Apr 042011
 

ಯುಗವು ಕಳೆದಿರೆ ಯುಗವು ಬರುತಿರೆ
ಜಗದಿ ನೋವನು ನಲಿವನೊಂದೇ
ನಗೆಯ ಮೊಗದಲೆದರಿಸುವುದರಲಿ ಹಬ್ಬದಾದರ್ಶ (ಪರ್ವಸಾರ್ಥಕ್ಯ)
ಹಗುರಬಗೆಯಲಿ ಭಾವ ಲತೆಗಳು
ಚಿಗುರಿ ಕವನದ ಫಲಗಳರಳುತ
ಸಿಗಲಿ ರಸಿಕಗೆ ಭಾವನಾವೀನ್ಯದಲಿ ರಸದೂಟ

  5 Responses to “ಕಾವ್ಯ ಕುತೂಹಲಿಗಳಿಗೆ ಯುಗಾದಿ ಶುಭಾಶಯಗಳು :)”

  1. ದೇವದೇವನ ತಂದೆಯಾ ವಸು
    ದೇವ ಹಿಡಿದನು ಖರನ ಪಾದವ
    ಯಾವಗತಿ? ಯುತ್ತಮರು ಹೀನರನಾಶ್ರಯಿಸಬೇಕೇ?
    ಭಾವಿಸದೆ ಜನ ತಾರತಮ್ಯವ
    ನಾವಿಧದಿ ಬೆರೆತೆಲ್ಲಜನರೊಳು
    ಜೀವಿಸಲು ಸೂಚನೆಯೆ ಶ್ರೀಖರನಾಮವತ್ಸರದಿ?

  2. priya sOma.. uttama padya.
    aadare ugaadiyO yugaadiyO?

    ugaadi shabda sariyaa?

  3. chandramouli avare,
    ಅದ್ಭುತವಾಗಿ ಬರೆದಿದ್ದೀರ ಸರ್ 🙂

    ಪ್ರಿಯ ಕಣಾದ,
    ಯುಗಾದಿ ಸರಿ ಮಾಡಿದ್ದೇನೆ, ಅದರ ಜೊತೆ ಅರಿಸಮಾಸ, ಶಿಥಿಲ ದ್ವಿತ್ವವನ್ನು ಸರಿಮಾಡಿದ್ದೇನೆ. ನಿಮ್ಮ ಮತ್ತು ಪ್ರಸಾದು ಅವರ ಸಲಹೆಗೆ ಧನ್ಯವಾದ. ಹಬ್ಬದಾದರ್ಶ ಕೂಡ ಅರಿಸಮಾಸ ಎಂದು ತೋರುತ್ತದೆ, ಏನು ತೋಚುತ್ತಿಲ್ಲ 🙂

  4. prya sOma,

    habbadaadarsha vannu parvasaarthakya anta maadboda?

  5. ಕಣಾದ 🙂
    "ಪರ್ವಸಾರ್ಥಕ್ಯ" ಬಹಳ ಚೆನ್ನಾಗಿದೆ, ಅದನ್ನು ಹಾಕ್ತೀನಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)