Apr 092018
 

೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ

ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ

ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

೨. ಶಾರ್ದೂಲದ ಸಮಸ್ಯೆ

ಪಂಕಪ್ಲಾವಿತಮಂಜಲಿಸ್ಥಜಲಮೆಂದಾಶಂಕಿಪಂ ಯಾತ್ರಿಕಂ

  32 Responses to “ಪದ್ಯಸಪ್ತಾಹ ೩೦೨: ಸಮಸ್ಯಾಪೂರಣ”

  1. ಗಗನಾಂಗಣದೊಳ್ ದಿವಂಗಳೊಳ್
    ಸೊಗದಿಂ ತೋರ್ವ ರವೀಶಗಂಟಿರಲ್
    ಮಿಗೆ ತಾಂ ಗ್ರಹಣಂ, ಚರಿಪ್ಪೊಡಂ
    ಪಗಲೊಳ್ ದೀವಿಗೆ..

  2. ಮುಗಿಬಂದಿರೆ ಕಟ್ಟಿರುಂಪೆಯೋ-
    ಲಗೊ ಸಮ್ಮೇಳನಕಾಗೆ ಕಬ್ಬಿಗರ್|
    ಮಿಗೆ ತೋರಯ್ ಕವಿಯೋರ್ವನೆಂದರಾಂ
    ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ||

    (ಕವಿಗಳಿಲ್ಲದ ಕವಿಸಮ್ಮೇಳನ)

    • ಪದ್ಯ ಚೆನ್ನಾಗಿದೆ ಸರ್. ಮೂರನೇ ಸಾಲಿನಲ್ಲಿ ಛಂದಸ್ಸು ಸ್ವಲ್ಪ ಎಡವಿದೆ.

    • Thanks sir. Corrected now.

      ಮುಗಿಬಂದಿರೆ ಕಟ್ಟಿರುಂಪೆಯೋ-
      ಲಗೊ ಸಮ್ಮೇಳನಕಾಗೆ ಕಬ್ಬಿಗರ್|
      ಲಗುವಿಂ ಕವಿಯೋರ್ವನಾರಿಸಲ್
      ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ||

  3. Soma, is the space between deevige veLkum fine or it should be combined?

  4. ಗಣೇಶನಿಗೆ ’ವಿಘ್ನವಿನಾಯಕ’ನೆಂದು ಭಾದ್ರಪದಶುಕ್ಲಚೌತಿಯಂದು ವಾರ್ಷಿಕವಾಗಿ ಪ್ರಭಾತಪೂಜೆಯೂ, ’ಸಂಕಷ್ಟಹರ’ನೆಂದು ಕೃಷ್ಣಚೌತಿಯಂದು ಮಾಸಿಕವಾಗಿ ಪ್ರದೋಷಪೂಜೆಯೂ ಸಲ್ಲುತ್ತವೆ. ಆ ಎರಡುಜಾವಗಳಲ್ಲಿಯೂ ಅವನಿಗೆ ಆರತಿಯನ್ನು ಬೆಳಗಲು ದೀವಿಗೆ ಅಗತ್ಯ.
    ಸೊಗಸಿಂ ದಿನಶೇಷದೊಳ್(ಪ್ರದೋಷ) ಮಗುಳ್
    ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ|
    ಬಗೆಯಾರತಿಯಂ ಗಣೇಶನಿಂ-
    ಗಗರಿಂ ಚಂದನ-ಕಪ್ಪುರಾದಿಯಿಂ||

    • ಚೆನ್ನಾಗಿದೆ ಸರ್.

    • idea ಚೆನ್ನಾಗಿದೆ. flow in 3rd and 4th line is very good, I feel.

    • ನೀಲಕಂಠರ ಅನುಪಸ್ಥಿತಿಯಾದೊಡನ್ಯರಾರುಂ ಅರಿಸಮಾಸದೋಷಮಂ ತೋರರೇನಕಟಾ! ಕೊನೆಯ ಪಾದವು ’ಗಗರಿಂ ಚಂದನ-ಚಂದ್ರ(Camphor)ದಾದಿಯಿಂ’ ಎಂದಾಗಬೇಕು.

  5. ಜಗದೊಳ್ ನರ ಸರ್ವಕಾರ್ಯಕಂ
    ಸೊಗದಾ ಕೈಪಿಡಿ ಪೊತ್ತಿಸಿಂ ಗಡಾ
    ಬಗೆಯಿಂ ಬಳಸಲ್ಕದಂ ಸದಾ
    ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ !!

