The boy is from one of the Himalayan States/countries. Sugarcane is not grown there, he is not used to eating it and hence his difficulty in chewing at it. Sugarcane grows in the Deccan plateau, and is as strong. The crops of north and northeast India are as easy and crispy as the young fragile Himalaya.
ದಕ್ಕನಿ=Deccan. ತಿಕ್ಕ(ಲ)=Maverick. ಕಿಣ-ಪಿಷ್ಟ=Corn-flour
ದಕ್ಕನಿ-ಗೆ ವರವೇಳ್ಕುಮೀಂಟೆ ಕಬ್ಬಂ ನೀನು
ಭಕ್ಕರಿಯು ಮಾತ್ರಮೇ ಉತ್ತರದೊಳು|
ಬುಕ್ಕರಾಯನ ನಾಡು ಗಟ್ಟಿಕಬ್ಬಿನೊಲಿಹುದು
ತಿಕ್ಕಶಂಕರಗೃಹವು ಕಿಣಪಿಷ್ಟದೊಲ್||
ಈಗ ತಿಳಿಯಿತೆ ಮಲ್ಲಿಭಾಗವತರೆ, ಇಲ್ಲಿ ಅಭ್ಯಸಿಸುವುದರಿಂದ ಪ್ರಯೋಜನವೇನೆಂದು? ಶ್ರೀಯುತ ಶ್ರೀಕಾಂತಮೂರ್ತಿಗಳು ಬರ್ಮಿಂಗ್-ಹ್ಯಾಮಿನಲ್ಲಿ ಸೈಕಿಯಾಟ್ರಿಸ್ಟ್ ವೃತ್ತಿಯಲ್ಲಿ ನಿರತರು. ಕಾವ್ಯ-ಸಂಗೀತಗಳಲ್ಲಿ ಆಸ್ಥೆಯುಳ್ಳವರು.
ಮೂರ್ತಿಗಳೆ, ಮಲ್ಲಿಭಾಗವರು ನನ್ನ ಆಪ್ತರು. ನಿತ್ಯವೂ ತಮ್ಮ ಹೊಸಹೊಸ ಪದ್ಯಗಳನ್ನು ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಾರೆ.
ಮಿತ್ರಪ್ರಾಸ ಅಲ್ಪಪ್ರಾಣ ಮಹಾಪ್ರಾಣಗಳ ಬೆರಕೆಗೆ ಸಾಮಾನ್ಯ ಹೇಳೋದು. ಶ,ಷ, ಕೆಲವೊಮ್ಮೆ ಸ-ಗೆ ಹಾಗೇ ಲ-ಳ ಇವು ಬರುತ್ರತವೆ. ಖರ-ಘೋಷ್ಯಗಳನು ಸಮರ್ಥಿಸುವುದು ಕಷ್ಟ.
ಪಾದ 2-4- ನಾನು ಹೇಳಿದ್ದು ಸ್ಪಷ್ಚವಾಗಲಿಲ್ಲ ಅನ್ಸುತ್ತೆ. ಪಾದ 2 ಮತ್ತು ಪಾದ 4- ಇವೆರಡರ ನಡುವೆಯೇ ವ್ಯತ್ಯಾಸವಿದೆ ಮಾತ್ರೆಗಳಲ್ಲಿ.
1-4 ಕ್ಕೆ ಹೋಲಿಸಿಯಲ್ಲ. ನಾನು ಹಾಕಿರೋದನ್ವೂ ನೋಡಿ. 1-3 ಒಂದು ರೀತಿಯಿದ್ದರೆ 2-4 ಇನ್ನೊಂದು ರೀತಿಯಿವೆ
ನನಗೆ ಕಾವ್ಯ, ಕವನ, ಛಂದಸ್ಸುಗಳ ಬಗ್ಗೆ ಅಷ್ಟೇನೂ ತಿಳುವಳಿಕೆ ಇಲ್ಲ, ಸ್ವಲ್ಪ ಆಸಕ್ತಿ ಇದೆ ಅಷ್ಟೇ. ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಹಾಲು ಅಂದರೆ ಕಬ್ಬಿನ ಹಾಲು. ಹುಬ್ಬುಗಂಟಿನ ಬಗ್ಗೆ ದಯವಿಟ್ಟು ಯಾರೂ ಹುಬ್ಬುಗಂಟಾಗಿಸಬಾರದು.
