ಗಣಪತಿ-
ಪುಲಿದೇರಳ ಪೊಡೆಯಿಂದಂ
ಘಳಿಲನೆ ತಾನೆಂತು ಪುಟ್ಟಲಪ್ಪುದೆನಿತ್ತೀ
ಇಲಿದೇರನೆಂದು ಬಗೆಯಲ್
ಮಲಿನತೆಯಿಂ ಪುಟ್ಟಿ ಬಂದುದೇ ಕಾರಣಮೈ||
(ಹುಲಿಯನ್ನು ವಾಹನವಾಗಿ ಉಳ್ಳವಳ ಹೊಟ್ಟೆಯಿಂದ ಇಲಿಯನ್ನು ವಾಹನವಾಗಿ ಹೊಂದಿದವನು ಹೇಗೆ ಹುಟ್ಟಿಬಂದ ಎಂದು ಆಲೋಚಿಸುತ್ತಿರುವಾಗ, ಅವನು ಹೊಟ್ಟೆಯಿಂದಲ್ಲದೇ ಮಲಿನತೆಯಿಂದ ಹುಟ್ಟಿ ಬಂದುದೇ ಕಾರಣವಾಗಿದೆ- ಎಂದು ತಿಳಿಯಿತು)
೨.ಬಂಗಾರದ ಸೂಜಿ
ಪೊಂಗುವ ಸೌಂದರ್ಯಕ್ಕಂ
ಸಂಗಡಿಸಲ್ ಕನಕಭೂಷಣಂಗಳೆ ಮೆರೆಯ-
ಲ್ಕಂಗನೆಕಿವಿಮೂಗುಗಳಂ
ಬಂಗಾರದ ಸೂಜಿಯೊಂದೆ ಗಾಯಂಗೆಯ್ಗುಂ||
(ಉಕ್ಕುವ ಸೌಂದರ್ಯಕ್ಕೆ ಜೊತೆಯಾಗಿ ಕನಕಭೂಷಣಗಳು/ಆಭರಣಗಳು ಸೇರಿದಾಗ ಸ್ತ್ರೀಯರ ಕಿವಿಮೂಗುಗಳನ್ನು ಬಂಗಾರದ ಸೂಜಿಯೊಂದು ಗಾಯವನ್ನು ಮಾಡುತ್ತದೆ)
೩. ಹಾರದ ಹಕ್ಕಿ-
ಪಾರದೀ ಪಕ್ಷಿಯೊಂದಿರ್ಕುಮೋರಂತೀ ಗಾತ್ರಸಂಸ್ಥಿತಂ
ಪಾರಲ್ಕೆ ಮೋಕ್ಷಮೋ ಸಾವೋ ಸಾರುಗುಂ ಬಲ್ಲರಾರದಂ||
(ಹಾರದ/ಕಾಣಲಾಗದ ಪಕ್ಷಿಯೊಂದು ಚೆನ್ನಾಗಿ ಈ ದೇಹದಲ್ಲಿದೆ. (ಪ್ರಾಣಪಕ್ಷಿ) ಅದನ್ನು ಕಾಣಲು/ ಅದು ಹಾರಲು- ಮೋಕ್ಷವೋ ಸಾವೋ ಬರುತ್ತದೆ. ಅದನ್ನು ಬಲ್ಲವರಾರು?)
ಸಮಸ್ಯೆ-
ಭರದಿಂದುರ್ಕುವ ಜವ್ವನ-
ಮಿರಲಂತುಟು ನಂದಮೂರಿತಾರಕವೆಸರಿಂ
ಮೆರೆದಪ ಚಲಚಿತ್ರನಟಂ
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ||
(ಯೌವನವಿರುವಾಗ ಚಲನಚಿತ್ರದ ನಟನಾದ ನಂದಮೂರಿತಾರಕ ಎಂಬ ಹೆಸರಿರುವ ರಾಮ (ಎನ್.ಟಿ.ರಾಮರಾವ್) ಪರಸತಿಯನ್ನು ಅಪ್ಪಿದನು)
ಬಂಗಾರದ ಸೂಜಿ
ಚಿನ್ನದ ಸೂಜಿಗೆ ಹೊನ್ನಿನ ದಾರವೊ
ರನ್ನದ ವಸ್ತ್ರಂಗಳ ರಾಶಿ – ಧರಿಸಲ್ಕೆ
ಮನ್ನಣೆ ಗಳಿಸಿರ್ದಪರಾರೋ ?