    * ಸೊಗದ ಕೈಪಿಡಿ ~ smart phone

    ( ಎಲ್ಲರ ಕೈಯಲ್ಲಿ ಹಗಲಲ್ಲೂ ಉರಿವ ಮೊಬೈಲ್ ಫೋನ್ ನ
    ಕಲ್ಪನೆ !!)

    • ಕಲ್ಪನೆ ಚೆನ್ನಾಗಿದೆ ಮೇಡಂ. ಸೊಗದ ಕೈಪಿಡಿ – ಸ್ಮಾರ್ಟ್ ಫೋನ್ ಗೆ ಸ್ವಲ್ಪ ದೂರಾರ್ಥವಾಯಿತೆನ್ನಿಸುತ್ತದೆ. ಹೀಗೆ ತಿದ್ದಬಹುದು
      ಜಗದೊಳ್ ನರರೆಲ್ಲಕಾರ್ಯಕಾ
      ವಗಮುಂ ಜಂಗಮವಾಣಿಯೆನ್ನೆ ತಾಂ
      ಮಿಗೆ ಕಾಂತಿಯ ಸೂಸುತಿರ್ಪಿನಂ
      ಪಗಲೊಳ್….

      • ನಿನ್ನ ಪ್ರೌಢ ಪದ್ಯಕ್ಕೆ ಧನ್ಯವಾದಗಳು ಮಂಜು . ನಿನ್ನನ್ನು ಅವಧಾನದ ವೇದಿಕೆಯ ಮೇಲೆ ಕಂಡು ಬಹಳ ಸಂತೋಷವಾಯಿತು , ಅಭಿನಂದನೆಗಳು !!

        • ಧನ್ಯವಾದಗಳು. ಅವಧಾನದ ವೇದಿಕೆಯ ಮೇಲಿದ್ದಿದ್ದು ನಾನಲ್ಲ, ಮೌರ್ಯ. ಬಹುಶಃ ನಮ್ಮಿಬ್ಬರ ಗಾತ್ರಸಾಮ್ಯ ನಿಮ್ಮನ್ನು ಗೊಂದಲಗೊಳಿಸಿರಬಹುದು 🙂

          • I was also confused between Manjunath and Sudarshan. Good to know that, these are two different jewels.

    • Super idea! Manjunath’s correction made it really beautiful.

    • This is neither prescriptive nor suggestive; just a statement of my ways. It is okay in prose, but in verse it is advisable not use a word sans pratyaya. In ‘ನರ ಸರ್ವಕಾರ್ಯಕಂ’, the former word is without pratyaya wherefore it will either be construed as ‘ನರಸರ್ವಕಾರ್ಯಕಂ’ which means ‘for all humanly works’ or ನರ will be construed as being sambodhana. It shall not mean ನರಂ/ನರನು. I would like learned padyapaani-s to reflect on this and hone my understanding.

      • Learned ಆಗಿರದಿದ್ದರೂ ಉತ್ತರಿಸಲು ಯತ್ನಿಸಿದ್ದೇನೆ. ಹೌದು, ಹಾಗೆ ವಿಭಕ್ತಿಲೋಪವನ್ನು ಮಾಡಿದರೆ ಅನ್ವಯಕ್ಲೇಷ ತಲೆದೋರುತ್ತದೆ. ಆದ್ದರಿಂದಲೇ ನರರ್ ಎಂದು ಸವರಿಸಿದ್ದು.

    • ವಿಯೋಗಿನಿಯ ” ವಿಭಕ್ತಿಲೋಪ ” ವನ್ನು ಮನ್ನಿಸಿ . ಮೆಚ್ಚುಗೆಗೆ , ಸಲಹೆಗೆ ಧನ್ಯವಾದಗಳು . ತಿದ್ದಿದ ಪದ್ಯ :

      ಜಗದೆಲ್ಲೆಡೆಯೆಲ್ಲ ಕಾರ್ಯಕಂ
      ಸೊಗದಾ ಜಂಗಮವಾಣಿಯಂ ಗಡಾ
      ಬಗೆಯಿಂ ತೊಡೆ ಪೊತ್ತಿಸಿಂ ಸದಾ
      ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ !!

