿತು ಎಂಬ ಅರ್ಥದಲ್ಲಿ !!)
ಬಿಜ್ಜೆಯ ಪರಮಾವಧಿಯಿಂ
ಸಜ್ಜಾಗಿರೆ ಕಾಲಯಂತ್ರಮದರೊಳ್ ಚರಿಸು-
ತ್ತಜ್ಜಿಯದೀ ನುಡಿ ಸಲ್ಗುಂ
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ!
ಕಾಲಯಂತ್ರ – time machine
Alice in Wonderland! 🙂
–
ಲಜ್ಜೆಯುಮಿಲ್ಲದೆ ನಿಲ್ಲುತೆ
ಮಜ್ಜಿಗೆಗುಡಿಯಲ್ ನಿರಂತರಂ ಪುರುಡೊಳ್ ತಾ
ನಜ್ಜಿಗೆ ವಾಂತಿಯದಾಗಲ್
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದೆಲಾ!!
ಅಜ್ಜಿಯೋರ್ವಳು ವಯೋಮಾನದ ಪರಿವೆಯಿಲ್ಲದೆ ಲಜ್ಜಾರಹಿತಳಾಗಿ ಮಜ್ಜಿಗೆ ಕುಡಿಯುವ ಸ್ಫರ್ಧೆಯಲ್ಲಿ ನಿರಂತರವಾಗಿ ಮಜ್ಜಿಗೆ ಕುಡಿದಳು. ನಂತರ……(ಓದುಗರ ಊಹೆಗೆ ಬಿಟ್ಟಿದೆ 🙂 )
ಮುಜ್ಜಗದರಸನ ಪೂಜೆಗೆ
ಸಜ್ಜನರೊಪ್ಪಿಸುತಲಿರ್ದ ಬಿಸಿಬಿಸಿ ಪಾಲೇ
ಬಜ್ಜಿಯೊಡನೆ ತಿನ್ನಲ್ ನ-
-ಮ್ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ
ಕೀಲಕವನ್ನು ತರುವುದಕ್ಕಾಗಿ ಯಾರ್ಯಾರೋ ತಂದ ಹಾಲಿಂದ ಮೊಸರು ಮಾಡಿ ನಮ್ಮಜ್ಜಿಗೆ ಬಜ್ಜಿಯ ಜೊತೆ ತಿನ್ನಿಸಬೇಕಾಯ್ತು 🙁
ಲಜ್ಜೆಯುಮಿಲ್ಲದೆ ನಿಲ್ಲುತೆ
ಮಜ್ಜಿಗೆಗುಡಿಯಲ್ ನಿರಂತರಂ ಪುರುಡೊಳ್ ತಾ
ನಜ್ಜಿಗೆ ವಾಂತಿಯದಾಗಲ್
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ//
ವಯಸ್ಸಾದವಳೋರ್ವಳು ಮಜ್ಜಿಗೆ ಕುಡಿಯುವ ಸ್ಪರ್ಧೆಯಲ್ಲಿ ಅತಿಯಾಗಿ ಮಜ್ಜಿಗೆ ಕುಡಿದು …ಮುಂದೆ ಓದುಗರ ಊಹೆಗೆ ಬಿಟ್ಟಿದೆ 🙂
ಚೆನ್ನಾಯ್ತು ಪದ್ಯವಿದು ಚೆನ್ನದಾಯ್ತುಪಮೆ ನೀ-
ನುನ್ನತಿಯನಾಂತೆಯೈ ಪದ್ಯಪಾನದೊಳು|
ಇನ್ನೆಗಂ ಚಪ್ಪರಿಸಿ ಸವಿದಿರ್ಪೆ ಮೊಸರದೋ
ಇನ್ನೀಗಸಹ್ಯಮಾಗದೆ ನೆನೆದೊಡಂ||
ಧನ್ಯವಾದಗಳು. ಇನ್ನೂ ನೀವು ಬಹಳಷ್ಟನ್ನು ತಿನ್ನದಿರುವಂತೆ ಮಾಡುತ್ತೇನೆ ನೋಡುತ್ತಿರಿ. 😎
ಅಯ್ಯೋ! ’ಸವಿದಿರ್ಪೆ’ ಎಂದರೆ ’ಸವಿದಿರ್ಪೆಂ’ ಎಂದಲ್ಲ; ’ಸವಿದಿರ್ಪೆ ನೀ’ ಎಂದು!
