Jun 172019
 

  33 Responses to “ಪದ್ಯಸಪ್ತಾಹ ೩೬೩: ಚಿತ್ರಕ್ಕೆ ಪದ್ಯ”

  1. ಅದಟರ ಬಣ್ಣದ ಸಾಲಿನ
    ಪದಪದ್ಧತಿ ತುಹಿನಶಿಖರಕೈದಿರೆ ತೋರ್ಗುಂ
    ಮೃದು-ಸಿತ-ಹಿಮ-ವಸ್ತ್ರದಿನೊ-
    ಳ್ವೊದಿಕೆಯನೊಲೆದಿರ್ಪವೋಲೆ ದಾರದೆ ನಗಕಂ

    Appears that a while cloth made of snow is being stitched for the mountain from colored string of trekkers

    • ಎಲ್ಲಾ ಪದ್ಯಗಳೂ ಚೆನ್ನಾಗಿವೆ ಸೋಮಣ್ಣ. ಈ ಕಲ್ಪನೆ ತುಂಬಾ ಇಷ್ಟವಾಯ್ತು :mrgreen:

  2. ತನಿಸಾಲ್ಗಳ ರಥ-ರಥಿಕರ್,
    ಪನಿ-ನೀರ್ಗುಂ ಸಾಲ್ ಅದಲ್ತೆ, ತಿಂಬಲ್ ಸಾಲ್, ಪೂ
    ಬನದೊಳ್ ಸಾಲೆನಲಕಟಾ
    ಜನಸಂಖ್ಯಾಸ್ಪೋಟಮೀಗಳಚಲನೊಳುಂ ದಲ್

    • Fine. ಉನ್ನತಿಗೆ ಏರಿತ್ತೆ ಪದ್ಯಪಾನವೆನಿಪೊಲು
      ಇನ್ನೆಗಂ ಸೊರಗಿತ್ತು ಅಲ್ಲಿಂದೆ ದಲ್/Dull|
      ಇನ್ನಾದೊಡಂ ಬರಲಿ ದಂಡುಮೀ ತಾಣಕ್ಕೆ
      ಚೆನ್ನಿಂದಲೇರಿದೊಲುಮೀ ವೆಟ್ಟನಂ||

  3. ಹಿಮಶಿಖರಮನೀಕ್ಷಿಸಲೆಂ-
    ದೆ ಮನುಜನೇರಲ್ಕೆ, ಮಳಲ್ದ ಬಣ್ಣದ ತುಂಗಂ
    ಅಮಮಾ ಪಸಿರ್ವಳದಿಯು ಕೆಂ-
    ಪುಮೈದುದೆನೆ ತಾಂ ನೀರೀಕ್ಷೆಯಂ ಗೆಯ್ದಪುದೇಂ?

    Bored of bland colors is Mountain expecting to see yellow, red, green colors from trekkers?

  4. ನಗನಾಗಂ ತಳೆದಿರ್ಪಲಂಕೃತಿಯೊ ಮೇಣ್ ಹೈಮಾದ್ರಿಯೆಂಬೊಂದು ಪೆಣ್
    ನಗುತುಂ ತೊಟ್ಟ ಜಟಾವಿಭೂಷಮಿದೊ ಮೇಣ್ ಗಂಗಾಪ್ರವಾಹಂ ಮಗುಳ್
    ಸೊಗದಿಂ ಚಂದ್ರಕಲಾಕಲಾಪಗೆ ಪಗಿಲ್ತಿರ್ಪೆಲ್ಲ ವರ್ಣಂಗಳಿಂ
    ದೊಗೆಯುತ್ತಿಂತುಟು ಬರ್ಪವೋಲೆಸೆದುದೀಯಾರೋಹಿವೃಂದಂ ವಲಂ

    ಪರ್ವತ ಎನ್ನುವ ಆನೆಯು ತೊಟ್ಟ ಅಲಂಕಾರವೋ, ಹಿಮಾದ್ರಿಯೆನ್ನುವ ಹೆಣ್ಣು ತೊಟ್ಟ ಜಟಾ ವಿಭೂಷವೋ(ರಿಬ್ಬನ್) ಅಥವಾ ಗಂಗೆಯು ಶಿವನ ಮೈಗೆ ಅಲಂಕಾರಕ್ಕೆಂದು ಬಳಿದ ಲೇಪಗಳನ್ನು(ಬಣ್ಣ)ತೊಳೆದು ವರ್ಣಮಯವಾಗಿ ಬರುವಂತೆ ಈ ಪರ್ವತಾರೋಹಿಗಳ ವೃಂದ ತೋರುತ್ತಿದೆ.

