ರುಷಾತ್=ಕೋಪಕ್ಕಿಂತ ಎಂಬರ್ಥದಲ್ಲಿ ಬಳಸಿದೆ. ಆದರೆ ಅದು ಸರಿಯಾಗದು. ಇಲ್ಲಿ ತಿದ್ದಿದ್ದೇನೆ:
ಕುಂದುವಾತು-ಕೆಲಸಂಗಳಲ್ಲಿ ಮೇಣ್
ಕಂದನೇಗಳು ತೊಡಂಗಿಕೊಂಡಿರಲ್|
ತಂದೆಯುಗ್ರತೆಯ ಬಿಟ್ಟು ತೋರಿದೀ
ಮಂದಹಾಸಮೆ ವಿನಾಶಕಾರಕಂ||
ಜೂಜಿನಿಂದ(ಮೋಸದಿಂ ಪಗಡೆಯನ್ನು ಗೆದ್ದು) ದ್ರೌಪದಿಯನ್ನು ವಿವಸ್ತ್ರಗೊಳಿಸುವಾಗ ನಕ್ಕ ಕೌರವರು ಯುದ್ಧದ ಬಿಂಕಿಯಲ್ಲಿ ಬೆಂದುಹೋದರು. ಬಹುಶಃ ಆ ನಗುವೇ ಅವರ ವಿನಾಶಕ್ಕೆ ಕಾರಣವಾಯಿತೇನೋ(ಆದ್ದರಿಂದ ನಗು ವಿನಾಶಕಾರಕ).
Good! but needs corrections.
First line doesn’t have praasa. ದುರುಪತಿಂ is not accepted form. We cannot make Draupadi as durupati. Even if you make, its dviteeya-vibhakti will be like durupatiyam. ಧೃತರಾಷ್ಟ್ರಸನ್ನಿಭರ್ – ರಸನ್ನಿಭರ್ does not mean children / sons.
ಇರವಿನಲ್ಲಿನ ಬುದ್ಧಿ-ಮನದ (ಸೂಕ್ಷ್ಮ ರೂಪದ ) ದಾಂಪತ್ಯ – ಜೀವಿ (ಸ್ಥೂಲ ರೂಪದ) ಅದರ ಸಂತಾನ – ಜೀವಿಯನ್ನು ಕಾಡುವ ಹಳೆಯ ನೆನಪುಗಳು – ಆ ಆಲೋಚನೆಗಳಿಗೆ ಕಾರಣವಾದ “ಮನ”ದ ಕಲ್ಪನೆಯ ಪದ್ಯ.
ದೇಶದ ಉನ್ನತಿಯನ್ನು ಎಣಿಸದೇ ಕುಟುಂಬ ರಾಜಕಾರಣ ಮಾಡಿದ ಸೋನಿಯಗಾಂಧಿಯ ಮಗನಿಗೆ(Prime minister candidate) ಮೋದಿಯು ಹಳಸುಣಿಸುಗಳನ್ನು(ಮೋದಿಯ ಒಳ್ಳೆಯ ಆಡಳಿತ/ಜನರ ನಿಂದೆ/ರಾಹುಲ್ ಗಾಂಧಿ ಜೋಕ್ಸ್ ಗಳು ಹಳಸುಣಿಸು) ತಿನ್ನಿಸಿದ.
ಚೆನ್ನಾಗಿದೆ. ಆದರೆ ಪದ್ಯದಲ್ಲೇ ಹಳಸುಣಿಸುಗಳೆಂದರೇನೆಂಬುದು ಬಂದರೆ ಚೆನ್ನ. ಹಾಗಲ್ಲದಿದ್ದರೆ ವ್ಯಾಖ್ಯಾನವಿಲ್ಲದೇ ಅರ್ಥವಾಗುವುದು ಕಷ್ಟ. ಇರಲಿ, ಕೆಲವು ತಿದ್ದುಪಡಿಗಳು- ಗಾಂಧಿಂ ಆಗುವುದಿಲ್ಲ ಗಾಂಧಿ ಎಂದಾಗಬೇಕು. ಅಂತೆಯೇ ಮೋದಿ ಕೂಡ.
ಇಲ್ಲ. ಪ್ರಥಮಾವಿಭಕ್ತಿಯಲ್ಲಿ ಬಿಂದು ಬರುವುದು ಅ ಕಾರಾಂತ ಶಬ್ದಗಳಿಗೆ ಮಾತ್ರ. ಉದಾಹರಣೆಗೆ- ಮಂಜಂ, ಸುನೀಲಂ, ಜಗಂ ಇತ್ಯಾದಿ.