  6. ಮೊಗದೊಳ್ ನಗುವಿಟ್ಟು ತಾಂ ಸದಾ
    ಪಗೆಯಂ ಬೆನ್ನಿನ ಪಿಂದೆ ಸಾಧಿಪರ್
    ಜಗದೊಳ್ ಮಿಗೆ, ಮೈತ್ರಿಬಂಧಕಂ
    ಪಗಲೊಳ್ ದೀವಿಗೆ…
    ಎಲ್ಲಾ ಕಡೆಯಲ್ಲೂ ಗೋಮುಖವ್ಯಾಘ್ರರೇ ತುಂಬಿರುವಾಗ, ಗೆಳೆತನ ಮಾಡಲು ಹಗಲಲ್ಲೂ ದೀವಿಗೆ ಹಿಡಿದುಕೊಂಡೇ ಹುಡುಕಬೇಕಾದ ಪರಿಸ್ಥಿತಿ ಬಂದಿದೆ ಎಂಬರ್ಥದಲ್ಲಿ.

    • ಸೊಗದಿಂದುಳ್ಕಿರೆ ನಿಮ್ಮ ಪದ್ಯವಯ್

    • (ನಗೆಯನ್ನೆ ತೋರುತುಂ, ಬೆನ್ನೆಡೆಗೆಂತೊ) Fine verse. This is the beginning of an era, and we stand witness to it. The budding generation of poets think it superfluous to type a part of the samasyApAda in their parihArapadya 😉

  7. ಸಿಗಲಾರದೆ ನಮ್ಮನಾಳುವರ್
    ಧಗೆಯೊಳ್ತಣ್ಣನೆ ನಿದ್ರಿಸಿರ್ಪರಂ|
    ಲಗುವಿಂದೊಡನೆಳ್ಚರಾಗಿಸಲ್
    ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ !!

    (Candle light March)

  8. ಸೊಗದಾ ಹಸುಕಂದಗಂ ಸದಾ
    ಪೆಗಲೊಳ್ ಜೀಕುತಲೆತ್ತಿರಲ್ ಗಡಾ
    ಮಿಗೆ ಕಾಂತಿಯ ಸೂಸುತಿರ್ಪನಂ
    ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ !!

    ಹಗಲು ಎತ್ತುವ ದೀಪ- ಮನೆಯ ನಂದಾ ದೀಪ !!
    (ಸ್ವಾನುಭವದ ಪದ್ಯ !! – ಆದರೆ ಮೂರನೆಯ ಸಾಲು ಮಂಜು ಪದ್ಯದಿಂದ ಕದ್ದದ್ದು !!)

    • ೨ನೆ ಸಾಲು ,
      * ಪೆಗಲೊಳ್ ಜೀಕುತೆ ~ ಬಗಲೊಳ್ ಜೀಕುತೆ

    • ಸೊಗದಾ ಹಸುಕಂದಗಂ ಸದಾ
      ಬಗಲೊಳ್ ಜೀಕುತಲೆತ್ತಲುಂ ಗಡಾ
      ಮಿಗೆ ಕಾಂತಿಯ ಸೂಸುತಿರ್ಪನಂ
      ಪಗಲೊಳ್ ದೀವಿಗೆ ವೇಳ್ಕುಮೆತ್ತಲುಂ !!

  9. ಬೀಭತ್ಸ!
    ಸಙ್ಕರ್ಷಂಗೊಳುತೊಂದು Landfill/ಖಾತದೆಡೆಗಾ ಕ್ಷೇತ್ರಸ್ಥಗೇಹಂಗಳಾ (ಗೇಹಂಗಳ ಆ ಮಲಮೂತ್ರ…),
    ಸಾಙ್ಕರ್ಯಂಗೊಳುತಲ್ಲಿ ಮೂತ್ರಮಲಗಳ್ ಘ್ರಾಣೈಕ್ಯ-ವರ್ಣೈಕ್ಯದಿಂ|
    ಸಙ್ಕಾಶಂ ಗಡಿದೀ ಸರಿತ್ ನಿಜಕೆನುತ್ತೋಘಾಂತಮಂ ಸೇರಿರಲ್ (ಓಘ=flow)
    ಪಙ್ಕಪ್ಲಾವಿತಮಂಜಲಿಸ್ಥಜಲಮೆಂದಾಶಂಕಿಪಂ ಯಾತ್ರಿಕಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)