ಗಣಪತಿ
ಬಾಲಕನಾಗಿರ್ದಾಗಳೆ
ಪಾಲಕನೇ ತಲೆಯ ಕಡಿಯೆ ನೋವಾದತ್ತೇಂ?
ಕಾಲೊಳ್ ಬಲಮೆಂತಿರ್ಪುದೊ
ತೇಲಿಸದೇನಾನೆತಲೆಯದೋಡಾಡಿರೆ ನೀಂ?
[ ದೊಡ್ಡ ತಲೆಯಿಂದಾಗಿ, ಕಾಲಿಗೆ ಶಕ್ತಿ ಸಾಲದೆ ಸಮತೋಲನ ತಪ್ಪುವುದಿಲ್ಲವೇ …]
ಸಮಸ್ಯೆ
ವರಜಾನಕಿ ಬಂದಿರ್ದೊಡ –
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ
ಸಿರಿಯೆಂದುಂ ವಿಷ್ಣುವಿಗಂ
ಚಿರದೊಳ್ ಸತಿಯಾದೊಡೇನದಚ್ಚರಿಯೇನೈ
[ ಜಾನಕಿಯು ಲಕ್ಷ್ಮಿಯ ಅವತಾರವಾದ್ದರಿಂದ, ಅವಳನ್ನು ಅಪರಸತಿ ಎಂದು ಪರಿಗಣಿಸಿ …]
ಬಂಗಾರದ ಸೂಜಿ:
ಭಾರಮನೆಲ್ಲಂ ತಾಂ ಸಂ
ಸಾರದ ಸಂಯಮದಿ ಸಹಿಪ ತಾಳಿಗೆ ಬಲನೀಂ
ತೋರದೆ ಲೋಕದ ಕಣ್ಣಿಗೆ
ಸೇರಿರೆ ಪೊಳೆವವರ ಬೆನ್ನ ಸೂಜಿಯೆ ಚಿನ್ನಂ||ಕಂದಪದ್ಯ||
(ಮಾಂಗಲ್ಯವನ್ನು ಪೋಣಿಸಿರುವ ಸೂಜಿ)
ಗಣಪತಿ:
ಲೋಕಮೆಲ್ಲನೆನೆವಂತೆಗಾತ್ರಮಂ
ಬೇಕುಬೇಕೆನಿಪುದೆಲ್ಲಮಂಮೆಲಲ್
ತೂಕದಿಂದೆಮೊಗಮೈಯೊಳುಬ್ಬಿದೇ
ಏಕೆನೀನಿಲಿಯನೇರಿ ಬಂದೆಯೈ || ರಥೋದ್ಧತಾ||
(ತನ್ನ ಗಾತ್ರವನ್ನು ಲೋಕವೆಲ್ಲಾ ನೆನೆವಂತೆ ಹಿಗ್ಗಿಸಿಕೊಂಡು , ಬೇಕೆನಿಸಿದ್ದೆಲ್ಲಾ ತಿನ್ನುವವನು, ತನ್ನ ವಾಹನವನ್ನಾಗಿ ಇಲಿಯನ್ನಿಟ್ಟುಕೊಂಡದ್ದೇಕೋ? )
ಹಾರದಹಕ್ಕಿ:
ಹಾರುವ ಸಸ್ತನಿಯನ್ನುತಾಂ ನೆನೆಯಲ್ಕೆ
ಸಾರಿತುಬಾವುಲಿ ಪಾಪ
ಹಾರದಹಕ್ಕಿಯ ನೋಡಲುಬಯಸಿರೆ
ತೋರಿತು ನವಿಲಿನ ರೂಪ|| ಸಾಂಗತ್ಯ||
(ಸಸ್ತನಿಯೊಂದು ಹಾರಿದರೆ ಹೇಗಿರುತ್ತದೆ ಎಂದು ಯೋಚಿಸುವಾಗ ಏನೂ ಸೊಗಸಿರದ ಬಾವುಲಿಯು ಕಣ್ಣುಮುಂದೆಬರುತ್ತದೆ. ಅದೇ ಹಾರಲು ಬರದ ಹಕ್ಕಿಯನ್ನು ನೆನೆದರೆ, ನವಿಲಿನ ಸೌಂದರ್ಯವೇ ಕಣ್ಣಮುಂದಿರುತ್ತದೆ)