ಉಳಿದಂತೆ ಅಂದರೆ ಇ, ಉ, ಎ ಕಾರಾಂತಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಉದಾಹರಣೆಗೆ ಮೋದಿ, ಮೋದಿಂ ಅಲ್ಲ. ಮನೆ ಸರಿ ಮನೆಂ ತಪ್ಪು. ಎತ್ತು ಸರಿ ಎತ್ತುಂ ತಪ್ಪು(ಎತ್ತುಂ ಎಂದರೆ ಎತ್ತೂ ಕೂಡ ಎಂಬರ್ಥ ಬರುತ್ತದೆ).
ಸಂದ ಕೆನ್ನೆಗುಣಿಯಿಂದೆ ಕನ್ನೆಗಂ
ಚಂದ ಕಂಡಿರೆ ಮುಖಾರವಿಂದವುಂ
ಮಂದಿಗಾಣೆ ದುರುಗುಟ್ಟುತುಂ ಗಡಾ
ಮಂದಹಾಸಮೆ ವಿನಾಶಕಾರಕಂ ।।
ಬಹುಬಾರಿ ಹೆಣ್ಣಿಗೆ ಅವಳ ರೂಪವೇ ಶತ್ರು ಅಲ್ಲವೇ ?!
Nice one madam! ಚಂದ ಕಂಡಿರೆ – will be better if it is ಚಂದಗಂಡಿರೆ – i.e. with sandhi
ಧನ್ಯವಾದಗಳು ನೀಲಕಂಠ ,
ತಿದ್ದಿದ ಪದ್ಯ :
ಸಂದ ಕೆನ್ನೆಗುಣಿಯಿಂದೆ ಕನ್ನೆಗಂ
ಚಂದಗಂಡಿರೆ ಮುಖಾರವಿಂದವುಂ
ಮಂದಿಗಾಣೆ ದುರುಗುಟ್ಟುತುಂ ಗಡಾ
ಮಂದಹಾಸಮೆ ವಿನಾಶಕಾರಕಂ ।।
ಚೆನ್ನಾಗಿದೆ.
ಧನ್ಯವಾದಗಳು ರವೀಂದ್ರ
ಕುಂದನೊಂದೆ ದಶಕಂಧರಂ, ಕುರು-
ಕ್ರಂದನಕ್ಕೆ ಸಲೆ ಪೆಣ್ಣ ಹಾಸಮೇ!
ಮಂದಬುದ್ಧಿಗಳಿಗಟ್ಟಹಾಸಮೇಂ,
ಮಂದಹಾಸಮೆ ವಿನಾಶಕಾರಕಂ
ರಾವಣ, ದುರ್ಯೊಧನರನ್ನು ನೋಡಿದರೆ, ಮಂದಬುದ್ಧಿಗಳಿಗೆ ಹೆಣ್ಣಿನ ಅಟ್ಟಹಾಸವೇನು, ಮಂದಹಾಸವೇ ವಿನಾಶಕಾರಕವಾಗುತ್ತದೆ.
ಮಗುವು ಕೆಟ್ಟಮಾತುಗಳನ್ನು ಆಡಿದಾಗ, ಕೆಟ್ಟಕೆಲಸಗಳನ್ನು ಮಾಡಿದಾಗ, ಅದರ ತಂದೆಯು ಕುಪಿತಗೊಂಡು ದಂಡಿಸಿ ಆ ಮಗುವನ್ನು ತಿದ್ದದೆಲೆ ಮೋಹದಿಂದ ಅದನ್ನು ಮೆಚ್ಚುವುದು ವಿನಾಶಕಾರಿ
ಕುಂದುವಾತು-ಕೆಲಸಂಗಳಲ್ಲಿ ಮೇಣ್
ಕಂದನೇಗಳು ತೊಡಂಗಿಕೊಂಡಿರಲ್|
ತಂದೆಯಕ್ಕರೆಯೊಳಿರ್ಕುಮೇಂ! ರುಷಾ-
ನ್ಮಂದಹಾಸಮೆ ವಿನಾಶಕಾರಕಂ||
ರುಷಾನ್ಮಂದಹಾಸ ಹೇಗೆ?
