Mar 182019
 

  6 Responses to “ಪದ್ಯಸಪ್ತಾಹ ೩೫೧: ಚಿತ್ರಕ್ಕೆ ಪದ್ಯ”

  1. ಅಂಗಾತ ಮಲಗಿಯುಂ ಬೊಜ್ಜನಿತೆ! ಅಧ್ಯಯನ-
    ರಂಗದವ*ನೀತನಲ್ಲವೆ ಅಲ್ಲ ಕೇಳ್| (*ವಿದ್ಯಾರ್ಥಿ)
    ಅಂಗಜನುರವಣೆಯಂ ಬಣ್ಣಿಸುವ ಗ್ರಂಥವದು (Porn)
    ಗುಂಗಿನಿಂದಿಹ ಮುಚ್ಚಿ ಮುಖವನದರಿಂ||

  2. His feet are disproportionately big.
    ಪಲ್ಲವ|| ಪುಸ್ತಕದೊಳಿಹ ವಿಷಯ ಹತ್ತದು
    ಮಸ್ತಕಕದೇಕೆಂದು ಬಲ್ಲೆಯ
    ವಸ್ತುವೆಲ್ಲವು ಶಿರದಿನಿಳಿದು-
    ನ್ಯಸ್ತವಿರ್ಪುದು ಪಾದದೊಳ್||

  3. ಓದುತಲೋದುತೆ ನಿದ್ದೆಗೆ ಜಾರಿಹ
    ಪೋದಪನೇನಾರಿಸೆ ಬೆಳಕ (switch)|
    ಗಾದಿಯು ಬೇಡವು, ವಸ್ತ್ರವ ಬದಲಿಸ,
    ಚಾದರವಾಯ್ತಕ್ಷಿಗೆ ಗ್ರಂಥಂ||

    • ತುಂಬಾ ಚೆನ್ನಾಗಿದೆ ಪ್ರಸಾದ್ ಸರ್!!

    • ಇವನಾರವ ಜೀವಾತ್ಮಂ
      ಭವದಾನಂದಮಯ ಕೋಶವಂ ಧರಿಸಿರ್ಪಂ |
      ಅವಯವಗಳ ಬಲಮೆಂತುಂ
      ಸವಳದೆ ಸವಿಕಲ್ಪದಿಂದಲೆಚ್ಚರಗೊಳಲುಂ !!

      ಬಲಗೈಯೆ ಕಾಣದಾಗಿದೆಯಲ್ಲ – ಹಾಗಾಗಿ ಈ ಸಂದೇಹ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)