Dec 312018
 

  30 Responses to “ಪದ್ಯಸಪ್ತಾಹ ೩೪೦: ಚಿತ್ರಕ್ಕೆ ಪದ್ಯ”

  1. ಶಿಲುಬೆಯಂ ಬಿಗಿಯಾಗಿ ಪಿಡಿದಿರ್ಪ ಜನಗಳೋ?
    ಕೆಳ ಬೀಳ್ವ ಶಿಲುಬೆಯಂ ಮೇಲೆತ್ತುತಿಹರೊ?|
    ತಲೆಗಳಕ್ಷಿಗಳಾಗಿ ಶಿಲುಬೆ ಹಣೆ ಹುಬ್ಬಾದ
    ಕಲೆಯಿದುಂ ಚಿತ್ರಗಾರನ ಕೌಶಲಮ್||

    ಅರೆ ಮುಚ್ಚಿದ ಕಣ್ಣಿನಿಂದ ನೋಡಿದಾಗ ಪೂರ್ಣ ಚಿತ್ರ ಒಬ್ಬ ವ್ಯಕ್ತಿಯ ಮೊಗದಂತೆ ಕಂಡಿತು.

  2. ನೋವನಿಂತು ಕುಡೆ ಯೇಸುವಿಂಗೆ ತಾ
    ನೋವುತಿರ್ದಪಗೆ ಲೋಕಮೆಲ್ಲಮಂ
    ಭಾವಿಸಲ್ಕೆ ಖತಿಯಿಲ್ಲಮಾತಗಂ
    ನೋವನಿತ್ತ ಜನರಲ್ತೆ ನೋಯುವರ್?

    ಚಿತ್ರದಲ್ಲಿ ಯೇಸು ಶಿಲುಬೆಯನ್ನು ಹೊತ್ತಿದ್ದಾನೆ. ಹಾಗೆಯೇ ಆ ಇಡಿಯ ಘಟನೆ ಯೇಸುವಿನ ಯಾತನಾಮಯಮುಖದೊಳಗೆ ಅಡಕವಾಗಿದೆ.
    ಜಗವನ್ನು ಆತ್ಯಂತಿಕವಾಗಿ ಪ್ರೀತಿಸುತ್ತಿದ್ದವನು, ಕರುಣೆಯಿಂದ ಕಂಡವನೂ ಆದ ಯೇಸುವಿಗೆ ಯಾತನೆಯನ್ನು ಕೊಟ್ಟರೆ ಆತನಿಗೆ ಹೆಚ್ಚೇನೂ ಖತಿಯಿಲ್ಲ ಆದರೆ ತತ್ಪರಿಣಾಮವಾಗಿ ಕೊನೆಯಲ್ಲಿ ನೋವನ್ನನುಭವಿಸುವವರು ಆತನಿಗೆ ಯಾತನೆಯನ್ನು ಕೊಟ್ಟವರೇ

  3. I bow to the painter for his insights into history. He knows that it was Romans (as evident from the headgear of the soldiers in the pic top left) who killed Jesus, and that the Jews are not the ones to be blamed.
    ಚಿತ್ರಕಾರಂಗರ್ಪಿಸುವೆ ನಮನಮಂ ನಾನು
    ಜ್ಞಾತ್ರವಿಹುದವಗಮಿತಿಹಾಸದೊಳ್ ಕೇಳ್|
    ಶತ್ರುಗಳು ಏಸುವಿಗೆ ರೋಮನರುಮೆಂದಿಹನು
    ನಾತ್ರ ದೂಷ್ಯರ್ಯಹೂದ್ಯರೆನುತರಿದಂ||

    • ನಾತ್ರ ದೂಷ್ಯರ್ಯಹೂದ್ಯರೆನುತರಿದಂ – 😀 idyaava kasi-maadida bhaaShe!!
      ಜ್ಞಾತ್ರ – means?
      ಶತ್ರುಗಳು ಏಸುವಿಗೆ – visandhi – ಶತ್ರುಗಳ್ ಜೀಸಸಿಗೆ
      ರೋಮನರುಮೆಂದಿಹನು – ರೋಮನರುo not accepted form. We can easily make it ರೋಮನ್ನರೆಂದಪಂ

  4. ನುಲಿದಾದಿಶೇಷನಿಹನದೊ ಕುದುರೆಮುಕವಿಹುದು
    ಕಲಿ ಕಲ್ಕಿ ವಾಹನವು, ಪಾರ್ವ ಗರುಡಂ ।
    ಮುಳು(ಹುಲು) ಮನುಜರಂ ಸಂವರಿಸಲವತರಿಸಿರುವಿವ
    ಶಿಲುಬೆವೆತ್ತೇಸು ನಾಮದ “ವಾಸು”ವೋ !?