ರುಷಾತ್=ಕೋಪಕ್ಕಿಂತ ಎಂಬರ್ಥದಲ್ಲಿ ಬಳಸಿದೆ. ಆದರೆ ಅದು ಸರಿಯಾಗದು. ಇಲ್ಲಿ ತಿದ್ದಿದ್ದೇನೆ:
ಕುಂದುವಾತು-ಕೆಲಸಂಗಳಲ್ಲಿ ಮೇಣ್
ಕಂದನೇಗಳು ತೊಡಂಗಿಕೊಂಡಿರಲ್|
ತಂದೆಯುಗ್ರತೆಯ ಬಿಟ್ಟು ತೋರಿದೀ
ಮಂದಹಾಸಮೆ ವಿನಾಶಕಾರಕಂ||
ಆಶ್ಚರ್ಯವೇನಿಲ್ಲ. ಪಳ = ಫಲ ಮತ್ತು ಪಲ (ಮಾಂಸ). ವಸ್ತುತಃ ಹಳೆಯದು = ಪೞೆಯದು
ಸಮಸ್ಯಾಪಾದದಲ್ಲಿ ತಕರಾರನ್ನು ಎತ್ತುವಂತಿಲ್ಲ. ’ತಿನ್ನಿಪನವnaಣುಗನಿಂಗೆ ಪಳಸುಣಿಸುಗಳಂ’ ಎಂದಾಗಬೇಕಲ್ಲವೆ? ಅಥವಾ, ’ಅವಳ ಅಣುಗನಿಂಗೆ (ಅವನು) ತಿನ್ನಿಪನು ಪಳಸುಣಿಸುಗಳಂ’ ಎಂದೆ?
ಚೆನ್ನಿನ ಸೇಬಂ, ಕದಲಿಯ,
ಪೊನ್ನಿನೊಳೆಸೆದಿರ್ಪ ಮಾವನ್, ಅಂಜೂರವ ಮೇಣ್|
(ಸುಟ್ಟ) ಜೊನ್ನಂ, ದ್ರಾಕ್ಷಿಯ, ಪನಸಂ
ತಿನ್ನಿಪನವಳ(ನ)ಣುಗನಿಂಗೆ ಪಳಸುಣಿಸುಗಳಂ||
ಅಂದದಿಂದಮಿರೆ ವಕ್ತ್ರದೊಳ್ ನಿತಾಂ
ತಂ ದರಸ್ಮಿತಮದೊಳ್ಪು; ಚಿತ್ತಮಂ
ಕುಂದಿಪೀ ಚಿತೆವೊಲಿರ್ಪ ಚಿಂತೆಗಂ
ಮಂದಹಾಸಮೆ ವಿನಾಶಕಾರಕಂ/
ಒಳ್ಳೆಯ ಅರ್ಥಚ್ಚಲಪರಿಹಾರ
ಚೆನ್ನಾಗಿದೆ.
ಮುನ್ನಿನ ಸತಿಯೊಳ್ ಪುಟ್ಟಿದ
ನೆನ್ನಲ್ಕರ್ಭಕನನೊಪ್ಪದಿರೆ ಮಲತಾಯೇ|
ಇನ್ನೇಂ ಗೈವಂ ರಮಣಂ
ತಿನ್ನಿಪಿನವಳಣುಗನಿಂಗೆ ಪಳಸುಣಿಸುಗಳಂ
ಮಲತಾಯಿಯು ಮಲಮಗನನ್ನು ಒಪ್ಪದಿದ್ದಾಗ ಆಕೆಯ ದಾಸನಾದ ತಂದೆ ಮೊದಲಿನ ಸತಿಯ ಮಗನಿಗೆ ಹಳಸುಣಿಸನ್ನು ತಿನ್ನಿಸಿದ.
Another good one
ತಮ್ಮ ಎರಡೂ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು
ವಿನೋದವಾಗಿ :
ಅನ್ನೆಯಮಿದು ಪತಿಗಂ ಮನ-
ದನ್ನೆಯು ಹೊರಗಾದ ಮೂರು ದಿನವುಂ ಗಡ ಕಾಣ್ ।
ಅನ್ನಾನ್ನಗತಿಯ ಮನೆಯೊಳ್
ತಿನ್ನಿಪಿನವಳಣುಗನಿಂಗೆ ಪಳಸುಣಿಸುಗಳಂ !!
