Apr 092011
ಲಂಚ ಕೋರರು ಮೆರೆವ ಸಡಗರ
ವಂಚನೆಯು ತಾರಕವನೇರಿರೆ
ಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||
ಸಂಚು ಮಾಡಿಹ ಕಳ್ಳ ಕೊರಮರ
ಹೊಂಚಿ ದೋಚುವ ಹೀನ ಮನುಜರ
ನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ ||
ವಂಚನೆಯು ತಾರಕವನೇರಿರೆ
ಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||
ಸಂಚು ಮಾಡಿಹ ಕಳ್ಳ ಕೊರಮರ
ಹೊಂಚಿ ದೋಚುವ ಹೀನ ಮನುಜರ
ನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ ||
ಸಾಕು ಸಾಕೆಂದಾದ ಸಮಯದಿ
ಲೋಕದುನ್ನತಿ ಶೋಕಿಸುತಲಿರೆ
ಮೂಕದನಿಗಳಲುದಯಿಸಿದನೀ ರಂಧ್ರದೊಂಗಿರಣ ||
ಲೋಕಪಾಲದ ನಿಯಮ ಜನತೆಯ
ಬೇಕು ಬೇಡಗಳನಳವಡಿಸಿರೆ
ಹಾಕಲಿರುವುದು ಹುಚ್ಚು ಕುದುರೆಗೆ ಭಯದ ಕಡಿವಾಣ || ೨ ||
*ಸಾಸಿರೆ = ಹಜಾರೆ 🙂
[ಇಷ್ಟವಿದ್ದವರು ಇದನ್ನು ಇನ್ನೂ ಮುಂದುವರಿಸಿ – ಸಾಕಷ್ಟು ಬೆಳೆಸಬಹುದು]
– ರಾಮಚಂದ್ರ
ರಾಮ್,
ಸಾಸಿರೆ = ಹಜಾರೆ ನನಗೆ ಮೊದಲು ಅರ್ಥ ಆಗ್ಲಿಲ್ಲ. ಈಗ ಗೊತ್ತಾಯ್ತು 🙂 ಚೆನ್ನಾಗಿದೆ ನಾಮ ಪದವನ್ನೇ ಭಾಷಾಂತರಿಸಿದ್ದೀರಲ್ಲ!!!
ಇಷ್ಟು ವರುಷಗಳಾಡಳಿತದಲಿ
ನಷ್ಟದಾರ್ಥಿಕ ಸಮಯದಲಿ ಜನ
ಕಷ್ಟ ಜೀವನ ನಡೆಸುತಿರುವುದ ಕಂಡು ರೋಚ್ಚೆದ್ದ |
ಭ್ರಷ್ಟ ಕರಿಮಸಿ ರಾಷ್ಟ್ರ ಮಾತೆಗೆ-
ಯೆಷ್ಟೊ ಬಳೆದಿಹ ಸಚಿವರನುಜನ-
ಕಿಷ್ಟ ನಿಯಮದೆ ನ್ಯಾಕೆಳುಯುವ "ಲೋಕಪಾಲ"ಕೆ ಜೈ ||
ನ್ಯಾಕೆಳೆಯುವ should be read as ನ್ಯಾಯಕೆಳೆಯುವ 🙂
ಯಾರಿವನು? ಅಣ್ಣಾಹಜ಼ಾರೆಯ
ದಾರಿಹರು ಬೆಂಬಲಕೆ? ಹಣ ಅಧಿ-
ಕಾರವಿಲ್ಲದೆ, ಯೆಂದು ಕಡೆಗಣಿಸಿತ್ತು ಸರ್ಕಾರ |
ಊರುಪ್ರಾಂತ್ಯಗಳಿಂದ ಯುವಜನ
ವಾರಿಧಿಯದಾಂದೋಲನದೊಳಿರೆ
ಊರಿ ಮಂಡಿಯ ಮುಗ್ಗರಿಸಿತೈ ಬಂಡವಾಳದಹಂ ||
ಸತ್ಯನಿಷ್ಟೆ ಯಹಿಂಸೆಯೆರಡೇ
ತತ್ವ, ಸರಳತೆ ಬಂಡವಾಳವು
ನಿತ್ಯ ಭ್ರಷ್ಟತೆ ಧೂಳಿಪಟ ಗೈವಂಥ ನಿಜಶಕ್ತಿ |
ಪಥ್ಯವಾಗಲಿ ಮಾರ್ಗ ಋಜುತೆಯ
ನೆತ್ತಿನಿಲಿಸಲಿ ದೇಶದೆಲ್ಲೆಡೆ
ಹೊತ್ತಿಸಲಿ ಯೀಜಾಗೃತಿಯ ನಣ್ಣಾಹಜ಼ಾರೆ ಮಹಾನ್ ||
ಎಳೆಯ ಜನಗಳ, ಹಳೆಯ ತಲೆಗಳ
ಲೊಳಗೆ ಗಿಡಿದಿದ್ದೆಲ್ಲ ಬೇಗುದಿ
