Oct 212019
 

೧. ಸೀಟಿ( ಶಿಳ್ಳೆ)

೨. ಹಸುವಿನ ಮೆಲುಕು (ರೋಮಂಥ)

೩. ಬೇಸಗೆಯ ಗಾಳಿ

  13 Responses to “ಪದ್ಯಸಪ್ತಾಹ ೩೮೦: ವರ್ಣನೆ”

  1. ಪಾಂಥಂ ಬಿಜ್ಜೆಯನರಸಲ್
    ಗ್ರಂಥಮನಾವವೃತ್ತಿಯಿಂದೆ ಗೆಯ್ವೊಡೆ ಮನದೊಳ್
    ಮಂಥನಮಂ, ಗೋವಿನ ರೋ-
    ಮಂಥನಕಂ ಪೋಲ್ವುದಲ್ತೆ ಜೀರ್ಣಿಸೆ ಪುಲ್ಲಂ

  2. ವರ್ಗೀಯವ್ಯಂಜನಪಂಕ್ತಿಗಳಿಗೆ ಆರನೆಯ ಅಕ್ಷರವನ್ನು ಸೇರಿಸುವ ಆಲೋಚನೆ ಬಂದಿದೆ. ರೊಟ್ಟಿಚೂರನ್ನು ಕೊಡಲು ಬೀದಿನಾಯಿಯನ್ನು ಕರೆಯಲು ಮಾಡುವ ಲೊಚ್-ಲೊಚ್ ’ತಾಲವ್ಯ’, ರುಚಿಯಾದ ಖಾದ್ಯವನ್ನು ತಿಂದಾಗ ನಾಲಗೆಯು ಹೊಡೆಯುವ ಲೊಟ್ಟೆ ’ಮೂರ್ಧನ್ಯ’, ಅಂತೆಯೇ…
    ರೊಟ್ಟಿಯಂ ನಾಯಿಗೀಯಲು ಕರೆಯೆ ತಾಲವ್ಯ
    ಲೊಟ್ಟೆಯಿಟ್ಟುಣ್ಣುವುದು ಮೂರ್ಧನ್ಯವೈ|
    ಬೆಟ್ಟ ಬಾಯೊಳಗಿಡದೆ ನದಿಸೆ ನೀಂ ಸೀಟಿಯನು
    ಹುಟ್ಟಿತಾರನೆ ವರ್ಣವೋಷ್ಠ್ಯಗಣಕಂ||

  3. ರೋಮಂಥಮಂ ಪಸುವಿಗಿತ್ತಿಹನೇಕೆ ನೋಡೈ
    ಯಾಮಾಂತಕಂ ಬರಿದೆ ಭಕ್ಷಿಸೆ ಮೇವ ಮಾತ್ರಂ|
    ಧೀಮಂತರೊಳ್ ಭುಜಿಪುದೊಂದೆ ಪ್ರಬಂಧಮಲ್ಲಂ
    ಸಾಮಿಂದೆ ಚಿತ್ತದೊಳು ನೀಂ ಮಥಿಸೈ ಗಡೆಂದುಂ|| ವಸಂತತಿಲಕ

  4. ಕೊಳಲದನಿಯಂ ಕೇಳುತ್ತೇಗಳ್ ಪ್ರಹರ್ಷದೆ ಗೋಕುಲಂ
    ಚಳಿಸೆ ರದಮಂ ಪೊಣ್ಮುತ್ತುಂ ಫೇನಮೆಂತುಟೊ ಸಂದುದ/
    ತ್ತಳಿವೊಲಿನಪಾದಾಂಭೋಜಕ್ಕಂತುಟೆಮ್ಮೊಳೆ ಕಾವ್ಯದಾ
    ಮೆಲುಕಿನುದಿಪಾನಂದಂ ಕೃಷ್ಣಾಶ್ರಯಂಬಡೆಗುಂ ಸದಾ//ಹರಿಣೀ//

