Oct 292020
 

ವರ್ಣನೆ:

೧. ರೂಪಕಾಲಂಕಾರದಲ್ಲಿ ಸರ್ಪದ ವರ್ಣನೆ

೨. ಚಿನ್ನದ ಲೇಖನಿ

೩. ಮಿಂಚು ಹುಳ

ಕಂದಪದ್ಯದಲ್ಲಿ ಸಮಸ್ಯೆ:

ಪಟ್ಟದ ಬೊಂಬೆಗಳನಿಡದ ದಸರೆಯೆ ಚೆನ್ನಂ 

  7 Responses to “ಪದ್ಯಸಪ್ತಾಹ ೪೧೯”

  1. ಊಸರವಳ್ಳಿಯು ವೈರಿಗೆ ಅಂಜಿ ತನ್ನ ಇರವನ್ನೇ ಬಚ್ಚಿಡುವುದು; ಇತರ ಕ್ರಿಮಿಕೀಟಪ್ರಾಣಿಪಕ್ಷಿಗಳದೂ ಅನನ್ಯರೀತಿಗಳಿವೆ. ಮಿಂಚುಹುಳುವಾದರೋ ತನ್ನನ್ನು ಢಾಳಾಗಿ ಪ್ರಕಟಸಿಕೊಂಡು, ತನ್ನನ್ನು ಭಕ್ಷಿಸಲು ತನ್ನ predatorನ್ನೇ ಆಹ್ವಾನಿಸುತ್ತದೆಂದರೆ, ಅದಿನ್ನೆಂತಹ ವೈರಾಗ್ಯ ಅದರದು!

    ವೈರಿಗಂಜುತೆ ತಮ್ಮಿರವನೆ ಬೈತಿಡುವವೈ
    ಸಾರೂಪ್ಯದಿಂ ಶಯಾನಕದಂತೆ(Chameleon) ಮೇಣ್|
    ’ಆರೆನ್ನ ದೇಹಮಂ ಭುಜಿಸಬಯಸುವಿರೊ ನೀಂ
    ಬಾ’ರೆನ್ನೆ ಮಿಂಚುಹುಳು, ವೈರಾಗ್ಯಮೇಂ!!

  2. ಸಮಸ್ಯಾಪೂರಣ:
    (ಹೀಗೊಂದು ಅನಿಸಿಕೆ)

    ಒಟ್ಟಯಿಸಂತುಟೆ ದೇವಿಯ-
    ನಿಟ್ಟುಂ ಪಟ್ಟಾಭಿಷೇಕಮೇಂ ಕಾಲ್ಬುಡದೊಳ್ ?
    ನಟ್ಟನಡುವಟ್ಟವಣೆ ಮೇಲ್
    ಪಟ್ಟದ ಬೊಂಬೆಗಳನಿಡದ ದಸರೆಯೆ ಚೆನ್ನಂ !!

  3. ಮಿಂಚುಹುಳು:
    ಅರಿಯನರಸಿರ್ಪೆನೆಂದರಿ-
    ತರಿತೇ ಕಳ್ತಲೆಗೆ ಕಂಗಳಯ್ದಂದದೊಳಂ
    ಮಿರುಗಿರೆ ಮಿಂಚುವುಳುಗಳೇಂ
    ಸರಿಯೋ ಅರಿಯಕ್ಕುಮಲ್ತೆ ಇಂದ್ರಿಯಗಣದೊಳ್

    [ಪಾಠಾಂತರ]
    ಅರಿಯೆಲ್ಲಿರ್ಪನೆನುತ್ತುಂ
    ಬೆರಂಗಿನೀ ಮಿಂಚುವುಳುಗಳೀಕ್ಷಣದಿಂದಂ
    ಅರಸುತ್ತಿರ್ಪುದು ಕಳ್ತಲೆ,
    ಅರಿದುದೆ ಕಂಬೆಳಕೆ ಶತ್ರುವೆನೆ ಸಾಜದೊಳಂ

    ಮಿಂಚುಹುಳುಗಳೆಂಬ ಕಣ್ಣುಗಳಿಂದ ತನ್ನ ಶತ್ರುವಾದ ಬೆಳಕನ್ನು ಹುಡುಕುವೆನೆಂದು ಕತ್ತಲೆ ಅಣಿಗೊಂಡರೆ, ಅದಕ್ಕೆ ಗೊತ್ತಿರಲಿಲ್ಲ ಅವೇ ಮಿಂಚುಹುಳುಗಳು ತನ್ನ ಶತ್ರುವೆಂದು.
    —————————–

    ಸಮಸ್ಯೆ:
    ಕಟ್ಟಾಸೆಯೊಳಂ ಸಾರುತೆ
    ತಟ್ಟನೆ ನೋಡಲಳವಾಗದಜ್ಜಿಯೊರಲ್ದಳ್
    ಕೆಟ್ಟೆನೊ ಅಟ್ಟದ ಮೇಗಡೆ
    ಪಟ್ಟದ ಬೊಂಬೆಗಳನಿಡದ ದಸರೆಯೆ ಚೆಂದಂ

    [ಗೊಂಬೆ ನೋಡಲು ಮುದುಕಿಗೆ ಮೇಲೆ ಹತ್ತಲು ಕಷ್ಟ. ಹೀಗಾಗಿ ಅಟ್ಟದ ಮೇಲಿಡದ ಬೊಂಬೆಗಳ ದಸರಯೆ ಚೆಂದ ಅನ್ನುತ್ತಾಳೆ]
    —————————————————–