* ಅನ್ನಾನ್ನಗತಿ = ಅನ್ನಕ್ಕಾಗಿ ಬಾಯಿಬಿಡುವ ಸ್ಥಿತಿ
ಹೀಗೊಂದು (ಅಪರೂಪದ) ಅನಿವಾರ್ಯ ವಾಸ್ತವ !!
Fine
ಧನ್ಯವಾದಗಳು ಪ್ರಸಾದ್ ಸರ್
ಚೆನ್ನಾಗಿದೆ.
ಧನ್ಯವಾದಗಳು ರವೀಂದ್ರ
ಜೂದಿನಿಂ ದುರುಪತಿಂ ವಿವಸ್ತ್ರಮಾ
ಳ್ಪಂದು ನಕ್ಕ ಧೃತರಾಷ್ಟ್ರಸನ್ನಿಭರ್,|
ಬೆಂದರಾಹವದ ಕಿಚ್ಚಿನೊಳ್ ಗಡಾ
ಮಂದಹಾಸಮೆ ವಿನಾಶಕಾರಕಂ ||
ಜೂಜಿನಿಂದ(ಮೋಸದಿಂ ಪಗಡೆಯನ್ನು ಗೆದ್ದು) ದ್ರೌಪದಿಯನ್ನು ವಿವಸ್ತ್ರಗೊಳಿಸುವಾಗ ನಕ್ಕ ಕೌರವರು ಯುದ್ಧದ ಬಿಂಕಿಯಲ್ಲಿ ಬೆಂದುಹೋದರು. ಬಹುಶಃ ಆ ನಗುವೇ ಅವರ ವಿನಾಶಕ್ಕೆ ಕಾರಣವಾಯಿತೇನೋ(ಆದ್ದರಿಂದ ನಗು ವಿನಾಶಕಾರಕ).
Good! but needs corrections.
First line doesn’t have praasa. ದುರುಪತಿಂ is not accepted form. We cannot make Draupadi as durupati. Even if you make, its dviteeya-vibhakti will be like durupatiyam. ಧೃತರಾಷ್ಟ್ರಸನ್ನಿಭರ್ – ರಸನ್ನಿಭರ್ does not mean children / sons.
ತಿದ್ದಿಕೆಗೆ ಧನ್ಯವಾದಗಳು
ಸರಿಪಡಿಸಲು ಪ್ರಯತ್ನಿಸಿದ್ದೇನೆ
ಸಂದಣಿರ್ಪ ಸಭೆಯೊಳ್ಗೆ ಮಾನಿನಿಂ
ನಿಂದಿಸಿಂ ಮೆರೆದರಟ್ಟಹಾಸದಿಂ(ಕೌರವರ್)|
ಬೆಂದರಾಹವದ ಕಿಚ್ಚಿನೊಳ್ ಗಡಾ
ಮಂದಹಾಸಮೆ ವಿನಾಶಕಾರಕಂ ||
ಭಿನ್ನಮಿರಲ್ ಬುದ್ಧಿ ಮನಂ
ಬಿನ್ನಗೆಯೊಳ್ ಜೀವಕಿತ್ತು ತಣಿಸೆ ನೆನವನುಂ
ಬಿನ್ನಾಣದ ದಾಂಪತ್ಯದೆ
ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ।।
ಇರವಿನಲ್ಲಿನ ಬುದ್ಧಿ-ಮನದ (ಸೂಕ್ಷ್ಮ ರೂಪದ ) ದಾಂಪತ್ಯ – ಜೀವಿ (ಸ್ಥೂಲ ರೂಪದ) ಅದರ ಸಂತಾನ – ಜೀವಿಯನ್ನು ಕಾಡುವ ಹಳೆಯ ನೆನಪುಗಳು – ಆ ಆಲೋಚನೆಗಳಿಗೆ ಕಾರಣವಾದ “ಮನ”ದ ಕಲ್ಪನೆಯ ಪದ್ಯ.
ಒಳ್ಳೆಯ ಕಲ್ಪನೆ ಮೇಡಂ
ಧನ್ಯವಾದಗಳು ಮಂಜು .
ನಿನ್ನ “ಅಂದದಿಂದಮಿರೆ ವಕ್ತ್ರದೊಳ್…… ” ಪದ್ಯ ಬಹಳ ಚೆನ್ನಾಗಿದೆ . ನಿನ್ನದೇ ಪದಗಳಲ್ಲಿ ಹೀಗೊಂದು ವಿನೋದ ಪದ್ಯ :
(ವಕ್ತ್ರ = ಹಲ್ಲು? ಎಂದೂ ಆಗುದಾದರೆ )
ಮುಂದುದೋರುತಿರೆ ವಕ್ತ್ರವುಂ ನಿತಾಂ-
ತಂ ದರಸ್ಮಿತದಿನೆಳ್ಬುದುಂ ಗಡಾ !