ಭಕ್ತಿಯ ತೋರ್ಸಿ ವಿಭಕ್ತೀಲಿ ಇಲ್ಲಾಂದ್ರೆ ಸಿಕ್ತೀರಿ ಸುಮ್ಮ್ನೆ ಜನರ್ಬಾಯ್ಗೆ
ಸಿಕ್ತೀರಿ ಸುಮ್ಮ್ನೆ ಜನರ್ಬಾಯ್ಗೆ ರಂಪಯ್ಯ ಹಾಕ್ತಾರ್ಕಾಮೆಂಟು ಬಿರುಸಾಗೆ 😀
ಓ …ಇದು ಹೀಗೂ ಆಗುದು !! ಆದದ್ದಾಗಿದೆ , ಇಬ್ಬರೂ ತಲೇಗ್ಹಚ್ಕೋಬೇಡಿ !!
ಛೀ! ಛೀ! ಇದನ್ನೆಲ್ಲಾ ಯಾರ್ ತಲೆಗ್ ಹಚ್ಕೋತಾರೆ?
ಕಾಲಚಕ್ರ ಮುಂದೆ ಉರುಳುತ್ತಲೇ “ಮಜ್ಜಿಗೆ ಮೊಸರಾಯ್ತು” !
ಪಜ್ಜೆಪಿಡಿವೀ ಪರಿಯ ಕಾಣ್ !
ಉಜ್ಜೀವನದಿಂದಲಬ್ಬೆ ಮೇಣಾದಳ್ ತಾ –
ನಜ್ಜಿ , ತನುಜೆಯಬ್ಬೆ ಗಡಾ !
ಮಜ್ಜಿಗೆ ಮೊಸರರಾಗಿ ಮತ್ತೆ ಮೆಯ್ವೆತ್ತುದಲಾ !!
ಪಜ್ಜೆಪಿಡಿ = ಅನುಸರಿಸು
ಉಜ್ಜೀವನ = ಹೊಸಜೀವ ಬರುವಿಕೆ
ಮಗಳು ತಾಯಿ ಯಾಗಿ – ತಾಯಿ ಅಜ್ಜಿಯಾದ ಪ್ರಕ್ರಿಯೆ !!
ಕಡೆವೊಡದಾವ ಬೆಣ್ಣೆ ಪುದಿದಿರ್ಪುದು ಪುಟ್ಟಿತಿನಬ್ಬೆಯಬ್ಬೆಯೊಳ್ ?
ಆಲೋಡನಕ್ಕೆ ಧನ್ಯವಾದಗಳು ಜೀವೆಂ .
ಅಂದಹಾಗೆ ನಾನು “ಅಬ್ಬೆಯಬ್ಬೆ ” ಯಾದ ಸಮಾಚಾರ ನಿಮಗೆ ಹೇಗೆ ತಿಳಿಯಿತು ?!!
ಈಗ ನೀವೇ ಹೇಳಿದಿರಲ್ಲ 🙂 ಅಭಿನಂದನೆಗಳು!
ಧ..ಅ ಅ ..ನ್ಯ..ಅ.ವಾ ದ ಗಳು. ಜೀವೆಂ !!
– ಉಷಜ್ಜಿ
ಸಜ್ಜನವಂದ್ಯನ ಪೆಜ್ಜೆಯ
ಗೆಜ್ಜೆಯ ದನಿ ಕೇಳಲಾಗ ತಾಳದೆ ತಾನೇ
ಮುಜ್ಜಗದೊಡೆಯನೊಳೊಪ್ಪಲ್
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ
ಬೆಣ್ಣೆಯನ್ನು ಕದಿಯಲೆಂದು ಬಂದ ಬಾಲಕೃಷ್ಣನ ಗೆಜ್ಜೆಯ ಧ್ವನಿ ಕೇಳಿ ಮಜ್ಜಿಗೆ ಅವನ ಬಾಯಿಯನ್ನು ಸೇರುವ ಬಯಕೆಯಿಂದ ಮತ್ತೆ ಮೊಸರಾಯ್ತೆನ್ನುವ ಪ್ರಯತ್ನ
Beautiful. – is mujjaga same as mUjaga?
