Aug 052019
೧. ಮಾಲಿನೀ ಛಂದಸ್ಸಿನ ಸಮಸ್ಯೆ
ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್
೨. ಕಂದಪದ್ಯದ ಸಮಸ್ಯೆ
ರವಿಯಂ ಕಂಡಬ್ಜದಾಸ್ಯಮಿದೊ ಮುದುಡಿತಲಾ
೧. ಮಾಲಿನೀ ಛಂದಸ್ಸಿನ ಸಮಸ್ಯೆ
ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್
೨. ಕಂದಪದ್ಯದ ಸಮಸ್ಯೆ
ರವಿಯಂ ಕಂಡಬ್ಜದಾಸ್ಯಮಿದೊ ಮುದುಡಿತಲಾ
ಇರಿದು ಕೊಲುವ ಯುದ್ಧಂ, ವಿಪ್ಲವಂ, ಯಾತ್ರೆಯಿಂ ತಾ-
ನೊರೆದ ಕತದೆ ರಂಗಕ್ಕೊಗ್ಗಿಸಲ್ ನಾಟ್ಯಕಾರರ್
ವಿರಸಮೆನಿಪ ಕಾವ್ಯಂ, ಮೆಚ್ಚಿಕೊಳ್ವರ್ ಕವೀಂದ್ರರ್
ಸರಸದ ಭಣಿತಕ್ಕಂ ತಕ್ಕುದೆಂಬರ್ ರಸಜ್ಞರ್
ವಿರಸ ನಾಟ್ಯರಂಗಕ್ಕಾಸರು ರಸ ಸಾಹಿತ್ಯಕ್ಕೆ
“ಗುರುಕವಿಕುಲಕಂ ವೈವಿಧ್ಯಕಾವ್ಯಾರ್ಣವಂ ತಾ-
ನೊರೆದಪ ಋತುಸಂಹಾರಂ ಮೊದಲ್ಗಬ್ಬಮಾಗಲ್
ಪರಿಕಿಸೆ ಗುಣದಿಂದಾರಂಭಮಂ ತಂತುಮಾತ್ರಂ
ವಿರಸಮೆನಿಪ ಕಾವ್ಯಂ” ಮೆಚ್ಚಿಕೊಳ್ವರ್ ಕವೀಂದ್ರರ್
ಪೂರ್ವಮಹಾಕವಿಯ ಮೊದಲ ಕಬ್ಬವನ್ನು ನೆನೆಯುವ ಕವಿಗಳು
ಸುರರುಲಿ ಮೆರೆದಾಡಲ್ ಪದ್ಯಬಂಧಂ ನೆಗಳ್ದುಂ
ಪೊರೆಯುತಲುರೆ ಕಂದಂ ವೃತ್ತಮುಂ ಸೈಪಿನಿಂದಂ
ಬರೆದ ಕಥನ-ಕಾವ್ಯಾಲಂಕೃತಪ್ರಕ್ರಿಯಂ ತೀ-
ವಿ ರಸಮೆನಿಸೆ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್
ನೈದಿಲೆಯು (ಅಬ್ಜ) ಬೆಳದಿಂಗಳಲ್ಲಿ ಅರಳುತ್ತದೆ, ಬಿಸಿಲಿಗೆ ಬೇಗ ಬಾಡುತ್ತದೆ. ಸೂರ್ಯನನ್ನು ಕಂಡು ಅರಳುವುದು ತಾವರೆ (ಅಬ್ಜ).
(ಅವು+ಇವು) ಅವಿವೆನಿತೋ ಅಬ್ಜಗಳೈ
ಛವಿಯಿಂ ಪೊಳೆವಂಡಜಂ(fish), ಹವಳ-ಜೊಂಡುಗಳೈ|
ಕವಿಯದು (Lotus)ಅಬ್ಜಕಹರ್ಷಂ,
ರವಿಯಂ ಕಂಡಬ್ಜದಾಸ್ಯಮಿದೊ(Lily) ಮುದುಡಿತಲಾ||
https://www.youtube.com/watch?v=7hAJyzfU0e0
ಅಜೆಂಡಾಗಳಿಗನುಸಾರವಾಗಿ (Say leftists) ರಚಿಸಲಾದ ಮೂಢಕೃತಿಗಳನ್ನು ಮೆಚ್ಚದೆ, ಕವೀಂದ್ರರು ಸರಸಕಾವ್ಯಗಳನ್ನು ಮೆಚ್ಚಿಕೊಳ್ಳುವರು
ಬೆರಗದಹುದದೇನೈ ಹಮ್ಮ ಬೀಗುತ್ತುಮೆಂತೋ
ಅರುಹುವರಲೆ ಮೌಢ್ಯ-ಕ್ಷುದ್ರಚೇತರ್ಗಳೆಂತೋ| (Ignorant and wicked)
ವಿರಸಮೆನಿಪ ಕಾವ್ಯಂ! ಮೆಚ್ಚಿಕೊಳ್ವರ್ ಕವೀಂದ್ರರ್
ಸುರಸಭರಿತವಾಕ್ಕಂ ಸತ್ಕವೀಂದ್ರಪ್ರಣೀತಂ||
ಇಂದ್ರ ಎಂದರೆ ಹದಿನಾಲ್ಕು ಎಂಬ ಅರ್ಥವಿದೆ.
