ಪದ್ಯಸಪ್ತಾಹ ೨೩೧: ಚಿತ್ರಕ್ಕೆ ಪದ್ಯ ಚಿತ್ರಕ್ಕೆ ಪದ್ಯ, ಪದ್ಯ ಕಲೆ Add comments Oct 292018 8 Responses to “ಪದ್ಯಸಪ್ತಾಹ ೨೩೧: ಚಿತ್ರಕ್ಕೆ ಪದ್ಯ” ಅನಂತಕೃಷ್ಣ says: November 1, 2018 at 2:55 pm ತಾಯಿ ಕೃಷ್ಣನನ್ನು ಊಟಮಾಡುವಂತೆ ಒಲಿಸುವ ಪ್ರಯತ್ನದಲ್ಲಿದ್ದಾಳೆ ಎಂದುಕೊಂಡು ಬರೆದ ಪದ್ಯಗಳು.. ಹಿಂದೊಮ್ಮೆ ಕಂಬದಿಂದುದಿಸುತಲಿ ರಕ್ಕಸನ ನೊಂದೇಟಿಗೇ ಕೊಂದೆಯಂತೆ ಕಂದಾ.. ಇಂದುವದನಾ! ಎನ್ನನೇಕಿಂದು ಕಾಡುತಿಹೆ ಬಂದೊಮ್ಮೆ ಭೋಜನವನುಣಲಾರೆಯಾ? ಭ್ರಮರಮಂಬೊಲುತೆ ನೀಂ ಸುಮನಗಳ ಮಧ್ಯದಲಿ ಗಮಿಪುದೇಕೈ? ಚೋರ! ರಮಿಪುದೇಕೈ? ಗಮನಿಸೈ..ಹೆತ್ತೊಡಲ ಕರೆಯನೀನಾಲಿಸುತೆ ಸಮಚಿತ್ತದಿಂದುಣಿಸನುಣಲಾರೆಯಾ? ಬಗೆಬಗೆಯ ತಿನಿಸುಗಳ ನಾನಿತ್ತೊಡೇನಂತೆ? ಮೊಗೆಮೊಗೆದು ತಿನುವೆ ನೀಂ ಬೆಣ್ಣೆಯನ್ನೇ ಮಿಗೆ ಸಂತಸವು ನಿನಗೆ ಕದಿವುದರೊಳೇತಕೈ? ನಗುನಗುತೆ ಬಂದುಣ್ಣೊ ಮುದ್ದು ಕಂದಾ.. Reply ಮಂಜ says: November 1, 2018 at 5:30 pm ತುಂಬ ಚೆನ್ನಾಗಿವೆ. ಎರಡನೇಯ ಪದ್ಯದಲ್ಲಿ ಒಂದು ಶ್ಲೇಷಸಾಧ್ಯತೆ ಹೊಳೆಯಿತು. ಸುಮವನ್ನು ಸುಮನವನ್ನಾಗಿಸಿದರೆ ಹೂವುಗಳಿಗೂ ಸಲ್ಲುತ್ತದೆ, ಒಳ್ಳೆಯ ಮನಸ್ಸುಗಳಲ್ಲಿ ಚಲಿಸುವವನೆಂದೂ ಅರ್ಥ ಬರುತ್ತದೆ. Reply ಅನಂತಕೃಷ್ಣ says: November 1, 2018 at 8:10 pm ಧನ್ಯವಾದಗಳು..ನೀನಂದಂತೆಯೇ ತಿದ್ದಿದ್ದೇನೆ Reply ಮಂಜ says: November 1, 2018 at 9:44 pm ಸುಮನತತಿ ಆಗದು. ಅದು ಸಕಾರಾಂತಶಬ್ದವಾದ್ದರಿಂದ ಸುಮನಸ್ತತಿ ಆಗುತ್ತದೆ. Reply ಅನಂತಕೃಷ್ಣ says: November 3, 2018 at 3:22 pm ರಿಪೇರಿ ಮಾಡಿದ್ದೇನೆ.ಧನ್ಯವಾದಗಳು/\ Usha says: November 1, 2018 at 5:58 pm ಕಣ್ಣಂ ತೋರಿರ್ದo ಗಡ ಮಣ್ಣೊಳ್ಪಿರಿದಾಡಿದಂದು ಭುವಿಯಂ ಬಾಯೊಳ್ । ಕಣ್ಣಾಮುಚ್ಚಾಲೆಯೊಳುಂ ಕಣ್ಣೆಮೆದೆರೆಯೆ ರವಿಚಂದ್ರರಂ ಕಾಂಬಳೆ ಮೇಣ್ !! ಕೃಷ್ಣ – ಚಂದ್ರ ಸೂರ್ಯೌ ಚ ನೇತ್ರಂ ಅಲ್ಲವೇ ?! Reply Usha says: November 4, 2018 at 5:16 pm ಮೊಲೆಯುಣಿಸೆ ಕಾಡಿರ್ದ ಪೂತನಿಯ ನೆನೆದಿಂತು ಕಳವಳದೆ ಮುಖಮರೆಸಿಕೊಂಡಿರ್ಪೆ ಯೇ- ನೆಲೆ ಕೃಷ್ಣ, ತುಸುಮೆಲ್ಲ, ಕರಸರಿಸೊ, ನೀ ಮರೆತ ಕೊಳಲ ಕೊಡಲೆನೆ ಬಂದ ಗೋಪಿಕೆಯು ಕಾಣ್ !! Reply ಹಾದಿರಂಪ says: December 5, 2018 at 8:54 pm ಎಲ್ಲಮಂ ಚೆನ್ನಿನಿಂ ಚಿತ್ರಿಸಿಹ ಕುಂಚಿಗನು ಗೊಲ್ಲನಂ ಮೇಣವನ ತಾಯಿಯನ್ನುಂ| ಅಲ್ಲಿ ವೃಂದಾವನದ ಬದಲಿಂಗೆ ಹೂದಾನಿ ಸಲ್ಲದದು, ತುಳಸಿಯೇಂ ಮೇಣಾ ಗಿಡಂ?? Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ತಾಯಿ ಕೃಷ್ಣನನ್ನು ಊಟಮಾಡುವಂತೆ ಒಲಿಸುವ ಪ್ರಯತ್ನದಲ್ಲಿದ್ದಾಳೆ ಎಂದುಕೊಂಡು ಬರೆದ ಪದ್ಯಗಳು..
