Apr 022018
 

  10 Responses to “ಪದ್ಯಸಪ್ತಾಹ ೩೦೧: ಚಿತ್ರಕ್ಕೆ ಪದ್ಯ”

  1. ಸುತ್ತೊರೆಯಲ್ಕಾಗಸಮಂ
    ಬಿತ್ತರಿಸಲ್ತನ್ನ ಪುಷ್ಪಮಂ ತರುನಿಕರಂ
    ಮೆತ್ತೆಯ ಹಾಸಿನವೊಲ್ ತಾ-
    ನೆತ್ತರದಿಂ ಮೇಣ್ ವಸಂತನಾಹ್ವಾನಿಸಿತೇಂ!

  2. ಕಂದರ್ಪ೦ ಬರುತಿರ್ದೊಡ
    ನ೦ದದೆ ರತಿ-ಮನ್ಮಥರ್ಕಳವಿವಾಹಕ್ಕಂ
    ಸಂದುದೆ ಚಪ್ಪರಮಿಂತೀ
    ಕುಂದದ ಪುಷ್ಪ೦ಗಳಿಂದೆ ಸಖನಿಂ ಸೊಗದಿಂ//
    ಮತ್ತೆ ಹುಟ್ಟಿ ಬರುತ್ತಿರುವ ಮನ್ಮಥನ ಮದುವೆಗೆ ಅವನ ಮಿತ್ರ(ವಸಂತ) ಈ ತೆರನಾಗಿ ಚಪ್ಪರವನ್ನು ಸಿದ್ಧಗೊಳಿಸಿದ್ದಾನೆ.

  3. ಅರರೆ ! ಎಲೆಯಿಲ್ಲೆಲೆ, ಗುಲಾ-
    ಬಿ ರಂಗಿನ ಮರಗಳ ಹಾವಭಾವದ ಮಧುರಾ-
    ವರಣದ ತಣ್ಪು ತರುಸಲದೆ
    “ಬರಿದೆ ವನಿತೆಯರ್ಗೆ ಮೀಸಲಿನ ಮಾರ್ಗಂ” ಕಾಣ್ll

    *ತರುಸಲ=ಸಂಕಲ್ಪ

  4. ವೃಕ್ಷೋವಾಚ
    ಮಾತ್ರಾಸೀಸ|| ಮೊದಮೊದಲ ಹೂಗಳೆರಡನ್ನರ್ಪಿಸಿರ್ಪೆನಾಂ ಭೂಮಿದೇವಿಗೆ ಕೃತಜ್ಞತೆಯಿನಾಕೆ
    ನೀರನುಣಿಸಿ ಪೋಷಣೆಯನೀವಳೊಂಭತ್ತು ತಿಂಗಳು ವರ್ಷವರ್ಷವೂ ತಪ್ಪದೆಲೆ ತಾಯ್|
    ಬರಲು ಛಳಿಗಾಲವದು ಆತಂಕಗೊಂಬೆ ಬಹ ವೇಸಗೆಯನೆಂತು ನೀಸುವೆನುಮೆಂದು
    ಆ ಮೂರು ತಿಂಗಳೊಳು ನೀರಿಲ್ಲವಾಕೆಗೇ, ಈವಳೆನಗಿನ್ನೆಂತು ಸೊರಗುವೆಂ ನಾಂ||
    ಆಟವೆಲದಿ|| ಬನ್ನಿ ಜನವೆ ಹೂವ ಹಾಸುಗೆಯ ಹಾಸುತ್ತೆ (ಛಳಿಗಾಲದಲ್ಲಿ)
    ಪಾದಸೇವೆ ಮಾಳ್ಪೆ ಮೆತ್ತಗೊತ್ತಿ|
    ಬೇಡಿಕೊಂಬೆನೀಗ(ಬೇಸಗೆಯಲ್ಲಿ) ನೂರ್ಪಗಲು(ಮೂರು ತಿಂಗಳು) ನೀಮೆಲ್ಲ-
    ರುಣಿಸಿ ನೀರ ಸಲಹಿ ನನ್ನನ್ನೆಂದು||

  5. ಹಿಂದೊಮ್ಮೆ ಇದೇ ವಿಷಯವಾಗಿ ಶ್ರೀಯುತ ಗಣೇಶರು ಪದ್ಯರಚಿಸಿದ್ದರು. ಆ ಕಲ್ಪನೆಯನ್ನು ಬಳಸಿಕೊಂಡು ನನ್ನ ಪದ್ಯ:
    ಎಲೆ-ಹೀಚು-ಮುಳ್ಳು-ಪಣ್ಗಳಿರದಿರ್ದೊಡಮೇನು
    ಮಲರೊಂದೆ ಸಾಕಲ್ತೆ ಸೌಂದರ್ಯಕಂ|
    ಕಲೆ-ದಾನ-ನೈಪುಣ್ಯಗಳಿರದಿರ್ದೊಡಮೇನು-
    ಮೊಲವೊಂದೆ ಸಾಕೊರ್ವನುದ್ಧಾರಕಂ||

  6. ‘In the pink of health, see his/her aura’
    Thus they say for humans, nah! flora
    Pinkish if a plant
    Like jaundice in man
    Sans leaf-spike-fruit, my dear Laura

  7. ಸರ್..ಕುವೆಂಪುರವರ ಕಂದ ಪದ್ಯ ಯಾವುದು?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)