Apr 232018
 

  16 Responses to “ಪದ್ಯಸಪ್ತಾಹ ೩೦೪: ಚಿತ್ರಕ್ಕೆ ಪದ್ಯ”

 1. ಅನ್ನಮದಮರ್ಥಮದಮೀ- |
  ಯೆನ್ನತಿಶಯರೂಪಯೌವ್ವನಾದಿ ಮದಂಗಳ್ ||
  ಮುನ್ನೆನ್ನ ಕಾಯಮಂ ಬಿಡೆ- |
  ನೆನ್ನುತಿರಲ್ ಜ್ಞಾನಮಿಲ್ಲಿ ಬಾಗಿಹುದೇನೈ!! ||

  • ಪದ್ಯ ಚೆನ್ನಾಗಿದೆ ಶ್ರೀಹರಿಯವರೇ. ಕಂದದ ಗತಿಸುಭಗತೆ ಕೂಡ ಬಹಳ ಚೆನ್ನಾಗಿದೆ. ವಿದ್ಯುನ್ನತಿಶಯ ಶಬ್ದ ಹೇಗೆಂದು ತಿಳಿಯಲಿಲ್ಲ.

   • ಧನ್ಯವಾದಗಳು ಮಂಜುನಾಥ್ ಅವರೇ. ‘ವಿದ್ಯೆಯ ಉನ್ನತಿ’ ಮತ್ತು ‘ಅತಿಶಯ ರೂಪ’, ಇವನ್ನು ಕೂಡಿಸಲು ಪ್ರಯತ್ನಿಸಿದೆ. ಪದ ತಪ್ಪಿದೆ ಎನಿಸುತ್ತಿದೆ. ಸರಿ ಮಾಡಲು ಪ್ರಯತ್ನಿಸುತ್ತೇನೆ.

  • ’ಅನ್ನಮದಂ’ ಇದ್ದಂತೆ ’ಅರ್ಥಮದಂ’ ಎಂದಾಗಬೇಕು. ಇಲ್ಲದಿದ್ದರೆ ’ಮದ’ವು ’ವಿದ್ಯೆ’ಯೆಂಬ ಆ ಉತ್ತರಪದದೊಂದಿಗೆ ಸಮಾಸವಾಗಿ ’ಮದವಿದ್ಯೆ’ಯೆಂದಾಗುತ್ತದೆ. ’ತನುವಿನೊಳ್’ ಎಂಬುದನ್ನು ’ತನುವಂ’ ಎಂಬರ್ಥದಲ್ಲಿ ಬಳಸಿರುವಿರ?

   • ತಿದ್ದಿದ್ದೇನೆ. ‘ತನುವಿನೊಳ್’ ಎಂಬುದನ್ನು ‘ತನುವಿನಲ್ಲಿ’ ಎಂಬ ರೂಪದಲ್ಲಿ ಬಳಸಿದ್ದೆ. ಆದರೆ ‘ತನುವಿನಂ’, ಸರಿಯಾಗಿ ಹೊಂದುತ್ತದೆ. ಧನ್ಯವಾದಗಳು.

    • ಇದೀಗ ಆದಿಪ್ರಾಸ ತಪ್ಪಿತು 🙂 ತನುವಿನಂ ಅಂದರೆ ಏನರ್ಥ ?

     • ಆದಿಪ್ರಾಸಕ್ಕಾಗಿ ಪದ್ಯವನ್ನು ತಿದ್ದಿದ್ದೇನೆ. ತನುವಿನನ್ನು – ದೇಹವನ್ನು – ಎಂಬರ್ಥದಲ್ಲಿ ಬಳಸಿದ್ದೇನೆ. ತಪ್ಪಿದ್ದರೆ ದಯವಿಟ್ಟು ತಿಳಿಸಬೇಕು.

     • ಆದಿಪ್ರಾಸ ಸರಿಹೋಗಿದೆ. ತನುವಿನಂ ಪ್ರಯೋಗ ತಪ್ಪು. ತನುವಂ ಆಗಬೇಕು. ಕಾಯಮಂ/ದೇಹಮಂ ಎಂದು ತಿದ್ದಿಕೊಂಡರಾಯಿತು.

 2. ಸಂತುಲಿತಮಧ್ಯಾವರ್ತಗತಿ|| ಇಂದಿನೆಲ್ಲ ಶಾಲೆಗಳು ಕೂಗಿಕೂಗುತ್ತೆ ಕರೆವುವಲ್ತೆ
  ಬಂದು ಸೇರಿ ಗಿಟ್ಟಿಸಿರಿ ಭೂರಿ ಅಂಕಗಳನೆನ್ನುತೆಂದು|
  ದಂದುಗವ ಕಳೆವೆ ಸದ್ಗುರುವ ಪುಡುಕಿ ಪೋಪನೊರ್ವ ಜಾಣಂ
  ವಂದಿಪಂ ಗುರುತಿಸುತ್ತಲಂತೆವೋಲ್ ಮಾನಿ ಸಿಕ್ಕಲಲ್ಲೇ||

