Apr 302018
 

ಈ ಕೆಳಕಂಡ ಸಮಸ್ಯೆಯ ಸಾಲುಗಳನ್ನು ಪರಿಹರಿಸಿರಿ

ಆಟವೆಲದಿ:

ಪಲವು ಬಾರಿ ಬಾಳೆ ಫಲಮನೀಗುಂ

೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ವಿಷ್ಣು  ವಿಷ್ಣು

೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ

 

ತೇಟಗೀತಿ:

ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ

೧ ರಿಂದ ೪ನೆ ಸಾಲಿನವರೆಗೆ:: ಬ್ರಹ್ಮ  ವಿಷ್ಣು  ವಿಷ್ಣು  ಬ್ರಹ್ಮ  ಬ್ರಹ್ಮ

  27 Responses to “ಪದ್ಯಸಪ್ತಾಹ ೩೦೫: ಸಮಸ್ಯಾಪೂರಣ”

  1. ಬೇಟಮಲ ಸುಮನಕೆ ಬಿಗುವಾಟಂ ಮೇಣಾ
    ಕೂಟದೊಳ್ ಪಾಲ್ಗೊಳುವ ಸಂಭ್ರಮಂ ಗಡ ಹುಡು-
    ಕಾಟದೊಳ್ ಮುಂಬರುವ ರವಿವಾರಂ ಕೊಪ್ಪಲ್ –
    ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುo !!

    “ಕೊಪ್ಪಲತೋಟ”ನ ವಿವಾಹ ಸಂದರ್ಭಕ್ಕೆ ಈ “ತೇಟಗೀತಿ” ಪೂರಣ !!

    • ಸರಿಯಾಗಿ ಹೇಳಿದ್ದೀರಿ. ಗಣೇಶಭಟ್ಟರ ವಿವಾಹದಂದು ಅವರೂರಿನಲ್ಲಿದ್ದ ಗೃಹಸಂಖ್ಯೆಗಿಂತ ವಾಹನಸಂಖ್ಯೆಯೇ ಹೆಚ್ಚು ಇತ್ತು!

  2. ತೋ ಟ ದೊ ಳ ಗೆ ಲ್ಲ ವಾ ಹ ನಂ ಚ ಲಿ ಸು ತಿ ರ್ಕುಂ
    ಈ ಸಾಲು
    ಬ್ರಹ್ಮ ವಿಷ್ಣು ವಿಷ್ಣು ಬ್ರಹ್ಮ ಬ್ರಹ್ಮ
    ಈ ಬಂಧಕ್ಕೆ ಕೂಡಿಸುವ ಬಗೆಯನ್್ನು ಯಾರಾದಾರೂ ತಿಳಿಸಬಲ್ಲಿರಾ?

    -ಪ್ರಭು

    • |ತೋಟ| ದೊಳಗೆಲ್ಲ |ವಾಹನಂ |ಚಲಿಸು |ತಿರ್ಕುಂ|
      |- u| u u – u |- u -|u u u|- -|
      | 2 | 3 | 3 | 2 | 2 | ಅಂಶ. (ಮೊದಲ ಎರಡು ಲಗು -1 ಅಂಶ )
      |ಬ್ರಹ್ಮ|ವಿಷ್ಣು |ವಿಷ್ಣು |ಬ್ರಹ್ಮ| ಬ್ರಹ್ಮ|

      2 ಅಂಶ – ಬ್ರಹ್ಮ ಗಣ
      3 ಅಂಶ – ವಿಷ್ಣು ಗಣ
      4 ಅಂಶ – ರುದ್ರ ಗಣ

    • http://padyapaana.com/?page_id=1024 ಇಲ್ಲಿ ಎಲ್ಲವೂ ಸವಿವರವಾಗಿ ಇದೆ.

    • ಪ್ರಭುಗಳೆ, ಪದ್ಯವು ಬರಲಿ…..