ಬಂಗಾರದ ಸೂಜಿ:
ಸಿಂಗರಿಸಲ್ಗಡಿಯಾರದೆ
ವಿಂಗಡಿಸಿರಲವಧಿಯಂ ನಿಮಿಷಮಂ ನೋಡಾ|
ಬಂಗಾರದ ಸೂಜಿಗಳಂ
ಮುಂಗಡಮಿರಿಸಿರ್ದೊಡೇನು ಕಾಲಮದೊಂದೇ|
ಗಣಪತಿ:
ವಿರೋಧಮಿಲ್ಲಮಾವಗಂ ಸ್ವಧರ್ಮಗರ್ವಮಂ ಕಿಡಲ್
ಸ್ಮರಿಪ್ಪರಯ್ ಸುರಾಸುರರ್ಕಳೆಲ್ಲರಿಂತು ನಿನ್ನನೇ
ಪರೀಕ್ಷೆಯಂ ಸರಾಗದಿಂದೆ ದಾಂಟಲಾದೆ ಕಾರಣಂ
ಕರಂಗಳೆಂತು ನಿನ್ನದೋ ರಚಿಪ್ಪೆಯಲ್ತೆ ಭಾರತಂ
ಸಮಸ್ಯೆ:
ತೆರೆಯೊಳ್ ತನ್ನೊಡತಿಯೆ ಮೇ-
ಣಿರಲೂರ್ಮಿಳೆಯಾಗೆ ನಾಟಕದೊಳಭಿನಯಿಸಲ್
ಮರೆಯಿಂ ನಾಯಕನೀತಂ
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ
ತನ್ನ ಹೆಂಡತಿ ಊರ್ಮಿಳೆಯಾಗಿ ನಟಿಸಿರುವ ನಾಟಕವಾದ ನಂತರ ರಾಮನಾದ ನಾಯಕನು ನಾಟಕದಲ್ಲಿ ಪರಸತಿಯಾದವಳನ್ನು (ತನ್ನ ಪತ್ನಿಯನ್ನು ಕಂಡು ಅಪ್ಪಿದನು)
ಹಾರದ ಹಕ್ಕಿ:
ರೆಂಕೆಗಳಿರ್ದುಮಿರದವೊಲ-
ಲಂಕಾರಕ್ಕಾಯ್ತೆ ಪಂಜರದ ಗಿಳಿಗಂ ಮೇಣ್
ಮಂಕಾಗಳ್ ಪೊರಬಂದೊಡೆ
ಶಂಕೆಯೊಳಂ ಪಾರದಾಯ್ತಿದೇನಕಟಕಟಾ
ಸಮಸ್ಯಾಪೂರಣ:
ಭರತಂಗಯೋಧ್ಯೆ, ತನಗೈ-
ತರೆ ವನವಾಸಂ ಕೃತಪ್ರತಿಜ್ಞಂ ಸ್ವಾಂತಃ-
ಪುರದೊಳ್ ಪತಿಸೇವಾತತ್-
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಮ್
Very nice
ಗಣಪತಿ-
ಪುಲಿದೇರಳ ಪೊಡೆಯಿಂದಂ
ಘಳಿಲನೆ ತಾನೆಂತು ಪುಟ್ಟಲಪ್ಪುದೆನಿತ್ತೀ
ಇಲಿದೇರನೆಂದು ಬಗೆಯಲ್
ಮಲಿನತೆಯಿಂ ಪುಟ್ಟಿ ಬಂದುದೇ ಕಾರಣಮೈ||
