Jan 282019
೧. ವಸಂತತಿಲಕದ ಸಮಸ್ಯೆ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ
ಪ್ರಾದೇಶಮಾತ್ರವಸನಂ = ಅತಿಶಯವಾಗಿ ಚಿಕ್ಕದಾದ ವಸ್ತ್ರ
೨. ದ್ರುತವಿಲಂಬಿತದ ಸಮಸ್ಯೆ
ಅಸಿತಕೇಸರಿಯಿಂದಳಿದಂ ಖಲಂ
೧. ವಸಂತತಿಲಕದ ಸಮಸ್ಯೆ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ
ಪ್ರಾದೇಶಮಾತ್ರವಸನಂ = ಅತಿಶಯವಾಗಿ ಚಿಕ್ಕದಾದ ವಸ್ತ್ರ
೨. ದ್ರುತವಿಲಂಬಿತದ ಸಮಸ್ಯೆ
ಅಸಿತಕೇಸರಿಯಿಂದಳಿದಂ ಖಲಂ
ಈದೋರ್ ವಿಶೇಷ ವಿಷಯಂ ಭುವಿದಂ ಗಡಾ ನೀಂ
ಕಾದಲ್ಮೆಯಿಂ ಜರುಗುದೀಪರಿ ವೈಪರೀತ್ಯಂ
ಪಾದಾರ್ಪಣಾ ಸಮಯಕಂ ರವಿಯೀವೊಡೆ ಕ್ಷಿ-
ಪ್ರಾದೇಶಮಾತ್ರ ವಸನಂ ಸತಿಯಾಂತಳಲ್ತೇ !!
*ಕ್ಷಿಪ್ರ + ಆದೇಶ = ಕ್ಷಿ-ಪ್ರಾದೇಶ = ತತ್ ಕ್ಷಣದ ಅಪ್ಪಣೆ
ಇದೋ ಇಲ್ಲಿ ನೋಡಿ ಈ ವೈಪರೀತ್ಯ !! (ಗಂಡನ ಆದೇಶದಂತೆ ಉಡುತೊಡುವ ಹೆಂಡತಿಯನ್ನು ಬಲ್ಲಿರಾ ?!)
ಸೂರ್ಯನಾಗಮನದ ಸಮಯಕ್ಕನುಗುಣವಾಗಿ ಅವನ ಆದೇಶದಂತೆ ವರ್ಣವಸ್ತ್ರವಿನ್ಯಾಸಗೊಳುವ ಭೂಮಿಯ ಕಲ್ಪನೆ !!
ಕೀಲಕದ ಶಬ್ದಚ್ಚಲನಿರ್ವಹಣೆ ಚೆನ್ನಾಗಿದೆ. ಭುವಿದಂ ಬದಲು ಭುವದಂ ಎಂದರೆ ಸರಿಯಾದೀತೇನೋ.
ಧನ್ಯವಾದಗಳು ಪ್ರಸಾದ್ ಸರ್,
ಭೂಮಿ ಮತ್ತು ಇದು ಅವಳ ವಿಷಯ – ಎಂದು ಎರಡನ್ನೂ ಹೇಳಲು ” ಭುವಿದಂ” ಬಳಸಿರುವೆ . “ಭುವದಂ” ಎಂದರೆ ಅರ್ಥ
ವ್ಯತ್ಯಾಸವಾಗುದೇ?
ಕ್ಷಿಪ್ರಾದೇಶ -> ಚೆನ್ನಾಗಿದೆ. ಆದರೆ ಮಾತ್ರದಿ ಎಂದಾಗಬೇಕಲ್ವೇ?
ಧನ್ಯವಾದಗಳು ರವೀಂದ್ರ ,
ವೃತ್ತದ ಮಾತ್ರಾಂತರ ತಪ್ಪಿಸಲು ಮಾತ್ರ ಈ “ಮಾತ್ರ”!!
(Carved) ಕೋದಿಟ್ಟ ಶಿಲ್ಪವನದೋ ವಿಪಣಾಂತದೊಳ್ ಕಾಣ್
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ!
ಐದಲ್ಲ ಕೇವಲಮೆ ಈರ್ವಸನಂಗಳಿಟ್ಟುಂ (ಸೀರೆ, ಪೆಟ್ಟಿಕೋಟ್, ಕುಪ್ಪಸ ಮತ್ತು ಎರಡು ಒಳವಸ್ತ್ರಗಳ ಪೈಕಿ ಕೊನೆಯ ಎರಡನ್ನು ಮಾತ್ರ)
(Passers-by) ಹಾದಂತರನ್ನು ಸೆಳೆವಂಗಡಿಯಾತ ದಿಟ್ಟಂ||
.