  3. ಆಟವೆಲದಿ:

    ಕಾಲಾಕಾಲದ ನಿರಂತರಾಭ್ಯಾಸದಿಮಾಟ-
    ವೆಲದಿ ಸೊಗದಿಂ ಪರಿಪೂರ್ಣಮಕ್ಕುಂ
    ಸಲಿಲ ವಾಯು ರವಿಕಾಂತಿ ಸಮಪ್ರಮಾಣದಿ
    ಪಲವು ಬಾರಿ ಬಾಳೆ ಫಲಮನೀಗುಂ

    ತೇಟಗೀತಿ:

    ಪೋಟಿಯಿಂದಲ್ ಗಬಗಬನೆ ಸ್ನೇಹಿತರ ಸ್ಪರ್ಧಾ-
    ಕೂಟದೊಳ್ತಿಂದ ಪ್ಯಾಟಿಯರಗದಿರಲ್ ಮತ್ತೊಂ-
    ದೂಟಮಮಪರಾಹ್ನದೊಳ್ ಮಾಡಿದವನುದರ
    ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ

    (ಆಟವೆಲದಿ ಮತ್ತು ತೇಟಗೀತಿ ನನ್ನ ಮೊದಲ ಪ್ರಯತ್ನ. ತೇಟಗೀತಿಯನ್ನು ಹಾಸ್ಯ ರೂಪದಲ್ಲಿ ಬರೆದಿದ್ದೇನೆ. ತಪ್ಪಿದ್ದಲ್ಲಿ ಕ್ಷಮಿಸಿ ತಿದ್ದಬೇಕು. ಧನ್ಯವಾದಗಳು.)

    • ಕಾಲಾ/ಕಾಲ/ದ ನಿರಂ/ತರಾಭ್ಯಾ/ಸದಿಮಾಟ-
      ವೆಲದಿ/ ಸೊಗದಿಂ/ ಪರಿಪೂ/ರ್ಣ/ಮಕ್ಕುಂ
      ಸಲಿಲ/ ವಾಯು/ ರವಿಕಾಂ/ತಿ ಸಮಪ್ರ/ಮಾಣದಿ
      ಪಲವು/ ಬಾರಿ/ ಬಾಳೆ/ ಫಲಮ/ನೀಗುಂ
      1. ಇಲ್ಲಿ ಮೊದಲ ಅಕ್ಷರವು ಲಘುವಾಗಬೇಕು. ಉಳಿದೆಲ್ಲ ಪಾದಗಳ ಮೊದಲ ಅಕ್ಷರಗಳು ಸಿಂಹಪ್ರಾಸವಾಗಿರುವುದರಿಂದ ಮೊದಲನೆಯದು ಗಜಪ್ರಾಸವಿರಲಾಗದು.
      2. ಮೊದಲ ಸಾಲಿನ ನಾಲ್ಕನೆಯ ಗಣವು (ತರಾಭ್ಯಾ) ಲಗಾದಿಯಾಗಿದೆ. ಅಂಶಗಣದಲ್ಲಿ ಕರ್ಷಣಕ್ಕೆ ಅವಕಾಶವಿದ್ದಾಗ್ಯೂ ಲಗಾದಿಯು ಅಸಾಧು.
      3. ಎರಡನೆಯ ಸಾಲಿನ ನಾಲ್ಕನೆಯ ಗಣದಲ್ಲಿ ಒಂದು ಲಘು ಮಾತ್ರವಿದೆ.
      4. ಮೂರನೆಯ ಪಾದದ ನಾಲ್ಕನೆಯ ಗಣದಲ್ಲಿ (ತಿ ಸಮಪ್ರ) ಮೊದಲ ಅಕ್ಷರದ ನಂತರವೇ ಪದವು ಒಡೆದರೆ ಶ್ರುತಿಕಟುವಾಗುತ್ತದೆ.
      ಹೀಗೊಂದು ಸವರಣೆ:
      ಕಲಿಕೆಯದಿರೆ ಸತತಂ ಕೈಪಳಗುತ್ತಾಟ-
      ವೆಲದಿ ಸೊಗದಿಂ ಪರಿಪೂರ್ಣವದುಮಕ್ಕುಂ|
      ಸಲಿಲ-ವಾಯು-ತಾಪಂಗಳು ಭೂರಿಯೊದಗಿರೆ
      ಪಲವು ಬಾರಿ ಬಾಳೆ ಫಲಮನೀಗುಂ||
      ———
      ಪ್ಯಾಟಿಯರಗದಿರಲ್?