    ಚಿನ್ನದ ಲೇಖನಿ:
    ಸುರಾಸುರರೆ ಸಾರುತುಂ ಹರಿಯೆ ಕೂರ್ಮನಾಗುತ್ತೆ ಮೇಣ್
    ಧರಿಪ್ಪೊಡೆ ಗಿರೀಂದ್ರನಂ, ಬಿಗಿದ ವಾಸುಕಿ ಪ್ರಗ್ರಹಂ
    ಬೆರಂಗೆನಲುಗುಳ್ದುದಯ್ ಬಿಸಮನೇ ಪಯೋವಾರ್ಧಿ ತಾಂ
    ಕರಂ ಮಷಿಯನೂಡಿಕುಂ ಕನಕಲೇಖನಿ ವ್ಯಾಜದಿಂ

    [ಸುರಾಸುರರು ಸೇರಿ, ಹರಿಯೇ ಮಂದರವನ್ನು ಹೊತ್ತು, ವಾಸುಕಿಯೇ ಹಗ್ಗವಾಗಿದ್ದರೂ ಕ್ಷೀರವಾರ್ಧಿಯು ವಿಷವನ್ನು ಉಗುಳಿತು. ಈ ಲೇಖನಿ ಕೂಡ ಬಂಗಾರದ್ದಾಗಿದ್ದರೂ ಮಷಿಯನ್ನೇ ಉಗುಳುತ್ತಿದೆ. ]

    • ಮಿಂಚುಹುಳ ಮತ್ತು ಸ್ವರ್ಣಲೇಖನಿ ಚೆನ್ನಿವೆ. “ಆ ಇನ್ನೊಂದು ಪದ್ಯ ಸುಮಾರಾಗಿದೆಯಲ್ಲವೆ?” ಎಂದು ಕೇಳಬೇಡಿ.

    • ಪರಿಯೇಂ ಕಳ್ತಳೆಯದೆಲವೊ (ನೀಲಕಂಠ),
      ಅರಿಯದೆ ತನ್ನಿರವನೇ-ನಿಜಾಂಗಗಳನ್ನೇ!
      (ದೇಹ)ಪುರದೊಳ್ ತನ್ನಯ ಎನಿತವು
      ಮಿರಮಿರಮಿಂಚಿಹವು ಕಣ್ಣೆನುತೆ ತಿಳಿಯದೆ ಪೇಳ್||

  4. ಮಿಂಚು ಹುಳ
    1.
    ಅಂಡಿನ ಹೊಳಪನ್ನು ಕುಂಡೆಯ ಬೆಳಕನ್ನು
    ಕಂಡೋರಿಗೆಲ್ಲ ಮಿಗೆತೋರಿ – ಮೆರೆದಿರ್ಪ
    ಪುಂಡಂಗೆ ಖದ್ಯೋತನ ಕೀರ್ತಿ
    2.
    ಉಂಡದ್ದು ಹೆಚ್ಚಾಗಿ ಕುಂಡೆಯ ಹೊನಲಾಗಿ
    ಕಂಡೋರ ಕಣ್ಗೆ ಬೆಳಕಾಗಿ – ಭ್ರಮಿಸಿರ್ಪ
    ಭಂಡಂಗೆ ಖದ್ಯೋತನ ಕೀರ್ತಿ

    ಚಿನ್ನದ ಲೇಖನಿ
    ಪೊನ್ನಾದೊಡೆ ಲೇಖನಿ ತಾಂ
    ಚೆನ್ನಿಂದಲೆ ಬಂದು ನೆಲೆಸಳೇಂ ಶಾರದೆಯುಂ
    ಮನ್ನಿಸರೇಂ ಶಿಕ್ಷಕರುಂ
    ತನ್ನಂತೆಯೆ ಲಕ್ಷ್ಮಿ ತಾನೆ ಸೆಳೆಯುವಳೆಲ್ಲಂ

    ಸಮಸ್ಯೆ
    1.
    ಅಟ್ಟದ ಪೆಟ್ಟಿಗೆಯೊಳಗಂ
    ಪಟ್ಟದ ಗೊಂಬೆಗಳನಿಡದ ದಸರೆಯೆ ಚೆನ್ನಂ
    2.
    ಘಟ್ಟದ ಕೆಳಗಿನ ಮನೆಯೊಳ್
    ಪುಟ್ಟರ ಮನ್ನಿಸುತೆ ಸೇವಿಪುದೆ ನವರಾತ್ರಂ
    ಅಟ್ಟುತೆ ಸಿಹಿತಿಂಡಿಗಳಂ
    ಪಟ್ಟದ ಗೊಂಬೆಗಳನಿಡದ ದಸರೆಯೆ ಚೆನ್ನಂ

    ರೂಪಕಾಲಂಕಾರದಲ್ಲಿ ಹಾವಿನ ವರ್ಣನೆ:
    ಸರ್ಪಮಾರ್ಗವು ಸುತ್ತಿ ಪರ್ವತದ ಮೇಲೇರಿ
    ಕರ್ಪಿನಿಂ ಪೊಳೆಯುತ್ತೆ ಸರಿಯುತಿರ್ಕುಂ
    ಸೇರ್ಪಡಲ್ಕಲ್ಲಿರ್ಪ ಬೆಳಕಿನಂಡಗಳೊಡನೆ
    ಏರ್ಪಡಿಸಿರುವವೋಲೆ ಭೋಜನಕ್ಕಂ

  5. Wonderful article! We are linking to this great article on our website. Keep up the good writing. Jilli Rogers Fanchette

Leave a Reply to torrent Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)