ಕಬ್ಬಿನ ಗಂಟನ್ನು ಜೀವನ ಕಷ್ಟಗಳ ಗಂಟಿಗೆ ಹೋಲಿಸುವ ಪ್ರಯತ್ನ.
’ಆಸಕ್ತ’ರಿಗೆ ಪದ್ಯಪಾನಕ್ಕೆ ಸ್ವಾಗತ. ತಮ್ಮನ್ನು ಪರಿಚಯಿಸಿಕೊಳ್ಳಿ. ನಿಮ್ಮಲ್ಲಿ ಕಲ್ಪನೆ ಚೆನ್ನಾಗಿದೆ, ಕವನಿಸುವ ಇಷ್ಟವೂ ಇದೆ. ಛಂದಸ್ಸುಗಳ ಬಗೆಗೆ ಶ್ರೀ ರಾ. ಗಣೇಶರ ಪ್ರವಚನಗಳು ಇಲ್ಲಿವೆ (Learn Prosody) . ದಯವಿಟ್ಟು ಗಮನಿಸಿಕೊಂಡು ಕವನಿಸಿ. ಶುಭಾಶಯಗಳು.
ಕಗ್ಗದಿಂದ:
ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಂ
ಇಕ್ಷುದಂಡದವೋಲು ಕಷ್ಟಭೋಜನವೇ|
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ
ಮಾಕ್ಷಿಕರು ಮಿಕ್ಕೆಲ್ಲ -ಮಂಕುತಿಮ್ಮ||
The boy is from one of the Himalayan States/countries. Sugarcane is not grown there, he is not used to eating it and hence his difficulty in chewing at it. Sugarcane grows in the Deccan plateau, and is as strong. The crops of north and northeast India are as easy and crispy as the young fragile Himalaya.
ದಕ್ಕನಿ=Deccan. ತಿಕ್ಕ(ಲ)=Maverick. ಕಿಣ-ಪಿಷ್ಟ=Corn-flour
ದಕ್ಕನಿ-ಗೆ ವರವೇಳ್ಕುಮೀಂಟೆ ಕಬ್ಬಂ ನೀನು
ಭಕ್ಕರಿಯು ಮಾತ್ರಮೇ ಉತ್ತರದೊಳು|
ಬುಕ್ಕರಾಯನ ನಾಡು ಗಟ್ಟಿಕಬ್ಬಿನೊಲಿಹುದು
ತಿಕ್ಕಶಂಕರಗೃಹವು ಕಿಣಪಿಷ್ಟದೊಲ್||
ಮೊಗದೊಮ್ಮೆ ಪೇಳುವೆಂ ಕಬ್ಬನಿವ ಸವಿದಿಲ್ಲ
ಬಿಗಿಸಿಹನು ಮುಖವ ಛಾಯಾಚಿತ್ರಕೈ|
ಅಗಿಯಬೇಕಲ್ಲವೇಂ ತುದಿಯೊಳಿಂ ಜಲ್ಲೆಯನು
ಬಗಲಿನಿಂದಗಿವರೇಂ ಪೊಸಬನಿದ್ದುಂ!!
ಚಂದವಿದೆ ಸರ್.
ನನಗೂ ಇದೇ ತೆರನಾಗಿ ಹೊಳೆದಿತ್ತು.ಕಬ್ಬನ್ನಾಗಲೀ ಕಬ್ಬವನ್ನಾಗಲೀ ಎಲ್ಲೋ ಮಧ್ಯದಿಂದ ಸವಿಯಲೆತ್ನಿಸುವುದು ಮೂರ್ಖಪ್ರಯತ್ನ-ಎಂದು.
