Jun 032019
 

೧. ಶಾಲಿನೀ ಛಂದಸ್ಸಿನ ಸಮಸ್ಯೆ

ಸ್ವಾತಂತ್ರ್ಯಂ ತಾಂ ದಾಸ್ಯಮಾಗಲ್ಕೆ ಚೆನ್ನಂ

೨. ಮಾಲಿನೀ ಛಂದಸ್ಸಿನ ಸಮಸ್ಯೆ

ಸುರನದಿಯಿಳೆಗೇಗಳ್ ಕುತ್ತನಿತ್ತಿರ್ಪುದಲ್ತೇ

  10 Responses to “ಪದ್ಯಸಪ್ತಾಹ ೩೬೧: ಸಮಸ್ಯಾಪೂರಣ”

  1. ಮಾತೊಂದೇಗಳ್ ರಾಜಕೀಯಕ್ಕಮಲ್ತೇ
    ನೇತಾರಂಗಳ್ ಲೋಗರಂ ಕರ್ಷಿಸಲ್ ತ-
    ದ್ವ್ರಾತಂ ಕೇಳ್ದುಂ ನೀತಿಗುಂ ಬುದ್ಧಿಗುಂ ವಾ-
    ಕ್ಸ್ವಾತಂತ್ರ್ಯಂ ತಾಂ ದಾಸ್ಯಮಾಗಲ್ಕೆ ಚೆನ್ನಂ

    • ಚೆನ್ನಾಗಿದೆ ಸೋಮಣ್ಣ. ನೇತಾರಂಗಳ್ ಪ್ರಯೋಗ ತಪ್ಪು ಅನಿಸುತ್ತೆ. ನೇತಾರರ್ ಅಥವಾ ನೇತಾರರ್ಕಳ್ ಮಾಡಬಹುದು…

  2. ಗಿರಿಶಿಖರಶಿರಕ್ಕಾಂತಿರ್ಪ ಹೈಮಾಳಿಯಿಂದಂ
    ಪೊರೆದಪ ಪೊನಲಲ್ತೇ ತ್ರಸ್ಥರೋತ್ಕರ್ಷಣಕ್ಕಂ
    ನೆರೆವುದು ಜಲಮೆಚ್ಚಲ್ಕುಷ್ಣದಿಂ ಲೋಗರಿಂದೇ
    ಸುರನದಿಯಿಳೆಗೇಗಳ್ ಕುತ್ತನಿತ್ತಿರ್ಪುದಲ್ತೇ

  3. ಶಾಂತಂ ಸ್ವೇಚ್ಛಂ ಸಾಗರಂ ಮೇಣ್ ನಿಬದ್ಧಂ
    ಭ್ರಾಂತಂ ಗೊಂಡುಕ್ಕೇರುತಿರ್ಪಂ ಸದಾ ತಾಂ
    ಕಿಂತುಂ ಮಾತ್ರಂ ಮೇರೆಮೀರಲ್ಕಸಾಧ್ಯಂ
    ಸ್ವಾತಂತ್ರ್ಯಂ ತಾಂ ದಾಸ್ಯಮಾಗಲ್ಕೆ ಚೆನ್ನಂ !!

    ಸಾಗರದ ಲಾಸ್ಯ- ದಾಸ್ಯದ ಬಗೆಗಿನ ಪದ್ಯ !!

  4. ಸಾತತ್ಯಂದಾಳ್ದಿರ್ಪ ಪೋರಾಟದಿಂದಂ
    ವಾತಂಬೋಲ್ ಪಾರಲ್ಕೆಯಾಂಗ್ಲೇಯರಾಗಳ್
    ನೇತಾರರ್ ಕಾನೂನಿಗಂ ನೋಂತು ಪೇಳ್ದರ್
    ಸ್ವಾತಂತ್ರ್ಯಂ ತಾಂ ದಾಸ್ಯಮಾಗಲ್ಕೆ ಚೆನ್ನಂ

  5. ಭರದಿನಿಳಿಯುತಿರ್ಕುಂ ಹೈಮಸಂಜಾತೆಯಾದೀ
    ಸುರನದಿಯಿಳೆಗೇಗಳ್, ಕುತ್ತನಿತ್ತಿರ್ಪುದಲ್ತೇ
    ಬೆರೆಯುತಿರಲನೇಕಂ ಕಶ್ಮಲಂಗಳ್ ತದಾತ್ಮ
    ಕ್ಕರಿತೊಡೆ ಸೊಗಮಕ್ಕುಂ ಲೋಕಕಂ ಲೋಗರಿಂಗುಂ

  6. ಗಂಗೆಯನ್ನು ಭಗೀರಥನಿಗೆ ಕೊಡುವಾಗ ಬ್ರಹ್ಮನು ಎಚ್ಚರವನ್ನು ಹೇಳಿಯೂ, ಶಿವನು ಅವಳನ್ನು ಬಂಧಿಸಿಯೂ, ಜಹ್ನುವು ಅವಳನ್ನು ತಡೆದೂ, ಚಂಚಲೆಯಾದ ಗಂಗೆಯು ರಭಸದಿಂದ ಬಿದ್ದಾಗ ಭೂಮಿಯನ್ನು ಘಾತಿ(ಕುತ್ತು)ಗೊಳಿಸಿದಳು.
    ಸುರಗುರುಜನ(ಬ್ರಹ್ಮ)ನೆಂತೋ ಪೇಳ್ದೊಡೇನ್’ಎಚ್ಚರಂ’ ಮೇಣ್
    ಹರಜಟೆಯೊಳಗೆಂತೋ ಹ್ರಾಸಮಂ ಪೊಂದಿಯುಂ ತಾಂ|
    ಕರಗಿದೊಡೆಯುಮೆಂತೋ ಜಹ್ನುಸಂಗ್ರಾಹ್ಯದಿಂದಂ
    ಸುರನದಿಯಿಳೆಗೇಗಳ್ ಕುತ್ತನಿತ್ತಿರ್ಪುದಲ್ತೇ||

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)