    “ಏಸು”ವಿನ ಚಿತ್ರದಲ್ಲಿ “ವಾಸು”ಕಂಡ ವೈಚಿತ್ರ್ಯದ ಬಗೆಗಿನ ಪದ್ಯ !!

    • ಹ್ಹಹ್ಹಹ್ಹ ಚೆನ್ನಾಗಿದೆ.

    • madam, vaasu yaaru gottaagalilla 🙂
      ಮುಳು(ಹುಲು) ಮನುಜ – arisamaasa
      Also panchamaatra-gati is not aptly brought in here in 3rd line – ಮುಳುಮನುಜರಂ ಸಂವರಿಸಲವತರಿಸಿರುವಿವ
      we can rephrase it as – ಹುಲುಮಾನಿಸರ್ಕಳಂ ಸಂವರಿಸಲೆಂದಿಳಿದು ….

      • ಧನ್ಯವಾದಗಳು ನೀಲಕಂಠ ,
        “ವಾಸು” ಎಂದರೆ ನಮ್ಮ “ಕೃಷ್ಣ” , “ಕೃಷ್ಣ”ನೇ “ಕ್ರಿಸ್ತ” ಎಂಬ ಜಿಜ್ಞಾಸೆ ನಡೆದಿದೆ ಅಲ್ಲವೇ ?!
        ತಿದ್ದಿದ ಪದ್ಯ :

        ನುಲಿದಾದಿಶೇಷನಿಹನದೊ ಕುದುರೆಮುಕವಿಹುದು
        ಕಲಿ ಕಲ್ಕಿ ವಾಹನವು, ಪಾರ್ವ ಗರುಡಂ ।
        ಹುಲುಮಾನಿಸರ್ಕಳಂ ಸಂವರಿಸಲೆಂದಿಳಿದ
        ಶಿಲುಬೆವೆತ್ತೇಸು ನಾಮದ “ವಾಸು”ವೋ !?

  5. ಕಂll
    (ನನ್ನ ಚೊಚ್ಚಲು ಕಂದ)
    ಅಂಬಾಸುತನಂ ನೆನೆದಾ
    ರಂಭದಿ ಕಡುಭಕ್ತಿಯಿಂದ
    ವಂದಿಸುತವನಂ!
    ಲಂಬೋದರನಂ ಬೇಡಿದೆ,
    ತುಂಬೆನ್ನೊಳು ಧೈರ್ಯಮೆಂದು;ಬರೆಯಲ್ ಕಂದಂ!!
    ✍ಮಲ್ಲಿಭಾಗವತ…!

  6. ಕಿತ್ತುಕೊಳ್ಳುವ ತವಕ ಬಿಟ್ಟು ನುಡಿಯಾಲಿಸಿರಿ
    ಮತ್ತೆ ತರುವೆನು ನಾನು ಕ್ರಾಸುಪ್ರತಿ ರಸ್ತೆಗೂ
    ಮತ್ತಿಮರದೀಕ್ರಾಸ ನಿಲಿಸಿ ಫಲಕವ ಸೆಕ್ಕು
    ತುತ್ತಮದ ಬರಹವಿರೆ ಸೊಗವು ಪ್ರತಿ ಪಥಿಕನಿಗೆ

    • ಬಹಳ ದಿವಸಗಳ ನಂತರ ಕವನಿಸುತ್ತಿರುವಿರಿ. ಮರುಸ್ವಾಗತ. ಪೂರ್ವಾರ್ಧದ ಊನಗಣದಲ್ಲಿ ೧-೩ ಮಾತ್ರೆಗಳಷ್ಟೆ ಇರಬೇಕು. ಉತ್ತರಾರ್ಧದ ಊನಗಣದಲ್ಲಿ ಒಂದು ಲಘ್ವಕ್ಷರ ಅಥವ ಒಂದು ಗುರ್ವಕ್ಷರ ಮಾತ್ರವಿರಬೇಕು. ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಗಮನಿಸಿಕೊಳ್ಳಿ. ಇದು ಚಾಟುಪದ್ಯವಲ್ಲವಾದ್ದರಿಂದ ಕ್ರಾಸು ಎಂಬ ಇಂಗ್ಲಿಶ್ ಶಬ್ದವನ್ನು ಬಳಸುವಂತಿಲ್ಲ.

