Oct 302019
 

  17 Responses to “ಪದ್ಯಸಪ್ತಾಹ ೩೮೧: ಚಿತ್ರಕ್ಕೆ ಪದ್ಯ”

  1. ಚಕ್ರಮನೆಚ್ಚಿದನೇಂ ಹರಿ?
    ಶಕ್ರನ ವಜ್ರಾಯುಧಪ್ರಹಾರಮೆ? ನಭಕಂ
    ವಿಕ್ರಮಿಸಿದ ಛತ್ರಮೆ ಬಲಿ-
    ಚಕ್ರಾಧಿಪನಾಖ್ಯೆಗಾಂತುದೆನುತಕ್ಕಜಮಯ್

  2. Equating it to marine world
    ಹವಳದ ಶಿಲಾಚರಮೆ ವಾ-
    ಡವಾಗ್ನಿ ಸಿಡಿಯಲ್ಕೆ ಸಾಗರನ ಗರ್ತಮಿದೇಂ
    ನವುರಿನ ಲೋಳೆಯ ಮೀನೇ-
    ನವಲೋಕಿಸೆ ಹಾ ಸಮುದ್ರಕಮಲಮೆನಿಕ್ಕುಂ

    ಹವಳದ ಶಿಲಾಚರ – Coral life (they are also colorful circular)
    ಲೋಳೆಯ ಮೀನು – jelly fish

  3. ಗ್ರಹ-ತಾರೆಗಳನೆಂತೊ ಆಗಸದೆ ಮೇಳವಿಸೆ
    ಬಹುಕಾಲವೆನಗಾಯ್ತು ಒಮ್ಮೆ ಗೈಯಲ್|
    ಮಹಿಮನೀ ಮಾನವಂ ಚಿತ್ತಾರವಂ ನಭದೆ
    ವಿಹಿತವಾಗಿಸುವನಲೆ ವರ್ಷಂಪ್ರತಿ!!

  4. (ಹಿಂದೊಮ್ಮೆ ಬರೆದದ್ದು, ಚಿತ್ರಕ್ಕೆ ತಕ್ಕುದಾಗಿದೆಯೆಂದು ಹಾಕಿದ್ದೇನೆ. ಆದರೆ ಹಳೆಯ ಪದ್ಯವನ್ನು ಹಾಕಿದ ಪಾಪ ಪರಿಹಾರಕ್ಕೆ ಮತ್ತೊಂದನ್ನು ಬರೆಯಬೇಕೆಂದಿರುವೆ! ಕ್ಷಮೆ ಇರಲಿ)

    ಅಂದು ನರಕಾಸುರನ ಭಯದಲಿ
    ನೊಂದಿರುವ ಜಗವನ್ನು ಕಾಯಲಿ-
    ಕೆಂದು ಕೃಷ್ಣನು ಕೊಂದನಾತನ ವಿಷ್ಣು ಚಕ್ರದಲಿ |
    ಇಂದಿಗೂ ನೆನೆಯುವೆವು ಮಹದಾ-
    ನಂದದಿಂದಲಿ ದುಷ್ಟ ದಮನವ
    ಚಂದದಿಂದಲಿ ನಾವು ಹೊತ್ತಿಸಿ ವಿಷ್ಣು ಚಕ್ರಗಳ ||

    • ಬೇರೆಯವರು ತೋರುವ ಕ್ಷಮೆಗಿಂತ ತಾನೇ ಮಾಡಿಕೊಳ್ಳುವ ಪ್ರಾಯಶ್ಚಿತ್ತ ಮಹೋನ್ನತವಾದದ್ದು. ಪ್ರಾಯಶ್ಚಿತ್ತಪದ್ಯಕ್ಕಿಂತ ಇದೇ ಚೆನ್ನಿದೆ, ಏಕೆಂದರೆ ಇಲ್ಲಿ ವಿಷ್ಣುರೂಪಿಯಾದ ಕೃಷ್ಣ, ಹಾಗಾಗಿ ವಿಷ್ಣುಚಕ್ರವೆಂಬ ಸಮೀಕರಣ ಚೆನ್ನಾಗಿದೆ.