ಹಾಗಾದರೆ ಇನ್ನುಮೇಲೆ ಪ್ರತಿವಾರವೂ ನಿಮ್ಮದೇ ಪ್ರಥಮಪದ್ಯವಾಗಬೇಕು! ಅಭಿನಂದನೆಗಳು 🙂
ಹುಬ್ಬೊಂದು ಬಿಗಿಯಾಯ್ತು ತೊಗಟೆ ಕೀಳುವ ವೇಳೆ,
ಕಬ್ಬಿನೊಳಸಿಹಿ ತಗುಲೆ ಮೇಲೇರಿತೊಂದು!
ಕಬ್ಬಗಳು ಹೀಗೆಯೇ ಕಾಣುವವು ಕೆಲವೊಮ್ಮೆ
ಸಿಪ್ಪೆಯಷ್ಟೇ ಕಠಿಣ ರಸವೊ ಮಧುರ!!
ಹುಬ್ಬೊಂದು ಬಿಗಿಯಾಯ್ತು ತೊಗಟು ಕೀಳುವ ವೇಳೆ,
ಕಬ್ಬಿನೊಳಸಿಹಿ ತಗುಲೆ ಮೇಲೇರಿತೊಂದು!
ಕಬ್ಬವೂ ಹೀಗೆಯೇ ಕಾಣುವುದು ಕೆಲವೊಮ್ಮೆ
ಸಿಪ್ಪೆಯಷ್ಟೇ ಕಠಿಣ ರಸವೊ ಮಧುರ!!
’ತಪ್ಪದೆಲೆ ಸತ್ಯವನೆ ನಾ ನುಡಿವೆ, ನೇತರಂ’
ಒಪ್ಪವೈ ನೀನಿದನು ಪಾಲಿಸಿಹುದು|
’ಸಿಪ್ಪೆಯಷ್ಟೇ ಕಠಿಣ’ವೆಂದಂತೆ ನೀನದೋ
ತಪ್ಪಾಗಿಸಿಹೆ ’ತೊಗಟ’ ’ತೊಗಟು’ ಎಂದು||
ಬಹಳ ಸುಂದರ! Very nice observation regarding the contrast in eyebrows!.
ಪ್ರಾಸಕ್ಕೆ ಹೀಗೆ ಬದಲಿಸಬಹುದು:
ಕಬ್ಬವುಂ ಕಠಿಣಮೆನೆ ತೋರುವುದು ಹೊರಗಿಂದೆ
ನಿಬ್ಬೆರಗು ಗಬ್ಬದೊಳ ರಸನಿಷ್ಟಮಾದೊಡಂ||
ಅನಂತ ಧನ್ಯವಾದಗಳು ಸರ್
ಚೆನ್ನಾಗಿದೆ- ಕೊನೆಯ ಪಾದದ ಪ್ರಾಸ ಬಿಟ್ಟು. 2 & 4ನೆ ಪಾದಗಳ ಮಾತ್ರೆಗಳು ಬೇರೆಯಿವೆ. ಹೀಗೆ ತಿದ್ದಬಹುದು
ಹುಬ್ಬೊಂದು ಬಿಗಿಯಾಯ್ತು ತೊಗಟೆ ಕೀಳುವ ವೇಳೆ,
ಕಬ್ಬಸಿಹಿ ತಿಳಿಯೆ ಮೇಲೇರಿತೊಂದು!
ಕಬ್ಬಗಳು ಹೀಗೆಯೇ ಕಾಣುವವು ಕೆಲವೊಮ್ಮೆ
ಕೊಬ್ಬರಿಯು ಕರಟದೊಳಗಿರುವಂತೆಯೇ!
(ನಾರಿಕೇಳ ಪಾಕ)
ಈಗ ತಿಳಿಯಿತೆ ಮಲ್ಲಿಭಾಗವತರೆ, ಇಲ್ಲಿ ಅಭ್ಯಸಿಸುವುದರಿಂದ ಪ್ರಯೋಜನವೇನೆಂದು? ಶ್ರೀಯುತ ಶ್ರೀಕಾಂತಮೂರ್ತಿಗಳು ಬರ್ಮಿಂಗ್-ಹ್ಯಾಮಿನಲ್ಲಿ ಸೈಕಿಯಾಟ್ರಿಸ್ಟ್ ವೃತ್ತಿಯಲ್ಲಿ ನಿರತರು. ಕಾವ್ಯ-ಸಂಗೀತಗಳಲ್ಲಿ ಆಸ್ಥೆಯುಳ್ಳವರು.