(ಹುಲಿಯನ್ನು ವಾಹನವಾಗಿ ಉಳ್ಳವಳ ಹೊಟ್ಟೆಯಿಂದ ಇಲಿಯನ್ನು ವಾಹನವಾಗಿ ಹೊಂದಿದವನು ಹೇಗೆ ಹುಟ್ಟಿಬಂದ ಎಂದು ಆಲೋಚಿಸುತ್ತಿರುವಾಗ, ಅವನು ಹೊಟ್ಟೆಯಿಂದಲ್ಲದೇ ಮಲಿನತೆಯಿಂದ ಹುಟ್ಟಿ ಬಂದುದೇ ಕಾರಣವಾಗಿದೆ- ಎಂದು ತಿಳಿಯಿತು)
೨.ಬಂಗಾರದ ಸೂಜಿ
ಪೊಂಗುವ ಸೌಂದರ್ಯಕ್ಕಂ
ಸಂಗಡಿಸಲ್ ಕನಕಭೂಷಣಂಗಳೆ ಮೆರೆಯ-
ಲ್ಕಂಗನೆಕಿವಿಮೂಗುಗಳಂ
ಬಂಗಾರದ ಸೂಜಿಯೊಂದೆ ಗಾಯಂಗೆಯ್ಗುಂ||
(ಉಕ್ಕುವ ಸೌಂದರ್ಯಕ್ಕೆ ಜೊತೆಯಾಗಿ ಕನಕಭೂಷಣಗಳು/ಆಭರಣಗಳು ಸೇರಿದಾಗ ಸ್ತ್ರೀಯರ ಕಿವಿಮೂಗುಗಳನ್ನು ಬಂಗಾರದ ಸೂಜಿಯೊಂದು ಗಾಯವನ್ನು ಮಾಡುತ್ತದೆ)
೩. ಹಾರದ ಹಕ್ಕಿ-
ಪಾರದೀ ಪಕ್ಷಿಯೊಂದಿರ್ಕುಮೋರಂತೀ ಗಾತ್ರಸಂಸ್ಥಿತಂ
ಪಾರಲ್ಕೆ ಮೋಕ್ಷಮೋ ಸಾವೋ ಸಾರುಗುಂ ಬಲ್ಲರಾರದಂ||
(ಹಾರದ/ಕಾಣಲಾಗದ ಪಕ್ಷಿಯೊಂದು ಚೆನ್ನಾಗಿ ಈ ದೇಹದಲ್ಲಿದೆ. (ಪ್ರಾಣಪಕ್ಷಿ) ಅದನ್ನು ಕಾಣಲು/ ಅದು ಹಾರಲು- ಮೋಕ್ಷವೋ ಸಾವೋ ಬರುತ್ತದೆ. ಅದನ್ನು ಬಲ್ಲವರಾರು?)
ಸಮಸ್ಯೆ-
ಭರದಿಂದುರ್ಕುವ ಜವ್ವನ-
ಮಿರಲಂತುಟು ನಂದಮೂರಿತಾರಕವೆಸರಿಂ
ಮೆರೆದಪ ಚಲಚಿತ್ರನಟಂ
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ||
(ಯೌವನವಿರುವಾಗ ಚಲನಚಿತ್ರದ ನಟನಾದ ನಂದಮೂರಿತಾರಕ ಎಂಬ ಹೆಸರಿರುವ ರಾಮ (ಎನ್.ಟಿ.ರಾಮರಾವ್) ಪರಸತಿಯನ್ನು ಅಪ್ಪಿದನು)
ಬಂಗಾರದ ಸೂಜಿ
ಚಿನ್ನದ ಸೂಜಿಗೆ ಹೊನ್ನಿನ ದಾರವೊ
ರನ್ನದ ವಸ್ತ್ರಂಗಳ ರಾಶಿ – ಧರಿಸಲ್ಕೆ
ಮನ್ನಣೆ ಗಳಿಸಿರ್ದಪರಾರೋ ?
ಗಣಪತಿ
ಬಾಲಕನಾಗಿರ್ದಾಗಳೆ
ಪಾಲಕನೇ ತಲೆಯ ಕಡಿಯೆ ನೋವಾದತ್ತೇಂ?
ಕಾಲೊಳ್ ಬಲಮೆಂತಿರ್ಪುದೊ
ತೇಲಿಸದೇನಾನೆತಲೆಯದೋಡಾಡಿರೆ ನೀಂ?
