ಕೃತಯುಗದಲ್ಲಿ ದೇವತೆಗಳು ಸ್ವರ್ಗದಲ್ಲಿದ್ದರು, ರಾಕ್ಷಸರು ಪಾತಾಲದಲ್ಲಿದ್ದರು. ಸಂಪರ್ಕವಿರಲಿಲ್ಲ; ಕೃತಾರ್ಥಯುಗ. ತ್ರೇತದಲ್ಲಿ ಒಂದೇ ಭೂತಲಕ್ಕೆ ಬಂದರು (ರಾಮ-ರಾವಣ), ದ್ವಾಪರದಲ್ಲಿ ಒಂದೇ ಕುಟುಂಬದಲ್ಲಿದ್ದರು (ಕುರು), ಕಲಿಯಲ್ಲಿ ಒಂದೇ ಮನಸ್ಸಿನಲ್ಲಿದ್ದವು.
ಕಾನನದೊಳ್ ರಾಜಿಪನಂ
ಮಾನವನೈತಂದು ಕಜ್ಜದಿಂ ಶೋಷಿಪನಯ್
ಜ್ಞಾನದೆ ಪೆರ್ಮೆಯನುಳಿಯುತ-
ಲೇನೀ ಗೇಹಾಳಿಯಿಂದಲೆನುತುಂ ಸುಯ್ಗುಂ
ದೇಹ ಬೆಳದೆರೇನು, ಮಾನವನಂತೆ ಬುದ್ಧಿಬೆಳಿಯದೆ ಶೋಷಿಸಲ್ಪಡುತ್ತಿದ್ದೇನೆ, ಎಂಬ ಆನೆಯ ಅಳಲು
ಗರಿಗೆದರಿದ ನವಿಲಂ ಮೇಣ್
ಕರಿಯಂ ಸಿಂಗನನುಮಂತೆ ಭೂತನಿಕರಮಂ
ಬರಿಗೈಯ ಕೌಶಲದೆ ತಾಂ
ನರನಾಳುವ ಪಾಂಗನೀಕ್ಷಿಸಲ್ಕಕ್ಕಜಮಯ್
ಬರಿಗೈಯ ಕುಶಲತೆಯಿಂದ ವಿಶೇಷವಾದ ಗುಣವನ್ನ ಹೊಂದಿರುವ ಎಲ್ಲಾ ಪ್ರಾಣಿಗಳನ್ನು ಆಳುವ ಮಾನವನನ್ನು ನೋಡಿದರೆ ಅಚ್ಚರಿಯಾಗುತ್ತದೆ.
You, just with loin cloth, own eternal joy, being vagabond rule over entire earth. Guro!! Please put your empty but dressed with vara and jnanamudras(mudraa-currency) on my head.
ಕೃತಯುಗ-
ಎಲ್ಲಮಂ ಜೋಡಿಸಿಟ್ಟಿರ್ಪಂ ಮೆಲ್ಲನಾಲೋಚಿಪಂ ವಿಧಿ
ಬಲ್ಲವಂ ಪೆಸರಿಟ್ಟಿರ್ಪಂ ಸಲ್ಲುಗುಂ ತಾಂ ಕೃತಂ ಯುಗಂ
(ಕೃತ= ಮಾಡಲ್ಪಟ್ಟ, ಯುಗ= ಜೋಡಣೆ, ಹಾಗಾಗಿ ಎಲ್ಲವನ್ನೂ ಜೋಡಿಸಿಟ್ಟ ಕಾರಣ ಬ್ರಹ್ಮ ಇದಕ್ಕೆ ಈ ಹೆಸರೇ ಸರಿ ಎಂದು ಹೆಸರಿಟ್ಟನು)
ಆನೆಯ ಅಳಲು-
ಎನ್ನಯ ಭಾರದ ಕರಮಂ
ಮುನ್ನಂ ಕೊಡುತಿರ್ಪೊಡೈದು ರೂಪಾಯಿಗಳಂ
ಬನ್ನಮದಿಲ್ಲದೆ ತಲೆಮೇ-
ಲಿನ್ನಿಡುವುದೆ ಕಷ್ಟಮೆಂದು ಗಜಮಳಲಿರ್ಕುಂ||
