Oct 222018
 

ಕೆಳಗಿನ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಚಿತೆ

೨. ಅರಮನೆಯ ಗುಟ್ಟು

೩. ಭೋಜನ ವಿರಾಮ

  5 Responses to “ಪದ್ಯಸಪ್ತಾಹ ೨೩೦: ವರ್ಣನೆ”

  1. ಚಿತೆ:
    ಎಚ್ಚರಿಸೆ ಮನುಜನಂ ಮೊದಲು ಸುಟ್ಟಂ ದೇವ-
    ನುಚ್ಚರಿಪ ನಾಲಗೆಯ, ಮೇಣಿನಿಂದಂ| (ಸುಡುಕಾಫಿಯನ್ನು ಕುಡಿದಾಗ)
    ಕಿಚ್ಚ ತಾಗಿಸಿಹ ಕೈಗಾಗಲುಂ ಜಡಮಿರಲ್ (ಬೇಯುವ ಪಾತ್ರೆಯನ್ನು ಹಿಡಿದಾಗ)
    ಹಚ್ಚಿದಂ ಬೆಂಕಿಯಂ ಮೈಗೆಲ್ಲಮುಂ||

    • ದಯವಿಟ್ಟು ತಾತ್ಪರ್ಯ ತಿಳಿಸುವಿರಾ?

      • ಬಿಸಿಕಾಫಿಯನ್ನು ಆತುರಾತುರವಾಗಿ ಕುಡಿದು ನಾಲಗೆಸುಟ್ಟುಕೊಳ್ಳುವುದು, ಅಡುಗೆಮಾಡಹೋಗಿ ಬಿಸಿಪಾತ್ರೆಯನ್ನು ಒಲೆಮೇಲಿಂದ ಇಳಿಸಿ ಕೈಸುಟ್ಟುಕೊಳ್ಳುವುದು ಎಲ್ಲರ ಅನುಭವವೂ ಹೌದು. ಇವನ್ನು ದೇವರೇ ಮಾಡಿದ, ಯಾವ ತಪ್ಪಿಗೋ ಶಿಕ್ಷೆ ಎಂಬಂತೆ ಮಾಡಿದ. ಹಾಗೂ ಎಚ್ಚೆತ್ತುಕೊಳ್ಳದಿದ್ದರೆ, ಇಡಿಯ ಮೈಯನ್ನೇ ಸುಡುತ್ತಾನೆ – ಸಾವು/ ಚಿತೆ. ಎಷ್ಟೋ ವಿಷಯಗಳಲ್ಲಿ ನಾವು ಸಾಯುವವರೆಗೂ ಎಚ್ಚೆತ್ತುಕೊಳ್ಳುವುದಿಲ್ಲ, ಅಲ್ಲವೆ?

  2. ಚಿತೆ:
    ಸುಟ್ಟೊಡೇಂ ದೇಹವನೆ ಸುಡುವುದೇಂ ದುರಿತಗಳ
    ನಿಟ್ಟೊಡಂ ಬೆಂಕಿಯನೆ ಮಸಣದೊಳಗಂ?
    ಕಟ್ಟಿಗೆಯ ಕಂತೆಯಿದು ದೇಹಗಂಧವನಳಿಪು
    ದಟ್ಟುವುದೆ ವಾಸನೆಗಳಂ ಜೀವದಿಂ?

    • ಇನ್ನಾವ ದುಷ್ಕೃತ್ಯ-ಸತ್ಕೃತ್ಯವೆಸಗನಿವ,
      ಮನ್ನಣೆಗೆ-ನಿಂದೆಗೇರಿಳಿಯನೆಂದು|
      ಬನ್ನದಿನ್ನೊಂದು ದೇಹದೆ ಸಂಚಿತವನಿಡುತೆ
      ಚೆನ್ನಿನಾಡಿಹುದು ಬಿದಿ ಜೀವಿಗಳೊಳೈ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)