Aug 122019
 

೧. ಮುಂಜಾನೆಯ ತಂಗಾಳಿ

೨. ಚಂಬು

೩. ತ್ರಿಶೂಲ ಮತ್ತು ಸುದರ್ಶನಚಕ್ರದ ಸಂವಾದ

  11 Responses to “ಪದ್ಯಸಪ್ತಾಹ ೩೭೧: ವರ್ಣನೆ”

  1. ಚಕ್ರ: ಹರಿಯಾಜ್ಞೆಯಂತೆ ವೈರಿಯ ಮುಂಡವನು ಕಡಿದು
    ಚರಣಕರ್ಪಿಪ ನಿಷ್ಠನಾನಪ್ಪೆನು|
    ತ್ರಿಶೂಲ: ಇರಿಯೆ ಸಾಲದೆ ಶಿರವು ತಾನೆ ಬುವಿಗೆರಗುವುದು
    ಹೊರಲೇಕೆ ಹೆಣವನ್ನು ತಲೆತಿರುಕನೆ||

  2. ತುಂಬಿಽರೆಽ ಕಲಶಽವೆಂದೆಂಬಽರುಽ ಪೂಜಿಽಸಿಽ,
    ಎಂಬಽರಿಂತೆಂದುಽ ಬರಿದಾಗೆಽ| ಅದನೆಂತೊಽ
    ಚೊಂಬೆಂದುಽ ಹಾದಿಽರಂಪಯ್ಯಽ||

  3. ಮುಂಜಾನೆಯ ತಂಗಾಳಿ
    ರಥೋದ್ಧತ|| ಪ್ರಾಣಿ-ಮಾನವರೊಲಂತೆ ಗಾಳಿಯುಂ
    ಕೋಣೆಯೊಳ್ ಹಿತದಿನಿದ್ದುಮೆಂದಿತೈ|
    ಕಾಣುತಲ್ ರವಿಯ ಬಾನೊಳೆದ್ದನಂ
    ತ್ರಾಣಮಾಯ್ತು ಬಿಸಿಲನ್ನು ಕಾಸುವೆಂ||

  4. ಖಗಮದು ಭಲ ! ತುಂಬಿದ ಬಿಂ-
    ದಿಗೆಯೋಲ್ ಕಾಣ್ ಶಿರದಮೇಲ್ ಬೆಳಕ ಸಂಕ್ರಮಣಂ
    ಜಗದೊಳ್, ತಿರೆಯುಂ ತಾಂ ತಂ-
    ಬಿಗೆಯೋಲ್ ಪಿಡಿದಿರುದದೈದು ವೆರಳೊಳ್ ಕ್ರಮದಿಂ !!

    ತಲೆಯ ಮೇಲೆ ಹೊತ್ತ “ಬಿಂದಿಗೆ” – ಸೂರ್ಯ
    ಐದು ಬೆರಳಿನಲ್ಲಿ ಹಿಡಿದಿರುವ (ಪಂಚಭೂತಗಳಿಂದಾದ) “ತಂಬಿಗೆ” ( =ಚಂಬು) – ಭೂಮಿ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)