(ನನ್ನ ಭಾರವಾದ ಕರ/ಸೊಂಡಿಲನ್ನು ಇವರು ಮೊದಲು ಕೊಡುತ್ತಿರುವ ಐದು ರೂಪಾಯಿಗಳಿಗೋಸ್ಕರವಾಗಿ ಕಷ್ಟವಾಗದಂತೆ ಅವರ ತಲೆಯ ಮೇಲೆ ಇಡುವುದೇ ತನಗೆ ಕಷ್ಟದ ಕೆಲಸ ಎಂದು ಆನೆ ದುಃಖಿಸಿತು)
ಬರಿದಾದ ಕರ-
ಚಿರದೆ ಸತ್ಯವ್ರತಕ್ಕೆಂದು ನೋಂತ ಬಳಿಕಂ
ಭರದೆ ಚಂಡಾಲನೊಳ್ ಗೆಯ್ಮೆ ಗೆಯ್ಯುತಿರ್ದಂ
ತರುತಿರಲ್ ಮಡದಿ ಪುತ್ರನಾ ಪೆಣಮನಾಗಳ್
ಬರಿದುಗೆಯ್ಯಿಂದಲಾ ಹರಿಶ್ಚಂದ್ರನತ್ತಂ||
(ಯಾವತ್ತೂ ಸತ್ಯವ್ರತಿಯಾದ ಬಳಿಕ ಚಂಡಾಲನಲ್ಲಿ ಕೆಲಸಕ್ಕೆ ಸೇರಿಕೊಂಡಿರುವಾಗ ಹೆಂಡತಿಯು ತನ್ನ ಮಗನ ಹೆಣವನ್ನೇ ತರುತ್ತಿರುವಾಗ ಬರಿದಾದ ಕೈಯಿಂದ ಹರಿಶ್ಚಂದ್ರನು ಅತ್ತನು)
ಸಮಸ್ಯೆ-
ಸಾಯೈ ಸಾಯೆಂದೆನ್ನುತಾಚಾರ್ಯನಾಗಳ್
ನಾಯಂ ಪೊಯ್ವಂತಾತನಂ ಪೊಯ್ಯೆ ಶಿಷ್ಯಂ
ಜ್ಞೇಯಂ ಜ್ಞಾತಂ ಪೇಳ್ವೆನೆನ್ನುತ್ತೆ ಪೇಳ್ದಂ
ಮಾಯಾವಾದಂ ಮಧ್ವಸಿದ್ಧಾಂತಮೂಲಂ||
(ನಾಯಿಗೆ ಹೊಡೆಯುವಂತೆ ಗುರುಗಳು ಹೊಡೆಯುತ್ತಾ”ಸಾಯಿ ಸಾಯಿ” ಎಂದು ಬಯ್ಯುತ್ತಿರುವಾಗ ಮೂರ್ಖನಾದ ಶಿಷ್ಯ- “ತಿಳಿಯಬೇಕಾದ್ದು” ಎಲ್ಲವೂ ತಿಳಿಯಿತು ಹೇಳುತ್ತೇನೆ -ಎಂದು ತಪ್ಪಾಗಿ ಮಾಯಾವಾದವು ಮಧ್ವಸಿದ್ಧಾಂತಮೂಲ ಎಂದು ಹೇಳಿದನು. )
ಜಾಯಾಸಾರ್ಧಂ ವಾದವಾಗ್ವಾದದಂತೊಲ್
ಮೇಯಂ ತಾನೀಗಲ್ಲಮಾಗಳ್ ಗಡೆಂತೋ|
ಗೈಯ್ಯಲ್ ಸೀಳುತ್ತೊಂದನೀರ್, ಮತ್ತದಂ ಮೇಣ್
ಮಾಯಾವಾದಂ ಮಧ್ವಸಿದ್ಧಾಂತಮೂಲಂ||
ಕೃತಯುಗದಲ್ಲಿ ದೇವತೆಗಳು ಸ್ವರ್ಗದಲ್ಲಿದ್ದರು, ರಾಕ್ಷಸರು ಪಾತಾಲದಲ್ಲಿದ್ದರು. ಸಂಪರ್ಕವಿರಲಿಲ್ಲ; ಕೃತಾರ್ಥಯುಗ. ತ್ರೇತದಲ್ಲಿ ಒಂದೇ ಭೂತಲಕ್ಕೆ ಬಂದರು (ರಾಮ-ರಾವಣ), ದ್ವಾಪರದಲ್ಲಿ ಒಂದೇ ಕುಟುಂಬದಲ್ಲಿದ್ದರು (ಕುರು), ಕಲಿಯಲ್ಲಿ ಒಂದೇ ಮನಸ್ಸಿನಲ್ಲಿದ್ದವು.