ಅರಿವಿಶಸನ* (K. S. Bhagavan), ಲಂಕೇಶ್, ಮೂರ್ತಿ ಮೇಣಿಂ ಗಿರೀಶಂ
ಒರಗಿಹರಲೆ ಪುಣ್ಯಂ ದುಷ್ಟಲೇಖರ್ಗಳೆಂತೋ|
ಅವರದಿವರು ಬೆನ್ನಂ ತಟ್ಟುವರ್ ತಟ್ಟಿಕೊಳ್ವರ್#
ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್|| (ಮೂರು ಮತ್ತೊಂದು+10=14 ಕವಿಗಳು)
* =ಅರಿಹಂತ=ದೇವರು=ಭಗವಾನ್
# ಈಚೆಗೆ ಭಗವಾನ್ ತಮ್ಮನ್ನು ತಾವೇ ’ವಿಚಾರವಾದಿಗಳು’ ಎಂದು ಕರೆದುಕೊಂಡಂತೆ
ಕಂದದ ಸಮಸ್ಯಾಪಾದದ ”ಕಂಡಬ್ಜ” ಅರಿಸಮಾಸವಲ್ಲವೇ ?
೩೭೦ ನೇ ಸಮಸ್ಯಾಪೂರಣಕ್ಕೂ ೩೭೦ ನೇ ವಿಧಿಗೂ ಎತ್ತಣಿಂದೆತ್ತಣ ಸಂಬಂಧ !!
ಅದು ಸಮಾಸವಲ್ಲ, ಸಂಧಿ. ಕಂಡು+ಅಬ್ಜ=ಕಂಡಬ್ಜ
ಧನ್ಯವಾದಗಳು.
ವಿರಮಿಸುತಲೆ ಕೈಕೊಂಡುಂ ಗಡಾ ಪದ್ಯಪಾನಂ
ಅರೆಬರೆ ಬೆಸೆಯಲ್ ವೃತ್ತಾಂತವಂ ವೃತ್ತದೊಳ್ ನಾಂ
ಸರಸಸಖರವರ್, ಸಂಭಾವಮಿಂತಾಗುದೆನ್ನಾ
ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್ !!
ನಿಜವೇ ?!
(2+7)ಎರಡು ಮಗುಳುಮೇಳೆಂದಷ್ಟೆ ಪೇಳ್ಗೇಂ ರಸಂಗಳ್
ಪೆರತಿರದೆ ನವಂಗಳ್ ಮಾತ್ರಮೇಂ ವರ್ಣಸಂಖ್ಯಂ#|
ಮೊರೆವವೆನಿತೊ ಭಾವಂ ಸಲ್ವುವಂತೇ ರಸಂಗಳ್
ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ (ಮೆಚ್ಚಿಕೊಳ್ಳುವವರೂ) ಕವೀಂದ್ರರ್||
# Although computers have a capacity for at least 256 colors, only 216 colors are common to all older computers. Newer computers are equipped with 64 thousand colors (16-bit) and the highest quality systems deliver 16.7 million colors (24-bit).
ಅವತರಿಸದೊ ದಾಸಯ್ಯಂ
ರವರವಿಸಲ್ ಜೋರು ಜಾಗಟೆಯೊಡಂ ಶಂಖಂ
ದವಸಮ ಹೊರತರಲಾಗೆ ಹ-
ರವಿಯಂ ಕಂಡಬ್ಜದಾಸ್ಯಮಿದೊ ಮುದುಡಿತಲಾ !!
*ಹರವಿ = ಅಗಲ ಬಾಯಿಯ ಪಾತ್ರೆ
ಅಬ್ಜ = ಶಂಖ
ದವಸ ತುಂಬಿದ ಪಾತ್ರೆ ಕಂಡು ದಾಸಯ್ಯನ ಶಂಖನಾದ ನಿಂತಿತು !!
ಒಳ್ಳೆಯ ಕಲ್ಪನೆ, ಕೀಲಕನಿರ್ವಹಣೆ. (ದವಸಮ?)
ಧನ್ಯವಾದಗಳು ಪ್ರಸಾದ್ ಸರ್,
ಹರವಿಗೆ “ದವಸವನ್ನು” ತುಂಬಿ ತರುವ ಭರದಲ್ಲಿ ಆದ ಅವಾಂತರ !! “ದವಸವ” ಆಗಬೇಕಲ್ಲವೇ? ಅಥವ ” ದವಸಂ” ಸರಿಯಾಗುದೇ?
Deep sea mining (silver, gold, copper, manganese, cobalt, and zinc=ತವರ)
ತವರಲ್ತೆ ಸಮುದ್ರತಲಂ
ತವರಂ, ತಾಮ್ರಂ, ಸುವರ್ಣ-ರಜತಂಗಳಿಗಂ|
ದ್ರವಿಸಲ್ ತೊಡಗಲಿವನಮಾ
(Smelter)ದ್ರವಿಯಂ ಕಂಡಬ್ಜದಾಸ್ಯಮಿದೊ(ಲೋಹದ) ಮುದುಡಿತಲಾ||
ಕುವರನ್ ಕೊಳದೊಳಗೀಜಿರೆ
ನವಿರಿಲ್ಲದೆ ಕಮಲಪುಷ್ಪಗಳನೊದೆಯುತ್ತುಂ|
ಬವಣೆಬಡಿಸುತ್ತಿರುವುಪ-
ದ್ರವಿಯಂ ಕಂಡಬ್ಜದಾಸ್ಯಮಿದೊ ಮುದುಡಿತಲಾ||