Oct 142019
 

೧. ದ್ರುತವಿಲಂಬಿತದ ಸಮಸ್ಯೆ

ಗಳಿಸದೇ ಸಿರಿಯಂ ನಯನಾಶ್ರುವುಂ

೨. ಕಂದಪದ್ಯದ ಸಮಸ್ಯೆ

ಉತ್ತರನೇ ಗೆಲ್ದನಲ್ತೆ ಗೋಗ್ರಹಣದೆ ಕೇಳ್

  6 Responses to “ಪದ್ಯಸಪ್ತಾಹ ೩೭೯: ಸಮಸ್ಯಾಪೂರಣ”

  1. ಉತ್ತರನೇಗೆಲ್ವಂ ಪೇ-
    ಳತ್ತಿತ್ತೀಕ್ಷಿಸುತುಮೋಡುವಂ ರಣದಿಂದಂ|
    ಹತ್ತಿಕ್ಕುತೆ ವೈರಿಯನೆ ನಿ-
    ರುತ್ತರನೇ (ಅಸೀಮ/ಅರ್ಜುನ) ಗೆಲ್ದನಲ್ತೆ ಗೋಗ್ರಹಣದೆ ಕೇಳ್||

  2. ಅಳಬಳಂ, ಬಲು ದೀನತೆಯಿಂದೆ ಕೊಂ-
    ಡುಳಿಸಡಂಗಿಸುತುಂ ಧನವಂ ಸದಾ ,
    ಅಳಲೊಳೇ ತಿರುಕಂ ಧನಿಕಂ ಗಡಾ,
    ಗಳಿಸದೇ ಸಿರಿಯಂ ನಯನಾಶ್ರುವುಂ ?!

  3. ಬಿತ್ತರಿಸಲ್ ಕೌರವಪಡೆ
    ಕುತ್ತುಂ ತಾಗದನೆ ಗೆಲ್ದ ಪಾರ್ಥನ ಜಸಮೇ
    ಚಿತ್ತೈಸಲ್ ಬದಲಾಗುತ-
    ಲುತ್ತರನೇ ಗೆಲ್ದನಲ್ತೆ ಗೋಗ್ರಹಣದೆ ಕೇಳ್

  4. ಗಳಿತವೈಭವನಾನೆ ಸುಯೋಧನಂ,
    ಮೊಳಗೆ ಧರ್ಮಜಕೀರ್ತಿಯ ದುಂದುಭಿ-
    ಪ್ರಳಯಮಾಶೆಗಳೆಂದಳಲಯ್ಯನಿಂ
    ಗಳಿಸದೇ ಸಿರಿಯಂ ನಯನಾಶ್ರುವುಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)