      • ಪ್ಯಾಟಿ – burger ನಲ್ಲಿರುವುದು.

        ಬಾಲಿಶ ಪ್ರಶ್ನೆಯಾಗಿದ್ದರೆ ಕ್ಷಮಿಸಿ. ಆಟವೆಲದಿಯನ್ನು,

        2. ವೆಲದಿ/ ಸೊಗದಿಂ/ ಪರಿ/ಪೂರ್ಣ/ಮಕ್ಕುಂ
        3. ಸಲಿಲ/ ವಾಯು/ ರವಿ/ಕಾಂತಿ ಸಮ/ಪ್ರಮಾಣದಿ

        ಹೀಗೇಕೆ ಮಾಡಬಾರದು? ದಯವಿಟ್ಟು ತಿಳಿಸಿ.

      • ಶ್ರವಣದಲ್ಲಿ ನಾಲ್ಕು ಮಾತ್ರೆ ಹಾಗೂ ದೃಶ್ಯದಲ್ಲಿ ಮೂರು ಅಥವಾ ನಾಲ್ಕು ಮಾತ್ರೆಗಳಿರಬೇಕಾದ ಬ್ರಹ್ಮಗಣಕಲ್ಪಗಳೆಂದರೆ ನನನಾ, ನಾನಾ, ನಾನs, ನನನs ಮಾತ್ರ. http://padyapaana.com/?page_id=1024 ಇಲ್ಲಿ ಎಲ್ಲವೂ ಸವಿವರವಾಗಿ ಇದೆ.

        • ಗಣಗಳ ವಿನ್ಯಾಸವನ್ನು ಸರಿಯಾಗಿ ಗಮನಿಸಿರಲಿಲ್ಲ. ತುಂಬಾ ಧನ್ಯವಾದಗಳು ಸರ್. ಮತ್ತೊಮ್ಮೆ ಸರಿಪಡಿಸಿ ಬರೆಯಲು ಪ್ರಯತ್ನಿಸುತ್ತೇನೆ.

      • ಕಲಿಕೆsಯದಿರೆs – ಎಂದು ಓದುವುದು ಕಷ್ಟವಾಗುತ್ತಿದೆ. ಕಲಿಕೆsಯsದಿsರೆs ಆಗುತ್ತದೆ. ಕಲಿಕೆsಯಾsಗೆs – ಸರಿ.

    • ಪೋಟಿ/ಯಿಂದಲ್ ಗ/ಬಗಬನೆ ಸ್ನೇ/ಹಿತರ/ ಸ್ಪರ್ಧಾ-
      ಕೂಟ/ದೊಳ್ತಿಂದ/ ಪ್ಯಾಟಿಯರ/ಗದಿರಲ್/ ಮತ್ತೊಂ-|
      ದೂಟ/ಮಮಪರಾ/ಹ್ನದೊಳ್ ಮಾ/ಡಿದವ/ನುದರ-
      ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ||
      1. ಬಗಬನೆ ಸ್ನೇ – ದೃಶ್ಯದಲ್ಲೇ ೭ ಮಾತ್ರೆಗಳಿವೆ!
      2. ಪ್ಯಾಟಿಯರ – ನಾನನನ is not a permissible ವಿಷ್ಣುಗಣ
      3. ಹ್ನದೊಳ್ ಮಾ – ಲಗಾದಿ
      4. ಉದರತೋಟ – ಅರಿಸಮಾಸ

