Nov 272017
 

  21 Responses to “ಪದ್ಯಸಪ್ತಾಹ ೨೮೩: ಚಿತ್ರಕ್ಕೆ ಪದ್ಯ”

  1. Jatayu getting incensed at the incompetence of his own talons
    ವಂಶಪತ್ರಪತಿತ|| ಕಾವರುಮಾರುಮಿಲ್ಲದಿಹ ಕಾಲದೊಳಬಲೆಯನಾ
    ರಾವಣರಾಕ್ಷಸಂ ಹರಣಗೈಯೆ ಗಗನಪಥದೊಳ್|
    ತೀವದೆ ಪೋದೆಯೇನಕಟ ಪಂಜವೆ ತಡೆಯುತೆ ನಿ-
    ರ್ಜೀವನನಾಗಿಸಲ್ಕವನ, ಕಾಯುಗೆ ಜನಕಜೆಯಂ!!

  2. ರಾವಣನೆದುರಿಸಿ ಬಿದ್ದ ಜಟಾಯುವಿನೊಂದು ಮೂರ್ತಿಯನು ನಿಲಿಸಿದಿರಿ
    ಸಾವಿರಸಾವಿರ ವಾನರರಿದ್ದರೆ, ಅವರ ಶಿಲ್ಪಗಳವೆಲ್ಲಿವೆ ರೀ?

    ಅವಲಕ್ಷಣಶುದ್ಧವೇನೊ, ಆದರೂ ಬರೆದುಬಿಡೋಣವೆನಿಸಿತು.

    • ಎಲ್ಲಿರುವುವೆಂದೇಕೆ ಪರಿತಾಪಪಡುವಿರೈ
      ಎಲ್ಲಿಲ್ಲವೆಂಬುದನು ನೋಡಿಪೇಳಿ|
      ಮೆಲ್ಲನೀ ಕಡೆ ನೋಡಿ ನನ್ನೆಡೆಗೆ ಮೇಣಿಂದೆ
      ಕಲ್ಲೆಸೆಯದೆಲೆ ನೋಡಿ ನಿಂತನೀರೊಳ್||

      • Hahhhaaa

      • ನಿಮ್ಮತ್ತ ನಾನೇಕೆ ಕಲ್ಲನೆಸೆಯಲಿ ಸದ್ಯ
        ಸುಮ್ಮಸುಮ್ಮನೆ ಪಾಪಗಳಿಸಲೇಕೆ

        • ಕಲ್ಲನ್ನು ನೀರಿಗೆ ಎಸೆದರೆ ತಮ್ಮ ಮುಖವನ್ನು ತದ್ವತ್ ನೋಡುವುದು ತಪ್ಪುತ್ತದೆಂದು ತಮ್ಮ ಎಣಿಕೆ. ನಿಮ್ಮ ಮುಖವು ನಿಮಗೆ ತದ್ವತ್ ಕಾಣುವಂತಾಗುವುದಾದರೆ, ನನಗೆ ಕಲ್ಲುಪೆಟ್ಟಾದರೂ ಚಿಂತಿಲ್ಲ.

  3. ವಾಯು ಮಾರ್ಗದೆ ಕಳವುಗೊಂಡಿರಲ್ ಸೀತೆಯು, ಜ-
    ಟಾಯು ನೀಂ ಹೋರ್ದು ತಡೆದಂದು ದಣಿದುಂ
    ಸಾಯುಜ್ಯ ಹೊಂದೆ ಕಲ್ಲಾಗಿರಲ್ ಕಲಿಯುಗದೆ
    ಮಾಯಾವಿ ರಾವಣರನಡಗಿಪುವರಾರ್ ?