ಕಲಿಯುಗವು ಕಳೆದೀಗ ಮತ್ತೆ ಬಂದಿದೆ ಕೃತವು
ಸಲಿಗೆ ಸಲ್ಲದು ದೂರದೂರವಿರಬೇಕು|
ಪ್ರಲಯಕೀಗಾವ ಜಂತುವದೆನ್ನೆ, ತಾಂ ತಿಮಿಂ-
ಗಿಲವಲ್ಲ, ನೋಡಲ್ ಕೊರೋನಾಣುವೈ!!
ಆನೆಯ ಅಳಲು
ಜಗಳಽವಽ ಕಾದಾಗಽಲುಗಿಯಽಲಾಗದೆ ಅಯ್ಯೊಽ!
ಮೊಗೆಮೊಽಗೆಽದೆಂತೋ ನೀರನ್ನುಽ| ಸೂಸಿಽರೆಽ
ಧಗೆಯಿಽಳಿಽದೆದುರಾಳಿಯೆ ಗೆಲ್ವಂ||
ಬರಿಗೈ:
ತುಂಬಿತ್ತು ಕೈಗಳಿಬ್ಬರದೆಂತೊ ವರನು ತಾ-
ನಂಬುಜಾನನೆಯ ಕೈವಿಡಿದಂದಿನಿಂ|
ಕಂಬನಿಯ ತಂದಿರಲು ಮಡಿದಾಗಳೊರುವರಾ-
ಗಿಂಬೆಲ್ಲಿ, ಬರಿದಾಯ್ತು ಕರವದಾಗಳ್||
ಕಾನನದೊಳ್ ರಾಜಿಪನಂ
ಮಾನವನೈತಂದು ಕಜ್ಜದಿಂ ಶೋಷಿಪನಯ್
ಜ್ಞಾನದೆ ಪೆರ್ಮೆಯನುಳಿಯುತ-
ಲೇನೀ ಗೇಹಾಳಿಯಿಂದಲೆನುತುಂ ಸುಯ್ಗುಂ
ದೇಹ ಬೆಳದೆರೇನು, ಮಾನವನಂತೆ ಬುದ್ಧಿಬೆಳಿಯದೆ ಶೋಷಿಸಲ್ಪಡುತ್ತಿದ್ದೇನೆ, ಎಂಬ ಆನೆಯ ಅಳಲು
ಗರಿಗೆದರಿದ ನವಿಲಂ ಮೇಣ್
ಕರಿಯಂ ಸಿಂಗನನುಮಂತೆ ಭೂತನಿಕರಮಂ
ಬರಿಗೈಯ ಕೌಶಲದೆ ತಾಂ
ನರನಾಳುವ ಪಾಂಗನೀಕ್ಷಿಸಲ್ಕಕ್ಕಜಮಯ್
ಬರಿಗೈಯ ಕುಶಲತೆಯಿಂದ ವಿಶೇಷವಾದ ಗುಣವನ್ನ ಹೊಂದಿರುವ ಎಲ್ಲಾ ಪ್ರಾಣಿಗಳನ್ನು ಆಳುವ ಮಾನವನನ್ನು ನೋಡಿದರೆ ಅಚ್ಚರಿಯಾಗುತ್ತದೆ.