ಮೂರ್ತಿಗಳೆ, ಮಲ್ಲಿಭಾಗವರು ನನ್ನ ಆಪ್ತರು. ನಿತ್ಯವೂ ತಮ್ಮ ಹೊಸಹೊಸ ಪದ್ಯಗಳನ್ನು ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಾರೆ.
ಧನ್ಯವಾದಗಳು, ಶ್ರೀಕಾಂತರವರೇ.
ಸಮೀಪಪ್ರಾಸವನ್ನು ಬಳಸ ಕೂಡದೆ?ತಿಳಿಸಿ.
2 & 4ನೆಯ ಪಾದಗಳಲ್ಲಿ ಮಾತ್ರಾಸಂಖ್ಯೆ ಭಿನ್ನವಾಗಿರಲು ಕಾರಣ,ಅದು ಮುಕ್ತಕವಾಗಿರುವುದೇ ಆಗಿದೆ.(ಮಂಕುತಿಮ್ಮನ ಕಗ್ಗದ ಮಾರ್ಗ)
ಮಿತ್ರಪ್ರಾಸ ಅಲ್ಪಪ್ರಾಣ ಮಹಾಪ್ರಾಣಗಳ ಬೆರಕೆಗೆ ಸಾಮಾನ್ಯ ಹೇಳೋದು. ಶ,ಷ, ಕೆಲವೊಮ್ಮೆ ಸ-ಗೆ ಹಾಗೇ ಲ-ಳ ಇವು ಬರುತ್ರತವೆ. ಖರ-ಘೋಷ್ಯಗಳನು ಸಮರ್ಥಿಸುವುದು ಕಷ್ಟ.
ಪಾದ 2-4- ನಾನು ಹೇಳಿದ್ದು ಸ್ಪಷ್ಚವಾಗಲಿಲ್ಲ ಅನ್ಸುತ್ತೆ. ಪಾದ 2 ಮತ್ತು ಪಾದ 4- ಇವೆರಡರ ನಡುವೆಯೇ ವ್ಯತ್ಯಾಸವಿದೆ ಮಾತ್ರೆಗಳಲ್ಲಿ.
1-4 ಕ್ಕೆ ಹೋಲಿಸಿಯಲ್ಲ. ನಾನು ಹಾಕಿರೋದನ್ವೂ ನೋಡಿ. 1-3 ಒಂದು ರೀತಿಯಿದ್ದರೆ 2-4 ಇನ್ನೊಂದು ರೀತಿಯಿವೆ
ಧನ್ಯವಾದಗಳು.
ಕಗ್ಗದಲ್ಲಿ….
1ನೇ & 3ನೇ ಪಾದಗಳಲ್ಲಿ ೫;೫ ೫ ೫
ಹಾಗೂ,
2ನೇ ಪಾದದಲ್ಲಿ ೫ ೫ ೫+೩
4ನೇ ಪಾದದಲ್ಲಿ ೫ ೫ ೫+ಗು
ಬರುತ್ತದಲ್ಲವೇ.
ಶಿವೆಗಂಗೆಹಿಮವಂತರಡಕದಳ್ಕರೆಯುಂಡು
ನವೆದು ಕೂರ್ಗಾಳಿಯೊಳ್ ಬೆಳೆದಿಕ್ಷುಬಾಲರಿದೊ
ಸವಿವರೊಂದನುಮೊಂದ, ಸಹಜತೆಯೆ ಸೊಗಮಾಯ್ತೆ
ಶಿವನಾಲಯಕ್ಕಿದುವೆ ಸಹಜಮಲ್ತೆ||
ಅಡಕ = ನಿಯಮ, ಶಿಸ್ತು
ಇಕ್ಕೆಲದೊಳೂ ಗಂಟಿಹುದುಮೆಂದು ಹೆದರಿದೆಯ
ಮುಕ್ಕಬೇಕಿಲ್ಲ ನೀನಿಡಿಯ ಗಂಟಂ|
ಪಕ್ಕದಿಂ ಸಿಗಿಯೆಲವೊ ಇನಿತಿನಿತೆ ಸಾಜದಿಂ
ಮಿಕ್ಕೆಲ್ಲ ಭಾಗದೊಲು ನವುರೆ ಗಂಟೂ||
ಚೆಂದ!
