Oct 012011
ನವಕವಿತೆ
ಕದ-ಲುವುದು, ಕದ-ಲಿಪುದು,
ಬದ-ಲಪ್ಪುದು, ಬದ-ಲಿಪುದು
ಹಾ-ಡುವುದು, ಹಾ-ಡಿಸುವುದು
ನಿಡುನಿದ್ದೆಯಿನ್ -ಎಬ್ಬಿಸುವುದು
ಮುಂದೆ-ಮುಂದೆ- ಸಾಗಿಸುವದು
ಪರಿಪೂರ್ಣತೆ ಬಾಳ್ಗೀವುದು
ಬೇಕಿದೆ ನವಕವಿತೆಗೆ
(ಆಧಾರ:ಶ್ರೀಶ್ರೀ)
“కద-లేదీ, కద-లించే-దీ,
మా-రేదీ,- మా-ర్పించే-దీ,
పా-డేదీ,- పా-డించే-దీ,
పెను-నిద్దుర- వద-లించే-దీ,
మును-ముందుకు- సా-గించే-దీ,
పరి-పూర్ణపు- బ్రతు-కిచ్చే-దీ,
కా-వాలోయ్- నవ-కవనా-నికి”
ಮೌಳಿಯವರೆ – ಈ ಪದ್ಯ ಓದುವ ಧಾಟಿ ಸರಿಯಾಗಿ ತಿಳಿಯುತ್ತಿಲ್ಲ. ಪದ್ಯ ಓದಿರುವುದನ್ನು ರೆಕಾರ್ಡ್ ಮಾಡಿ ಪದ್ಯದ ಜೊತೆಗೆ ಸೇರಿಸುವಿರಾ ?
ಅಗತ್ಯವಾದ ತಂತ್ರಾಂಶವನ್ನು ಕಲಿತು, ಬಿಡುವಾದಾಗ, ಖಂಡಿತಮಾಡುತ್ತ್ತೇನೆ. ನಿಮಗೆ ತಿಳಿದಂತೆ ೮೦ರ ದಶಕದ ನವ್ಯ ಕವಿತೆಗಳಲ್ಲಿ, ಭಾವಗೀತಾತ್ಮಕ ರಚನೆಗಳಲ್ಲಿ, ಮಾತ್ರಾಗಣನಿಯಮಗಳಿಗಿಂತಲೂ, ಅರ್ಥ,ಗೇಯತೆ ಪ್ರಾಧಾನ. ಈ ಅನುವಾದದಲ್ಲಿ, ಮೂಲದ ಧಾಟಯನ್ನೇ ಬಹುಮಟ್ಟಿಗೆ ಅನುಸರಿಸಿದ್ದೇನೆ. ಕದ ಲುವುದುs, ಕದ ಲಿಪುದುs, ಬದ-ಲಪ್ಪುದು, ಬದ ಲಿಪುದುs 2+4 ರ ಓಟವನ್ನು ಗಮನಿಸಿ ಓದಿನೋಡಿ. 6 ಮಾತ್ರೆಗಳನ್ನು 3+3. 2+4, 4+2 ಮಾಡುವ ಸ್ವೇಚ್ಛೆಯಲ್ಲಿಯೂ ತ್ರಿಮಾತ್ರಾಣ ಅಥವಾ ಷಣ್ಮಾತ್ರಗಣದ ನಡೆಯಿರುತ್ತದೆ, ವಂದನೆಗಳು.
ವಿವರಣೆಗೆ ಹಾಗೂ ಓದಿಗೆ ಧನ್ಯವಾದಗಳು. ಈಗ ಸರಾಗವಾಯಿತು 🙂
ಕೊಂಚ ವಿಸ್ತರಿಸುವ ಆಸೆ ::
ಹರಿಯುವುದು ಹರಿಸುವುದು
ಕುಣಿಯುತ್ತಲಿ ಕುಣಿಸುವುದು
ಮೇಲಕೆತ್ತಿ ಹೊಳೆಸುವುದು
ಗುಂಗನೆತ್ತಿ ಗೇರಿಸುವುದು
ಪ್ರಕೃತಿಯಾ ಮರ್ಮಗಳನು
ಕಾಣುವುದು ಕಾಣಿಸುವುದು
ಬೇಕಿದೆ ನವಕವಿತೆಗೆ
ಬೇಕಿದೆ ನವಕವಿತೆಗೆ
The genius store called, they’re running out of you.