    ಹೇಗೆ ಗೋವುಗಳ ಗುಂಪು ಕೊಳಲ ನಾದವನ್ನು ಕೇಳುತ್ತಾ ಮೈಮರೆತು ಹಾಕಿದ ಮೆಲುಕಿನಿಂದುಂಟಾದ ನೊರೆ(ಮೆಲುಕು ಹಾಕುವಾಗ ಹಸುಗಳ ಬಾಯಲ್ಲಿ ಜೊಲ್ಲು ನೊರೆಯ ರೂಪದಲ್ಲಿ ಹೊರಬರುತ್ತದೆ) ಒಡೆಯನ(ಇನ) ಪಾದಪದ್ಮಗಳನ್ನು ದುಂಬಿಯಂತೆ ಆಶ್ರಯಿಸಿತೋ ಹಾಗೆಯೇ ನಮ್ಮ ಮನಸ್ಸಿನಲ್ಲಿಯೂ ಕೂಡ ಕಾವ್ಯದ ಮೆಲುಕಿನಿಂದ ಉದಿಸಿದ ಆನಂದವು ಕೃಷ್ಣನಲ್ಲೆ ಆಶ್ರಯವನ್ನು ಹೊಂದಲಿ

  5. ಬೇಸಗೆಯ ಗಾಳಿ
    ಬೇರೆಲ್ಲಽ ಕಾಲಽದೆಽ ಅಲುಗಽದೆಽ ನಿಂದೊಽಡಂ
    ಯಾರೇನಽನೆನ್ನರ್ ಗಾಳಿಯನುಂ|
    ತೂರಽದೆಽ ನಿಂದೊಽಡೆ ವೇಸಽಗೆಽಯೊಳಗಾಗಽ
    ಳಾರೆಂಬಽರದ ಗಾಳಿಽಯೆಂದುಂ|| ಸಾಂಗತ್ಯ

  6. ಪ್ರಸಾದು ಎಲ್ಲಾ ಪದ್ಯಗಳು ಚೆನ್ನಾಗಿವೆ

  7. धेनुर्ललन्तमनुशास्ति तृणाद-वत्सं
    रोमन्थने रुचिमवाप्नुहि खाद पूर्वम् ।
    इत्येवमेव वदति स्वशिशुं हि माता
    पद्यान् रट त्वमवयासि तदर्थमन्ते ॥

    The cow tells the calf eating grass – “Eat first, and then realise the pleasure of rumination”. So also, a mother tells her child – “learn verses by heart, you will understand their meaning later”

    • ಬಾಲರ್ಗೆ ಪಾಠ್ಯಂ ಯುವಕರ್ಗೆ ಪಥ್ಯಂ
      ಮುದುಕರ್ಗೆ ನಿತ್ಯಂ ಇದು ನಿತ್ಯ ತಥ್ಯಂ
      ಲಾಲಿತ್ಯದಿಂ ಶ್ರೀಲಲಿತಾರ ಪದ್ಯಂ
      ಪದೆಪಿಂದೆ ಹೃದ್ಯಂ ನುಡಿಯಲ್ತೆ ವದ್ಯಂ

  8. ವ್ಯಾಸ ವಾಲ್ಮೀಕಿಗಳ ಸಂವಾದ

    ಪುತ್ತಿನ ಪುತ್ರನೆ ನೀಂ ಪೆ
    ತ್ತಿತ್ತಶ್ಲೋಕದೊಳು ಬರೆದಪೆಂ ಭಾರತಮಂ
    ಪೆತ್ತುದಕಂ ನೀಂ ತೀವಿ ಜ
    ಗತ್ತಂ ದೀವಕುಲತಿಲಕನಿತ್ತಪೆ ಬೆಲೆಯಂ

    ಆದಿಕವಿಯೂ ಅನಾದಿಕವಿಯೂ ಮೊದಲಬಾರಿಗೆ ಸಂಧಿಸಿದಾಗ ಕೇಳಿಸಬಹುದಾದ ಪರಸ್ಪರ ಪ್ರಶಂಸೆ. ವ್ಯಾಸಕೂಟಪದ್ಯಗಳಲ್ಲಿ ಶ್ಲೋಕವಲ್ಲದೆ ಬೇರೆ ವೃತ್ತಗಳವೂ ಇವೆ ಎಂಬುದನ್ನು ಸದ್ಯಕ್ಕೆ ಮರೆಯೋಣ 🙂

    • ಕ್ಷಮಿಸಿ – ೩೮೬ರ ಸಂಚಿಕೆಯಲ್ಲಿ ಸೇರಬೇಕಾದದ್ದು ಇಲ್ಲಿಗೆ ತಪ್ಪಿನಿಂದ ಸಂದಿದೆ. ಇಲ್ಲಿಯದನ್ನು ಅಳಿಸಲಾದೀತೆ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)