  4. ಗೃಧ್ರ ಉವಾಚ:
    ನನ್ನ ರೆಕ್ಕೆಯ ಪದರದಾಂತರ್ಯರಕ್ಷೆಯೊಳ-
    ಗೆನ್ನೆಗಂ ನಿಲ್ಲುವಿರಿ ಯಾತ್ರಿಗಳಿರಾ|
    ಬನ್ನಿ ಮೇಗಡೆಗಿಲ್ಲಿ ಧೈರ್ಯವಿದ್ದೊಡೆ ನಿಮಗೆ
    ದೊನ್ನೆಯಂತಿರುವೆನ್ನ ಪಂಜದೊಳಗೆ!!

  5. The engineer who structured this sculpture is a regular PWD contractor who has built a lot of bridges, some of which still stand!
    ನನ್ನೊಡಲ ಗುಹೆಯೊಳಗೆ ರಾವಣನವೊಲು ನೀನು
    ಸನ್ನಿಪಿಡಿದವನವೋಲಾಡಬೇಡೈ|
    ಇನ್ನೇಕೆ ಪಂಜವೀಗಾನು ಕುಸಿಯುವೆ (ನಿನ್ನ)ಮೇಲೆ
    ಪನ್ನತಿಕೆಯನ್ನರಿಯೊ ಅಭಿಯಂತನ||

  6. ವಾಯು ಮಾರ್ಗದೆ ಕಳವುಗೊಂಡಿರಲ್ ಸೀತೆಯು, ಜ-
    ಟಾಯು ನೀಂ ಹೋರ್ದು ತಡೆದಂದು ದಣಿದುಂ
    ಸಾಯುಜ್ಯ ಹೊಂದೆ ಕಲ್ಲಾಗಿರಲ್ ಕಲಿಯುಗದೆ
    ಮಾಯಾವಿ ರಾವಣರನಡಗಿಪುವರಾರ್ ?

    • ನ್ಯಾಯರಕ್ಷಣೆಗೆಂದು ಹೋರಾಡಿ ಸಜ್ಜನರು
      ಮಾಯಾವಿಗಳ ಕೈಗೆ ಸಿಲ್ಕಿ ಮಡಿದರ್
      ತಾಯೆದೆಗೆ ಕನ್ನವಿಕ್ಕುವ ದುಷ್ಟರಾಜ್ಯದಿ ಜ-
      ಟಾಯುವೇಂ ಗೈದೊಡೇಂ ಫಲಮಪ್ಪುದು?

      • ಅಹುದಹುದನಂತನೆ ದಿಟಂ
        ಬಹುರಾವಣರಿರೆ ಜಟಾಯುವೋಲ್ ಕಲಿಯುಗದೊಳ್
        ಮಹಿಲೆಯರಂ ಮೇಲ್ಕಾಯ-
        ಲ್ಕಿಹುದಲ್ತೆ ಸಿ ಸಿ ಟಿ ವಿ ಸರ್ವೆಲೆನ್ಸ್ ಘಟಕಂ ಕಾಣ್ !!

  7. ಕಡೆದಪುದಿಲ್ಲ ಪಕ್ಕೆಗಳು ಕಾಲ್ಗಳು ಮೆಯ್ಯಿದು ಬಾಯಿ ಮೇಣಿದೋ
    ನುಡಿದಪುದಿಲ್ಲ ನಿಲ್ಲು ಖಳನೆತ್ತಲು ಪಾರ್ವೆಯೊ ನೀರೆಯಂ ಬಿಡೆಂ
    ದೆಡೆಬಿಡದೊತ್ತಿ ಸೋಲ್ತಿಳೆಗೆ ಬಿದ್ದುದಿದಲ್ಲವಳಲ್ದು ಕಣ್ಗಳುಂ
    ಮಿಡಿದಪುದಿಲ್ಲವಶ್ರುಗಳನೆಂತು ಜಟಾಯುವಿದಪ್ಪಲಪ್ಪುದೋ?

  8. ಮುರಿದಿರ್ಪುದೇಂ ನಿನ್ನ ನಭಮುಚ್ಚುವಾ ರೆಂಕ
    ಯುರಿಯಿಂದೆ ಮಿಸುಕದೆಯೆ ಕಲ್ಲಾಗಿಹೆ !
    ಸಿರಿಹಸಿರ ನಡುವಿನಲಿ ಬಿದ್ದಿರುವೆ ಶಿಲೆಯಾಗಿ
    ನರಬಂದು ಸುರಿಸುವನೆ ಕಂಬನಿಯನು ?