[ ದೊಡ್ಡ ತಲೆಯಿಂದಾಗಿ, ಕಾಲಿಗೆ ಶಕ್ತಿ ಸಾಲದೆ ಸಮತೋಲನ ತಪ್ಪುವುದಿಲ್ಲವೇ …]
ಸಮಸ್ಯೆ
ವರಜಾನಕಿ ಬಂದಿರ್ದೊಡ –
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ
ಸಿರಿಯೆಂದುಂ ವಿಷ್ಣುವಿಗಂ
ಚಿರದೊಳ್ ಸತಿಯಾದೊಡೇನದಚ್ಚರಿಯೇನೈ
[ ಜಾನಕಿಯು ಲಕ್ಷ್ಮಿಯ ಅವತಾರವಾದ್ದರಿಂದ, ಅವಳನ್ನು ಅಪರಸತಿ ಎಂದು ಪರಿಗಣಿಸಿ …]
ಪರಿಯುತೆ ಬರ್ಪಂ ನಗುತುಂ
ಕರಮಂ ಮೇಲೆತ್ತುತೆತ್ತಿಕೊಳ್ಳೆನುತಲೆ ತಾ –
ನರಿಯಂ ರೀತಿರಿವಾಜಂ
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ
[ ಬಾಲರಾಮನ ಆಟಗಳು ]
ಹಾರದ ಹಕ್ಕಿ
ಹಾರದ ಹಕ್ಕಿಯು ಹೋರದ ಹೋರಿಯು
ಕಾರದ ಕಾರ್ಮೋಡಗಳೆಲ್ಲ – ತಮ್ಮಯ
ಸಾರವ ಮರೆತು ಕೀಳಾದೊ
ಸಮಸ್ಯಾಪೂರಣ:
ಮುರಿದುಂ ತ್ರೇತಾಯುಗದೊಳ್
ಹರಿ, ಶಿವಧನುವಂ ಸ್ವಯಂವರದೊಳಂತುಟೆ ತಾಂ
ಸಿರಿಯವತರಿಸಿರ್ಪಂತಿಹ-
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ !!
ಹರಿಯಂತುಟೆ ತಾಂ ಶ್ರೀರಾಮನು – ಸ್ಲವಯಂವರದಲ್ಲಿ ಲಕ್ಷ್ಮಿ ಅವತಾರವಾದ “ಇಹಪರ” ಸತಿ – ಸೀರೆಯನ್ನು ಅಪ್ಪಿದ
* ಸ್ವಯಂವರ / ಸೀತೆ (ಟೈಪೊ ಆಗಿದೆ)
ಕರಗದಳಂ ವರಿಸಿರ್ಪನ್ (ಕೈಕೇಯಿ)
ದೊರೆ ದಶರಥ ಮೇಣಸಂಖ್ಯ ಪುರುಷರ್ ಜಗದೊಳ್|
ಸರಿನೋಡುತ್ತನುಶಾಸನ-
ಪರಸತಿಯಂ ಕಂಡೊಡಪ್ಪಿದಂ ಶ್ರೀರಾಮಂ||
(ಅನುಶಾಸನಪರ=Obedient)
ಹೊಲೆವರೈ ನವವಸ್ತ್ರಮಂ ಮೇಣ್ ಪಳೆಯದನುಂ
ಹೊಲೆವ ಸೂಜಿಯದಾವ ಲೋಹಮಿದ್ದೇಂ|
ಹೊಲಿಯೆ ಹರಿದೊಳಬಟ್ಟೆಯಂ ಪೊನ್ನಸೂಜಿಯೊಳು
ಸಲಗ-ಮೂಷಕದಂತರವದು ಚೆನ್ನೇಂ||
ಹಾರದ ಹಕ್ಕಿಯೆ ಬೇಕಲೆ ಕಂದಗೆ
ಕೀರಂ-ಗುಬ್ಬಿಗಳಾಟಿಕೆಯು|
ಹಾರುವ ಹಕ್ಕಿಯು ಉಳಿವುದೆ ಆಡಲು
ಪೋರರ ಸಂಗಡಮೇಗಳ್ ಪೇಳ್||
ಗಣಮಿರಲ್ ಪತಿಯೊರ್ವನಿರವೇಳ್ಕುಮದಕಂತೆ
ಧಣಿಯೆನಿಪನೇಂ ಗಣವದಿಲ್ಲದಾಗಳ್|
ಬಣಗುಕಬ್ಬಿಗನು ನಾನಲ್ಲವೈ ಪೇಳಾವ
ಗಣದ ಮೇಣದರ ಪತಿಯಂ ಬಣ್ಣಿಕುಂ||