ಅಂದಗುಂದಿಸೆ ಮುಖಾರವಿಂದವಂ
ಮಂದಹಾಸಮೆ ವಿನಾಶಕಾರಕಂ !!
ಮುಗುಳುನಗೆಯಿಂದ ಮತ್ತೂ ಮುಂದೆಬರುವ ಉಬ್ಬುಹಲ್ಲಿನ ಬಗೆಗಿನ ಪದ್ಯ !!
ಹಹ್ಹ. ಚೆನ್ನಾಗಿದೆ. ವಕ್ತ್ರ ಎಂದರೆ ಹಲ್ಲು ಎಂಬ ಅರ್ಥವಿಲ್ಲವೆನಿಸುತ್ತದೆ. ದಂತ ಎಂದಾಗಿಸಬಹುದು. ಮೆಚ್ಚುಗೆಗಾಗಿ ಧನ್ಯವಾದಗಳು.
“ವಕ್ತ್ರ” = ಒಸಡು / ದವಡೆ ಎಂದಾಗುವುದೇ ?
ಇಲ್ಲ. ವಕ್ತ್ರ ಅಂದರೆ ಮುಖ. ವಕ್ತ್ರಾಸ್ಯೇ ವದನಂ ತುಣ್ಡಮಾನನಂ ಲಪನಂ ಮುಖಂ- ಅಮರಕೋಶ
ಅನ್ನೆಯ ಗೈದುಂ ಭಾರತ
ದುನ್ನತಿಯಂ ಲೆಕ್ಕಿಪದೆಲೆ(ಇರಲ್) ಸೋನಿಯ ಗಾಂಧಿಂ |
ಸನ್ನಣದಿಂ ಮೋದಿಂ ಮೇಣ್
ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ||
ದೇಶದ ಉನ್ನತಿಯನ್ನು ಎಣಿಸದೇ ಕುಟುಂಬ ರಾಜಕಾರಣ ಮಾಡಿದ ಸೋನಿಯಗಾಂಧಿಯ ಮಗನಿಗೆ(Prime minister candidate) ಮೋದಿಯು ಹಳಸುಣಿಸುಗಳನ್ನು(ಮೋದಿಯ ಒಳ್ಳೆಯ ಆಡಳಿತ/ಜನರ ನಿಂದೆ/ರಾಹುಲ್ ಗಾಂಧಿ ಜೋಕ್ಸ್ ಗಳು ಹಳಸುಣಿಸು) ತಿನ್ನಿಸಿದ.
January 12, 2019 at 11:11 am
ಅನ್ನೆಯ ಗೈದುಂ ಭಾರತ
ದುನ್ನತಿಯಂ ಲೆಕ್ಕಿಪದೆಲೆ(ಇರಲ್) ಸೋನಿಯ ಗಾಂಧಿಂ |
ಬಿನ್ನಣದಿಂ ಮೋದಿಂ ಮೇಣ್
ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ||
ಚೆನ್ನಾಗಿದೆ. ಆದರೆ ಪದ್ಯದಲ್ಲೇ ಹಳಸುಣಿಸುಗಳೆಂದರೇನೆಂಬುದು ಬಂದರೆ ಚೆನ್ನ. ಹಾಗಲ್ಲದಿದ್ದರೆ ವ್ಯಾಖ್ಯಾನವಿಲ್ಲದೇ ಅರ್ಥವಾಗುವುದು ಕಷ್ಟ. ಇರಲಿ, ಕೆಲವು ತಿದ್ದುಪಡಿಗಳು- ಗಾಂಧಿಂ ಆಗುವುದಿಲ್ಲ ಗಾಂಧಿ ಎಂದಾಗಬೇಕು. ಅಂತೆಯೇ ಮೋದಿ ಕೂಡ.
ಧನ್ಯವಾದಗಳು ಮಂಜರವರೇ,
ಪದ್ಯದಲ್ಲೇ ಹಳಸುಣಿಸುಗಳನ್ನು ತರಲು ಪ್ರಯತ್ನಿಸುತ್ತೇನೆ.
