Oct 012011
 

 

ನವಕವಿತೆ

ಕದ-ಲುವುದು, ಕದ-ಲಿಪುದು,

ಬದ-ಲಪ್ಪುದು, ಬದ-ಲಿಪುದು

ಹಾ-ಡುವುದು, ಹಾ-ಡಿಸುವುದು

ನಿಡುನಿದ್ದೆಯಿನ್ -ಎಬ್ಬಿಸುವುದು

ಮುಂದೆ-ಮುಂದೆ- ಸಾಗಿಸುವದು

ಪರಿಪೂರ್ಣತೆ ಬಾಳ್ಗೀವುದು

ಬೇಕಿದೆ ನವಕವಿತೆಗೆ


(ಆಧಾರ:ಶ್ರೀಶ್ರೀ)

Howtoread

 

“కద-లేదీ, కద-లించే-దీ,
మా-రేదీ,- మా-ర్పించే-దీ,
పా-డేదీ,- పా-డించే-దీ,
పెను-నిద్దుర- వద-లించే-దీ,
మును-ముందుకు- సా-గించే-దీ,
పరి-పూర్ణపు- బ్రతు-కిచ్చే-దీ,
కా-వాలోయ్- నవ-కవనా-నికి”

  5 Responses to “ನವಕವಿತೆಯಲ್ಲೇನಿರಬೇಕು?”

  1. ಮೌಳಿಯವರೆ – ಈ ಪದ್ಯ ಓದುವ ಧಾಟಿ ಸರಿಯಾಗಿ ತಿಳಿಯುತ್ತಿಲ್ಲ. ಪದ್ಯ ಓದಿರುವುದನ್ನು ರೆಕಾರ್ಡ್ ಮಾಡಿ ಪದ್ಯದ ಜೊತೆಗೆ ಸೇರಿಸುವಿರಾ ?

  2. ಅಗತ್ಯವಾದ ತಂತ್ರಾಂಶವನ್ನು ಕಲಿತು, ಬಿಡುವಾದಾಗ, ಖಂಡಿತಮಾಡುತ್ತ್ತೇನೆ. ನಿಮಗೆ ತಿಳಿದಂತೆ ೮೦ರ ದಶಕದ ನವ್ಯ ಕವಿತೆಗಳಲ್ಲಿ, ಭಾವಗೀತಾತ್ಮಕ ರಚನೆಗಳಲ್ಲಿ, ಮಾತ್ರಾಗಣನಿಯಮಗಳಿಗಿಂತಲೂ, ಅರ್ಥ,ಗೇಯತೆ ಪ್ರಾಧಾನ. ಈ ಅನುವಾದದಲ್ಲಿ, ಮೂಲದ ಧಾಟಯನ್ನೇ ಬಹುಮಟ್ಟಿಗೆ ಅನುಸರಿಸಿದ್ದೇನೆ. ಕದ ಲುವುದುs, ಕದ ಲಿಪುದುs, ಬದ-ಲಪ್ಪುದು, ಬದ ಲಿಪುದುs 2+4 ರ ಓಟವನ್ನು ಗಮನಿಸಿ ಓದಿನೋಡಿ. 6 ಮಾತ್ರೆಗಳನ್ನು 3+3. 2+4, 4+2 ಮಾಡುವ ಸ್ವೇಚ್ಛೆಯಲ್ಲಿಯೂ ತ್ರಿಮಾತ್ರಾಣ ಅಥವಾ ಷಣ್ಮಾತ್ರಗಣದ ನಡೆಯಿರುತ್ತದೆ, ವಂದನೆಗಳು.

    • ವಿವರಣೆಗೆ ಹಾಗೂ ಓದಿಗೆ ಧನ್ಯವಾದಗಳು. ಈಗ ಸರಾಗವಾಯಿತು 🙂

  3. ಕೊಂಚ ವಿಸ್ತರಿಸುವ ಆಸೆ ::

    ಹರಿಯುವುದು ಹರಿಸುವುದು
    ಕುಣಿಯುತ್ತಲಿ ಕುಣಿಸುವುದು
    ಮೇಲಕೆತ್ತಿ ಹೊಳೆಸುವುದು
    ಗುಂಗನೆತ್ತಿ ಗೇರಿಸುವುದು
    ಪ್ರಕೃತಿಯಾ ಮರ್ಮಗಳನು
    ಕಾಣುವುದು ಕಾಣಿಸುವುದು
    ಬೇಕಿದೆ ನವಕವಿತೆಗೆ
    ಬೇಕಿದೆ ನವಕವಿತೆಗೆ

  4. The genius store called, they’re running out of you.

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)