Jul 302019
 

  15 Responses to “ಪದ್ಯಸಪ್ತಾಹ ೩೬೯: ಚಿತ್ರಕ್ಕೆ ಪದ್ಯ”

  1. The artist is working on her neck.
    ಚೆನ್ನಿಂ ಚಿತ್ರಿಪಗಂ ದಲ್
    ಬೆನ್ನಂ ಸೆಟೆಸಿರ್ಪ ರೂಪದರ್ಶಿಯುಮೆಂತೋ|
    ಸನ್ನೆಯಿನೆಂದಳ್ ’ನೀಂ ಸಂ-
    ಪನ್ನವ ಗೈಯದಿಹೆ, ಕಂಠಕಂ ಬಂದಿಹುದೋ’||

  2. ಶಾಲಿನೀ|| ಇಷ್ಟೇ ವ್ಯತ್ಯಾಸಂ ಪಟಕ್ಕಂ-ವಧೂಗಂ(Model)
    ಎಷ್ಟೇಂ ಪ್ರಹ್ವಂ(Slanting) ಚಿತ್ರಮಂ ನೀನುಮಿಟ್ಟೇಂ|
    (Eyes)ದೃಷ್ಟಿ-ಗ್ರೀವಾಭೂಷಣಂಗಳ್-ಸಿಚಂಗಳ್ (Dress)
    (Drop)ಭ್ರಷ್ಟಂ ತಾಮೈದಲ್ ನಶಕ್ಯಂ ಗಡೆಂದುಂ||
    Now try tilting the model 😉

  3. ಲೇ ಖನಿ ಲೇಖನಿ ಮೂಡಿಪ ಚಂದಕು
    ಮಿಕ್ಕಿಹ ಸೊಬಗಿನ ರಾಣಿಯು ನೀನೈ
    ರೇಖೆಯೆಳೆವ ಮೊನೆ ಕಂಠಕೆ ತಾಗೆ ಕ
    ಳಕ್ಕೆಂದೀತೆಂದಳುಕಲಿ ಕೈ ಪಿಡಿದೆ
    (ಶರಷಟ್ಪದಿ; ಎಲೈ ಸೌಂದರ್ಯದ ಖಣಿಯೆ, ನೀನು ಲೇಖನಿ ಮೂಡಿಸಿರುವುದಕ್ಕಿಂತ ಸುಂದರಿ. ನಿನ್ನ ಚಿತ್ರಕ್ಕೆ ಲೇಖನಿಯ ಮೊನೆ ತಗುಲಿಸಿದರೂ ನಿನ್ನ ಸಪೂರ ಕಂಠ ಕಳಕ್ಕೆಂದೀತೆಂಬ ಭಾವವು ನನ್ನ ಮನದಲ್ಲಿ ಮೂಡಿ ಲೇಖನಿ ನಿನಗೆ ತಾಗುವುದಕ್ಕೆ ಮುಂಚೆ ನನ್ನ ಕೈಯನ್ನು ತಡೆಹಿಡಿದೆ)

    • ಕ್ಷಮೆಯಿರಲಿ; ಷಟ್ಪದಿಯಲ್ಲ, ರಗಳೆ

      • ರಗಳೆಯಲ್ಲಿ ರಚಿಸುವುದಕ್ಕೆ ಕ್ಷಮಾಯಾಚನೆ ಏಕೆ? ಆದರೆ ರಗಳೆಯಲ್ಲಿ ಅಂತ್ಯಪ್ರಾಸವಿರಬೇಕು. ಇದು ಷಟ್ಪದಿಯಲ್ಲವೇ ಅಲ್ಲ; ಮಂದಾನಿಲರಗಳೆ. ಕೈ ಪಿಡಿದೆ – ಒಂದು ಮಾತ್ರೆ ಹೆಚ್ಚು ಇದೆ.

  4. ಧನ್ಯವಾದಗಳು. ಅಂತ್ಯಪ್ರಾಸವಿರಬೇಕೆಂದು ತಿಳಿದಿರಲಿಲ್ಲ. ಮತ್ತೆ ಯತ್ನಿಸುವೆ.

  5. ಲೇ ಖನಿ ಲೇಖನಿ ಮೂಡಿಪ ಚಂದಕು
    ಮಿಕ್ಕಿಹ ಸೊಬಗಿನ ಕೋಮಲ ಕನ್ನಿಕೆ
    ರೇಖೆಯೆಳೆವ ಮೊನೆ ತಾಗಲು ಕಂಠಕೆ
    ಲಕ್ಕನೆ ಮುರಿದೀತನ್ನುವ ಭಯಕೇ
    ಲೆಕ್ಕಣಿಕೆಯ ಮೊನೆ ಹಿಡಿದಿಹೆ ದೂರಕೆ

  6. ಬೆಡಗಿ ಭಲೆ! ನರ್ತಕಿಯ ಭಿತ್ತಿಚಿತ್ರದೆ ಮೂಡು-
    ದೆಡಗಣ್ಣ ಬಳಿಯಿರುವ ಕಪ್ಪು ಮಚ್ಚೆ
    ಕೊಡುದು ಭಾಗ್ಯಮನೀರ್ವರಿಗುಮೆಂದೆಣಿಸಿ ಕುಂಚ
    ಪಿಡಿದಿರುದುದವ ದಿಟ್ಟಿಬೊಟ್ಟ ಹಚ್ಚೆ!!

    ಎಡಭಾಗದಲ್ಲಿ ಕಪ್ಪುಮಚ್ಚೆಯಿರುವ (ಅದೃಷ್ಟಶಾಲಿ) ನರ್ತಕಿಯ ಪೋಸ್ಟರ್ ಬರೆದಿರುವುದು, ತನಗೂ ಲಾಭದಾಯಕವೆಂದರಿತ ಚಿತ್ರಕಾರ , ದೃಷ್ಟಿ ಪರಿಹಾರಕ್ಕೆ ಎಡಗಲ್ಲಕ್ಕೆ ಬೊಟ್ಟನ್ನಿಡುತ್ತಿರುವನೇ ?!

    • ಇನ್ನೇನು ಮತ್ತೆ ಕಲಾವಿದ ಹಣವನ್ನು ಬಿಟ್ಟಿ ಕೇವಲ ಕಲೆಯೆನ್ನಲಾದೀತೇ , ಚೆನ್ನಾಗಿದೆ ಪದ್ಯ

  7. ಸೌಂದರ್ಯದೊಳ್ಪವೆರ್ಚಿಸ-
    ಲೆಂದಾಂ ಲೇಖನಿಸೆ ಮುಳಿದ, ಜಗುಳ್ದಪ ನೋಟಂ
    ಸಂದುದಕೆ ವೇಡಮೆನುವೊಲ್
    ಸಂದೆಯಣಮುಸಿರ್ವ ವಿಶೇಷರೂಪಸಿಯಲ್ತೇ

Leave a Reply to N. Ramanath Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)