  9. ಹರಿಯೆ ನೀ ಸುಗುಣನೆಂದರಿತಿಹು ಸುಳ್ಳಾಯ್ತೆ ?
    ವರವೀವ ದಾತಾರನೆನುತಿದ್ದೆ
    ನರಿಬುದ್ಧಿ ತೋರಿದೆಯೊ ಗರುಡನ ವಿಷಯದೊಳ್
    ಹೊರಗಟ್ಟಿಬಿಟ್ಟೆಯೊ ವೈಕುಂಠದಿಂ

    • ನರಿಬುದ್ಧಿಯರಿಸಮಾಸಂ
      ವರವೀವೆಂಬಲ್ಲದಾಯ್ತು ಮಾತ್ರಾಲೋಪಂ
      ಹರಿಯೇ ಎಂಬೆಡೆಯಲ್ಲುಂ
      ಗರುಡನ ಕಡೆಗೊಮ್ಮೆ ನೋಡಿ ತಿದ್ದಿರಿ ಕೊರೆಯಂ

      • ಅಂಕಿತ ಉವಾಚ:
        ಗುರುವಾದೆ ನೀನೆನಗೆ ನಮಿಪೆ ಹರಿರೂಪಿ, ಸಿಂ-
        ಗರಿಸುವೆನು ಪದವ ನೀಂ ಪೇಳ್ದಂತೆಯೇ|
        ಗರುಡನೆಡೆ ನೋಡುತಾರ್ ತಿದ್ದಬಲ್ಲರು ಪೇಳು
        ಗರಬಡಿಯದೇನವನ ಬಿರುದಿಟ್ಟಿಯಿಂ||

  10. ಧುತ್ತನೆತ್ತುತೆ ನೀರಜಾಕ್ಷಿಯ
    ಮತ್ತರಾವಣನತ್ತ ಪೋದೊಡ-
    -ದೆತ್ತಣಿಂದಲೊ ಬಂದು ಕಾದಿದೆ ಕೆಚ್ಚಿನಿಂ ಖಗನೇ
    ತುತ್ತು ಮೃತ್ಯುವಿಗಾದೊಡೇನೈ?
    ಮತ್ತೆ ಮೂಡಿಹೆ ಜನರ ಮಾನಸ-
    -ಭಿತ್ತಿಯೊಳಗಾ ರಾಮಚಂದ್ರನ ಸಖನ ರೂಪದಲಿ

    ಚತುರವಧಾನದಲ್ಲಿ ಬಗೆಬಗೆಯ ಭಕ್ಷ್ಯಗಳನ್ನುಂಡವರಿಗೊಂದು ಸಪ್ಪೆ ತಿನಿಸು 🙂 ಈ ಬಡವನಿಗೆ ಈ ಹೊತ್ತಿಗಿಷ್ಟೇ ದಕ್ಕಿದ್ದು..

  11. Jataayu addressing Ravana after his wings were cut

    ರೆಕ್ಕೆ ಮುರಿದೊಡದೇನು ನಿನ್ನ
    ನ್ನಿಕ್ಕುವೆನು ಪಾರುವೆಯದೆಲ್ಲಿಗೆ?
    ಸಿಕ್ಕು ಕೈಯೊಳು, ಮುಕ್ಕುವೆನು ಬಾ ಬಾರೊ ರಕ್ಕಸನೇ
    ಉಕ್ಕಿಹುದು ಕೋಪಾಗ್ನಿಸಾಗರ
    ಹಕ್ಕಿ ಮುದಿಯಾಯ್ತೆಂದು ಬಗೆದೊಡೆ
    ನೆಕ್ಕುವೆನು ನೆತ್ತರನು ಕೊನೆಹನಿ ಬಿಡದೆ ಹೀರುತಲಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)