    • matte chennagide endu hELuttiddene hamsanandi 🙂

  5. ನರಕನೆನ್ನುವ ಹೆಸರಿನಸುರನ
    ತರುಣಿ ಭಾಮೆಯ ನೆರವಿನಿಂದಲಿ
    ತರಿದುದನು ಸಿರಿಕೃಷ್ಣ ನೆನೆವೆವು ದೀವಳಿಗೆಯೆಂದು|
    ಧರೆಯ ಮೇಲಿಂದೇರಿ ಹೋಗುವ
    ಬಿರುಸು ಬಾಣವ ವಿಷ್ಣುಚಕ್ರವ
    ಸರಸರನೆ ಹೊತ್ತಿಸಿರೆ ನಾಚಿವೆ ತಾರೆ ಸಂಕುಲವು ||

    • ಸಿರಿಕೃಷ್ಣ ಅರಿಸಮಾಸ. ’ತರಿದ ಕೃಷ್ಣನ ನೆನೆವೆವಾವೀ ದೀವಳಿಗೆಯಂದು’ ಎಂದು ಸವರಬಹುದು.

    • ನಾಚಿವೆ ತಾರೆ ಸಂಕುಲವು ಚೆನ್ನಾಗಿದೆ 🙂

  6. ಗ್ರಹತಾರೆಗಳಸ್ತಿತ್ವವ-
    ನಿಹಲೋಕದೊಳಡಗಿಸಿರ್ಪ ಕತ್ತಲೆಗಿಂತಿ-
    ತ್ತಿಹುವೇಮುತ್ತರವಂ ಗಡ
    ಬಹುವಿಧದೊಳ್ ಸಿಡಿದ ಬಿರಿಸು-ಬಾಣಂಗಳ್ ಕಾಣ್ !!

    ಕತ್ತಲೆಗೆ ಸಂದಿರುವ ಬೆಳಕಿನುತ್ತರ !!

  7. ದಾನಕೆ ನೋನುತುಂ ಸಕಲಸಂಪದಮಂ ಬಲಿಯೆನ್ನಿನಂಗೆ ನೀ
    ಳ್ದೀ ನೆಲನೊಳ್ ಪುಗಲ್ಕವನ ಬಲ್ಮೆಯನೇವೊಗಳ್ವೆಂ ಗಡೆನ್ನ ವಾ
    ಗ್ದಾನಮಿದಪ್ಪುದೀಗಳೆನುತುಂ ಕ್ಷಿತಿಚಕ್ರದ ರೂಪಿನಿಂದೆ ಬಂ
    ದಾನೆ ಸುದರ್ಶನಾಖ್ಯನನುವತ್ಸರಮುಂ ಬಲವರ್ಪೆನೆಂದಿತೋ!

    ದಾನವನ್ನು ಕೊಡಲು ತಪ್ಪದೇ ತನ್ನೊಡೆಯನಿಗೆ ಸಕಲೈಶ್ವರ್ಯಗಳನ್ನೂ ಕೊಟ್ಟು ನೆಲದಲ್ಲಿ ಇಳಿದುಹೋದ ಬಲಿಯ ಬಲ್ಮೆ ಅವರ್ಣನೀಯವಾದುದು. ಅವನ ಈ ಕಾರ್ಯಕ್ಕಾಗಿ ನಾನೇ ಪ್ರತಿವರ್ಷವೂ ಭೂಚಕ್ರದ ರೂಪಿನಿಂದ ಬಂದು ಅವನಿಗೆ ಪ್ರದಕ್ಷಿಣೆಯನ್ನು ಸಲ್ಲಿಸುತ್ತೇನೆಂದು ಸುದರ್ಶನಚಕ್ರವು ವಾಗ್ದಾನವನ್ನಿತ್ತಂತೆ ತೋರುತ್ತಿದೆ.

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)