ಧನ್ಯವಾದಗಳು. ಬಹಳ ದಿನಗಳ ಮೇಲೆ ಬಂದಿರಿ. ಪುನಃ ಸ್ವಾಗತ. ಮತ್ತೆ ಕಣ್ಮರೆಯಾಗಬೇಡಿ. ವಾರವಾರವೂ ಭೇಟಿಯಾಗೋಣ.
ಒಕ್ಕಣ್ಣನಿರುಕಿ ಮನಸಲೆ ಶುಕ್ರ ಕುರುಕುತಿರ
ಲಿಕ್ಕುವನು ಹರಿಗಿಂದು ತಾ ಮಣ್ಣನೇ
ಮುಕ್ಕಿಸುವೆನೆನುತಾಗಕಟ ಹಲ್ಲು ತಾಗಿತು ಕ-
ರಕ್ಕೆಂದು ಗಿಣ್ಣಿಗೇರಿತು ಹುಬ್ಬದೋ
ಚಿಕ್ಕ ರೂಪಲಿ ಬಂದ ಹರಿ ಹುಲ್ಲ ಗರಿಯನು ಸು
ರುಕ್ಕೆಂದು ಕುಕ್ಕಲಾ ತೆರೆದ ಕಣ್ಣ
ಮುಕ್ಕಿದನು ಮೂಲೋಕವನೆ ಮೂರಡಿಗಳಲಲ್ಲಿ
ಒಕ್ಕಣ್ಣನಾದ ತಾ ಶುಕ್ರನಂದು
ಹಾಲು ಮೆಲ್ಲುವ ಭರದಿ
ಕಬ್ಬು ಗಂಟಿನ ತೆರದಿ
ಹುಬ್ಬು ಗಂಟಿಕ್ಕಿಹುದು||
ಎಳೆಯ ಹಲ್ಲಲಿ ಕಚ್ಚಿ
ಕಣ್ಣನೊಂದನು ಮುಚ್ಚಿ
ಸವಿ ರಸವ ಕಾದಿಹುದು||
ಸುಕರವಲ್ಲವು ಮಗುವೇ
ಸುಖಕರದ ಬಾಳುವೆಯು|
ಕಷ್ಟಗಂಟನು ಮೊದಲೇ
ನೀ ಕಿತ್ತೊಸೆಯಬೇಕು||
ನನಗೆ ಕಾವ್ಯ, ಕವನ, ಛಂದಸ್ಸುಗಳ ಬಗ್ಗೆ ಅಷ್ಟೇನೂ ತಿಳುವಳಿಕೆ ಇಲ್ಲ, ಸ್ವಲ್ಪ ಆಸಕ್ತಿ ಇದೆ ಅಷ್ಟೇ. ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಹಾಲು ಅಂದರೆ ಕಬ್ಬಿನ ಹಾಲು. ಹುಬ್ಬುಗಂಟಿನ ಬಗ್ಗೆ ದಯವಿಟ್ಟು ಯಾರೂ ಹುಬ್ಬುಗಂಟಾಗಿಸಬಾರದು.
ಕಬ್ಬಿನ ಗಂಟನ್ನು ಜೀವನ ಕಷ್ಟಗಳ ಗಂಟಿಗೆ ಹೋಲಿಸುವ ಪ್ರಯತ್ನ.
’ಆಸಕ್ತ’ರಿಗೆ ಪದ್ಯಪಾನಕ್ಕೆ ಸ್ವಾಗತ. ತಮ್ಮನ್ನು ಪರಿಚಯಿಸಿಕೊಳ್ಳಿ. ನಿಮ್ಮಲ್ಲಿ ಕಲ್ಪನೆ ಚೆನ್ನಾಗಿದೆ, ಕವನಿಸುವ ಇಷ್ಟವೂ ಇದೆ. ಛಂದಸ್ಸುಗಳ ಬಗೆಗೆ ಶ್ರೀ ರಾ. ಗಣೇಶರ ಪ್ರವಚನಗಳು ಇಲ್ಲಿವೆ (Learn Prosody) . ದಯವಿಟ್ಟು ಗಮನಿಸಿಕೊಂಡು ಕವನಿಸಿ. ಶುಭಾಶಯಗಳು.
haa, “aa saktha” – WELCOME !!