      ಹೀಗೊಂದು ಸವರಣೆ: ಪೋಟಿಯಿಂದೆ ಗಬಗಬ ಸ್ನೇಹಿತರ ಸ್ಪರ್ಧಾ-
      ಕೂಟದೊಳ್ ಸೇವಿಸಿದುದರಗದಿರಲ್ ಮತ್ತೊಂ-|
      ದೂಟಮಮಪರಾಹ್ನದೊಳು ಮಾಡಿದನ ಪೊಡೆಯ
      ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ||

  4. ಸ್ವಭಾವೋಕ್ತಿಯಲ್ಲ. ಸ್ವಭಾವವನ್ನು ಕುರಿತಾದ ಹೀನೋಕ್ತಿ 🙁
    ಪೊಲದೆ ನಾಟೆ ಗಡ್ಡೆಯನ್ನೊಮ್ಮೆ ಸಾಕು ಕೇಳ್
    ಪಲವು ಬಾರಿ ಬಾಳೆ ಫಲಮನೀಗುಂ|
    ಫಲವ ನೀಡಿ ಬಾಡುವುದು ಗಿಡ, ಮೋಸೆನಿತೋ
    ಬಲಿವುದುಂಟು ಸುತ್ತ ವರ್ಷವರ್ಷಂ||

  5. ಆಟಿಕೆಯವೊಲು ನೇಗಿಲ ನಡೆಸಿ ನಡೆಸಿ
    ತೋಟಗಾರಂ ಕೇಳ್ ಪಿಂತೆಲ್ಲ ನೆಲವನುಳುವಂ|
    ಮೇಟಿಗಾಲಸ್ಯವಾಯ್ತಿಂದು, ಬಂತು ಯಂತ್ರಂ
    ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ|| (Cultivator, Trowel, Seed drill, De-weeder, Harvester, Baler etc.)

  6. ಆಟವೆಲದಿ:

    ಪಲವಂ ಬಲ್ಲ ಜ್ಞಾನವೃದ್ಧರಿಂ ಬಲಿಯದ (ಪಲವಂ/ ಬಲ್ಲ/ ಜ್ಞಾನ/ವೃದ್ಧರಿಂ/ ಬಲಿಯದ)
    ಪಲವು ಗಹನ ವಿಷಯಗಳನರಿದು ಮ- (ಪಲವು/ ಗಹನ/ ವಿಷಯ/ಗಳನ/ರಿದು ಮ)
    ತ್ಕೆಲವುಗಳಂ ಸತತಾಭ್ಯಾಸದಿಂದ ಪಡೆಯಲ್ (ತ್ಕೆಲ/ವುಗಳಂ/ ಸತತಾ/ಭ್ಯಾಸದಿಂ/ದ ಪಡೆಯಲ್)
    ಪಲವು ಬಾರಿ ಬಾಳೆ ಫಲಮನೀಗುಂ (ಪಲವು/ ಬಾರಿ/ ಬಾಳೆ (ಬಾಳ್ + ಎ, ಹೀಗೂ ಆಗಬಹುದೇ?)/ ಫಲಮ/ನೀಗುಂ)

    ತೇಟಗೀತಿ:

    ಓಟವೋಡಿದರ್ ಪಲವರ್ ಕಚೇರಿಯ ಬಳಿ (ಓಟ/ವೋಡಿದರ್/ ಪಲವರ್ ಕ/ಚೇರಿ/ಯ ಬಳಿ)
    ಪೋಟಿಮಾಡಿದರೂಬರಿನವರೋಲಾಯೆಂ- (ಪೋಟಿ/ಮಾಡಿದ/ರೂಬರಿ (uber)/ನವರೋ/ಲಾ (ola=hi)ಯೆಂ)
    ದಾಟವಾಡುತಿರಲ್ ಸರ್ವರ್ ಬೆಂಗಳೂರಿನ (ದಾಟ/ವಾಡುತಿ/ರಲ್ ಸರ್ವರ್/ ಬೆಂಗ/ಳೂರಿನ)
    ತೋಟದೊಳಗೆಲ್ಲ ವಾಹನಂ ಚಲಿಸುತಿರ್ಕುಂ (ತೋಟ/ದೊಳಗೆಲ್ಲ/ ವಾಹನಂ/ ಚಲಿಸು/ತಿರ್ಕುಂ)