ಹಿಂದೊಮ್ಮೆ ಕಂಬದಿಂದುದಿಸುತಲಿ ರಕ್ಕಸನ
ನೊಂದೇಟಿಗೇ ಕೊಂದೆಯಂತೆ ಕಂದಾ..
ಇಂದುವದನಾ! ಎನ್ನನೇಕಿಂದು ಕಾಡುತಿಹೆ
ಬಂದೊಮ್ಮೆ ಭೋಜನವನುಣಲಾರೆಯಾ?
ಭ್ರಮರಮಂಬೊಲುತೆ ನೀಂ ಸುಮನಗಳ ಮಧ್ಯದಲಿ
ಗಮಿಪುದೇಕೈ? ಚೋರ! ರಮಿಪುದೇಕೈ?
ಗಮನಿಸೈ..ಹೆತ್ತೊಡಲ ಕರೆಯನೀನಾಲಿಸುತೆ
ಸಮಚಿತ್ತದಿಂದುಣಿಸನುಣಲಾರೆಯಾ?
ಬಗೆಬಗೆಯ ತಿನಿಸುಗಳ ನಾನಿತ್ತೊಡೇನಂತೆ?
ಮೊಗೆಮೊಗೆದು ತಿನುವೆ ನೀಂ ಬೆಣ್ಣೆಯನ್ನೇ
ಮಿಗೆ ಸಂತಸವು ನಿನಗೆ ಕದಿವುದರೊಳೇತಕೈ?
ನಗುನಗುತೆ ಬಂದುಣ್ಣೊ ಮುದ್ದು ಕಂದಾ..
ತುಂಬ ಚೆನ್ನಾಗಿವೆ. ಎರಡನೇಯ ಪದ್ಯದಲ್ಲಿ ಒಂದು ಶ್ಲೇಷಸಾಧ್ಯತೆ ಹೊಳೆಯಿತು. ಸುಮವನ್ನು ಸುಮನವನ್ನಾಗಿಸಿದರೆ ಹೂವುಗಳಿಗೂ ಸಲ್ಲುತ್ತದೆ, ಒಳ್ಳೆಯ ಮನಸ್ಸುಗಳಲ್ಲಿ ಚಲಿಸುವವನೆಂದೂ ಅರ್ಥ ಬರುತ್ತದೆ.
ಧನ್ಯವಾದಗಳು..ನೀನಂದಂತೆಯೇ ತಿದ್ದಿದ್ದೇನೆ
ಸುಮನತತಿ ಆಗದು. ಅದು ಸಕಾರಾಂತಶಬ್ದವಾದ್ದರಿಂದ ಸುಮನಸ್ತತಿ ಆಗುತ್ತದೆ.
ರಿಪೇರಿ ಮಾಡಿದ್ದೇನೆ.ಧನ್ಯವಾದಗಳು/\
ಕಣ್ಣಂ ತೋರಿರ್ದo ಗಡ
ಮಣ್ಣೊಳ್ಪಿರಿದಾಡಿದಂದು ಭುವಿಯಂ ಬಾಯೊಳ್ ।
ಕಣ್ಣಾಮುಚ್ಚಾಲೆಯೊಳುಂ
ಕಣ್ಣೆಮೆದೆರೆಯೆ ರವಿಚಂದ್ರರಂ ಕಾಂಬಳೆ ಮೇಣ್ !!
ಕೃಷ್ಣ – ಚಂದ್ರ ಸೂರ್ಯೌ ಚ ನೇತ್ರಂ ಅಲ್ಲವೇ ?!
ಮೊಲೆಯುಣಿಸೆ ಕಾಡಿರ್ದ ಪೂತನಿಯ ನೆನೆದಿಂತು
ಕಳವಳದೆ ಮುಖಮರೆಸಿಕೊಂಡಿರ್ಪೆ ಯೇ-
ನೆಲೆ ಕೃಷ್ಣ, ತುಸುಮೆಲ್ಲ, ಕರಸರಿಸೊ, ನೀ ಮರೆತ
ಕೊಳಲ ಕೊಡಲೆನೆ ಬಂದ ಗೋಪಿಕೆಯು ಕಾಣ್ !!
ಎಲ್ಲಮಂ ಚೆನ್ನಿನಿಂ ಚಿತ್ರಿಸಿಹ ಕುಂಚಿಗನು
ಗೊಲ್ಲನಂ ಮೇಣವನ ತಾಯಿಯನ್ನುಂ|
ಅಲ್ಲಿ ವೃಂದಾವನದ ಬದಲಿಂಗೆ ಹೂದಾನಿ
ಸಲ್ಲದದು, ತುಳಸಿಯೇಂ ಮೇಣಾ ಗಿಡಂ??