ಕಸುವು ತನ್ನೊಳಗಿರ್ಪುದುಮೆನ್ನುತುಂ
ಪೆಸರ ಪೊಂದುವೆನೆನ್ನುತೆ ಕಾಯುತುಂ (Fighting)|
ಪಸಿದು ಕಾದಿಹುದೆಂದಿವ ಬಲ್ಲನೇಂ
(Roaring) ರಸಿತಕೇಸರಿಯಿಂದಳಿದಂ ಖಲಂ||
ವಿನೋದ-ವ್ಯಥೆಗಳು ಮೃಗಗಳಲ್ಲಿ ಒಂದೇ ಸಮ ಇರದು. ಇದೊಂದು ಲಸಿತ (playful/ sportive) ಸಿಂಹವೇ. ಆದರೆ ಇಂದು ಅದರ ಲಹರಿ ರೇಗಿತ್ತು (ಮಸಕ)!
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿರೆ ಇಂದಿಗದೇತಕೋ
ಲಸಿತಕೇಸರಿಯಿಂದಳಿದಂ ಖಲಂ||
(ಖಲಂ=trainer ಎಂದು ಪರಿಗಣಿಸಬಹುದು. ಪ್ರಾಣಿಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವನು ಖಲನೇ)
ಇದೇ ಕಲ್ಪನೆಗೆ ಭಿನ್ನಕೀಲಕಗಳನ್ನು ಬಳಸಿಕೊಳ್ಳಬಹುದು:
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೇಕೊ ಉ-
ಲ್ಲಸಿತಕೇಸರಿಯಿಂದಳಿದಂ ಖಲಂ||
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೋ ಸಮು-
ಲ್ಲಸಿತಕೇಸರಿಯಿಂದಳಿದಂ ಖಲಂ||
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೇಕೊ ಆ-
ಶ್ವಸಿತಕೇಸರಿಯಿಂದಳಿದಂ ಖಲಂ||
(ಆಶ್ವಸಿತ=cheered)
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೇಕೊ ಉ-
ಚ್ಛ್ವಸಿತಕೇಸರಿಯಿಂದಳಿದಂ ಖಲಂ||
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೋ ಸಮು-
ಚ್ಛ್ವಸಿತಕೇಸರಿಯಿಂದಳಿದಂ ಖಲಂ||
(ಸಮ್-ಉಚ್ಛ್ವಸಿತ=untied/ heaving)
ಒಸರುಗೇಂ ಬಿನದಂ ಹದದಿಂದೆ ತಾಂ
ಬೆಸನಮುಂ ಮಿಗ-ಮಾನಿಸರೊಳ್ ವಲಂ|
ಮಸಕಗೊಂಡಿಹುದಿಂದಿಗದೇಕೊ ನಿ-
ಶ್ಶ್ವಸಿತಕೇಸರಿಯಿಂದಳಿದಂ ಖಲಂ||
(ನಿಶ್ಶ್ವಸಿತ= heaving)
ಲಸಿತಕೇಸರಿ – super!
_/\_
Wanting to steal something valuable that was in a cage, the careless thief entered it, failing to notice the beast that was curled up in a corner!
“ಹೊಸತು ಪಂಜರ, ರಿಕ್ತಮೃಗಂ ವಲಂ
ಕಸವನೆತ್ತುವ ವ್ಯಾಜದಿನೈದುವೆಂ|”
ಬಿಸುಡಲೆಚ್ಚರ ಚೌರ್ಯಕೆ ತಸ್ಕರಂ
(Resident) ವಸಿತಕೇಸರಿಯಿಂದಳಿದಂ ಖಲಂ||
(Irritate) ಕಸರಗೈಯುತೆ ಬಂಧಿತ ಪ್ರಾಣಿಯೊಳ್
ಮುಸುಡಿಯಂ ತಿವಿಯುತ್ತಲಿ ಆಡಲೇಂ|
ಹಿಸುಕೆ ಕೆನ್ನೆಯ ಪಂಜವ ಬೀಸಿತೈ
(Perseverant) ಪ್ರಸಿತಕೇಸರಿಯಿಂದಳಿದಂ ಖಲಂ||
A mafia don desired excess of the expensive spice pure-Kesari in all the foodstuffs he ate daily! He lost all his fortune on it.
