Jul 042020
 

ರವೀಂದ್ರಹೊಳ್ಳರ ಪರಿಹಾರ:
ಏಕೆಂದುಂ ಬರೆದವನುಂ
ಸಾಕೆಂದುಂ ಕೇಳುತಿರ್ಪನರಿಯದ ಕವಿಗಳ್
ಲೋಕದ ಸಮ್ಮೇಳನದೊಳ್
ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ
(ಬರೆದವನಿಗೆ ಬರೆದದ್ದೇಕೆಂದು ಗೊತ್ತಿಲ್ಲ, ಕೇಳುಗನಿಗೆ ಸಾಕೆಂದು ಹೇಳಲೂ ತಿಳಿಯದ ಸಾಹಿತ್ಯಸಮ್ಮೇಳನದ ಗತಿ)

ಕಾಂಚನಾರ ಪರಿಹಾರ:
ನಾ ಕಾಣುತಿರ್ಪೊಡಂ ಚಾ
ಲಾಕಿ ಕ್ರೈಸ್ತಗುರುವರ್ಯನಾ ಕಪಟಕರಂ|
ತಾಕಲ್, ನಡೆದಂ ಹೆಳವಂ!
ಮೂಕಂ ಪಾಡಲ್ಕೆ! ಕಿವುಡನಾಲಿಸುತಿರ್ದಂ!|
(ಮತಾಂತರದ ನಾಟಕ)

ಉಷಾರವರ ಪರಿಹಾರ:
ಲೋಕದೊಳತಿ ಸಾಮಾನ್ಯಂ
ಮೂಕಾಭಿನಯಂ ಸಲಲ್ ಶ್ರವಣಸಾಧನದೊಳ್|
ಏಕಾಂಗಿಯಿನೇಕಾಂಕದೆ
ಮೂಕಂ ಪಾಡಲ್ಕೆ ಕಿವುಡನಾಲಿಸಿರ್ಪಂ!!
ಇಅರ್ ಫೋನ್ ಧರಿಸಿದ ಏಕಾಂಗಿ (ಕಿವುಡ) – (ಇಅರ್ ಫೋನ್ ಕನೆಕ್ಟ್ ಆದ ತಕ್ಷಣ ಮ್ಯೂಟ್ ಆಗುವ – ಮೂಕ ) ಮೊಬೈಲ್ ನಲ್ಲಿ ಮುಳುಗಿರುವ “ಏಕಾಂಕ”ದ ಪೂರಣ

  One Response to “ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ”

  1. ಶೂಕಂ, ಮರುಗಂ, ಚಂಪಕ-
    ಮೂ ಕಂಪಾಡಲ್ಕೆ, ಕಿವುಡನಾಲಿಸುತಿರ್ದಂ|
    ನಾಕಸದೃಶಗಾನಮನದು
    ಸಾಕಾರಂಗೊಳಿಸಿರಲ್ ಮನಸಿನೊಳಗವನಾ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)