ಕೃತಯುಗ-
ಸೃಷ್ಟಿಯ ಯುಗದೊಳ್ ಲೋಗಂ
ಸ್ಪಷ್ಟತೆಯಿಂ ತೋರ್ಪ ಕತದೆ ನಿಸ್ಸಾರಂ ದಲ್
ನಷ್ಟಂಗೈದೊಡೆ ಮೌಲ್ಯಂ
ಪುಷ್ಟಿಯ ಕಾವ್ಯಂಗಳಾಂತುದನ್ಯಯುಗಂಗಳ್
ಕೃತಯುಗದ ತಿಳಿತನವು ನಿಸ್ಸಾರವು, ಮೌಲ್ಯವು ಕಳೆಯಲು ಪುಷ್ಟಿಯಕಾವ್ಯಗಳಿಗೆ ಅನ್ಯಯುಗಗಳಾದವು
ಕೃತಯುಗಪದ್ಯ ಚೆನ್ನಿದೆ
ಆನೆಯ ಅಳಲು:
ದ್ವಿಪನೆಂದೊರೆವರ್ ಜಗದೊಳ್
ಶಪಿಸುವೆನೈ ನಿತ್ಯಮದರ ಪಾಡೇಮೇಳ್ವೇಂ||
ಅಪರಿಚಿತಂ ಸದ್ರುಚಿಗಳ್
ವಿಪರೀತಂ ಮೂಗಿನಿಂದೆ ಬಾಯ್ಗಿಡೆ ತಿನಿಸಂ||ಕಂದ||
ಖಾಲಿ ಕೈ:
ಖಾಲಿಯಕೈಯನ್ನು ಚಾಚುತ್ತೆ ಬೇಡಿರೆ
ಸಾಲವ ಕೊಟ್ಟು ತಾಂಮಿಡಿದಂ||
ಪಾಲಿಸು ಧರ್ಮವ ತೀರಿಸಿ ಋಣಮೆನ್ನೆ
ಖಾಲಿಕೈಯನೆ ತೋರುತಿರ್ದಂ||ಸಾಂಗತ್ಯ||
ಸಮಸ್ಯಾಪೂರಣ:
ನ್ಯಾಯಂತೀರಲ್ ತತ್ತ್ವ ಮದ್ವೈತಮಂತಾಂ
ಛೀಯೆನ್ನುತ್ತುಂ ಸೃಷ್ಟಿಯಾದತ್ತು ದ್ವೈತಂ
ಬಾಯೊಳ್ನಿತ್ಯಂ ತಾರತಮ್ಯಂನೆಗಳ್ದಾ
ಮಾಯಾವಾದಂ ಮಧ್ವಸಿದ್ಧಾಂತಮೂಲಂ ||
— ಶ್ರೀಶ ಕಾರಂತ
कृतयुग
नवक्रीडनकं बालः यथा रक्षेत् दिनद्वयम् ।
तथा धर्मः नरेणासीदिति मन्ये कृते युगे ॥
नव्यक्रीडनकं बालः यथा रक्षेत् दिनद्वयम् ।
तथा मन्ये नरैर्धर्मो रक्षितोऽभूत् कृते युगे ॥
clap clap
ಬರಿಗೈ :
अखण्डप्रमोदोsसि खण्डाम्बरस्सन्
परिव्राडशेषक्षितेश्चक्रवर्ती ।
निधेयस्त्वदीयो मदीयोत्तमाङ्गे
वरज्ञानमुद्रो गुरो! रिक्तहस्तः ।।
You, just with loin cloth, own eternal joy, being vagabond rule over entire earth. Guro!! Please put your empty but dressed with vara and jnanamudras(mudraa-currency) on my head.
ಆನೆಯ ಅಳಲು
ಪಲ್ಲಂ ಮುರಿಯಲ್ ಕಾವರ್
ಪಲ್ಲಕ್ಕಿ ಯನೊರ್ಮೆ ಪೊರುವದಕ್ಕುಂ ಕೊಂಬರ್
ಪುಲ್ಲಂ ತಿಂಬೆನ್ನಂ ನರ
ರೆಲ್ಲರ್! ಪೂಜಿಸುತಲೆನ್ನ ಮೊಗಮನದರ್ಕಂ
ಬರಿದಾದ ಕರ
ಭಯಮಂ ನೀಗುಸುತಿರ್ಪೊಡೆ ಬರಿಗೈ
ಜಯಮಂ ಬೇಡ್ದಗೆ ಭಕ್ತಿಯೊಳೆ
ನಯದಿಂ ಭಯಮಂ ಪುಟ್ಟಿಸುತಿರ್ಪುದು
ಜಯಮಂ ಬಯಸಿದ ಪಕ್ಷದ ಕೈ
ಆನೆಯ ಅಳಲು
ಪಿರಿದಾಗಿರ್ದೊಡೆ ದೇಹಮೆನ್ನ ಪರಿಯೊಳ್ ಚೆಲ್ವಾದುದೀ ಲೋಕದೊಳ್
ಕರಿಯೆಂದೆಂದೊಡೆ ಜೀವರಾಶಿಗಳೊಳೇಂ ಮಾಹಾತ್ಮ್ಯಕೇನೂಣೆಯೇಂ
ವರಮಲ್ತೇ ಮಮರೂಪ ಕಾವ್ಯದೊಳಗಂ ಮತ್ತೇಭವಿಕ್ರೀಡಿತಂ
ನರರಿಂದೆನ್ನನೆ ದೂಷಿಸಿರ್ಪರಕಟಾ ಗಾತ್ರಂಗಳಂ ನಾಮಮಂ
ಆನೆಯ ಆಳಲನ್ನು ನಾನೆಂತು ಪೇಳ್ವೆನು
ಪಾನಕ್ಕೆ ನೀರೆ ಸಿಗದಾಗ – ಗಜವೊಂದು
ಸ್ನಾನವ ಮಾಡುತ್ತಿರುವಾಗ
ಬರಿದಾದ ಕರ
ಬರಿದಾದ ಕರವನ್ನು ಮುಂದಾಗಿ ಚಾಚಿದೊಡ –
ಮರಳಿರ್ಪ ಮೊಗಮಪ್ಪ ಗುಟ್ಟದೇನೋ?
