Oct 202020
 

ವರ್ಣನೆಯ ವಸ್ತುಗಳು:

೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ 

೨. ಆರಾಮಾಸನ ()

೩. ಕೈಬರಹ

ವಸಂತತಿಲಕ-ಛಂದಸ್ಸಿನ ಸಮಸ್ಯೆ: 

ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್ 

  4 Responses to “ಪದ್ಯಸಪ್ತಾಹ ೪೧೮”

  1. ಸಮಸ್ಯಾಪೂರಣ : (ವಿನೋದವಾಗಿ)

    ಅಯ್ಯಾ, ವಿಭೂತಿ ಧರಿಪಂ ಹರಗಪ್ಪುವಂ ಮೇಣ್
    ಕಯ್ಯಾಡುತುಂ ಬೆರಣಿ ತಟ್ಟುರೆ ಸುಟ್ಟೊಡಂತಾಂ
    ಸಯ್ಯಾರ್ದ ಗೋಮಯಮದಂತುಟುಂ ಗೋವುತಾನುಂ
    ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್ !!

    ಸಯ್ಯಾರ್ = ತಣ್ಣಗಾಗು

    ವಿಭೂತಿಯ ಮೂಲ “ಗೋಮಯ” / ಗೋಮಯ ಭರಿತ “ಗೋವು” ಹರಿಗೊಪ್ಪುದು ಅಲ್ಲವೇ?!!

  2. ಆರಾಮಾಸನ:
    ಜಾರುsವ ಗಮಕsದವೊಲೋರಾಂತ ಲಹರಿsಯ
    ಮೀರಿsದ ವಿಶ್ರಾಮಾಸsನ | ಕವಿಗಳ್ಗೆ
    ತೋರಿತ್ತು ಕಲ್ಪsನಾಕಾಶ ||
    [ಜಾರು-ಗಮಕದ ಹಾಕೆ ಲಹರಿಗಳನ್ನು ಕೊಡುತ್ತ ಆರಾಮಾಸನವು ಕವಿಗಳಿಗೆ ಕಲ್ಪನಾಕಾಶವನ್ನು ತೋರಿಸುತ್ತದೆ]

    ಕೈಬರೆಹ:
    ದುಂಡಾಗಿ ಬರೆಯೊ ಬರೆ ನೀಂ
    ಗುಂಡಾ ಎನೆ ಶಿಕ್ಷಕಂ ಗಡಂ ಬೆಯ್ದಿರುತುಂ
    ಕೊಂಡೆನಿದಂ ಪಣೆಯೊಳ್ ಬರೆ-
    ಕೊಂಡುದು ಬೊಮ್ಮನದು ಕಯ್ಬರೆಹಮೆಂದೆಂದಂ
    [ಗುಂಡಾ! ದುಂಡಗೆ ಬರಿಯೋ ಎಂದು ಶಿಕ್ಷಕರು ಬಯ್ದರೆ, ಇವನು, ಇದೇ ನನಗೆ ಒದಗಿ ಬಂದದ್ದು, ಹಣೆಯಲ್ಲಿ ಬ್ರಹ್ಮ ಬರೆದ ಕೈಬರಹ ಎಂದ]

  3. ಹಾಸುಗೆಹಿಡಿದವರೋ ರೋಗಿಗಳೋ ಯಾವಾಗ ಸಾಯುತ್ತಾರೋ, ನಾನು ಯಾವಾಗ ಇನ್ನೊಂದು ಜೀವವನ್ನು ಸೃಷ್ಟಿಸಿಯೇನೋ ಎಂದು ಶ್ರೀಹರಿ ಕಾಯುತ್ತಿರುತ್ತಾನೆ.

    ಹುಯ್ಯಲ್ಕೆ ನವ್ಯವಪುವಂ ತುಡಿಯುತ್ತಿಹಂ ತಾಂ
    ಶಯ್ಯಾಶ್ರಿತರ್ ಮಡಿವರೆಂದಿಗೊ ರೋಗಿಗಳ್ ಮೇಣ್|
    ಕಯ್ಯೆಂದುಮಾಗದಿರುವೊಲ್ ಕರಮಾಲಸಂ ಕಾಣ್
    ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್||

  4. ಆರಾಮಾಸನ
    1.
    ದಣಿದಿರ್ದ ದೇಹಕ್ಕೆ ಮಣಿದಿರ್ದ ಪ್ರಾಣಕ್ಕೆ
    ತಣಿಯದ ತ್ರಾಣಕ್ಕಿದುಮಲ್ತೆ – ಭೂತಾಯ
    ಮಣಿಕಟ್ಟಿನಂತೆ ಸುಖಮಲ್ತೆ
    2.
    ಮಾಸದ ಪದ್ಯಕ್ಕೆಂದಿಗು –
    ಮೈಸಿರಿ ತಾಂ ಪ್ರಾಸಮಲ್ತೆ ಕೆಚ್ಚಂ ನೀಡಲ್
    ಆಸನಮಾರಾಮಾಗಲ್
    ಲೇಸೈ ಕೋಲೀವ ಮಹಿಮೆ ನೆಮ್ಮದಿಗೆಮ್ಮಾ

    ಗಿರಿಗಿಟ್ಟಲೆ
    ವರುಣನ ಕೃಪೆಯಿಂದೊ ವರುಣಂಗೆ ಕೃಪೆಯಿತ್ತೊ
    ಮೆರೆಯುವ ಗಿರಿಗಿಟ್ಟಲೆ ತಾನು – ತೋರಿರ್ಕುಂ
    ತಿರಿಗುವ ಬ್ರಹ್ಮಾಂಡವನೆಲ್ಲ

    ಸಮಸ್ಯೆ
    ಸೈಯೆಂದು ಸಂಧ್ಯೆಯೊಳಗಂ ಮಿಗೆಯರ್ಘ್ಯಮೀಯಲ್
    ಮೈಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ತಾಂ

    ಕೈ ಬರಹ
    ಬಾಳಿನೊಳ್ ಬರ್ಪ ನೂರಾರು ಕಷ್ಟಂಗಳಂ
    ತಾಳುತಿಲ್ಲೆಲ್ಲರುಂ ಬೊಮ್ಮನಂ ಬೈದಪರ್
    ತೇಲಿಸುತ್ತುಂ ಕರಂ ಗೀಚಿದುರ್ದೆಲ್ಲಮಂ
    ಪಾಲಿಸಲ್ ಜಾಲಿಸಲ್ಕೋದಲಿಲ್ಲಾರಿಹರ್?

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)