Dec 182018
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ಬಿಳಿವೋದಂ ನಲವಿಂ ಜನಾರ್ದನಂ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಕಂದಪದ್ಯದ ಸಮಸ್ಯೆ
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ಬಿಳಿವೋದಂ ನಲವಿಂ ಜನಾರ್ದನಂ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಕಂದಪದ್ಯದ ಸಮಸ್ಯೆ
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್
ವಿನೋದವಾಗಿ :
ಅತಿಸಲುಗೆಯಿಂದೊಡನಿರುತೆ
ಪತಿಗಂ ಗತಿಗೆಡಿಸಿರಲ್ ಸಕುನಿಯೋಲ್ ಸತತಂ ।
ಮತಿವೆತ್ತ ಕಿರಾತ ಕಿತಾ-
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್ ।।
(ಗಂಡನನ್ನು ದಾರಿತಪ್ಪಿಸುತ್ತಿರುವ ಕಿತಾಪತಿ ಗೆಳೆಯನನ್ನು ಸತಿಯೋರ್ವಳು ನಿಂದಿಸುವ ಬಗೆ )
ಸೊಗಸಾದ ಪರಿಹಾರ ಮೇಡಮ್! ಕೆಲವು ಅರಿಸಮಾಸಗಳಿವೆ ಅತಿಸಲುಗೆ, ಕಿರಾತಕಿತಾಪತಿ. ಸಕುನಿಯವೊಲ್ ಆಗಬೇಕು 🙂
ಧನ್ಯವಾದಗಳು ನೀಲಕಂಠ , ಕಿರಾತ ಕಿತಾಪತಿ ಎರಡೂ “ಸಂಸ್ಕೃತ”ವಲ್ಲವೇ ?!
ಕಿತಾಪತಿ ಸಂಸ್ಕೃತವೇ? ಅಲ್ಲ ಅನಿಸುತ್ತದೆ. ಕನ್ನಡದ ಬಳಕೆಯ ಪದ.
ಬಳೆದಂ ಯಮುನಾತಟಂಗಳೊಳ್
ತಳರ್ದಂ ನೀಲಿಮೆಯಂ ತದೀಯಕಂ
ಕೆಳೆಯಿಂ ವೃಷಭಾನುಪುತ್ರಿಯೊಳ್
ಬಿಳಿವೋದಂ ನಲವಿಂ ಜನಾರ್ದನಂ
ಕಪ್ಪಗಿರುವ ಯಮುನೆಯ ದಡದಲ್ಲಿ ಬೆಳೆದು ಅದೇ ಬಣ್ಣವನ್ನು ಹೊಂದಿದ. ಗೌರಾಂಗಳಾದ ರಾಧೆಯ ಗೆಳೆತನದಲ್ಲಿ ಬಿಳಿಯಾದ.
ತದ್ವಿರುದ್ಧವಾದ ಕವಿಕಲ್ಪನೆಯೂ ಇದೆ. ರಾಧೆ ಬೆಳ್ಳಗಿರುವಳು, ನಾನೇಕೆ ಕಪ್ಪಗಿರುವೆ ಎಂದು ತಾಯಿಯನ್ನು ಕೃಷ್ಣನು ಕೇಳಲು, ನೀನು ಮಧ್ಯರಾತ್ರಿಯಲ್ಲಿ ಹುಟ್ಟಿದೆ, ನೀನು ಕಪ್ಪುಕಂಬಳಿಯವನು (ಗೊಲ್ಲ), ಆ ಬೆಳ್ಳಗಿನ ರಾಧೆಯ ಕಪ್ಪುಕಣ್ಣಿನ ಮೋಡಿ ಇವುಗಳಿಂದ ಕಪ್ಪಾಗಿರುವೆ ಎನ್ನುತ್ತಾಳೆ. https://www.youtube.com/watch?v=5x0O-qR527U
Nice idea! Even I saw this nicely versed by Dr. Shankar on Facebook, may be last year.
+Like
ಕಿತವವ ಗೈದಿಹೆ ನನ್ನೊಳ್,
ಚತುರತೆಯಿಂ ಮೇಣ್ ವಶೀಕರಣದಿಂ ನೀಂ ದುರ್|
ಗತಿಯಂ ತಂದಪೆ ಎನ್ನಯ
ಪತಿಗಂ! ಪೀಡೆಯೆ ಕಿಡೆಂದಳೈ ಸತಿಯೊರ್ವಳ್||
ಅತಿಗೈಯದೆ, ಅನುವಾಗಲ್ (ಅವಕಾಶ)
ಜೊತೆಗೂಡಲುಬೇಕೆನುತ್ತೆ ಸಂಯಮದಿರೆ ತಾಂ|
ರತಿಗುತ್ತೇಜಿಸುತಿರ್ಪುಪ-
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್||
(ಉಪಪತಿ – Paramour)
ಗತಿಸಲ್ ಭರ್ತಂ ಯುದ್ಧದೆ
ಚಿತೆಗಗ್ನಿಯ ಸ್ಪರ್ಶಿಪಾಗ ಪುತ್ರಂ, ರುಷೆಯಿಂ|
ಮತಿಗೆಟ್ಟು ವೈರಿಪೃತನಾ-
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್||
(She cursed the commander of the enemy army)
Ahaa.. all nice puuraNas!! ಅವಸರ(ಅವಕಾಶ) ಬರೆ – should be like ಅವಸರo ಬರೆ
ಕ್ರೋಧದೆ – last guru missing.