ಗಾಂಧಿ/ಮೋದಿ ಮಾಡಿದರೆ ವಿಭಕ್ತಿ ಲೋಪ ಆಗುವುದಿಲ್ಲವೇ?
ಪ್ರಥಮ ವಿಭಕ್ತಿಯಲ್ಲಿ ಲೆಕ್ಕಿಪದೆಲೆ ಸೋನಿಯ ಗಾಂಧಿಂ/ಮೋದಿಂ ತಿನ್ನಿಪನ್ (ಲೆಕ್ಕಿಸದೆ ಸೋನಿಯ ಗಾಂಧಿಯು/ಮೋದಿಯು ತಿನ್ನಿಸುತ್ತಾನೆ)ಎಂದು ಮಾಡಿದ್ದೇನೆ
ಇಲ್ಲ. ಪ್ರಥಮಾವಿಭಕ್ತಿಯಲ್ಲಿ ಬಿಂದು ಬರುವುದು ಅ ಕಾರಾಂತ ಶಬ್ದಗಳಿಗೆ ಮಾತ್ರ. ಉದಾಹರಣೆಗೆ- ಮಂಜಂ, ಸುನೀಲಂ, ಜಗಂ ಇತ್ಯಾದಿ.
ಉಳಿದಂತೆ ಅಂದರೆ ಇ, ಉ, ಎ ಕಾರಾಂತಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಉದಾಹರಣೆಗೆ ಮೋದಿ, ಮೋದಿಂ ಅಲ್ಲ. ಮನೆ ಸರಿ ಮನೆಂ ತಪ್ಪು. ಎತ್ತು ಸರಿ ಎತ್ತುಂ ತಪ್ಪು(ಎತ್ತುಂ ಎಂದರೆ ಎತ್ತೂ ಕೂಡ ಎಂಬರ್ಥ ಬರುತ್ತದೆ).
ಇನ್ನುಮೆ ರೈತಮ್ ಕವಿಯುಮ್
ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ|
ಮನ್ನಿಸಿ ಸರಸತಿಬುವಿಯರ್
ಮುನ್ನಮೆ ತಾವ್ ನೀಳ್ಪರಲ್ತೆ ಹೊನ್ನಿನ ಬೆಳೆಯಮ್||
ರೈತನು ಭೂಮಿಯ ಮಕ್ಕಳಾದ ಗಿಡಗಳಿಗೆ, ಕವಿಯು ಶಾರದೆಯ ಮಗುವಾದ ಮನಸ್ಸಿಗೆ ಹಳೆಯ ಉಣಿಸು (ಗೊಬ್ಬರ, ಹಳೆ ಸೂರ್ಯ…) ಕೊಟ್ಟರೂ ಅವರು ಹೊಸತಾದ ಬೆಳೆಯನ್ನೆ (ಕಲ್ಪನೆ) ಕರುಣಿಸುತ್ತಾರೆ.
ತುಂಬಾ ಚೆನ್ನಾಗಿದೆ.ನೀವು ಸತತವಾಗಿ ಬರೆಯುತ್ತಿರಿ 🙂
Thanks Manjunath.. I want to.. Padyapaana is my first love 🙂
As long as there is a second love, the first love shall invariably be sidelined 🙁
“ಯುಗಲ ಪೂರಣ” ! ಸೊಗಸಾಗಿದೆ ರವೀಂದ್ರ
ಆಹಾ! ಎಂಥ ಸೊಗಸಾಗಿದೆ ರವೀಂದ್ರರೇ 🙂
ಸಮೀಕರಣಗಳೆಲ್ಲ ಸೊಗಸಾಗಿವೆ
ಕೆನ್ನೆತ್ತರ್ ಬಣ್ಣಂಬಡು-
ದುನ್ನತಿಕೆಯು ಭೂಮಿಪುತ್ರ ಮಂಗಳಗಂ ಮೇಣ್
ಭಿನ್ನಮದೌ ಸೂರ್ಯನ ಪರಿ
ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ !!
ಸೌರಮಂಡಲದಲ್ಲಿ “ಭೂಮಿ”ಯ ನಂತರದಲ್ಲಿರುವ (ಭೂಮಿಪುತ್ರ / ರಕ್ತವರ್ಣ) “ಮಂಗಳ”ನಿಗೆ ಸೂರ್ಯನಿಂದ ದೊರೆವುದು ಉಳಿದ ಬೆಳಕು/ಶಾಖ ಎಂಬ ಕಲ್ಪನೆ !!