Mar 132019
 

೧. ಪಂಚಮಾತ್ರಾಚೌಪದಿಯ ಸಮಸ್ಯೆಯನ್ನ ಪರಿಹರಿಸಿ 

ನಾಸ್ತಿಕನೆ ಭಕ್ತಿಗಂ ಮರುಳಾದನಯ್

೨. ಕಂದಪದ್ಯದ ಸಮಸ್ಯೆಯನ್ನ ಪರಿಹರಿಸಿ

ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್

  7 Responses to “ಪದ್ಯಸಪ್ತಾಹ ೩೫೦: ಸಮಸ್ಯಾಪೂರಣ”

 1. ತ್ರಸ್ತನೆನಿತಾದೊಡಂ ಪ್ರಹ್ಲಾದನಂದು ಕೇಳ್,
  (ಹೇ) ನಾಸ್ತಿಕನೆ, ಭಕ್ತಿಗಂ ಮರುಳಾದನಯ್|
  ದುಸ್ತರದ ಜೀವನದೆ ಸೆಣಸಾಟ ಕಾರ್ಪಣ್ಯ
  ಜಾಸ್ತಿಯೇ, ನೀಂ ನಂಬು ಇನಿತೀಶನಂ||

 2. ಖರ್ಪರ= thief, rogue, cheat
  ಚರಿತವಿವಳ ಪರಿವಾರ-
  ದ್ದಿರೆ ಕೈತವ, ಹಾದರಂ, ಕಳವು, ಗಾವಳಿಗಳ್|
  ದೊರೆತಂ ಸೂಕ್ತವರಂ, ಖರ್-
  ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್||

 3. ರಸ್ತೆಯೊಳ್ ಸಾಗುತಿರ್ಪಾಗಳೇ ನೋಡಿದಂ
  ಹೊಸ್ತಿಲಲಿ ನಿಂತಿರ್ದ ಭಕ್ತ್ಯಾಖ್ಯೆಯಂ
  ವಿಸ್ತೃತಾಕ್ಷಿಗೆ ಕಮಲವದನೆಗಂ ಚೆಚ್ಚರಂ
  ನಾಸ್ತಿಕನೆ ಭಕ್ತಿಗಂ ಮರುಳಾದನಯ್

  ರಸ್ತೆಯಲ್ಲಿ ಸಾಗುತ್ತಿದ್ದ ನಾಸ್ತಿಕನೊರ್ವ ಮನೆಯ ಹೊಸ್ತಿಲಲ್ಲಿ ನಿಂತಿದ್ದ ಭಕ್ತಿ ಎಂಬ ಹೆಸರಿನ ಹುಡುಗಿಯನ್ನು ನೋಡಿ ಮರುಳಾದ.

 4. ಬೆಸ್ತುಬೀಳುತೆ ,ಗದಾಧರನ ಭಕ್ತಿಯ ಶಕ್ತಿಯಂ ತಿಳಿದು
  ತಾನ್ ಸ್ತುತಿಸಿ ಪಾಡಿದಂ ಯುವ ನರೇಂದ್ರ೦ I
  ವಸ್ತು-ವಿಷಯ೦ಗಳೊಳ್ ಕ್ಷಣಿಕ ಸುಖಮೆನುತೆ ತಾ-
  ನಾಸ್ತಿಕನೆ ಭಕ್ತಿಗಂ ಮರುಳಾದನಯ್ II

  ತಾನ್ + ಆಸ್ತಿಕನೆ =ತಾನಾಸ್ತಿಕನೆ ( ತಾ ನಾಸ್ತಿಕ ಎಂದೂ ಮಾಡಬಹುದು)
  ಜ್ಞಾನ , ಕರ್ಮ , ಭಕ್ತಿ ಇತ್ಯಾದಿ ಮಾರ್ಗಗಳಲ್ಲಿ ಶ್ರೀರಾಮಕೃಷ್ಣರ ಭಕ್ತಿ ಮಾರ್ಗವನ್ನು ತಿಳಿದುಕೊಂಡು ನರೇಂದ್ರನು ತಾನೂ ಭಕ್ತಿಯಿಂದ ಅವರನ್ನು ಹಾಡಿ ಹೊಗಳಿದ

  • ಮೊದಲ ಪಾದದಲ್ಲಿ ಒಂದು ಗಣ ಹೆಚ್ಚು ಇದೆ.

   • ಧನ್ಯವಾದಗಳು . ಹೀಗೆ ತಿದ್ದಿದೆ …

    ಬೆಸ್ತುಬೀಳುತೆ; ಗದಾಧರನ ಶಕ್ತಿಯ ಕ೦ಡು

 5. ನಿರುತಂ ಶಿವಪೂಜನೆಯೊಳ್
  ಶರಣಂ ತಾಂ ಸತಿಯ ಭಾವವೊಂದಲ್ ಸುಮನೋ-
  ಹರ ಸಾಮರಸ್ಯದೆ ಪರಾ-
  ತ್ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್ ||

  “ಶರಣ ಸತಿ – ಲಿಂಗ ಪತಿ” ಭಾವದ ಬಗೆಗಿನ ಪದ್ಯ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)