  7. ದೇವಂ ಮನುಜ ವಿಕಾರಕೆ
    ಸಾವಂ ಕರುಣಿಪ ವಿಶೇಷ ಧ್ಯಾನವಿಧಾನಂ ।
    ನೋವೊಳ್ ನಲಿವಿತ್ತ ಸುಕೃತ
    ಭಾವಂ ಕಾಣ್ ಶಿಲುಬೆ ಮೂಡಿರಲ್ ಭ್ರೂಮಧ್ಯಂ !!

    ತನಗೆ ನೋವಿತ್ತ ಜನರನ್ನು ಕ್ಷಮಿಸಿ , ಅವರ ಮನೋವಿಕಾರಗಳನ್ನು ಶಿಲುಬೆಗೇರಿಸೆ (ಆಜ್ಞಾಚಕ್ರದಲ್ಲಿ !!) ಧ್ಯಾನ ನಿರತ “ಏಸು”ವನ್ನು ಕಂಡ ಕಲ್ಪನೆ !!

    ಏವಂ ಮನೋವಿಕಾರಕೆ
    ಸಾವಂ ಕರುಣಿಪ ವಿಶೇಷ ಧ್ಯಾನವಿಧಾನಂ ।
    ನೋವೊಳ್ ನಲಿದಿರ್ಪ ಸುಕೃತ
    ಭಾವಂ ಕಾಣ್ ಶಿಲುಬೆ ಮೂಡಿರಲ್ ಭ್ರೂಮಧ್ಯಂ !!

    ಮನೋವಿಕಾರಗಳನ್ನು ನೀಗಿಸಲು “ಧ್ಯಾನ”ದ ಅವಶ್ಯಕತೆ / ವಿಧಾನ / ಸಾರ್ಥಕತೆಯನ್ನು ಸಾರುವ ಪದ್ಯ !!

    • ಚೆನ್ನಾಗಿದೆ.
      ೨ ನೇ ಪಾದ(೬ನೇ ಗಣ)ದಲ್ಲಿ ೧ ಮಾತ್ರೆ ಹೆಚ್ಚಾಗಿದೆಯಲ್ಲವೇ!?

      • ಸಾವಂ/ ಕರುಣಿಪ/ ವಿಶೇಷ/ ಧ್ಯಾನವಿ/ಧಾನಂ/ – ಎಲ್ಲೂ ಮಾತ್ರಾಪ್ರಮಾಣದಲ್ಲಿ ದೋಷವಿಲ್ಲ. ಇಲ್ಲಿ ’ಷ’ ಅಕ್ಷರವು ಶಿಥಿಲದ್ವಿತ್ವ. (ಧ್)ಯಾನವಿ – ನಾಲ್ಕು ಮಾತ್ರೆಗಳು.

        • We cannot make ಶಿಥಿಲದ್ವಿತ್ವ between two sanskrit words – ವಿಶೇಷ and ಧ್ಯಾನ. May be we can change it to ನೆಗಳ್ದ ಧ್ಯಾನ with ಶಿಥಿಲದ್ವಿತ್ವ

          • ಧನ್ಯವಾದಗಳು ನೀಲಕಂಠ ,
            ತಿದ್ದಿದ ಪದ್ಯ :

            ದೇವಂ ಮನುಜ ವಿಕಾರಕೆ
            ಸಾವಂ ಕರುಣಿಸೆ ನೆಗಳ್ದ ಧ್ಯಾನವಿಧಾನಂ ।
            ನೋವೊಳ್ ನಲಿವಿತ್ತ ಸುಕೃತ
            ಭಾವಂ ಕಾಣ್ ಶಿಲುಬೆ ಮೂಡಿರಲ್ ಭ್ರೂಮಧ್ಯಂ !!

          • ಶಿಥಿಲದ್ವಿತ್ವ ಎಂದರೇನು? ಇದು ಬಂದರೆ ತಪ್ಪೋ ಅಥವ ಶಿಥಿಲದ್ವಿತ್ವ ಇರಬಹುದೋ?