  5. ತೋಟಕ|| ತುಹಿನಾಚಲವಾಸಿ ಶಿವಂ ಲಷದಿಂ(Desire)
    ರಹಿತಂ ಶಿವೆಯಂ ನಿರುಕಿರ್ದೊಡೆಯುಂ|
    ಇಹದೀ ವಿಭವಂ ಪರಿಲೋಡನಮೇಂ(Disturbing)
    ವಿಹಿತಂ ಕ್ಷುಬಿತಂ ಗಡಮೆಂತವನೊಳ್||

  6. ವೆಟ್ಟನ ತುಂಗಂ ಗಡ ಗುರಿ-
    ಮುಟ್ಟುವರಂ ಮೆಟ್ಟುದಲ್ತೆ ಪರಿಕೆಗಳಿರಲೇಂ
    ಕಟ್ಟಾಳ್ಗಳ್ ತಾರಣಕ್ಕೆ-
    ಪಟ್ಟಿಡಿವರ್ ಲಕ್ಷ್ಯಮಂತೆ ಸಾರ್ದಪುದೊಳಿತಯ್

  7. ಧನ್ಯವಾದ ಮಂಜ ಪ್ರಸಾದು

  8. ಪಳವಾತಿನ ಕೋಶದೊಳಂ
    ಕಳೆದಿರ್ದಪುದಲ್ತೆ ದೈತ್ಯಕೀಟದ ಕಥನಂ
    ಇಳೆಯಿಂದೋಸರಿಸಲ್ ತಾ-
    ನಳೆದಪುದಯ್ ನಗನ ಮೆಯ್ಯನಯ್ದುದು ಕಾಂಬೊಂ

    Let’s see the worm referred in lost ancient texts which is so huge that it measures giant mountain from earth, it has come now.

  9. ಪಾಲಿನ ಬೆಳ್ಗೆನೆಯಿಂ ಶರ(cream)-
    ದಾಳಿಯ ಶರ್ಕರದ ಮಧುರಪಿಷ್ಟದ(cake) ಖಂಡಂ
    ಮೇಲದಕಂ ಮಧುರಿಮ ರಸ(topping)-
    ಮೇಳವಿಸಿದವೋಲೆ ತೋರ್ಗುಮಲ್ತೀ ದೃಶ್ಯಂ

  10. ವೆಟ್ಟನ ಮೆಯ್ಯೇ ಸಾಲ್ಗುಂ
    ಕಟ್ಟಲ್ಕಂ ಮುಗಿಲನೊಟ್ಟಣಿಯನೊಂದೆಡೆ ದಲ್
    ನೆಟ್ಟನಿದೇಂ ಮನುಜಂ ಪುಲ್
    ಕಟ್ಟಳೆಯಂ ನಗುವನಲ್ತೆ ನಗನೀಕ್ಷಿಸುತುಂ

  11. ಜೀವಕಿದಾಕರಮಲ್ತೇ
    ಕಾವನ ನೀರ್ ಕಣಜಮಲ್ತೆ ನದಿಗಳ್ಗುಗಮಂ
    ಆವಿಧದಿಂ ಭಕ್ತರ ಸಾಲ್
    ತೀವಿಬರಲ್ ಪೂವ ಮಾಲೆಯರ್ಪಣಮೆನಿಕುಂ

  12. ಮೊದಲೊಳ್ ವಜ್ರಾಘಾತಂ
    ತದನಂತರಮಾಯ್ತು ಪಾವಬಿಗಿತಂ ನಗಮೇ
    ಬಿದಿದೆಸೆಯಿಂದಂ ಮನುಜರ
    ಪದದಡಿಗಪ್ಪಂದಮಾಯ್ತೆ ಪಿರಿಯರ ಗೋಳೇಂ

    ಹಿರಿಯರ(ದೊಡ್ಡವರ) ಗೋಳನ್ನು ಏನೆಂದು ಹೇಳುವುದು? ಎತ್ತರವಾದ ಪರ್ವತಕ್ಕೆ ಮೊದಲು ದಕ್ಕಿದ್ದು ವಜ್ರಾಘಾತ. ಅದಾದಮೇಲೆ ಹಾವಿನ ಬಿಗಿತ(ಸಾಗರಮಥನದಲ್ಲಿ). ಈಗ ನೋಡಿದರೆ ಮನುಷ್ಯನ ಕಾಲಿನಿಂದ ತುಳಿತಕ್ಕೊಳಗಾಗುವುದು.