Thank you_/\_..@mujjaga===moojaga..I hope so..after you asked,I googled and found a couple of daasara padyas where the word is mentioned..http://www.sugamakannada.com/articles/?v=5416
Hopefully it is not arisamaasa
ಮೂಜಗಕ್ಕೆ ಮುಜ್ಜಗ ಸಮವಾಗದೇನೋ. ದಾಸರ ಪದಗಳನ್ನು ಆಧಾರವಾಗಿ ನೋಡಲಾಗದು 🙂
ತ್ರಿಸಂಧ್ಯೆಗಳಿಗೆ ಮುಚ್ಚಂಜೆ ಎಂಬ ವ್ಯವಹಾರವನ್ನು ಒಪ್ಪಿದಮೇಲೆ ಮುಜ್ಜಗಕ್ಕೆ ಅಪವಾದವೇಕೆ?
ದಾಸರ ಪದಗನ್ನೇ ಆಗಲಿ, ಕಾವ್ಯಗಳನ್ನೇ ಆಗಲಿ ಸಾರಾಸಗಟಾಗಿ ಪ್ರಮಾಣಭೂತವೆಂದೋ, ಅಪ್ರಮಾಣವೆಂದೋ ಹಣೆಪಟ್ಟಿಕಟ್ಟುವುದು ನ್ಯಾಯವಲ್ಲ. ಯಾವುದಕ್ಕೂ ವ್ಯಾಕರಣ, ರೂಢಿ, ಪ್ರಯೋಗಬಲ ಎಲ್ಲವೂ ಒದಗಬೇಕಲ್ಲವೆ?
ಒಪ್ಪಿದೆ. ಮುಕ್ಕಣ್ಣ ಇತ್ಯಾದಿ ಇವೆ. ಕಿಟೆಲ್ಲದಲ್ಲಿ ನೋಡಿದೆ, ಮುಜ್ಜಗ ಸಿಗಲಿಲ್ಲ. ಅದಕ್ಕೆ ಸಂಶಯಿಸಿದೆ. ಮುಚ್ಚಂಜೆ ಎಂಬುದನ್ನು ಮುನ್ನಿನ ಸಂಜೆ ಎಂದೇನೋ ತಿಳಿದುಕೊಂಡಿದ್ದೆ. ಧನ್ಯವಾದಗಳು.
ಅಜ್ಜನ ಕಾಲಕೆ ಗೋವಿನ
ಗೆಜ್ಜೆಯ ದನಿಯಡರಿ ಸೋರೆ ಸಿರಿ ಮೇಣ್ ಮಗನಾ
ಬಿಜ್ಜೆಯ ಬಲದಿಂ ಮನೆಯೊಳ್
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ
(ಕೊನೆಗೂ ಬಡತನವಿಳಿಯಿತು ಎಂಬರ್ಥದಲ್ಲಿ)
ಬಿಜ್ಜೆ ರಸಾಯನದೊಳ್ ಬಗೆ
ಬೆಜ್ಜರಮೇo ! ಬೆಳ್ಳಿಸಾರದೊಡೆ ಸುಣ್ಣದ ನೀ-
ರುಜ್ಜಗೊಳೆ ಬೆಳ್ಗರಣೆ ಕಾಣ್
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ !!