          • ಧನ್ಯವಾದಗಳು ಉಷಾರವರೇ. ಈ ಪ್ರಶ್ನೋತ್ತರಗಳು ತುಂಬಾ ಉಪಯೋಗವಾಗುತ್ತವೆ

  8. ಧನ್ಯವಾದಗಳು ಸುನಿಲ್ ಶರ್ಮರೆ, ನಿಜದಲ್ಲಿ ಈ ಪದ್ಯಕ್ಕೆ ನಿಮ್ಮ ಪದ್ಯಭಾವವೇ ಪ್ರೇರಣೆ !!
    ಛಂದಸ್ಸು ತಪ್ಪಿದ್ದು ಗಮನಿಸಿರಲಿಲ್ಲ . ವಿವರಣೆ ಸಹಿತ ಸಂದೇಹ (“ಧ್ಯಾನ”ದಲ್ಲಿನ ಶಿಥಿಲದ್ವಿತ್ವ) ನಿವಾರಿಸಿದ್ದಕ್ಕೆ ಧನ್ಯವಾದಗಳು ಪ್ರಸಾದ್ ಸರ್ .

  9. ಗಗನಕ್ಕೊಯ್ಯುವ ಭರದಿಂ (ಕ್ರೈಸ್ತ ಮತಮಂ)
    ಜಗದೊಳ್ ಕ್ರೈಸ್ತರು ಮತಾಂತರಗಳಂ ಗೈದುಮ್ |
    ಹಗೆಗಳಿಗೆ ನೀರನೆರೆದುಂ
    ಮಿಗೆ ಮರೆತುಂ ಮೇರಿಕುವರನಂ, ತನ್ವಚನಮ್||

    ಪದ್ಯಭಾವಂ: ಜಗದೊಳಗೆ ಕ್ರೈಸ್ತಮತವೊಂದೇ ಇರಬೇಕೆಂಬ ಇಚ್ಚೆಯಿಂದ ಮೇರಿಕುವರನನ್ನು(ಚಿತ್ರದಲ್ಲಿ ನಿಕ್ಷಿಪ್ತನಾದ ಏಸು), ಅವನ ಮಾತುಗಳನ್ನು ಕ್ರೈಸ್ತರು ಮರೆಯುತಲಿಹರು.
    ನಿಜವಾಗಿ ಹಗೆ ಸಾಧಿಸಲು, ಮತಾಂತರ ಮಾಡಲು ಏಸು ಹೇಳಿಲ್ಲವೆಂಬುದು.

    • ಸುನಿಲ್ ಶರ್ಮಾಅವರೇ, Nice one! Need to focus on few points related to haLagannaDa forms. ಗಗನಕ್ಕೊಯ್ಯುವ will be hosagannaDa form. It should ಗಗನಕ್ಕೊಯ್ವ. ಕ್ರೈಸ್ತರು -> ಕ್ರೈಸ್ತರ್.
      ಹಗೆಗಳಿಗೆ -> ಹಗೆಗಳ್ಗೆ
      ಮೇರಿಕುವರನಂ -> better to make ಮೇರಿಗುವರನಂ with sandhi
      ತನ್ವಚನಮ್ – should be ತದ್ವಚನಮ್ – ಜಶ್ತ್ವಸಂಧಿ

      • ಧನ್ಯವಾದಗಳು, ತಿದ್ದಿಕೆಗೆ…
        ಹೀಗೆ ತಿದ್ದಿಕೊಂಡಿರುವೆ

        ಗಗನಕ್ಕೊಯ್ವ ಭರದೊಡಂ (ಕ್ರೈಸ್ತ ಮತಮಂ)
        ಜಗದೊಳ್ ಕ್ರೈಸ್ತರ್ ಮತಾಂತರಗಳಂ ಗೈದುಮ್ |
        ಹಗೆಗಳ್ಗೆ ನೀರನೆರೆದುಂ
        ಮಿಗೆ ಮರೆತುಂ ಮೇರಿಗುವರನಂ, ತದ್ವಚನಮ್||

  10. ಲೋಕದ ಮತಕ್ಕೆ ನವತಾ-
    ಲೋಕನದೊಂದು ಮೊಗವೀವ ಸಾಸಕ್ಕೇರ್ದಂ-
    ಗೀ ಕಾಗೆಗಳೇಂ ಗೈದರ್
    ಲೋಕವಿಕಾರತೆಯ ವಕ್ತ್ರಕಿದು ದಲ್ ಚಿತ್ರಂ

    ಜನಗಳ ಮತಕ್ಕೆ ಏನಾದರೂ ನವತ್ವದ ದೃಷ್ಟಿಯ ಮುಖವನ್ನು ಕೊಡುವ ಸಾಹಸಕ್ಕೆ ಏರಿದವನಿಗೆ ಈ ಕಾಗೆಗಳು ಮಾಡಿದ್ದೇನು! ಅಂತಹ ಲೋಕವಿಕಾರತೆಯ ಮುಖವನ್ನು ತೋರಿಸುವುದೇ ಈ ಚಿತ್ರ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)