ಬಳನೆ ಹರಿಯಲು ದಾರಿ ಮಾಡಿದನಣ್ಣನೀ ಸುದಿನ |
ಹಳೆಯ ಮೌಲ್ಯಕೆ ಹೊಸತು ನೆತ್ತರು
ಕೆಳಗೆ ಬಿದ್ದುರುಳಿದ್ದ ಶೌರ್ಯವ
ತಳೆದ ನಿರ್ವೀರ್ಯಾದಿ ಸ್ಥಿತಿಗಳ ಪುಳಕದೆಚ್ಚರಿಸಿ ||
ಗೋವಿನ ಹಾಡಿನ ಮಟ್ಟಿನಲ್ಲಿ:-)
ಜನರ ನಿರ್ವೀರ್ಯತೆಗೆ ಲೇಹ್ಯವ* (energizer)
ನಾಯಕರಭ್ರಷ್ಟತೆಗೆ ವ೦ಕಿಯ* (contraceptive)
ಹಲ್ಲ ತುದಿಯಿಹ ಸಿಟ್ಟಿಗರ್ಥವ
ನೀಡಿ ಕುಳಿತಿಹ ನಣ್ಣನೂ |
ಹಸಿದ ಹೊಟ್ಟೆಗೆ ಖಾಲಿ ಹೊಟ್ಟೆಯ
ಲಿರುತ ನೀಡಿದ ಮೌನ ದೇಟನು
ಭರ್ತಿಯಾದರು ಹಿಡಿಯುವುದರವು
ಕಲಿಯ ಬಲ್ಲುದೆ ಪಾಠ ವಾ ||
ಮೊದಲ ಹೆಜ್ಜೆಯಿ ದಷ್ಟೆ ಮು೦ದಿದೆ
ಕಲ್ಲು ಮುಳ್ಳಿನ ನೂರು ಯೋಜನ
ಮೈಚ ಳಿಯಬಿಟ್ಟೇಳ ಬೇಕಿದೆ
ತೊಡೆಯು ತಾಲಸ್ಯ ||
ಅಣ್ಣ ಹಾಕಿದ ದಾರಿ ಮು೦ದಿದೆ
ಮಣ್ಣ ಜನಬೆ೦ಬಲವು ಹಿ೦ದಿದೆ
ಮಣ್ಣ ಋಣವದು ತೀರ ಲೋಸುಗ
ಕಣ್ಣ ಮುಚ್ಚದೆ ದುಡಿಯುವಾ ||
ಓ ಅಣ್ಣ ಹಜಾರೆ ,
ಹಿ೦ದಿದೆ ಯುವಕರ ದ೦ಡು ಹಜಾರೆ !
ಆಸೆಯೂ ಹಜಾರೆ !
ಆಕಾ೦ಕ್ಶೆಯೂ ಹಜಾರೆ !
ನೀ ಅನ್ನ,ನೀರು ಬಿಟ್ಟ ದಿನ
ನಾನೂ, ಅವನೂ, ಅವಳೂ,
ಹೀಗೆ ಉಪವಾಸ ಕೂತವರೂ ಹಜಾರೆ !
ವೋಟು ಕೊಟ್ಟಿದ್ದು,
ತೆರಿಗೆ ಕಟ್ಟಿದ್ದು,
ಕೂಲ್ ಆಗಿದ್ದು
ಫೂಲ್ ಆಗಿದ್ದೂ ಹಜಾರ್ ಹಜಾರೆ !
ನಿತ್ಯ ಭ್ರಷ್ಟರ,
ಲ೦ಚಕೋರರ
ಕೊ೦ಚ ನಡುಗಿಸ
ಲೋಕಪಾಲರ
ಹುಟ್ಟು ಕ್ರಿಯೆಗೆ
ನಮ್ಮ ಹಾಜರ್ ಹಜಾರ್ ಹಜಾರೆ !
(*ಹಜಾರೆ = ಸಾವಿರಾರು)
Slightly different take:)
ಸರಳ ಸಜ್ಜನ ಮುಖದ ಭಸ್ಮನು
ಮರುಳು ಮಾಡುತ ಶಿವನ ಕೇಳಿದ
ವರವ ಕೊಡೆನಗೆ ಸುಡುವ ಹಸ್ತವ ಕೊರಡ ಸುಡಲೋಸುಗ
ತರಳ ಮಾತಿಗೆ ತಲೆಯದೂಗುತ
ಕರದಿ ಬತ್ತಿಯ ಹಿಡಿದು ಜನಸಾ
ಗರವು ನೆರೆಯಲು ದಾರಿ ಕಾಣದೆ ಶಿವನು ಸಮ್ಮತಿಸಿದ.
http://www.sandeepweb.com/2011/04/13/anna-hazardous/
http://leagueofindia.com/blog/anna-hazare%E2%80%99s-campaign-truly-gandhian-truly-evil-%E2%80%93-i
http://www.dailypioneer.com/330466/Weak-Government-subverted-state.html
ಶ್ರೀರವೀಂದ್ರರ ಊಹೆ ಚೆನ್ನಿದೆ
ಮೂರು ಆರನೆ ಸಾಲುಗಳಬಂಧವನುಸರಿಮಾಡಿ /