ಪಸಿವ ಪಿಂಗಿಸುವೆಲ್ಲ ಪದಾರ್ಥದೊಳ್
ರಸನೆಗೇರುಗೆ ಕೇಸರಿಯುಣ್ಣುವಂ|
ವ್ಯಸನಿಯೀತನು ದುಂದನು ಗೈಯುತೇಂ
ಅಸಿತ(Red)ಕೇಸರಿಯಿಂದಳಿದಂ ಖಲಂ||
ಮಂದಾರದಂಥ ಸತಿಗಂ ಪತಿಯಾಗೆ ಧೂರ್ತಂ
ಸಂದೇಹಿಸುತ್ತಲೊರಟಂ ಕುಡಿದಾಡಿ ಬೈವಂ|
ಸಂದಿಗ್ಧಮಾದ ಬದುಕೊಳ್ ಗುಣಶೀಲಮೆಂಬೀ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ ||
ಮರ್ಯಾದೆಗೆಟ್ಟ ಗಂಡನನ್ನು ಕಟ್ಟಿಕೊಂಡಾಕೆಗೆ, ಅವಳ ಗುಣಶೀಲಗಳೇ ತುಂಡುಬಟ್ಟೆಗಳಾಗಿ, ಸಮಾಜದೆದರು ಬೆತ್ತಲೆಯಾಗದಂತೆ ಕಾಪಾಡುತ್ತಿವೆ.
clap clap
Thank you.
ಮಸಗುತುಂ ರವಿ ಮೂಡಣದಾಗೆ ಸಂ-
ದ ಸಿತಕೇಸರಿಯಿಂದುಳಿದುಂ ದಿನಂ
ಎಸಕದಿಂ ಪಡುಗಂ ನಡೆದುಂ ಗಡಾ
ಅಸಿತಕೇಸರಿಯಿಂದಳಿದಂ ಖಲಂ !!
ಖಲಂ = ಸೂರ್ಯ
ಸಿತ = ಬಿಳಿಯ , ಅಸಿತ = ಕಪ್ಪಾದ
ದಿನವೂ ಪೂರ್ವದಲ್ಲಿ ಉದಯಿಸಿ – (ಕೆಂಪು)ಕೇಸರಿ ಕರಗಿ ಬಿಳಿಯಾಗಿ – ಉಳಿದು/ ಬೆಳೆದು – ಪಶ್ಚಿಮಕ್ಕೆ ನಡೆದು – (ಕೆಂಪು)ಕೇಸರಿ ಕರಗಿ ಕಪ್ಪಾದಾಗ – ಕಾಣೆಯಾಗುವ(ಅಳಿವ) “ರವಿ”ಯ ಕಲ್ಪನೆ !!
As usual, she first wore the undergarments (ಪ್ರಾದೇಶಮಾತ್ರವಸನ), and then she wore a white blouse (ಚೋಲಕ – ಈ ಪ್ರಕರಣದಲ್ಲಿ ಇದು ಇನ್ನೂ ಪೂರ್ತಿ ಒಣಗಿಲ್ಲ), petticoat (ನೀವಿ) and sari (ಚೀರ)!
ಗೈದಾದ ಮೇಲದೆಗೊ ಸ್ನಾನವನಾದಿಯೊಳ್ ಕೇಳ್
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ|
ಕ್ಲೇದಂ ಗಡಿದ್ದ ಸಿತಚೋಲಕಮಂ ಮಗುಳ್ ತಾಂ
ಪಾದಾಂತಕಂ ಬಳಿಕ ನೀವಿಯ-ಚೀರಮನ್ನುಂ||
ಏಂ ದಾಳದಾಟಮಿದೊ ದಲ್ ಕುಣಿಸಲ್ಕೆ ಧರ್ಮಂ
ಬೋದಾಳರಾದ ಪತಿಗಳ್ ಕುರುಡಾಗೆ ರಾಜಂ|
ಬೆಂದಾಕೆಗಾರು ಗತಿಯೌ! ಗಡ! ಕೃಷ್ಣನಾಮ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ ||
ಧರ್ಮ, ರಾಜ, ಪತಿಗಳ ಸಹಾಯವಿಲ್ಲದ ಸತಿಗೆ ಕೃಷ್ಣನಾಮವೊಂದೆ ಗತಿ!
ವೃಷಭ-ಗಜಪ್ರಾಸಗಳ ಸಂಕರವಾಯಿತಲ್ಲ!
Hmm.. thanks for pointing it.