ಇರಿವ ಶಸ್ತ್ರಗಳಿಲ್ಲ ಪಡೆದುಕೊಡುವುದಕಲ್ಲ
ಬಿರಿವ ನೇಹಕ್ಕಿದುವೆ ಸೂಚ್ಯಮಾಯ್ತ್ತೈ
ಸಮಸ್ಯೆ
ಶ್ರೇಯಸ್ಸಾಗಲ್ ಶಾಂಕರರ್ಗಾವ ತತ್ತ್ವಂ
ಬಾಯೊಳ್ ಮಾಧ್ಪರ್ ಶ್ರದ್ಧೆಯಿಂ ಪೇಳ್ವರೇನಂ
ಪಾಯಕ್ಕೆಂಬರ್ ಗೇಹದಿನ್ನಾವ ನಾಮಂ
ಮಾಯಾವಾದಂ ಮಧ್ವಸಿದ್ಧಾಂತಮೂಲಂ
ಕೃತಯುಗ
ಸುಳ್ಳಿನ ಸುಳಿವಿಲ್ಲ ಕಳ್ಳರ ಕಳೆಯಿಲ್ಲ
ಇಲ್ಲದ ಮತಿಯ ಕೃತಕತೆ – ಯಾದಾಗ
ಪೊಳ್ಳಾಯ್ತೆ ನರರ ಪ್ರಗತಿಯು
ಆನೆಯ ಅಳಲು:
ಕರಿಯೆಂಬರ್ ಜನರೆಲ್ಲರಿಂದ್ರನಿಗೆನಾನಿಗಿರ್ದೊಡಂ ವಾಹನಂ
ಪೊರೆಯಂ ಪೊತ್ತೊಡಮೆನ್ನ ಗಾತ್ರಮನೆ ಕಾಣಲ್ ಚೇಡಿಸುತ್ತಿರ್ಪರಯ್
ಮೆರೆಯಲ್ಕೇಂ ದಸರಾ ಮಹೋತ್ಸವದೊಳೆನ್ನಂ ಕಾಡುವರ್ ನಿತ್ಯಮುಂ
ಧುರುಳರ್ ಕೂರಿಸೆ ಚಿಕ್ಕದಾಸನದೊಳೆನ್ನಂ ಮೋಜಿನಿಂ ಕಾಂಬರಯ್
ಬರಿದಾದ ಕರ:
ಲೋಕಕ್ಕಂ ತಾನೊಡೆಯನ-
ನೇಕಮಸುರರಿಂಗೆ ನೀಡೆ ವರಮಂ ಕರದಿಂ-
ದೀಕಾಲನ ಬರಿಗಯ್ಯೇ
ಸಾಕೇಂ ಪಣೆಬರಹಮೊಂದೆ ನಿಲ್ವುದು ನಿಚ್ಚಂ
ಸಮಸ್ಯೆ:
ಸಾಯಂ ಪ್ರಾತಃ ದೂಷಿಸಲ್ಸಜ್ಜನರ್ಗ-
ನ್ಯಾಯಂ ಗೈಯ್ಯುತ್ತಿರ್ಪಳಯ್ ಸ್ವಾರ್ಥಿಯೀತಳ್
ಗೇಯಂ ನಿತ್ಯಂ ವಾಮಮಾರ್ಗೀಯಳೆಂದುಂ
ಮಾಯಾವಾದಂ ಮಧ್ವಸಿದ್ಧಾಂತಮೆಂದುಂ
(ಮಾಯಾವತಿಯ ವಾದ)
ಕೃತಯುಗ:
ಪಾಪಿಗಳಿರದೀ ಲೋಕದೊ
ಳಾಪಾದನೆಯಿಲ್ಲ, ಮಿಲ್ಲಮೆಲ್ಲಿಯು ಲೋಪಂ
ಜ್ಞಾಪಕದಿಡಲೇನಿರ್ಪುದು
ಮೀಪರಿಯೊಳ್ ವೈಪರೀತ್ಯಮಿಲ್ಲದಯುಗದೊಳ್