 3. ಲೋಕಮನೆಳ್ಚರಿಪ್ಪೆನೆನುತುಂ ಭವಬಂಧನಮುಕ್ತಿಮಾರ್ಗಮಂ ,
  ಶೋಕವಿದಾರಣಾಧ್ವಮನೆ ತಾಂ ಸಲೆ ತೋರುತೆ ಶಂಕರಾಖ್ಯರಾ
  ನಾಕದವೋಲ್ ಸಲುತ್ತಖಿಲಪಾಪವಿನಾಶಿಯೆನಿಪ್ಪ ಕಾಶಿಯೊಳ್
  ಸೋಕಿಸಿಕೊಂಬೆನೆನ್ನುತೆ ಚಲತ್ಸುರಗಂಗೆಯನೆನ್ನುತೈದಿರ
  ಲ್ಕಾ ಕಮನೀಯ ನಿಮ್ನಗೆಯನಲ್ಲಿಯೆ ಕಂಡನದೊರ್ವ ಶೂದ್ರ ತಾಂ
  ಭೀಕರರೂಪಿ ಧೂಸರಿತದೇಹಿ ವಿಕಾರಕುತುಂಡಮೊಂದುತುಂ
  ಕಾಕದವೋಲ್ ಕರಾಳತನುವೊಂದಿರೆ ನಾಯಿಗಳಿಂದಮಾವೃತಂ
  ಭೇಕದ ಚರ್ಮದನ್ತೆಸೆವ ಚರ್ಮದಿನಾವಗಮುಂ ವೃಣಾಮ್ಬುವಂ
  ನೈಕತೆಯಿಂದೆ ಸೋರಿಸುತುಮಂಟನುಗುಳ್ವ ಮರಂಬೊಲಿರ್ದೊಡಂ
  ನೂಕುತುಮಿರ್ದರೈ ಸಕಲರಾತನಮಿಂತಿರೆ ಶಂಕರರ್ ತದೀ
  ಯಾಕೃತಿಯೀಕ್ಷಿಸಲ್ ಕ್ಷಣಿಕಮಾಯೆಯ ಜಾಲದೆ ಸಿಲ್ಕಿ ಗರ್ವದಿಂ
  “ದಾ ಕಡೆ ಪೋಗು ಪೋ! ಅಧಮನೆನ್ನಯ ಮಾರ್ಗದೊಳೇಕೆ ನಿಂದಪೈ?
  ಶ್ರೀಕರಯೋಗಿ ನಾಂ ಬಗೆಯೆ ನೀಂ ಶವದಾಹಕನೀಚವರ್ಗಜಂ
  ಸೋಕೆ ಮದಂಗಕುಂ ಪತಿತಮಂಗಳನಪ್ಪೆನು ಪೋಗೆನಲ್ಕೆ ಆ
  ಸೂಕರಗಂಧಿ ತಾಂ ನಗುತೆ ಪೇಳ್ದನು “ಚೋದ್ಯಮಿದಲ್ತೆ ಶಂಕರಾ?!
  ಸಾಕೆನುತೆಂಬೆ ನೀಂ ತನುವಿಗಂಟಿದ ಮೋಹಮಿದೆಂತುಟೀಗಳೆ
  ನ್ನಾಕಡೆ ಪೋಗೆನುತ್ತೆ ಬೆಸವೇಳ್ವೆ ವಿಚಿತ್ರವಿದಗ್ಧ! ಯೋಚಿಸ
  ಲ್ಕೀ ಕಟುಮಾತ ಕೇಳ್ ಸಕಲರಾಂತವಸುಂಧರೆಯೊಂದು ಮೇಲಕಿ
  ರ್ಪಾ ಕರಮಾಗಸಂ- ಶ್ವಸನವಾಯುವದೊಂದೆನೆ ಹೇ! ಯತೀಶ್ವರಾ!
  ಏಕಡೆ ಪೋಪೆನಾಮ್ ಜಗಮಾನಾವರಿಸಿರ್ಪುದು ಬ್ರಹ್ಮಮಾದೊಡಂ(ಶಿ.ದ್ವಿ)?”
  ಕೋಕನದಾಕ್ಷಮಿತ್ರ ಶಿವನೀತನೆನುತ್ತೆ “ಮದೀಯ ಗರ್ವನಿ
  ರ್ಮೋಕಮನಿಂತು ತಾಂ ಕಳೆಯೆ ಲೀಲೆಯನೇ ಬಗೆಯಿಂದೆ ಗೈದನೇ!
  ಸಾಕೃತಿವೆತ್ತ ನಿರ್ಗುಣನೆ! ಕಾಯ್ಗೆ ವಿರಾಗಮನೆ”ನ್ನುತುಂ ಸೊಗ
  ಕ್ಕಾಕರನಾದನಂ ನಮಿಸಿ ಶಂಕರರಾದರು ಲೋಕಶಂಕರರ್ //

  ಹೆಚ್ಚೇನು ವರ್ಣನೆ ಸಾಧ್ಯವಿಲ್ಲದ್ದರಿಂದ(ನನಗೆ) ಘಟನಾವಳಿಯನ್ನು ಉತ್ಪಲಮಾಲಾಮಾಲಿಕೆಯ ರೂಪದಲ್ಲಿ ಬರೆದಿದ್ದೇನೆ.

  • Prolific. You can take to penning a khaNDakAvya now and then graduate to mahAkAvya. My best wishes.

   • Thank you sir.I will try my level best to pen a khanDakAvya.

    • You could have had different prAsa-s every four lines, but you have had just one throughout. Quite an achievement!

     • Oh.. Thanks.. Usually single ಪ್ರಾಸ(or ಸಮೀಪಪ್ರಾಸ) is maintained while writing ಮಾಲಿಕೆ, as I have seen this in the padyAs of Ganesh sir as well as Neelakantha sir.

 4. “ಈ ರೇಡಿಯಾಲಜಿಸ್ಟನು ನರ್ಸೊಳೇನನ್ನು
  ನೋಡಿ ವರಿಸಿದನವಳ”ನೆಂಬರೆಲ್ಲರ್|
  ತಾಡಾಗಿ ಬೆಳೆದಿರ್ಪ ಈತನೊಳದೇನ ತಾಂ
  ಬೇಡುತಿರ್ಪನೊ ಯೋಗಿ ಕಾಣುತೇನಂ??

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)