  13. ಧವಳಗಿರಿಯ ಶಿರವ ನೋಡು
    ಕವಲೊಡೆಯದ ಸಾಲು I
    ತವಕದಿಂದಲಿರುವೆಯೋಡಿ
    ಸವಿಗಾಣುವ ವೋಲು II

  14. ಬಹಳ ಚೆನ್ನಾಗಿದೆ

  15. ಧವಳ ದೀರ್ಘ ಚೌಪದಿಕೆ :-

    ಲಕ್ಷಣ
    ೬+೬ ಮಾತ್ರಾಗಣ
    ೬+ ಒಂದು ಪದ್ಮಗಣ

    • ೧೩ ನೆಯ ಕ್ರಮಾಂಕದ ಪದ್ಯ ಧವಳ ದೀರ್ಘ ಚೌಪದಿಕೆ
      ಲಕ್ಷಣ
      ೬+೬ ಮಾತ್ರಾಗಣ
      ೬+ ಒಂದು ಪದ್ಮಗಣ

    • ಧವಳದ ಬಗೆಗೆ ನನಗೆ ತಿಳಿದಿರುವುದಿಷ್ಟು. ಇದನ್ನು ಸಂತುಲಿತದ್ರುತಾವರ್ತಗತಿ ಎಂತಲೂ ಹೇಳುತ್ತಾರೆ. ಇದು ಅಂಶಛಂದಸ್ಸು. ಇದರ ಶ್ರವ್ಯದಲ್ಲಿ ೬+೬+೬+೨ಗುರುಗಳಿರುತ್ತವೆ (ಮೂರು ರುದ್ರಗಣ + ಒಂದು ಬ್ರಹ್ಮಗಣ ಎನ್ನಬಹುದೋ ನನಗೆ ತಿಳಿಯದು). ಅಂಶದ ಮುಖ್ಯಲಕ್ಷಣವೆಂದರೆ ಲಘುಬಾಹುಳ್ಯವಿರದಿರುವುದು. ವಿಷ್ಣುಗಣದ ದೃಶ್ಯರೂಪದಲ್ಲಿ ೫/೬ ಲಘುಗಳಿರಲಾಗದು. ಬ್ರಹ್ಮಗಣದ ದೃಶ್ಯರೂಪದಲ್ಲಿ ೪ ಲಘುಗಳಿರಲಾಗದು.

  16. ಬಗೆಬಗೆ ಬನ್ನಂಬಡುತುಂ
    ಸೊಗಮಂಬಡೆಯಲ್ಕೆ ಶೈಲಮೇರ್ದರ್ ಕೊನೆಯೊಳ್
    ದಿಗಿಲಿಂ ಕಣಿವೆಯ ಕಡೆಗಂ
    ಮೊಗಮಂ ಸರಿಸಿರ್ಪರೆಮ್ಮ ಬಾಳ್ಕೆಯುಮಿಂತೇ

    ನಾನಾ ಕಷ್ಟಗಳನ್ನು ಪಟ್ಟು ಬಾಳಲ್ಲಿ ಗಳಿಸಿದ ಸಂಪತ್ತೆಲ್ಲವೂ ಒಂದು ಹಂತದ ನಂತರ ನಿರರ್ಥಕವೆನ್ನಿಸುವುದು..ಶಿಖರವೇರಿದ ನಂತರ ಪ್ರಪಾತವನ್ನು ಕಂಡಾಗ ಹುಟ್ಟುವ ಭಯದಂತೆ..ಅನ್ನುವ ಪ್ರಯತ್ನ

    • (ನಂದಿಬೆಟ್ಟದ ಪಕ್ಕದಲ್ಲಿರುವ) ಚನ್ನಗಿರಿಯೆಂಬೊಂದು ವೆಟ್ಟನಂ ಕ್ರಮಿಸಿಹೆನು
      ಚೆನ್ನಿಂದೆ ಮೂದಿಕ್ಕಿನಿಂ ಶಿಖರಕಂ|
      ದಿನ್ನೆ-ಕೊರಕಲು-ಸಮವು ಎತ್ತೆತ್ತಲುಂ ಗಿರಿಯು
      ಬನ್ನಗೊಳಿಸದು ಪ್ರಪಾತವದೊಂದು ಕೇಳ್|| 🙂

      • ಚನ್ನಗಿರಿಯಂತೆವೋಲ್ ತುಹಿನಗಿರಿಯಂ ಬಗೆದು
        ಬನ್ನಮಲ್ಲಿಲ್ಲೆಂದು ಪೇಳದಿರಿ ನೀವ್
        ತನ್ನ ಕಠಿಣತೆಯಿಂದೆ ದೇಶಕಂ ರಕ್ಷೆಯಾ
        ಗಿನ್ನುಮಿರ್ಪುದು ವೈರಿಗಳ ತೊಡೆಯುತುಂ

  17. ಲೋಕ ಕಾಣಲುಮೆಂತು | ನೂಕುನುಗ್ಗಲುಮಿಂತು |
    ಮೇಕಿsರುದಾಗೆ ನಾಕsವು | ನಡುಕದೊಳ್
    ಏಕಾಂತ ಹಾದಿಯೋಟsವು ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)