    (ಮೊದಲ ಪ್ರಯತ್ನ ಛಂದೋಬದ್ದವಾಗಿ ಸಂಪೂರ್ಣ ತಪ್ಪಾದ ಕಾರಣ ಎರಡನೆಯ ಪ್ರಯತ್ನ)

    • /ಭ್ಯಾಸದಿಂ/ದ ಪಡೆಯಲ್ -> ಒಂದಕ್ಷರವನ್ನು ಬೇರೆ ಗಣಕ್ಕೆ ಸೇರಿಸದ್ದಿದ್ದರೆ ಉತ್ತಮ.

  7. ಬಲಿತ ಗಂಡಿಗೆ ತಂದೆಯೊಂದೇಟನಿತ್ತರೆ
    ಮಲೆತು ತಿರುಗಿ ನಿಲ್ವನಾಗಬೇಗ|
    ನೆಲದ ಗುಣವೊ ಕಾಣೆ ಕಡಿದರೂ ಮೂಡುತ್ತೆ
    ಪಲವು ಬಾರಿ ಬಾಳೆ ಫಲಮನೀಗುಂ||

    • ಬಲಿತ ಮಗನ ತಂದೆಯೊಂದೇಟನಿತ್ತರೆ
      ಮಲೆತು ತಿರುಗಿ ನಿಲ್ವನಾಗಬೇಗ|
      ನೆಲದ ಗುಣವೊ ಕಾಣೆ ಕಡಿದರೂ ಮೂಡುತ್ತೆ
      ಪಲವು ಬಾರಿ ಬಾಳೆ ಫಲಮನೀಗುಂ||

      • ಬಲಿತ ಮಗಗೆ ತಂದೆಯೊಂದೇಟನಿತ್ತರೆ
        ಮಲೆತು ತಿರುಗಿ ನಿಲ್ವನಾಗಲೇ ಮೇಣ್
        ನೆಲದ ಗುಣವೊ ಕಾಣೆ ಕಡಿದರೂ ಮೂಡುತ್ತೆ
        ಪಲವು ಬಾರಿ ಬಾಳೆ ಫಲಮನೀಗುಂ||

    • ನೆಲದ ಗುಣಮಂತಿದ್ದೊಡಾವಗಂ ಫಲವಹುದು
      ತಿಲ-ಶಾಲಿ-ಶಸ್ಯ-ಪ್ರಿಯಂಗು-ಕಟುಕಂ (Sesame, Rice, Maize, Millet and Mustard respectively)|
      ಪಲವು ಫಸಲಂ ಬಾಳೆಯೀವುದಕೆ ಕಾರಣಂ
      ಸುಳಿಯದರ ಹೀನಮಿರ್ಪುದು ಕಾಣೆಯೇಂ 🙂 🙂

  8. ಪಾಟಿ ತಂದಂದೆ ಕಂದಂಗೆ ಕೊಟ್ಟು ನಾನು
    ತೋಟದಂದದ ಚಿತ್ರವ ಬರೆಯೋ ಎಂದೆ|
    ಮಾಟದಿಂದಲೇ ಗೀಚಿದಂ ನೋಡಲಾಹಾ!
    ತೋಟದೊಳಗೆಲ್ಲ ವಾಹನಂ ತಿರುಗುತಿರ್ಕುಂ||

  9. ತೋಟದೂರೆಂದು ಬೆಂಗಳೂರಾಗ ಮೆರೆದು
    ಮಾಟದಿಂದಲೆ ಕಣ್ಣಿಂಬು ಮಾಡುತ್ತಿತ್ತು|
    ಅಯ್ಟೀ ಬಂದದ್ದೇ ಬದಲಾಯ್ತು ನೋಟಂ ಹಳೆಯ
    ತೋಟದೊಳಗೆಲ್ಲ ವಾಹನಂ ತಿರುಗುತಿರ್ಕುಂ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)