ಧನ್ಯವಾದ. ಲೋಪಗಳನ್ನು ತೋರಿಸಿಕೊಟ್ಟುದಕ್ಕಾಗಿ ಮತ್ತೊಂದು ಧನ್ಯವಾದ. ತಿದ್ದಿದ್ದೇನೆ.
ಸೊಗಸಾದ ಪೂರಣ ಪ್ರಸಾದ್ ಸರ್,
“ಚಿತೆಗಗ್ನಿಯ ಸ್ಪರ್ಶಿಪಾಗ … ” ಒಂದು ಲಗು ಹೆಚ್ಚಾಯಿತಲ್ಲವೇ ?
ಧನ್ಯವಾದ. ಸ್ಪರ್ ಶಿಥಿಲದ್ವಿತ್ವ
ಬಳರಾಮನೊಡಾಡೆ ಕಣ್ಣುಮು-
ಚ್ಚಳುವಾಗಲ್ ಗೆಲಲೆಂದಡಂಗಿರಲ್
ಬಳಿತಾಯುಡೆ ಬೆಳ್ ಸೆರಂಗಿನೊಳ್
ಬಿಳಿವೋದಂ ನಲವಿಂ ಜನಾರ್ದನಂ !!
ಅಣ್ಣ ಬಲರಾಮನ ಜೊತೆ ಕಣ್ಣಾಮುಚ್ಚಾಲೆಯಾಡುವಾಗ ಬಳಿಯಿದ್ದ “ಬಿಳಿಸೀರೆ”ಯುಟ್ಟ ಯಶೋದೆಯ ಸೆರೆಗಿನಲ್ಲಿ ಅಡಗಿದ ಕೃಷ್ಣ “ಬಿಳಿ”ಯಾದ !!
ಎಳವೊಳ್ ಕೆಳೆಯೊಂದಿಗೈದುತುಂ
(ಕದಿಯುತ್ತಾನೆ) ಕಳುವಂ ಬೆಣ್ಣೆಯ ತಾಂ ಸದೇಶದೊಳ್ (Neighbourhood)|
ಬೞೆಕೊಂಡದ ಕೆನ್ನೆಗಲ್ಲಕಂ
ಬಿಳಿವೋದಂ ನಲವಿಂ ಜನಾರ್ದನಂ||
ಅತಿಕಾಮಾಸಕ್ತಿಯೊಡಂ
ಮತಿಹೀನನುಮಾಗಿ ತನ್ನೊಳೆರಗುತೆ ಸೆಳೆದಾ
ಕೃತಿಯಂ ಬದಲಿಸೆ ಲಂಕಾ
ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್
ಸನ್ಯಾಸಿಯ ವೇಷದಲ್ಲಿದ್ದ ರಾವಣ ಸೀತೆಗೆ ನಿಜರೂಪ ತೋರಿದ ಪ್ರಸಂಗ
ಕಲ್ಪನೆ/ಕೀಲಕನಿರ್ವಹಣೆಗಳು ಚೆನ್ನಾಗಿವೆ. ‘ಅತಿಕಾಮಾಸಕ್ತಿಯೊಡಂ ಮತಿಹೀನನುಮಾಗಿ ತನ್ನೊಳೆರಗುತೆ ಸೆಳೆದಾಕೃತಿಯಂ’ ಎಂಬುದು ಅವನ ನಿಜರೂಪ(ಸ್ವಭಾವ)ವಾದ್ದರಿಂದ, ರಾಕ್ಷಸನು ರಾಕ್ಷಸನಾಗಿ ಬದಲಾಯಿಸಿದ ಎಂದಂತಾಗುತ್ತದೆ. ’ಸನ್ಯಾಸಿರೂಪಿನಿಂ ಸೆಳೆದಾಕೃತಿಯಂ’ ಎನ್ನಬಹುದಲ್ಲವೆ?
ಚೆನ್ನಾಗಿದೆ. ಆದರೆ ಸತಿಯೊರ್ವಳ್ ಎಂದು ಸಮಸ್ಯಾಪಾದದಲ್ಲಿರುವುದರಿಂದ ಲಂಕಾಪತಿ, ಸೀತೆ ಎಂದು ವಿಶೇಷಸಂದರ್ಭಕ್ಕೆ ಅನ್ವಯಿಸುವುದು ಕಷ್ಟವಾಗುತ್ತದೆ.
ರಾವಣನ ಹೆಂಡಿರಲ್ಲೊಬ್ಬಳು ಸೀತೆಗಾಗಿ ಮರುಗಿರಬಾರದೇಕೆ?
ರಾಮ! ರಾಮ!
ಇಳೆಯೊಳ್ ಜರುಗಿರ್ಪ ಪೂಜೆಯೊಳ್
ಬೆಳು ಪಾಲೊಳ್ ಜಳಕಂ ಸಲಲ್ ಗಡಾ
ತುಳುಕಲ್ ಶಿರದಿಂದೆ ಪಾದಕಂ
ಬಿಳಿವೋದಂ ನಲವಿಂ ಜನಾರ್ದನಂ !!
ಕ್ಷೀರಾಭಿಷೇಕದ ಕಲ್ಪನೆ !!