Jun 112019
 

೧. ಜೂಜಿನ ಕುದುರೆ (race horse)

೨. ಮರುಭೂಮಿಯ ಮಳೆ

  11 Responses to “ಪದ್ಯಸಪ್ತಾಹ ೩೬೨: ವರ್ಣನೆ”

  1. ಜೂಜಿನ ಕುದುರೆ:
    ಕಾದುದು ತುರಂಗನಿಕರಂ
    ಭೇದಿಸುತುಂ ಮುನ್ನಮರಿಯ ಸೈನ್ಯಮನೀಗಳ್
    ಜೂದಿಗುಮಂತೆಯೆ ಧಾವಿಸೆ
    ಭೇದಮದೇಂ ತಿಳಿಗುಮದಕೆ ಗೈಮೆಯೆ ಕಾಣ್ಗುಂ

  2. ಮರಳುಗಾಡಿನ ಮಳೆ:

    ಬಡವನ ಲಕ್ಷಮಿಯುಮಂತೇ
    ಕಡೆಗಾರನ ಪೊರೆದು ಗುರುವು ಶಂಸಿಸುವಂತೇ
    ಕುಡುಕನ ಜಸದಂತೆಯೆ ಕೇಳ್
    ಸುಡುಮಣ್ಣೊಳ್ ಸುಳಿವ ಮಳೆಯು ಪೊಳ್ಳೆನಿಸಿರ್ಕುಂ

  3. ಹಯಜಾತಿಯ ಪಣೆಬರಹಂ
    ರಯದಿಂ ತಾನಪ್ಪುದಲ್ತೆ ಜೂದಿಗಮೆಡೆಯೇ
    ಸ್ವಯಮಿಂದ್ರಾಶ್ವಮೆ ಪಂದ್ಯದೆ
    ಜಯಿಸಲ್ ಪಣಮಾದುದಲ್ತೆ ಸಾಕ್ಷಿಯಿದಕ್ಕಂ/
    ಜೂಜಿಗೆ ಗುರಿಯಾಗುವುದೇ ಈ ಕುದುರೆಗಳ ಹಣೆಬರಹವೆನಿಸುತ್ತದೆ. ಸಾಕ್ಷಾತ್ ಇಂದ್ರನ ಕುದುರೆಯಾದ ಉಚ್ಛೈಶ್ರವಸ್ಸು ಪಂದ್ಯಕ್ಕೆ ಪಣವಾಗಿದ್ದೇ ಇದಕ್ಕೆ ಸಾಕ್ಷಿಯಲ್ಲವೇ..?

  4. ಮರುಭೂಮಿಯಲ್ಲಿ ನದಿಯಿರದು – ನದಿಯಾಗಿ ಹರಿದು ಸಮುದ್ರವನ್ನು ಸೇರಿದ ನೀರನ್ನು ಸೂರ್ಯನು ಹೀರಿ ಮಳೆಯನ್ನು ತರುವನು – ಸೂರ್ಯನು ದುಂಡಗಿರುವುದಕ್ಕೆ ಕಾರಣ

    ಇನ್ನಿಲ್ಲದೊಲು ಪೀರ್ದೆ ನನ್ನ ತೇವವನೆಲ್ಲ
    (ಸೂರ್ಯ)ಕುನ್ನಿಯೇ ಮರಳಿಪೆನೆ ಹನಿಯೊಂದ ನಾಂ|
    ನನ್ನೊಳಿಂಗಿದ ಮಳೆಯ ನದಿಯಾಗಿ ಹರಿಸದೆಲೆ
    ಸೊನ್ನೆಸುತ್ತಿಹೆ ಕಾಣೊ ನಿನ್ನ ಮೊಗಕಂ||

  5. ದೂರದರ್ಶನದ ಜಾಹೀರಾತುಗಳು ಕಲಾತ್ಮಕವಾಗಿರುವುದು ಅಪವಾದವಾಗಿ. Microsoftನದು ಅಂಥದ್ದೊಂದಿತ್ತು. (ಉತ್ತರಭಾರತದ ವಿವಾಹಸಮಾರಂಭಗಳ) ಬಾರಾತಿಕುದುರೆಯನ್ನು ಜೂಜುಕುದುರೆಯಾಗಿ ನಿಯೋಜಿಸಿದಾಗ, ಅದು ಅಲ್ಲಲ್ಲೆ ನಿಲ್ಲುವುದು, ಜಾಕಿಯು ಅದರ ಮುಂದೆ ರೂಪಾಯಿಯನ್ನು ಹಿಡಿದಾಗ ಮತ್ತೆ ಓಡುವುದು, ಮತ್ತೆ ಹಣಕ್ಕಾಗಿ ನಿಲ್ಲುವುದು ಮಾಡುತ್ತಿತ್ತು. A fine simile of how a PC would hang intermittently if pirated OS is installed!

    ಜ್ಞಾನಮಿದ್ದೊಡೆಯು ಪ್ರಶಿಕ್ಷಣವು ವೇಳ್ಕು ವಿ-
    ಜ್ಞಾನಕಂ(Science) ಪೂರಕಂ ತಂತ್ರಾಂಶವೈ(Technology)|
    ಜೀನನೆನಿತೆಳೆಯಲೇಂ (Track)ಸಾಲೊಳೋಡುವುದೆ ಪೇಳ್
    ಗಾನ-ಧನಕಾಶಿಸುವ ವಲಕ(Procession)ಹಯವು||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)