ಬೆಜ್ಜರ / ಬೆಚ್ಚರ = ವಿಸ್ಮಯ , ಉಜ್ಜಗೊಳೆ = ಜತೆಸೇರು
ರಸಾಯನಶಾಸ್ತ್ರದಲ್ಲಿನ ವಿಸ್ಮಯ ! : (ಮಜ್ಜಿಗೆ ಯಂತಿರುವ ) ಸುಣ್ಣದ ತಿಳಿನೀರಿಗೆ ಬೆಳ್ಳಿಯ ನೈಟ್ರೇಟ್ (~ಬೆಳ್ಳಿಸಾರ ) ಬೆರೆತಾಗ ಉಂಟಾಗುವ curdy white precipitate ( ಬಿಳಿ ಗರಣೆ ~ಮೊಸರು )
ಬೆಳ್ಳೆನೆ ಮೊಸರಂ ಬೇಳ್ದೊಡೆ
ಬೆಳ್ಳಿಯ ಮೊಸರನೆಮಗಿತ್ತೆಯಲ್ಲೌ! ಕಷ್ಟಂ
ನೀವೆಂದ curdy white precipitateಉ silver hydroxide-ಇನದು. ರಾಜಯೋಗ್ಯವಾಗಿದ್ದರೂ ತಿನ್ನಲಯೋಗ್ಯ 🙂
ತಳ್ಳಂಕಗೊಂಡಿರೆ ತಿನಲ್
ಕಳ್ಳು ಮೊಸರಿದ ಸದ್ಯ-ಪದ್ಯ-ಪಾನಕೆ ಯೋಗ್ಯo !!
ತಳ್ಳಂಕ = ಕಳವಳ
ಪಾನ = ಕುಡಿತ / ಸಾಣೆ ಹಿಡಿಯುವಿಕೆ
ಉಜ್ಜೀವಕದುಗ್ಧದೆ ಮುಳುಗಿ
ಮಜ್ಜಿಗೆ ಮೊಸರಾಗಿ ಮತ್ತೆ ಮೈವೆತ್ತುದಲಾ|
ಸಜ್ಜನರುಮ್ ಸೆಲೆ ಗಂಗಾ-
ಮಜ್ಜನದಿಂದಮಕಳಂಕಿತರಹುದೆ ನಿಚ್ಛಮ್||
(ಹಾದಿರಂಪರ ಹಾದಿಯಲ್ಲಿ)
Fine improvisation. But…
ಆರೆಷ್ಟು ಶುದ್ಧಮಾದೊಡಮೇನು ಜಾಹ್ನವಿಯ
ನೀರೊಳಗೆ ಮುಳುಗೆದ್ದು, ಮತ್ತಮವರು|
ಘೋರಪಾಪವ ಗೈಯುತಾಗುವರು ದುರ್ಜನರು
ನೀರಡರಿ ದಧಿಯು ಮಜ್ಜಿಗೆಯಾದವೋಲ್||
Every good action shows its impact at right time. Same is true vice versa.
ಮನುಜನೋರ್ವನು ದಿಟದೆ ಮುಖಮೆರಡು ಮನದೊಳಗೆ
ಕನಲಿ ನಲಿಯುವುದೊಂದುಮರ್ಥಕಾಮಕೆ ಸಿಲುಕಿ|
ನೆನೆಯುತಿಹುದಿನ್ನೊಂದು ಧರ್ಮಪುರುಷಾರ್ಥವನೆ
ದಿನದಿನವು ಕಚ್ಚಾಟ ಹಾದಿರಂಪ||
Wise verses !!
Fine pun
ಸಜ್ಜಾಗಿ ಮನದ ಮಾಯೆಯೊ-
ಳುಜ್ಜೀವನಗೊಂಡ ಯೋಜನೆಯೆ ನೆನಪಾರ್ದುಂ
ಪಜ್ಜೆಪಿಡಿಯೆ ಯೋಚನೆ ಮರು
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ !!
(ಮನದಲ್ಲಿ ಮೂಡುವ ಭವಿಷ್ಯದ) ಯೋಜನೆ/ಯೋಚನೆಗಳು (ವರ್ತಮಾನದಿಂದ
ಭೂತಕ್ಕಿಳಿದು) – ನೆನಪಾಗಿ (ತೆಳುವಾಗಿ ) ಮತ್ತೆ ಅವೇ (ವರ್ತಮಾನಕ್ಕೆಳೆಯಲ್ಪಟ್ಟು) ಯೋಚನೆಗಳಾಗುವ – ಮನದ ಪ್ರಕ್ರಿಯೆ ಬಗೆಗಿನ ಪದ್ಯ.