ಐದೈದು ಮಾತ್ರೆಗಳಿಗೆ ಹೊಂದಿಸಿರುವಿರಿ (ಒಂದೆರಡು ಗಣಗಳನ್ನುಳಿದು). ಸ್ತುತ್ಯ. ಆದರೆ ಮಾತ್ರಾಛಂದಸ್ಸುಗಳಲ್ಲಿ (ಕಂದಪದ್ಯವನ್ನುಳಿದು) ಊನಗಣವಿರಲೇಬೇಕು, ಇಲ್ಲದಿದ್ದರೆ ವಾಚನದಲ್ಲಿ ನಿಲುಗಡೆಯ ಸೌಖ್ಯವಿರದು (ವಿಡಿಯೋ ಪಾಠದಲ್ಲಿ ಇದು ವಿಶದವಾಗಿ ಚರ್ಚಿಸಲ್ಪಟ್ಟಿದೆ. ಗಮನಿಸಿಕೊಳ್ಳಿ). ಹೀಗೊಂದು ಸವರಣೆ:
ಗಂಟುಗಳುಮಿದ್ದೇನು ನಡುವಿಹುದು ಸಿಹಿರಸವು
ಹುಬ್ಬು ಗಂಟಿಟ್ಟೊಡೇಂ, ನಾಲಗೆಗೆ ಸಿಹಿಯು|
ಸಿಹಿಯಿದ್ದೊದುದ್ದಕ್ಕುಮಲ್ಲಲ್ಲಿ ಗಂಟಿಹುದು
ಜೀವನವುಮಂತೆಯೇ ದಾಂಟಿ ಪೋಗೈ||
(ಇಲ್ಲಿ ನಾನು ಆದಿಪ್ರಾಸವನ್ನು ಪಾಲಿಸಿಲ್ಲ. ಹತ್ತಿಪ್ಪತ್ತು ಪದ್ಯಗಳನ್ನು ಹೀಗೆ ಅಭ್ಯಸಿಸಿ. ನಂತರ ಆದಿಪ್ರಾಸವು ತಾನೇ ಸಿದ್ಧಿಸುತ್ತದೆ.)
“ಹಾದಿರಂಪ”ರ ಉಪಯುಕ್ತ ಸಲಹೆಗಳಿಗೆ ತುಂಬಾ ಧನ್ಯವಾದಗಳು. ಖಂಡಿತವಾಗಿಯೂ ಛಂದಸ್ಸುಗಳ ಬಗ್ಗೆ ಅಭ್ಯಸಿಸಿಯೇ ಮುಂದಿನ ಪ್ರಯತ್ನ. ವಂದನೆಗಳೊಂದಿಗೆ ಅನಾಮಿಕ “ಆಸಕ್ತ”.
ಪಿಡಿದು ಕಬ್ಬಿನತುಂಡ ಕಣ್ಣನಾ ಕೊಳಲಿನೋಲ್
ತಡಕುತಲಿ ಕಣ್ಣ ಮುಚ್ಚಿದ ಚಿಣ್ಣಂ
ತೊಡಕಿರಲ್ ಗೆಣ್ಣದೆಟುಕದಿರೆ ಸವಿರಸಗಾನ(ಣ!)
ಮಿಡುಕಿನೊಳ್ ಮಿಟುಕಿರ್ಪನೊಂಟಿಕಣ್ಣೊಳ್ !!
ಬಾಲನು ಕಬ್ಬಿನ ತುಂಡಿನಲ್ಲಿ ಕೊಳಲನೂದುತಿರುವಂತೆ ಕಂಡ ಕಲ್ಪನೆಯಲ್ಲಿ!!