Oct 202020
ವರ್ಣನೆಯ ವಸ್ತುಗಳು:
೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ
೨. ಆರಾಮಾಸನ ()
೩. ಕೈಬರಹ
ವಸಂತತಿಲಕ-ಛಂದಸ್ಸಿನ ಸಮಸ್ಯೆ:
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್
ವರ್ಣನೆಯ ವಸ್ತುಗಳು:
೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ
೨. ಆರಾಮಾಸನ ()
೩. ಕೈಬರಹ
ವಸಂತತಿಲಕ-ಛಂದಸ್ಸಿನ ಸಮಸ್ಯೆ:
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್
ಸಮಸ್ಯಾಪೂರಣ : (ವಿನೋದವಾಗಿ)
ಅಯ್ಯಾ, ವಿಭೂತಿ ಧರಿಪಂ ಹರಗಪ್ಪುವಂ ಮೇಣ್
ಕಯ್ಯಾಡುತುಂ ಬೆರಣಿ ತಟ್ಟುರೆ ಸುಟ್ಟೊಡಂತಾಂ
ಸಯ್ಯಾರ್ದ ಗೋಮಯಮದಂತುಟುಂ ಗೋವುತಾನುಂ
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್ !!
ಸಯ್ಯಾರ್ = ತಣ್ಣಗಾಗು
ವಿಭೂತಿಯ ಮೂಲ “ಗೋಮಯ” / ಗೋಮಯ ಭರಿತ “ಗೋವು” ಹರಿಗೊಪ್ಪುದು ಅಲ್ಲವೇ?!!
ಆರಾಮಾಸನ:
ಜಾರುsವ ಗಮಕsದವೊಲೋರಾಂತ ಲಹರಿsಯ
ಮೀರಿsದ ವಿಶ್ರಾಮಾಸsನ | ಕವಿಗಳ್ಗೆ
ತೋರಿತ್ತು ಕಲ್ಪsನಾಕಾಶ ||
[ಜಾರು-ಗಮಕದ ಹಾಕೆ ಲಹರಿಗಳನ್ನು ಕೊಡುತ್ತ ಆರಾಮಾಸನವು ಕವಿಗಳಿಗೆ ಕಲ್ಪನಾಕಾಶವನ್ನು ತೋರಿಸುತ್ತದೆ]
ಕೈಬರೆಹ:
ದುಂಡಾಗಿ ಬರೆಯೊ ಬರೆ ನೀಂ
ಗುಂಡಾ ಎನೆ ಶಿಕ್ಷಕಂ ಗಡಂ ಬೆಯ್ದಿರುತುಂ
ಕೊಂಡೆನಿದಂ ಪಣೆಯೊಳ್ ಬರೆ-
ಕೊಂಡುದು ಬೊಮ್ಮನದು ಕಯ್ಬರೆಹಮೆಂದೆಂದಂ
[ಗುಂಡಾ! ದುಂಡಗೆ ಬರಿಯೋ ಎಂದು ಶಿಕ್ಷಕರು ಬಯ್ದರೆ, ಇವನು, ಇದೇ ನನಗೆ ಒದಗಿ ಬಂದದ್ದು, ಹಣೆಯಲ್ಲಿ ಬ್ರಹ್ಮ ಬರೆದ ಕೈಬರಹ ಎಂದ]
ಹಾಸುಗೆಹಿಡಿದವರೋ ರೋಗಿಗಳೋ ಯಾವಾಗ ಸಾಯುತ್ತಾರೋ, ನಾನು ಯಾವಾಗ ಇನ್ನೊಂದು ಜೀವವನ್ನು ಸೃಷ್ಟಿಸಿಯೇನೋ ಎಂದು ಶ್ರೀಹರಿ ಕಾಯುತ್ತಿರುತ್ತಾನೆ.
ಹುಯ್ಯಲ್ಕೆ ನವ್ಯವಪುವಂ ತುಡಿಯುತ್ತಿಹಂ ತಾಂ
ಶಯ್ಯಾಶ್ರಿತರ್ ಮಡಿವರೆಂದಿಗೊ ರೋಗಿಗಳ್ ಮೇಣ್|
ಕಯ್ಯೆಂದುಮಾಗದಿರುವೊಲ್ ಕರಮಾಲಸಂ ಕಾಣ್
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್||
ಆರಾಮಾಸನ
1.
ದಣಿದಿರ್ದ ದೇಹಕ್ಕೆ ಮಣಿದಿರ್ದ ಪ್ರಾಣಕ್ಕೆ
ತಣಿಯದ ತ್ರಾಣಕ್ಕಿದುಮಲ್ತೆ – ಭೂತಾಯ
ಮಣಿಕಟ್ಟಿನಂತೆ ಸುಖಮಲ್ತೆ
2.
ಮಾಸದ ಪದ್ಯಕ್ಕೆಂದಿಗು –
ಮೈಸಿರಿ ತಾಂ ಪ್ರಾಸಮಲ್ತೆ ಕೆಚ್ಚಂ ನೀಡಲ್
ಆಸನಮಾರಾಮಾಗಲ್
ಲೇಸೈ ಕೋಲೀವ ಮಹಿಮೆ ನೆಮ್ಮದಿಗೆಮ್ಮಾ
ಗಿರಿಗಿಟ್ಟಲೆ
ವರುಣನ ಕೃಪೆಯಿಂದೊ ವರುಣಂಗೆ ಕೃಪೆಯಿತ್ತೊ
ಮೆರೆಯುವ ಗಿರಿಗಿಟ್ಟಲೆ ತಾನು – ತೋರಿರ್ಕುಂ
ತಿರಿಗುವ ಬ್ರಹ್ಮಾಂಡವನೆಲ್ಲ
ಸಮಸ್ಯೆ
ಸೈಯೆಂದು ಸಂಧ್ಯೆಯೊಳಗಂ ಮಿಗೆಯರ್ಘ್ಯಮೀಯಲ್
ಮೈಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ತಾಂ
ಕೈ ಬರಹ
ಬಾಳಿನೊಳ್ ಬರ್ಪ ನೂರಾರು ಕಷ್ಟಂಗಳಂ
ತಾಳುತಿಲ್ಲೆಲ್ಲರುಂ ಬೊಮ್ಮನಂ ಬೈದಪರ್
ತೇಲಿಸುತ್ತುಂ ಕರಂ ಗೀಚಿದುರ್ದೆಲ್ಲಮಂ
ಪಾಲಿಸಲ್ ಜಾಲಿಸಲ್ಕೋದಲಿಲ್ಲಾರಿಹರ್?